ಅಯೋಧ್ಯೆಯ ಬಾಬ್ರಿ ಮಸೀದಿ ವಿವಾದ ಮುಗಿಯಿತು. ಬಗೆಹರಿಯಿತು ಎಂದುಕೊಳ್ಳುತ್ತಿರುವಾಗಲೇ ವಿವಾದ ಕಿಡಿ ಮತ್ತೊಮ್ಮೆ ಹೊತ್ತಿದೆ. ಮುಂದಿನ ವರ್ಷದ ಸಂಕ್ರಾಂತಿ ಹೊತ್ತಿಗೆ ರಾಮಜನ್ಮಭೂಮಿಯಲ್ಲಿ ಭವ್ಯ ರಾಮಮಂದಿರ ತಲೆಎತ್ತಲಿದ್ದು, ಉದ್ಘಾಟನೆಯಾಗಲಿದೆ. ಜೈಶ್ರೀರಾಮ್ ಎಂದು ರಾಮಭಕ್ತರು ಮಂತ್ರೋಚ್ಛಾರ ಮಾಡುತ್ತಿರುವಾಗಲೇ ಆಗಲೇ ಅದನ್ನು ಕೆಡವುವ ಮಾತು ಕೇಳಿ ಬಂದಿದೆ. ಈ ಮಾತು ಹೇಳಿರುವುದು ಆಲ್ ಇಂಡಿಯನ್ ಇಮಾಮ್ ಅಸೋಸಿಯೇಷನ್ ಚೀಫ್ ಎನಿಸಿಕೊಂಡಿರೋ ಮೌಲಾನಾ ಸಾಜಿದ್ ರಷೀದ್.

ಈಗ ಭಾರತದ ಮುಸ್ಲಿಮರು ಮೌನವಾಗಿದ್ದಾರೆ. ಎಲ್ಲವನ್ನೂ ಸಹಿಸಿಕೊಂಡಿದ್ದಾರೆ ಎಂದ ಕೂಡಲೇ ಅವರು ತಣ್ಣಗಾಗಿದ್ದಾರೆ ಎಂದುಕೊಳ್ಳಬೇಡಿ. ನಾನು..ನನ್ನ ಮಗ.. ಅವನ ಮಗ..ಮೊಮ್ಮಗ.. ಎಲ್ಲರೂ ಹೋರಾಡುತ್ತಲೇ ಇರುತ್ತಾರೆ. ಇವತ್ತು ಸಾಧ್ಯವಾಗದೇ ಇರಬಹುದು, ಮುಂದಿನ 50 ವರ್ಷ..ನೂರು ವರ್ಷ.. ಅವರಿಗೆ ಇತಿಹಾಸ ನೆನಪಿರುತ್ತದೆ. ನಮ್ಮ ಮಸೀದಿಯನ್ನು ಕೆಡವಿ ಮಂದಿರ ಕಟ್ಟಿದ್ದನ್ನು ಅವರು ಮರೆಯುವುದಿಲ್ಲ. ಅಷ್ಟು ಹೊತ್ತಿಗೆ ಇಲ್ಲಿಯೂ ಮುಸ್ಲಿಂ ಸಾಮ್ರಾಜ್ಯ ಸ್ಥಾಪನೆಯಾಗುತ್ತದೆ. ಮುಸ್ಲಿಮರ ಸರ್ಕಾರ ಇರುತ್ತದೆ. ಆಗ ಅವರು ಮಂದಿರವನ್ನು ಕೆಡವಿ ಅಲ್ಲಿ ಮಸೀದಿ ಕಟ್ಟುವುದಿಲ್ಲವೇ.. ಇದು ಮೌಲಾನಾ ಸಾಜಿದ್ ರಷೀದ್.
ಮೌಲಾನಾ ಸಾಜಿದ್ ರಷೀದ್ ಅವರ ಈ ನಡೆ, ಇಂತಹ ಬೆಂಕಿಯುಗುಳುವ ಮಾತುಗಳು ಇದೇ ಮೊದಲಲ್ಲ. ಉತ್ತರಾಖಂಡ್‍ನಲ್ಲಿ ಮದರಸಾಗಳ ಆಧುನೀಕರಣಕ್ಕೆ ಸರ್ಕಾರ ಮುಂದಾಗಿತ್ತು. ಖಾಸಗಿ ಮದರಸಾಗಳ ತಂಟೆಗೆ ಬಂದರೆ ಸರ್ಕಾರವನ್ನು ಬೆಂಕಿ ಹಚ್ಚಿ ಸುಡುತ್ತೇವೆ ಎಂದು ಅಬ್ಬರಿಸಿದ್ದರು. ಸರ್ಕಾರಿ ಮದರಸಾಗಳನ್ನು ನಿಮಗೆ ಹೇಗೆ ಬೇಕೋ ಹಾಗಿಟ್ಟುಕೊಳ್ಳಿ. ಖಾಸಗಿ ಮದರಸಾಗಳ ತಂಟೆಗೆ ಬಂದರೆ ಹುಷಾರ್, ಇಡೀ ಭಾರತಕ್ಕೆ ಬೆಂಕಿ ಬೀಳುತ್ತದೆ ಎಂದು ಗುಡುಗಿದ್ದರು. ಉತ್ತರ ಪ್ರದೇಶದಲ್ಲಿ ನೋಂದಣಿ ಇಲ್ಲದ ಮದರಸಾಗಳ ಸಮೀಕ್ಷೆಗೆ ಮುಂದಾದಾಗಲೂ ಆಕ್ರೋಶ ವ್ಯಕ್ತಪಡಿಸಿದ್ದರಾದರೂ, ನಂತರ ತಣ್ಣಗಾಗಿದ್ದರು.



