Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Crime

ರಸ್ತೆಗಳೋ.. ಹೆಣದ ವಾಹನಗಳೋ.. : ರಸ್ತೆಗಳು ಗುಂಡಿಮುಕ್ತವಾದ ದಿನ ಪ್ರಳಯ ಫಿಕ್ಸ್

SpeciallU by SpeciallU
October 18, 2022
in Crime, Politics
Reading Time: 1 min read
0 0
0
ರಸ್ತೆಗಳೋ.. ಹೆಣದ ವಾಹನಗಳೋ.. : ರಸ್ತೆಗಳು ಗುಂಡಿಮುಕ್ತವಾದ ದಿನ ಪ್ರಳಯ ಫಿಕ್ಸ್

Related posts

ಗ್ಯಾರಂಟಿಯಿಂದ ಹೊರೆ : ಡಿಕೆ ಶಿವಕುಮಾರ್‌ ಒಪ್ಪಿಕೊಂಡ ಸತ್ಯ

ಈಗ ಮೀಡಿಯಾಗಳ ಮೇಲೆ ಮೋದಿಯದ್ದೂ ಟೀಕೆ..!

ಮಾರ್ಚ್ 17 :
7 ತಿಂಗಳ ಹಿಂದೆ ಒಂದು ಬಿಬಿಎಂಪಿ ವರದಿ ಬಂದಿತ್ತು. ಸಿಎಜಿ ವರದಿ ಅದು. ಆ ವರದಿ ಪ್ರಕಾರ ಪ್ರತಿ 1 ಕಿ.ಮೀ.ಗೆ 20 ಅಪಾಯಗಳಿರುತ್ತವೆ. ವಿನ್ಯಾಸ ದೋಷ, ಸೈನ್‌ಬೋರ್ಡ್‌ ಸಮಸ್ಯೆ, ಸ್ಪೀಡ್ ಬ್ರೇಕರ್‌ ಪ್ರಾಬ್ಲಂ, ಫುಟ್ಪಾತ್ ಪ್ರಾಬ್ಮಂ, ಒಳಚರಂಡಿ, ರಸ್ತೆ ಗುಂಡಿ ಎಲ್ಲವನ್ನೂ ಸೇರಿಸಿ ಲೆಕ್ಕ ಹಾಕಿ ಸರಾಸರಿ ಹೇಳಿದ್ದ ವರದಿ ಅದು. ಬಿಬಿಎಂಪಿ ವ್ಯಾಪ್ತಿಯಲ್ಲೇ 90 ಕಿಮೀ ರಸ್ತೆಯಲ್ಲಿ 1,737 ಅಪಾಯಗಳನ್ನು ಅಧಿಕೃತವಾಗಿ ಗುರುತಿಸಿತ್ತು.
ಏಪ್ರಿಲ್ 19 : ಇದು 6 ತಿಂಗಳ ಹಿಂದೆ
ಇನ್ನು 36 ಗಂಟೆಗಳಲ್ಲಿ ರಸ್ತೆಗುಂಡಿ ಮುಚ್ಚಲು ಕಾರ್ಯಾದೇಶ ನೀಡಿ ಎಂದು ಹೈಕೋರ್ಟ್ ಹೇಳಿತ್ತು. ಇಲ್ಲದೇ ಹೋದರೆ ರಸ್ತೆ ಗುಂಡಿ ನಿರ್ವಹಣೆ ಹೊಣೆಯನ್ನು ಮಿಲಿಟರಿಗೆ ವಹಿಸುತ್ತೇವೆ ಎಂದು ಎಚ್ಚರಿಕೆ ಕೊಟ್ಟಿತ್ತು.ಎಂಜಿನಿಯರುಗಳಿಗೆ ಕ್ಲಾಸ್ ತೆಗೆದುಕೊಂಡಿತ್ತು.
