ಮಂಡ್ಯ ಲೋಕಸಭಾ ಎಲೆಕ್ಷನ್‍ನ್ನು ರಾಜ್ಯದ ಜನ ಮರೆಯೋಕೆ ಸಾಧ್ಯವೇ ಇಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 28 ಕ್ಷೇತ್ರಗಳಿದ್ದರೂ ಹೈಲೈಟ್ ಆಗಿದ್ದು ಕೇವಲ ಮಂಡ್ಯ. ಸುಮಲತಾ ಅಂಬರೀಷ್ ಮತ್ತು ನಿಖಿಲ್ ಕುಮಾರಸ್ವಾಮಿ ನಡುವಿನ ಕದನದಲ್ಲಿ ಕೊನೆಗೆ ಗೆಲುವಿನ ನಗು ಬೀರಿದ್ದು ಸುಮಲತಾ.



ಮಂಡ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಸ್ಪರ್ಧಿಸುತ್ತಾರೆ ಎಂದಿರುವುದು ಶಾಸಕ ಸಿ.ಎಸ್.ಪುಟ್ಟರಾಜು. ಮಂಡ್ಯದಲ್ಲಿ ಪುಟ್ಟರಾಜು ಅವರಿಗೆ ದೊಡ್ಡ ಸ್ಥಾನಮಾನವಿದೆ. ಅಂತಹ ಪುಟ್ಟರಾಜು ಅವರೇ ಪಂಚರತ್ನ ಯಾತ್ರೆಯಲ್ಲಿ ತುಂಬಿದ ವೇದಿಕೆಯಲ್ಲಿ ನಿಖಿಲ್ 2024ರ ಲೋಕಸಭೆಗೆ ಮಂಡ್ಯದಿಂದಲೇ ಸ್ಪರ್ಧಿಸುತ್ತಾರೆ ಎಂದಿರುವುದು ಕುತೂಹಲ ಮೂಡಿಸಿದೆ.
ಎಲ್ಲಿ ಸೋತಿದ್ದೇವೆಯೋ.. ಅಲ್ಲಿಯೇ ಗೆಲ್ಲಬೇಕು. ಯಾರ ವಿರುದ್ಧ ಸೋತಿದ್ದೇವೆಯೋ ಅವರ ವಿರುದ್ಧವೇ ಗೆಲ್ಲಬೇಕು ಎನ್ನುವ ಸೂತ್ರವನ್ನೇನಾದರೂ ನಿಖಿಲ್ ಹಾಗೂ ಕುಮಾರಸ್ವಾಮಿ ಪಾಲಿಸುತ್ತಿದ್ದಾರಾ?





