ವೀರ ಸಾವರ್ಕಕರ್. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಅಂಡಮಾನ್ ಜೈಲಿನಲ್ಲಿ ಕರಿನೀರಿನ ಶಿಕ್ಷೆ ಅನುಭವಿಸಿದ್ದ ಹೋರಾಟಗಾರ. ಬ್ರಿಟಿಷ್ ಸರ್ಕಾರದ ವಿರುದ್ಧ ಸಂಚು ನಡೆಸಿದ್ದಕ್ಕಾಗಿ ಸಾವರ್ಕರ್‍ರನ್ನು 50 ವರ್ಷಗಳ ಜೈಲು ಶಿಕ್ಷೆಗೆ ಗುರಿಪಡಿಸಿದಾಗ ಅವರಿಗಿನ್ನೂ 28 ವರ್ಷ. ಅದಾದ ಮೇಲೆ ಸಾವರ್ಕರ್ ಬಿಡುಗಡೆಯಾಗಿದ್ದು 1924ರಲ್ಲಿ. ಹಲವು ಕ್ಷಮಾಪಣೆ ಪತ್ರಗಳ ನಂತರ. ಬಿಡುಗಡೆಯಾಗಿ ಬಂದ ಮೇಲೆ ಸ್ವಾತಂತ್ರ್ಯ ಹೋರಾಟಕ್ಕಿಂತ ಹೆಚ್ಚಾಗಿ ಹಿಂದೂ ಧರ್ಮದಲ್ಲಿದ್ದ ಅಸ್ಪøಶ್ಯತೆ, ಜಾತೀಯತೆ ವಿರುದ್ಧ ಹೋರಾಟ ಸಂಘಟಿಸಿದವರು. ದಲಿತರ ದೇಗುಲ ಪ್ರವೇಶ, ಸಹಭೋಜನಗಳ ಮೂಲಕ ಕ್ರಾಂತಿಯನ್ನೇ ಮಾಡಿದವರು. ನಂತರ ಮಹಾತ್ಮ ಗಾಂಧಿ ಹತ್ಯೆಯಲ್ಲಿ ಆರೋಪಿಯಾಗಿ ಜೈಲಿಗೆ ತಳ್ಳಿಸಿಕೊಂಡ ಸಾವರ್ಕರ್, ಒಂದೇ ಒಂದು ಸಾಕ್ಷಿಯೂ ಸಿಕ್ಕದೆ ಕೊನೆಗೆ ನಿರ್ದೋಷಿ ಎಂದು ಬಿಡುಗಡೆಯಾದವರು. ಇಂದಿರಾ ಗಾಂಧಿಯವರಿಂದಲೂ ಹೊಗಳಿಸಿಕೊಂಡಿದ್ದ ಸಾವರ್ಕರ್ ಅವರನ್ನು, ದೇಶದ್ರೋಹಿ ಎನ್ನುವುದನ್ನು ಕಾಂಗ್ರೆಸ್ಸಿಗರು ನಿಲ್ಲಿಸಿಲ್ಲ. ಮತ್ತೊಮ್ಮೆ ರಾಹುಲ್ ಗಾಂಧಿ ಅದೇ ಮಾತು ಹೇಳಿದ್ದಾರೆ.
ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದು, ಅವರಿಂದ ಪಿಂಚಣಿ ಪಡೆಯುತ್ತಿದ್ದವನನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಭಾರತ್ ಜೋಡೋ ಯಾತ್ರೆಯಲ್ಲಿ ಅವರು ಹೇಳಿರುವ ಈ ಮಾತು ಸಾವರ್ಕರ್ ಮೊಮ್ಮಗ ರಂಜಿತ್ ಸಾವರ್ಕರ್ ಅವರನ್ನು ಕೆರಳಿಸಿದೆ.
ರಾಹುಲ್ ಗಾಂಧಿಯೇ ಆಗಲಿ, ಕಾಂಗ್ರೆಸ್ ನಾಯಕರೇ ಆಗಲಿ, ಸಾವರ್ಕರ್ ಬಗ್ಗೆ ಅವಹೇಳನ, ಲೇವಡಿ ಮಾಡುತ್ತಿರುವುದು, ದ್ವೇಷ ಕಾರುತ್ತಿರುವುದು, ಸುಳ್ಳು ಹೇಳುತ್ತಿರುವುದು ಇದೇ ಮೊದಲಲ್ಲ. ಈ ಬಾರಿ ನಮಗೂ ತಾಳ್ಮೆ ನಶಿಸಿದೆ. ಶಿವಾಜಿ ಪಾರ್ಕ್ ಸ್ಟೇಷನ್‍ನಲ್ಲಿ ಕಂಪ್ಲೇಂಟ್ ದಾಖಲಿಸಿದ್ದೇವೆ ಎಂದಿದ್ದಾರೆ ರಂಜಿತ್ ಸಾವರ್ಕರ್.
ಸಾವರ್ಕರ್ ಅವರ ಬಗ್ಗೆ ಸುಳ್ಳು ಹೇಳುವುದನ್ನು ಕಾಂಗ್ರೆಸ್ ಅಜೆಂಡಾ ಮಾಡಿಕೊಂಡಿದೆ. ವೋಟ್ ಬ್ಯಾಂಕ್‍ಗಾಗಿ ಇಂತಹ ಸುಳ್ಳನ್ನು ಮತ್ತೆ ಮತ್ತೆ ಹೇಳುತ್ತಿದ್ದಾರೆ. 2017ರಲ್ಲಿಯೂ ರಾಹುಲ್ ಗಾಂಧಿ ಇಂತಹುದೇ ಮಾತು ಹೇಳಿದರು. ಅವರು ಈ ತಪ್ಪನ್ನು ಪದೆ ಪದೇ ಮಾಡುತ್ತಿದ್ದಾರೆ ಎನ್ನುವುದು ರಂಜಿತ್ ಸಾವರ್ಕರ್ ಮಾತು.
ಅತ್ತ ಕಾಂಗ್ರೆಸ್ ಜೊತೆಗಾರ ಶಿವಸೇನೆಗೂ ಸಂಕಷ್ಟ ತಂದಿಟ್ಟಿದೆ. ಏಕೆಂದರೆ ಮಹಾರಾಷ್ಟ್ರದಲ್ಲಿ ಶಿವಸೇನೆಯ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ರಾಹುಲ್ ಜೊತೆ ಹೆಜ್ಜೆ ಹಾಕಿದ್ದರು. ಈಗ ಉದ್ಧವ್ ಠಾಕ್ರೆ ರಾಹುಲ್ ಗಾಂಧಿ ಸಾವರ್ಕರ್ ಬಗ್ಗೆ ಆಡಿರುವ ಮಾತುಗಳನ್ನು ನಾನು ಒಪ್ಪುವುದಿಲ್ಲ ಎಂದಿದ್ದಾರೆ. ಆದರೆ ಸಾವರ್ಕರ್ ಅವರ ತತ್ವಗಳ ವಿರೋಧಿ ಆರ್.ಎಸ್.ಎಸ್. ಮತ್ತು ಬಿಜೆಪಿ ಸಾವರ್ಕರ್ ಅವರನ್ನು ಹೊತ್ತು ಮೆರೆಸುತ್ತಿದೆ ಎಂದು ಆರ್,ಎಸ್.ಎಸ್. ಮತ್ತು ಬಿಜೆಪಿಯನ್ನು ಟೀಕಿಸಿದ್ದಾರ