ಏಪ್ರಿಲ್ 22 : ಮತ್ತೊಮ್ಮೆ ಹೈಕೋರ್ಟ್ ಆದೇಶ
ತಕ್ಷಣವೇ ಕೆಲಸ ಆರಂಭಿಸಿ ಎಂದು ಹೈಕೋರ್ಟ್ ಆದೇಶ ಕೊಟ್ಟಿತ್ತು. ತಾತ್ಕಾಲಿಕ ಆದೇಶ ನೀಡಿದ್ದೇವೆ ಎಂದು ಬಿಬಿಎಂಪಿ ಹೇಳಿತ್ತು.
ಜೂನ್ 28 : ಮಿಲಿಟರಿಗೆ ವಹಿಸಬೇಕಾ ಎಂದು ಕೇಳಿತ್ತು ಹೈಕೋರ್ಟ್
ಏ.19 ಮತ್ತು ಏ.22ರ ಆದೇಶದ ನಂತರವೂ ಕೆಲಸ ಆಗಿರಲಿಲ್ಲ. ಹಲವು ಬಾರಿ ಎಚ್ಚರಿಕೆ ಕೊಟ್ಟರೂ ಕಿವಿಗೆ ಹಾಕಿಕೊಳ್ಳದ ಪಾಲಿಕೆಯನ್ನು ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡಿತ್ತು. ಪೈಥಾನ್ ಯಂತ್ರ ಬಳಸಿ ನಗರದ ರಸ್ತೆಗುಂಡಿಗಳನ್ನು ಮುಚ್ಚುವ ಕಾಮಗಾರಿ ನಡೆಸಲು ಅಮೆರಿಕನ್ ರೋಡ್ ಟೆಕ್ನಾಲಜಿ ಸಲ್ಯೂಷನ್ಸ್ (ಎಆರ್‌ಟಿಎಸ್) ಸಂಸ್ಥೆಯೊಂದಿಗೆ ಆಗಲೂ ಒಪ್ಪಂದ ಮಾಡಿಕೊಂಡಿರಲಿಲ್ಲ. ಅದೇ ನೆಪ ಹೇಳಿದ್ದ ಬಿಬಿಎಂಪಿಗೆ ಛೀಮಾರಿ ಹಾಕಿತ್ತು ಮತ್ತೆ ಒಂದೇ ದಿನ ಟೈಂ ಕೊಟ್ಟು ಕೆಲಸ ಮಾಡಿಸಿ ಎಂದಿತ್ತು.
ಜೂನ್ 30 : ವರದಿ ಸಲ್ಲಿಸಲು ಕಾಲಾವಕಾಶ ಕೇಳಿತ್ತು ಬಿಬಿಎಂಪಿ
ಅನುಪಾಲನಾ ವರದಿ ತಯಾರಿಸೋಕೆ ಸಮಯ ಬೇಕು. ವಸ್ತು ಸ್ಥಿತಿ ತಿಳಿಯೋಕೆ ಅಧಿಕಾರಿಗಳು ಹೋಗಬೇಕು ಎಂದಿತ್ತು ಬಿಬಿಎಂಪಿ. ಆಗಸ್ಟ್ 3ರವರೆಗೆ ಸಮಯಾವಕಾಶ ಕೊಟ್ಟಿತ್ತು. ಅಷ್ಟು ದಿನ ಬಿಬಿಎಂಪಿ ಆಫೀಸರ್ಸ್ ಏನು ಮಾಡುತ್ತಿದ್ದರು ಗೊತ್ತಿಲ್ಲ. ಇದು 2 ತಿಂಗಳ ಹಿಂದಿನ ಕಥೆ.
ಸೆಪ್ಟೆಂಬರ್ 05 : ನವೆಂಬರ್ ಅಂತ್ಯಕ್ಕೆ ಗುಂಡಿ ಮುಕ್ತ
ಈ ನಿರ್ಧಾರ ತೆಗೆದುಕೊಂಡಿದ್ದು ಬಿಬಿಎಂಪಿ. ಬೆಂಗಳೂರು ನಗರದ ಎಲ್ಲಾ ರಸ್ತೆಗಳನ್ನು ಸರಿಪಡಿಸಲು ಪ್ರತಿಜ್ಞೆ ಮಾಡಿದ್ದರು ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್.
