ರಾಜರಾಜೇಶ್ವರಿ ನಗರ ಶಾಸಕ, ಸಚಿವ ಮುನಿರತ್ನ ಮೂಲತಃ ಚಿತ್ರರಂಗದವರೇ. ಸತತವಾಗಿ ಗೆದ್ದು ಈಗಾಗಲೇ ಹ್ಯಾಟ್ರಿಕ್ ಸಾಧಿಸಿರುವ ಮುನಿರತ್ನ 4ನೇ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಮುನಿರತ್ನ ಪರ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಮಾಡಿದ್ದರು. ಈಗ ಕಿಚ್ಚ ಸುದೀಪ್ ಪ್ರಚಾರ ನಡೆಸಿದ್ದಾರೆ.
ಇಷ್ಟು ದಿನ ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಮ ಜೊತೆಯಲ್ಲಿ ಕರ್ನಾಟಕವನ್ನು ಸುತ್ತಾಡಿದ್ದೆನು. ಈಗ ಬೆಂಗಳೂರಿನಲ್ಲಿಯೇ ಪ್ರಚಾರ ಮಾಡುತ್ತಿರುವುದಕ್ಕೆ ಭಾರಿ ಖುಷಿಯಾಗಿದೆ. ಇನ್ನು ಮುನಿರತ್ನ ಗೆಲ್ಲುವುದು, ನಾನು ಗೆಲ್ಲುವುದು ಎರಡೂ ಒಂದೇ ಆಗಿದೆ. ಮುನಿ ಗೆದ್ದರೆ ನಾನು ಗೆದ್ದಂಗೆ, ಅವರನ್ನು ಗೆಲ್ಲಿಸಬೇಕು. ಗೆದ್ದೇ ಗೆಲ್ಲುವೆವು ಒಂದು ದಿನ, ಗೆದ್ದೇ ಗೆಲ್ಲುತ್ತೆ ಒಳ್ಳೆತನ. ಮುನಿರತ್ನ ಗೆಲುವಿಗೆ ಅವರ ಕೆಲಸಗಳೇ ಕಾರಣ ಎಂದು ಹೇಳಿರುವ ಸುದೀಪ್ ಮುನಿರತ್ನ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆ.
ಕಳೆದ ಚುನಾವಣೆಗೂ ಸುದೀಪ್ ನನ್ನ ಜೊತೆಗಿದ್ದರು. . ಈ ಬಾರಿ ಕೂಡ ಸುದೀಪ್ ನನ್ನ ಜೊತೆಯಲ್ಲೇ ಇದ್ದಾರೆ. ಮುನಿರತ್ನ ಅವಾಗ ಏನೂ ಇರ್ಲಿಲ್ಲ ಅವತ್ತು ಬಂದಿದ್ರು, ಇವತ್ತು ಬಂದಿದಾರೆ, ಯಾವಾಗ್ಲೂ ಸುದೀಪ್ ನನಗೆ ಬೆಂಬಲ ನೀಡಿದ್ದಾರೆ. ಆವತ್ತು ನನಗೆ ಆಶೀರ್ವಾದ ಮಾಡಿದ್ರು ಇವತ್ತು ಮಾಡ್ತಿದಾರೆ. ಮತದಾರ ಬಂದುಗಳು ಮತ ಭಿಕ್ಷೆ ಎಷ್ಟು ಕೊಡ್ತಾರೆ ಅನ್ನೋದು ಮುಖ್ಯವಲ್ಲ ಅವರ ಪ್ರೀತಿ ಅಭಿಮಾನ ನನಗೆ ಮುಖ್ಯ. ಬಿಜೆಪಿಗೆ ಮತ ನೀಡಿ ನಿಮ್ಗೆ ಒಳ್ಳೇದಾಗುತ್ತೆ ಎಂದಿದ್ದಾರೆ ಮುನಿರತ್ನ.



