ಸಿದ್ದರಾಮಯ್ಯ. ರಾಜ್ಯ ವಿಧಾನಸಭೆ ಪ್ರತಿಪಕ್ಷನಾಯಕ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಗೆದ್ದರೆ ಸಿಎಂ ಯಾರಾಗಬೇಕು? ಈ ಚರ್ಚೆಗೆ ಬಂದರೆ ಮುಂಚೂಣಿಯಲ್ಲಿ ಸಿದ್ದರಾಮಯ್ಯ ಹೆಸರು ಇರುತ್ತದೆ. ನಂತರ ಡಿಕೆ ಶಿವಕುಮಾರ್ ಹೆಸರೂ ಬರುತ್ತದೆ. ಜನರ ಮಧ್ಯೆ ನಡೆಯುವ ಚರ್ಚೆಯಲ್ಲಿ ಸಿದ್ದರಾಮಯ್ಯ ಮುಂದಿದ್ದಾರೆ ಎನ್ನುವುದು ಕಾಂಗ್ರೆಸ್ ನಿರಾಕರಿಸಲಾಗದ ಸತ್ಯ. ಸಿದ್ದರಾಮಯ್ಯಗೆ ವಿರೋಧಿಗಳು ಯಾರು. ಈ ಪ್ರಶ್ನೆಗೆ ಉತ್ತರ ಬಿಜೆಪಿಯಲ್ಲೋ..ಜೆಡಿಎಸ್ನಲ್ಲೋ.. ಹುಡುಕಬೇಕಿಲ್ಲ. ಅವರಿಗಿಂತ ಹೆಚ್ಚು ಶತ್ರುಗಳಿರುವುದು ಕಾಂಗ್ರೆಸ್ಸಿನಲ್ಲೇ. ಅದೆಲ್ಲದಕ್ಕೂ ಕಾರಣವಾಗಿದ್ದು ಕುರುಬ ಸಮುದಾಯದ ಮುಖಂಡ ಮುಕುಡಪ್ಪ ಮತ್ತು ನಿವೃತ್ತ ಅಧಿಕಾರಿ ಪುಟ್ಟಸ್ವಾಮಿ ನಡುವಿನ ಮಾತು. ಮಾತುಕತೆಯ ವಿವರ ಇಲ್ಲಿದೆ.
ಮುಕುಡಪ್ಪ: ಇವನು ಮುರುಘಾ ಸ್ವಾಮಿ ತರಾ…
ಪುಟ್ಟಸ್ವಾಮಿ: ಇವನು ಕಳ್ಳ….
ಮುಕುಡಪ್ಪ: ಅಯ್ಯೋ ಕಳ್ಳ ಅಂತಾ ಹೇಳ್ತೀರಾ….
ಪುಟ್ಟಸ್ವಾಮಿ: ಕಳ್ಳ….
ಪುಟ್ಟಸ್ವಾಮಿ: ಇವನು ಇದಾನಲ್ಲಾ ಹೊಸದುರ್ಗ ಇನ್ನೂ ಎಷ್ಟು ಮಾಡಿದ್ದಾನೋ ಗೊತ್ತಿಲ್ಲ
ಮುಕುಡಪ್ಪ: ಈ 4 ಜನರದ್ದು ಇದೆ ಕೆಲಸಾ..
ಮುಕುಡಪ್ಪ: ಏನಪ್ಪಾಂದ್ರೆ ಯಾಕಂದ್ರೆ ಟಗರು ಐತಲ್ಲಾ ಸೂ….. ಮಗಂದು 20 ಕುರಿ ಮೇಲೆ ಹತ್ತುತ್ತೆ
ಪುಟ್ಟಸ್ವಾಮಿ: ಎಲ್ಲಿ ನೋಡಿದ್ರೂ ಅದೇ ಅಲ್ವಾ ಸರ್…? ಯಾರು ಅಂತಾ ಎಲ್ಲರ ಕತೆನೂ ಹಂಗೆ…
ಮುಕುಡಪ್ಪ: ಎಲ್ಲರದ್ದೂ ನಮ್ದು ಅಷ್ಟೇ.. ನಿಮ್ದು ಅಷ್ಟೇ.. ಕೆಲವರದ್ದು ಹೊರಗೆ ಬಂದಿದೆ.. ಕೆಲವರದ್ದು ಹೊರಗೆ ಬಂದಿಲ್ಲ.. ಏನಪ್ಪಾ ನಾಗೇಶ್
ಪುಟ್ಟಸ್ವಾಮಿ: ಟಗರುಗಳು..
ಮುಕುಡಪ್ಪ: ಎಲ್ಲಾ ಜನಾಂಗದ ಮುಂದೆ ಇವನೇಂದ್ರೆ.. ಎಲ್ಲರ ಮುಂದೆ ಮಾಡ್ತಾನೆ…ಇವನು ಪೀಡೆ…
ಪುಟ್ಟಸ್ವಾಮಿ: ನಮ್ಮ ಟಗರುಗಳೇನು ಕಡಿಮೆ ಇದ್ದಾವಾ…?