ಸೆ.22 : ಬಾಕಿ 221 ಗುಂಡಿ ಮುಚ್ಚಿದರೆ ಎಲ್ಲ ಮುಗಿದಂತೆ ಎಂದಿತ್ತು ಬಿಬಿಂಪಿ.
ಅಷ್ಟೇನಾ ಎಂದು ಅಚ್ಚರಿ ಪಟ್ಟಿದ್ದರು ಜನ. ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿರೋ ರಸ್ತೆಗುಂಡಿ ಇಷ್ಟೆ. 221 ಗುಂಡಿ ಮುಚ್ಚಿದರೆ ಕ್ಲಿಯರ್ ಎಂದು ಬಿಬಿಎಂಪಿ ವರದಿ ಕೊಟ್ಟಿದ್ದು ನ್ಯಾಯಾಲಯಕ್ಕೆ.
ಈಗ.. ಇಷ್ಟೆಲ್ಲ ಆಗಿ ಇಷ್ಟು ದಿನಗಳ ನಂತರ ಮತ್ತೊಂದು ರಸ್ತೆ ಗುಂಡಿಗೆ ಹೆಣ ಬೀಳುವ ಹಂತಕ್ಕೆ ಹೋಗಿ ತಪ್ಪಿದೆ. ಓಕಳಿಪುರಂನಲ್ಲಿ ಗುಂಡಿಯನ್ನ ತಪ್ಪಿಸಿಕೊಂಡು ಗಾಡಿ ಓಡಿಸೋಕೆ ಹೋಗಿದ್ದೇ ಆಕೆ ಮಾಡಿದ್ದ ತಪ್ಪು. ತಾಯಿ ಮಗಳು ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕೆಳಗೆ ಬಿದ್ದು ತಾಯಿಗೆ ಗಂಭೀರ ಗಾಯ ಆಗಿದೆ. ಇಎಸ್ಐ ಆಸ್ಪತ್ರೆಯಲ್ಲಿ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಂತರ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾರನೇ ದಿನದ ಹೊತ್ತಿಗೆ ಸಾವನ್ನಪ್ಪಿದರು.ಇನ್ನೊಂದೆಡೆ ಕಾರ್ಪೊರೇಷನ್ ಬಳಿಯ ಮಿಷನ್ ರಸ್ತೆಯಲ್ಲಿ ಅಪಘಾತ ನಡೆದಿದೆ. ಬೈಕ್ ಸವಾರನ ಕಾಲಿಗೆ ಏಟಾಗಿದ್ದು, ಪಾದಗಳ ಚರ್ಮಗಳು ಕಿತ್ತು ಹೋಗಿವೆ. ಸಾವುಗಳು ಹಿಂದೆಯೂ ಆಗಿವೆ. ಮುಂದೆಯೂ ಆಗುತ್ತವೆ. ಅನುಮಾನವೇ ಇಲ್ಲ. ಹೈಕೋರ್ಟ್ ಅದೆಷ್ಟು ಬಾರಿ ಛೀಮಾರಿ ಹಾಕಿದೆಯೋ.. ಅದೆಷ್ಟು ಬಾರಿ ಅರೆಸ್ಟ್ ಮಾಡಿಸುತ್ತೇನೆ ಎಂದಿದೆಯೋ.. ಲೆಕ್ಕ ಇಟ್ಟುಕೊಂಡವರಿಲ್ಲ. ಇಲ್ಲಿ ಸಿಕ್ಕಿದ್ದೂ ಹೈಕೋರ್ಟ್ ವಿಚಾರಣೆ ಮತ್ತು ಛೀಮಾರಿಯ ಸಣ್ಣ ಸಣ್ಣ ನೆನಪಾದ ಕಥೆಗಳಷ್ಟೆ.
