

ಮಹಾಕಾಲ ಲೋಕ ಕಾರಿಡಾರ್ನ ಮುಖ್ಯಗೇಟ್ ವೇ ‘ನಂದಿ ದ್ವಾರ’ದ ಕೆಳಗೆ ಬೃಹತ್ ಶಿವಲಿಂಗವನ್ನು ಪವಿತ್ರ ದಾರ (ಮೋಲಿ)ಯಿಂದ ಸುತ್ತಿ ಮುಚ್ಚಿಡಲಾಗಿದೆ. ಈ ಕಾರಿಡಾರ್ ಉದ್ಘಾಟನೆ ವೇಳೆಗೆ ಪ್ರಧಾನಿ ನರೇಂದ್ರ ಮೋದಿ ಈ ಶಿವಲಿಂಗವನ್ನು ಅನಾವರಣಗೊಳಿಸಲಿದ್ದಾರೆ. ಸಾಯಂಕಾಲ 5:30ಕ್ಕೆ ಉಜ್ಜಯಿನಿಗೆ ಬಂದಿಳಿಯಲಿದ್ದಾರೆ.
ಮಹಾಕಾಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ, ಅಲ್ಲಿ ಪೂಜೆ ನೆರವೇರಿಸಲಿದ್ದಾರೆ. ನಂತರ ಕಾರ್ತಿಕ ಮೇಳವನ್ನು ಆಯೋಜಿಸಲಾಗಿದ್ದು ಖ್ಯಾತ ಗಾಯಕ ಕೈಲಾಶ್ ಖೇರಸ್ ಶಿವಸ್ತುತಿ ಹಾಡಲಿದ್ದಾರೆ. ಈ ಯೋಜನೆಯಿಂದಾಗಿ ದೇವಸ್ಥಾನ ಸುತ್ತಮುತ್ತ ಮೊದಲು ಇದ್ದ ಪ್ರದೇಶ 2.87 ಹೆಕ್ಟೇರ್‍ನಿಂದ 47 ಹೆಕ್ಟೇರ್‍ಗೆ ಏರಿಕೆಯಾಗಿದೆ. ಇದು ದೇಶದಲ್ಲೆ ಅತಿ ಉದ್ದವಾದ ಕಾರಿಡಾರ್. ಉದ್ದ 900 ಮೀಟರ್. ಆಂಬುಲೆನ್ಸ್, ಅಗ್ನಿಶಾಮಕ ವಾಹನಗಳೂ ಸಂಚರಿಸಬಹುದಾದ ಕಾರಿಡಾರ್‍ನಲ್ಲಿ ಎರಡು ಬೃಹತ್ ಹೆಬ್ಬಾಗಿಲುಗಳಿವೆ. ಶಿವಪುರಾಣ ಆಧರಿಸಿಯೇ ಶಿವದ್ವಾರ ಹಾಗೂ ಪಿನಾಕಿ ದ್ವಾರಗಳನ್ನು ನಿರ್ಮಿಸಲಾಗಿದೆ. ರಾಜಸ್ತಾನದ ಮರಳುಗಲ್ಲುಗಳಿಂದ ಈ ಹೆಬ್ಬಾಗಿಲು ಸೃಷ್ಟಿಸಿರುವುದು ವಿಶೇಷ.
108 ಕಂಬಗಳಿಂದ ಸಿಂಗಾರಗೊಂಡಿದೆ. ಶಿವ ದೇಗುಲಕ್ಕೆ ಅಲಂಕಾರದಂತೆ ಕಾಣಿಸುವ ಈ ಕಂಬಗಳಲ್ಲಿಇಯೇ ಸಿಸಿಟಿವಿ ಕ್ಯಾಮೆರಗಳೂ ಇವೆ. ಧ್ವನಿವರ್ಧಕಗಳೂ ಇವೆ. ಮೇಲೆ ದೀಪಸ್ತಂಭಗಳೂ ಇವೆ.









