ಮುಂದಿನ ವರ್ಷ ನಡೆಯಲಿರೋ ಎಲೆಕ್ಷನ್ನಲ್ಲಿ ಎಲ್ಲ ಹಾಲಿ ಶಾಸಕರಿಗೂ ಟಿಕೆಟ್ ಇಲ್ಲ. ಇಂತಾದ್ದೊಂದು ಸಂದೇಶ ಜೆಡಿಎಸ್ನಿಂದಲೂ ರವಾನೆಯಾಗಿದೆ. ಪಕ್ಷಗಳು ಏನೇ ಸಿದ್ಧಾಂತ ಹೇಳಲಿ, ಕಡೆಯಲ್ಲಿ ಎಲ್ಲರೂ ಅನುಸರಿಸುವ ಸೂತ್ರ ಒಂದೇ. ಗೆಲ್ಲುವವರಿಗೆ ಮಾತ್ರ ಟಿಕೆಟ್ ಎನ್ನುವುದೇ ಆ ಸೂತ್ರ. ಇತ್ತೀಚೆಗೆ ಅದನ್ನು ಯಶಸ್ವಿಯಾಗಿ ಜಾರಿಗೆ ತಂದು ಗೆಲುವು ಕಂಡಿದ್ದು ಬಿಜೆಪಿ. ಉತ್ತರ ಪ್ರದೇಶ ಚುನಾವಣೆಯಲ್ಲಿ 50ಕ್ಕೂ ಹೆಚ್ಚು ಶಾಸಕರಿಗೆ ಟಿಕೆಟ್ ಕೊಟ್ಟಿಲಿರಲ್ಲ. ಹಿಮಾಚಲ ಪ್ರದೇಶದಲ್ಲಿ ಕೂಡಾ 10 ಶಾಸಕರಿಗೆ ಟಿಕೆಟ್ ಕೊಟ್ಟಿಲ್ಲ. ಗುಜರಾತ್ನಲ್ಲೂ ಅದೇ ಮಾಡೆಲ್ ಫಾಲೋ ಮಾಡುತ್ತಿದೆ. ಇಂತಹ ಸಮಯದಲ್ಲಿ ಇನ್ನೇನು ಕೆಲವೇ ತಿಂಗಳುಗಳ ದೂರದಲ್ಲಿರುವ ಎಲೆಕ್ಷನ್ನಿನಲ್ಲಿ ಜೆಡಿಎಸ್ ಕೂಡಾ ಅದೇ ತಂತ್ರದ ಮೊರೆ ಹೋಗಿದೆ.
ಮುಂದಿನ ಚುನಾವಣೆಗೆ ಜೆಡಿಎಸ್ ಭರ್ಜರಿ ಸಿದ್ಧತೆ ನಡೆಸುತ್ತಿದ್ದು, ಕುಮಾರಸ್ವಾಮಿ ನೇತೃತ್ವದಲ್ಲಿ 3 ದಿನದಿಂದ ರಹಸ್ಯ ಸಭೆ ನಡೆದಿವೆಯಂತೆ. ಎಲ್ಲ ಕ್ಷೇತ್ರ ಗಳ ಮಾಹಿತಿ ಕಲೆ ಹಾಕಿರುವ ಪ್ರತಿ ಕ್ಷೇತ್ರದ ವಿವರವನ್ನೂ ಸಂಗ್ರಹಿಸಿದ್ದಾರಂತೆ. ಯಾವ ಯಾವ ಕ್ಷೇತ್ರಗಳಲ್ಲಿ ಪಕ್ಷದ ಪರಿಸ್ಥಿತಿ ಹೇಗಿದೆ? ಗೆಲ್ಲುವ ಅಭ್ಯರ್ಥಿ ಯಾರು? ಏನೇನು ತಂತ್ರಗಾರಿಕೆ ಅನುಸರಿಸಬೇಕು ಎಂಬ ಬಗ್ಗೆ ಕುಮಾರಸ್ವಾಮಿ ಬಳಿ ಇದೆ ಕಂಪ್ಲೀಟ್ ಮಾಹಿತಿ ಸಂಗ್ರಹಿಸಿದ್ದಾರಂತೆ ಕುಮಾರಸ್ವಾಮಿ.