ಹಾಗಾದರೆ ಇದು ಮುಗಿಯೋದು ಯಾವಾಗ? ಗುಂಡಿಗಳಿಲ್ಲದ ರಸ್ತೆಗಳನ್ನು ಬೆಂಗಳೂರಿನಲ್ಲಿ ನೋಡೋದು ಅಸಾಧ್ಯವಾ? ಗೊತ್ತಿಲ್ಲ. ಮುಂದೊಮ್ಮೆ ಪ್ರಳಯವಾಗಿ ಭೂಮಿಯೆಲ್ಲ ನಾಶವಾಗುತ್ತೆ ಅಂತಾರಲ್ಲ. ಆಗ ಸರಿ ಹೋಗಬಹುದಾ? ಗೊತ್ತಿಲ್ಲ. ಕಲ್ಲುಕೋಳಿ ಕೊಕ್ಕೊಕ್ಕೋಕ್ಕೋ ಅಂದರೆ ಪ್ರಳಯವಾಗುತ್ತಂತೆ. ಇನ್ನೆಲ್ಲೋ ಕಲ್ಲು ಬಸವ ಎದ್ದು ಕೂರುತ್ತಾನಂತೆ. ಆಗ ಪ್ರಳಯವಾಗುತ್ತಂತೆ. ಮತ್ತೆಲ್ಲೋ ಮರುಭೂಮಿಯಲ್ಲಿ ನದಿಯೊಂದು ಉಕ್ಕಿ ಹರಿದಾಗ ಪ್ರಳಯವಾಗುತ್ತಂತೆ. ಅನುಮಾನವೇ ಇಲ್ಲ, ಬೆಂಗಳೂರು ಅಥವಾ ರಾಜ್ಯದ ಕೋಟಿ ಕೋಟಿಯ ರಸ್ತೆಗಳು ಗುಂಡಿ ಬೀಳದೆ ಸುಸಜ್ಜಿತವಾಗಿ ಇದ್ದ ದಿನ ಪ್ರಳಯವಾಗುತ್ತಂತೆ.
ಹೈಕೋರ್ಟ್ ಛೀಮಾರಿಗೇ ಬಗ್ಗದವರು, ಅರೆಸ್ಟ್ ಮಾಡಿಸುತ್ತೇನೆ ಎಂದರೂ ಕ್ಯಾರೇ ಎನ್ನದವರು, ಪ್ರತಿಭಟನೆಗೆ ಬಗ್ಗದವರು, ಹೋರಾಟಗಳಿಗೆ ಹೋಗತ್ಲಾಗೆ ಎಂದು ಹೋದವರು.. ಕಾಮಿಡಿ ಮಾಡಿದರೆ ರಸ್ತೆಗಳನ್ನ ಗುಂಡಿ ಇಲ್ಲದಂತೆ ಮಾಡ್ತಾರಾ? ಇನ್ನು ಒಂದು ವರ್ಷದ ನಂತರವೂ.. ಈಗಿರುವ ಸರ್ಕಾರ ಹೋಗಿ ಹೊಸ ಸರ್ಕಾರ ಬಂದರೂ.. ಆ ಸರ್ಕಾರವೂ ವರ್ಷ ಪೂರೈಸಿದರೂ.. ಪರಿಸ್ಥಿತಿ ಬದಲಾಗಲ್ಲ. ಇದು ಸತ್ಯ. ಇದು ಸತ್ಯ. ಇದು ಸತ್ಯ.

Tags: #BBMP #Potholes #Highcourt #ಬಿಬಿಎಂಪಿ #ರಸ್ತೆಗುಂಡಿ #ಹೈಕೋರ್ಟ್
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.