ಮುಕುಡಪ್ಪ: ದ್ದರಾಮಯ್ಯ ಹುಷಾರು…. ಸೂ.. ಮಗ
ಪುಟ್ಟಸ್ವಾಮಿ: ಇವನು ಬುದ್ಧಿವಂತ.. ಎಲ್ಲೂ ಸಿಕ್ಕಲ್ಲ.. ಮನೆಯೊಳಗೆ ಸೇರಿಕೊಂಡು ಬಿಡ್ತಾನಂತೆ ಅವನು..
ಇದು ಎಲ್ಲ ಟಿವಿ ಚಾನೆಲ್ಲುಗಳಲ್ಲಿ ಚರ್ಚೆಯಾದ ಅವರದ್ದೇ ಮಾತಿನ ಸಾರಾಂಶ. ಈ ಗುಸುಗುಸು ಬಾಂಬ್ ಹೊರಬಿದ್ದಿದ್ದೇ ತಡ ಕಾಂಗ್ರೆಸ್ ಕನಲಿ ಕೂತಿದೆ. ಅದಕ್ಕಿಂತಲೂ ಹೆದ್ದು ಸಿದ್ದರಾಮಯ್ಯ ನಿಷ್ಟರು ಕೆರಳಿದ್ದಾರೆ. ಏಕೆಂದರೆ ಈ ಗುಸುಗುಸು ಮಾತುಕತೆ ನಡೆದಿದ್ದು ಕುರುಬರ ಸಂಘದಲ್ಲಿ. ಮಾತನಾಡಿದವರು ಕೂಡಾ ಕುರುಬರೇ. ಎಲ್ಲಕ್ಕಿಂತ ಹೆಚ್ಚಾಗಿ ಇವರು ಸಿದ್ದರಾಮಯ್ಯಪರಮಾಪ್ತರಲ್ಲಿ ಒಬ್ಬರಾಗಿದ್ದವರು. ಈಗೇನೋ ಮುಕುಡಪ್ಪ ಕ್ಷಮೆ ಕೇಳಿದ್ದಾರೆ. ಆದರೆ ವಿಷಯ ಅದಲ್ಲ. ಸಿದ್ದರಾಮಯ್ಯಗೆ ಪಕ್ಷದೊಳಗೇ ಹೆಚ್ಚುತ್ತಿರುವ ಆಕ್ರೋಶದ್ದು. ಹಿತಶತ್ರುಗಳದ್ದು.
ಇವರು ಮೊದಲಿಗರೇನಲ್ಲ. ಹುಣಸೂರು ವಿಶ್ವನಾಥ್ ಕೂಡಾ ಕಾಂಗ್ರೆಸ್ಸಿನಲ್ಲಿದ್ದವರೇ. ಆದರೆ 2018ರಲ್ಲಿ ಎಲೆಕ್ಷನ್ನಿಗೂ ಮುಂಚೆ ಹೋದಲ್ಲಿ ಬಂದಲ್ಲಿ ಸಿದ್ದು ವಿರುದ್ಧ ಗುಟುರು ಹಾಕುತ್ತಿದ್ದವರು. ಓಪನ್ನಾಗಿಯೇ ಸಿದ್ದರಾಮಯ್ಯ ಬಗ್ಗೆ ಟೀಕಿಸುತ್ತಿದ್ದರು. ಆಮೇಲೆ ಜೆಡಿಎಸ್ಗೆ ಹೋಗಿ, ಈಗ ಬಿಜೆಪಿಯಲ್ಲಿದ್ದಾರೆ. ಅಲ್ಲಿಯೂಅಷ್ಟೆ, ಪಕ್ಷದ ನಾಯಕರನ್ನೇ ಟೀಕಿಸುತ್ತಿದ್ದಾರೆ.