ನಾವು ಹಾಲಿ ಶಾಸಕರಿದ್ದೇವೆ, ನಮಗೆ ಟಿಕೆಟ್ ಪಕ್ಕಾ ಎಂಬ ಭ್ರಮೆಯಲ್ಲಿ ಇದ್ದವರಿಗೆ ಎಚ್ಡಿಕೆ ಶಾಕ್ ಕೊಟ್ಟಿದ್ದಾರೆ ಎಂಬ ಮಾಹಿತಿ ಇದೆ.ಶಾಸಕರಿಗೇ ಗೊತ್ತಿಲ್ಲದಂತೆ ಅವರ ಕ್ಷೇತ್ರದಲ್ಲಿ ಸರ್ವೆ ಮಾಡಿಸಿರುವ ಕುಮಾರಸ್ವಾಮಿ, ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಯಾವ ರೀತಿ ನಡೆಯುತ್ತಿವೆ. ಅನುದಾನ ಸಿಕ್ಕಿದ್ದರೂ ಯಾಕೆ ಕೆಲಸಗಳು ನಿಧಾನಗತಿಯಲ್ಲಿ ಆಗ್ತಿವೆ… ಎಂಬ ಮಾಹಿತಿಯನ್ನೂ ಸಂಗ್ರಹಿಸಿದ್ದಾರೆ.
ಸಿಕ್ರೆಟ್ ಸರ್ವೆ ಟೀಮ್ ನಿಂದ ಮಾಹಿತಿ ಸಂಗ್ರಹಿಸಲಾಗಿದ್ದು, ಕುಮಾರಸ್ವಾಮಿ ಸಂಗ್ರಹ ಮಾಡಿರುವ ಮಾಹಿತಿ ನೋಡಿ ಜೆಡಿಎಸ್ ಶಾಸಕರು ಕಂಗಾಲಾಗಿದ್ದಾರೆ. ಮುಂದೆ ಗೆಲ್ಲುವ ಬಗ್ಗೆ ಸಂಪೂರ್ಣ ವಿಶ್ವಾಸ ಇದ್ರೆ ಮಾತ್ರ ಬಿ ಫಾರಂ. ಇಲ್ಲದೇ ಹೋದ್ರೆ ಟಿಕೆಟ್ ಕೊಡಲ್ಲ ಎಂಬ ಸಂದೇಶ ರವಾನೆಯಾಗಿದೆ. ನೂರಾ ಇಪ್ಪತ್ತಾರು ಕ್ಷೇತ್ರಗಳ ಅಭ್ಯರ್ಥಿಗಳಿಗೆ ಕುಮಾರಸ್ವಾಮಿ ಕ್ಲಾಸ್ ತೆಗೆದುಕೊಂಡಿದ್ದು, ಕಳೆದ ಬಾರಿ ಗೆದ್ದಿದ್ದು ಹೇಗೆ, ಸೋತಿದ್ದರೆ ಅದಕ್ಕೆ ಕಾರಣವೇನು.? ಈ ಸಲ ಗೆಲ್ಲುವ ಸಾದ್ಯತೆಗಳು ಹೇಗಿವೆ. ಕ್ಷೇತ್ರದ ಜನರ ಜೊತೆ, ಮಾದ್ಯಮಗಳ ಜೊತೆ ಅಭ್ಯರ್ಥಿಗಳ ಸಂಪರ್ಕ ಹೇಗಿದೆ ಎಂಬ ಎಲ್ಲ ವಿವರಗಳನ್ನೂ ಪಕ್ಕಾ ಮಾಡಿಕೊಂಡಿದ್ದಾರೆ.
ಅಭ್ಯರ್ಥಿಗಳಿಗೆ ತರಬೇತಿ ಕೂಡಾ ನೀಡಲಾಗುತ್ತಿದ್ದು, ದೆಹಲಿ ಮತ್ತು ಬೆಂಗಳೂರು ಎರಡು ತಂಡಗಳಿಂದ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಕಳೆದ ಮೂರು ದಿನಗಳಿಂದ ರಹಸ್ಯ ಸಭೆ ನಡೆಸಲಾಗಿದ್ದು, ಕುಮಾರಸ್ವಾಮಿ ಬಳಿ ಇರುವ ಮಾಹಿತಿ ನೋಡಿ ಶಾಸಕರು ದಂಗಾಗಿದ್ದಾರಂತೆ.



