ನೀವು ಸಣ್ಣಗಾಗಬೇಕೇ.. ನಾವು ಐಡಿಯಾ ಕೊಡ್ತೀವಿ. ಸ್ಲಿಮ್ ಆಗುವುದು ಹೇಗೆ.. ನಾವೇಕೆ ಸಣ್ಣಗಾಗಬೇಕು.. ಯೋಗ ಮಾಡೋದಾ.. ವಾಕಿಂಗ್ ಮಾಡೋದಾ.. ಥರಹೇವಾರಿ ಪ್ರಶ್ನೆಗಳು..ವಿಡಿಯೋಗಳು ಎಲ್ಲೆಲ್ಲೂ ಲಭ್. ಆದರೆ ಇದು ಬಹಳ ವಿಚಿತ್ರ ಹಾಗೂ ಸ್ಫೂರ್ತಿದಾಯಕ ಕಥೆ. ಇಲ್ಲೊಬ್ಬರು ಸ್ಲಿಮ್ ಆಗಿದ್ದಕ್ಕೆ ಪಡೆದುಕೊಂಡಿದ್ದು 2300 ಕೋಟಿ ರೂಪಾಯಿ.
ಈತನ ಹೆಸರು ಅನಿಲ್ ಫಿರೋಜಿಯಾ. 2010ರಲ್ಲಿ ಮಧ್ಯಪ್ರದೇಶದ ಉಜ್ಜಯಿನಿಯಿಂದ ನಿಂತು ಲೋಕಸಭೆಗೆ ಗೆದ್ದು ಹೋಗಿದ್ದವರು. ಇವರೇ ಈಗ ತೂಕ ಇಳಿಸಿಕೊಂಡು 2300 ಕೋಟಿ ಪಡೆದಿರುವ ಸಂಸದ. ಅಂದಹಾಗೆ ಪರ್ಸನಲ್ ಕೆಲಸಕ್ಕಲ್ಲ, ತಮ್ಮ ಕ್ರೇತ್ರದ ಅಭಿವೃದ್ಧಿಗೆ.

ಇತ್ತೀಚೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಎದುರು ಅನಿಲ್ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುವಂತೆ ಬೇಡಿಕೆ ಇಟ್ಟಿದ್ದರು. ಆಗ ಇವರ ತೂಕ 135 ಕೆಜಿ ಇತ್ತು. ಆಗ ಅವರ ಡುಮ್ಮಣ್ಣನ ಸ್ಥಿತಿ ನೋಡಿ ನಿತಿನ್ ಗಡ್ಕರಿ 15 ಕೆಜಿ ತೂಕ ಇಳಿಸಿಕೊಂಡರೆ ಸಾವಿರ ಕೋಟಿ ಅನುದಾನ ಕೊಡುವ ಚಾಲೆಂಜ್ ಹಾಕಿದ್ದರು. ಅದಕ್ಕೆ ತಕ್ಕಂತೆ ಈಗ ಅನಿಲ್ ಫಿರೋಜಿಯಾ 32 ಕೆಜಿ ತೂಕ ಇಳಿಸಿಕೊಂಡಿದ್ದಾರೆ. 93 ಕೆಜಿ ಇದೆಯಂತೆ. ಇದೆಲ್ಲ ಆದ ಮೇಲೆ ತೂಕ ಇಳಿಸಿಕೊಂಡ ಮೇಲೆ ನಿತಿನ್ ಗಡ್ಕರಿಯವರನ್ನು ಭೇಟಿಯಾಗಿ ಹಳೆಯ ಫೋಟೋ ತೋರಿಸಿ ಪರಿಚಯ ಮಾಡಿಕೊಂಡು ಚಾಲೆಂಜ್ ನೆನಪಿಸಿದ್ದಾರೆ. ನಿತಿನ್ ಗಡ್ಕರಿ 2300 ಕೋಟಿ ಅನುದಾನ ಮಂಜೂರು ಕೂಡಾ ಮಾಡಿದ್ದಾರೆ.
ಅಂದಹಾಗೆ ನಿತಿನ್ ಗಡ್ಕರಿ ಕೂಡಾ ಒಂದು ಕಾಲದಲ್ಲಿ ಡುಮ್ಮಣ್ಣ. ಗಡ್ಕರಿಗೆ ಮೋದಿ ಹೇಳಿ ತೂಕ ಇಳಿಸಿಕೊಳ್ಳುವಂತೆ ಮಾಡಿದ್ದರು. ಅದನ್ನೇ ಈಗ ಗಡ್ಕರಿ ತಮ್ಮ ಸಂಸದರಿಗೆ ಮಾಡಿದ್ದಾರೆ. ದೇಹದ ತೂಕ ನನಗೂ ಭಾರವಾಗಿತ್ತು. ಜೊತೆಗೆ ಗಡ್ಕರಿ ಸಾಹೇಬ್ರು ಕೂಡ ಹೇಳಿದ್ರು. ಅದಾದ ಮೇಲೆ ಬೆಳಗ್ಗೆ 5.30ಕ್ಕೆ ಏಳುತ್ತಿದೆ. ವಾಕಿಂಗ್, ಯೋಗ ಪ್ರಾಕ್ಟೀಸ್ ಮಾಡಿದೆ. ಕಡಿಮೆ ಬ್ರೇಕ್‍ಫಾಸ್ಟ್. ಲಂಚ್ ಮತ್ತು ಡಿನ್ನರ್‍ಗೆ ಹಣ್ಣು, ತರಕಾರಿಗಳು. ಒಂದೇ ಒಂದು ರೋಟಿ. ಹಸಿಕಾಳುಗಳು ಪಲ್ಯ ತೆಗೆದುಕೊಳ್ಳುತ್ತಿದ್ದೆ. ಕೆಲವೊಮ್ಮೆ ತಡೆಯಲಾರದಷ್ಟು ಸುಸ್ತಾಗುತ್ತಿತ್ತು. ಅಂತಹ ಸಂದರ್ಭದಲ್ಲಿ ಹಣ್ಣು ಹಾಗೂ ಡ್ರೈಫ್ರೂಟ್ಸ್ ತೆಗೆದುಕೊಳ್ಳುತ್ತಿದೆ. ಒಂದು ತಿಂಗಳ ನಂತರ ಫಲಿತಾಂಶ ಸಿಗಲು ಶುರುವಾಯ್ತು ಎಂದಿದ್ದಾರೆ ಅನಿಲ್ ಫಿರೋಜಿಯಾ.