ಸಿಎಂ ಇಬ್ರಾಹಿಂ ಕೂಡಾ ಅಷ್ಟೆ. ಕಾಂಗ್ರೆಸ್ಸಿನಲ್ಲಿದ್ದುಕೊಂಡು ಆಗೊಮ್ಮೆ ಈಗೊಮ್ಮೆ ಸಿದ್ದುರನ್ನು ಟೀಕಿಸುತ್ತಿದ್ದವರು. ರಾಜ್ಯ ರಾಜಕೀಯವನ್ನು ನೋಡಿದವರಿಗೆ ಒಂದು ನೆನಪಿನಲ್ಲಿರುತ್ತೆ. ಸಿದ್ದರಾಮಯ್ಯ ಅಹಿಂದ ಸಮಾವೇಶ ಮಾಡಿದಾಗ ಜೊತೆಯಲ್ಲಿದ್ದ ಮುಸ್ಲಿಂ ನಾಯಕ ಸಿಎಂ ಇಬ್ರಾಹಿಂ. ಈಗ ಜೆಡಿಎಸ್ ರಾಜ್ಯಾಧ್ಯಕ್ಷ. ಪಕ್ಷದಲ್ಲಿದ್ದಾಗಲೂ ಪಕ್ಷದಿಂದ ಹೊರ ಹೋದ ಮೇಲೂ ಅವರ ಟಾರ್ಗೆಟ್ ಆಗಿರುವುದು ಸಿದ್ದರಾಮಯ್ಯ. ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ಕೂಡಾ ಇದಕ್ಕಿಂತ ಭಿನ್ನವೇನಲ್ಲ. ಈಗ ಬಿಜೆಪಿಯಲ್ಲಿರುವ ಬಹುತೇಕರು ಸಿದ್ದು ಆಪ್ತ ಬಳಗಲ್ಲಿದ್ದವರೇ. ಮುನಿರತ್ನ, ರಮೇಶ್ ಜಾರಕಿಹೊಳಿ, ಕೆ.ಸುಧಾಕರ್, ಭೈರತಿ ಬಸವರಾಜ್, ಎಸ್.ಟಿ. ಸೋಮಶೇಖರ್.. ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಇವರೆಲ್ಲ ಈಗಲೂ ತಮ್ಮ ನಾಯಕ ಸಿದ್ದರಾಮಯ್ಯ ಎಂದು ಬಹಿರಂಗವಾಗಿ ಹೇಳುತ್ತಾರೆ. ರಾಜಕೀಯವಾಗಿ ಟೀಕಿಸಿಯೂ ಟೀಕಿಸುತ್ತಾರೆ. ವಿಶ್ವನಾಥ್, ಇಬ್ರಾಹಿಂ.. ಇವರೆಲ್ಲ ಕಾಂಗ್ರೆಸ್ಸಿನಲ್ಲಿದ್ದಾಗಲೂ ಕಾಡಿದ್ದವರು. ಅದರೆ ಈ ಮುಕುಡಪ್ಪ ಪ್ರಕರಣ ವಿಭಿನ್ನ. ಸಿದ್ದರಾಮಯ್ಯಗೆ ಪಕ್ಷದೊಳಗೇ ಶತ್ರುಗಳಿದ್ದಾರೆ ಎಂಬ ಎಚ್ಚರಿಕೆ ಕೊಟ್ಟಿದೆ.
ಸಿದ್ದರಾಮಯ್ಯಗೆ ರಾಜಕೀಯ ಹೊಸದಲ್ಲ. ವಿರೋಧಿಗಳನ್ನು ಮಟ್ಟ ಹಾಕುವ ಕಲೆಯೂ ಕರಗತ. ಆದರೆ ವಿರೋದಿಗಳನ್ನು ಮಟ್ಟ ಹಾಕುವುದು ಬೇರೆ. ಹಿತಶತ್ರುಗಳನ್ನು ಮಟ್ಟ ಹಾಕುವುದು ಬೇರೆ. ಪಕ್ಷದೊಳಗೇ ಇದ್ದು, ತಮ್ಮ ಆಪ್ತ ಬಳಗದಲ್ಲೇ ಇದ್ದ ಕೆಲವರು ಒಳಗೊಳಗೆ ಸಿದ್ದರಾಮಯ್ಯ ಬಗ್ಗ ಏನೇನೆಲ್ಲ ಮಾತನಾಡುತ್ತಿದ್ದಾರೆ. ಯಾವ ರೀತಿಯ ಅಭಿಪ್ರಾಯ ಇಟ್ಟುಕೊಂಡಿದ್ದಾರೆ ಎನ್ನುವುದು ಬಹಳ ಮುಖ್ಯ. ಸಿದ್ದರಾಮಯ್ಯ ಇಮೇಜ್ ಎದುರಾಳಿಗಳು ಟೀಕಿಸಿದರೆ ಏನೂ ಆಗಲ್ಲ. ರಾಜಕೀಯ ಅಂದ್ಕೋತಾರೆ. ಪಕ್ಷದೊಳಗಿದ್ದವರೇ ಇಂತಹ ಮಾತನ್ನಾಡಿದಾಗ ಅನುಮಾನವೇ ಇಲ್ಲ. ಸಿದ್ದು ರಾಜಕೀಯ ಬಲ, ನೈತಿಕ ಬಲ ಎರಡೂ ಕುಗ್ಗುತ್ತದೆ. ಇದರ ಆರ್ಥ ಇಷ್ಟೆ. ಸಿದ್ದರಾಮಯ್ಯ ತಮ್ಮ ಆಪ್ತರು ಯಾರು ಎನ್ನುವುದನ್ನು ಆದಷ್ಟು ಬೇಗ ಗುರುತಿಸಬೇಕು. ಇಲ್ಲದೇ ಹೋದರೆ.. 2023ರ ರಿಸಲ್ಟ್ ಕಷ್ಟ ಕಷ್ಟ.



