ಕಾಂತಾರದಲ್ಲಿ ಚೆಂದದ ಕಥೆಯಿದೆ. ನೆಲದ ಸಂಸ್ಕøತಿಯಿದೆ. ಕಾಡನ್ನು ಕಡಿಯುವವರ ಆಟಾಟೋಪವಿದೆ. ದುಷ್ಟರ ಮಸಲತ್ತುಗಳಿವೆ. ಲವ್ ಸ್ಟೋರಿಯಿದೆ. ಮೈಬೆಚ್ಚಗಾಗಿಸುವ ರೊಮ್ಯಾನ್ಸ್ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ದೈವ ಪಂಜುರ್ಲಿ ಮತ್ತು ಗುಳಿಗ ದೈವದ ಆರ್ಭಟವಿದೆ. ಭಕ್ತಿಯಿದೆ. ನಂಬಿಕೆಯಿದೆ. ಚೆಂದದ ಹಾಡುಗಳಿವೆ. ಈ ಎಲ್ಲವನ್ನೂ ನೋಡಿಕೊಂಡು ಹೊರಬಂದ ಪ್ರೇಕ್ಷಕನಿಗೆ..
ಚಿತ್ರದ ಕಥೆ ಕಾಡುತ್ತದೆ. ಶಿವನನ್ನು ಮೆಚ್ಚಿಕೊಳ್ಳಬೇಕೋ.. ಗುಳಿಗನನ್ನು ಮೆಚ್ಚಿಕೊಳ್ಳಬೇಕೋ.. ಪಂಜುರ್ಲಿಯ ಸಂದೇಶ ಮೆಚ್ಚಬೇಕೋ ಎಂಬ ಗೊಂದಲ. ನಾಯಕಿ ಲೀಲಾಳ ಪ್ರೀತಿ, ಸಿಡಿದೇಳುವ ಸುಡುಕೋಪದ ಮಧ್ಯೆ ಇಷ್ಟವಾಗುವುದು ಏನು ಎಂದು ಪ್ರೇಕ್ಷಕ ತಲೆಕೆರೆದುಕೊಳ್ಳುತ್ತಾನೆ. ಧಣಿಯ ಮಸಲತ್ತು. ಶಿವನ ತಾಯಿಯ ಆಕ್ರೋಶ, ಚೆಂದದ ಕ್ಲೈಮಾಕ್ಸು.. ಈ ಎಲ್ಲದರ ನಮಗೆಲ್ಲ ಸಿಗುವ ಸಂದೇಶ ಕೂಡಿ ಬಾಳಿದರೆ ಪರಿಸರವೂ ಉಳಿಯುತ್ತೆ. ನಾವೂ ಉಳಿಯುತ್ತೇವೆ. ನಂಬಿಕೆಗಳೇ ದೇವರು. ದೇವರೆಂದರೆ ನಂಬಿಕೆ ಎನ್ನುವುದು. ಆದರೆ ಒಬ್ಬೊಬ್ಬರಿಗೆ ಒಂದೊಂದು ರೀತಿ ಕಾಣುವ ಕಾಂತಾರ ಇನ್ವೆಸ್ಟ್ ಕರ್ನಾಟಕದಲ್ಲಿ ಹಣಕಾಸು, ಬಿಸಿನೆಸ್ಸಿಗೆ ಸಂಬಂಧಪಟ್ಟವರಿಗೆ ಬೇರೆಯದೇ ರೀತಿಯಲ್ಲಿ ಕಾಣಿಸಿದೆ.
ಕಾಂತಾರ ಇದೊಂದು ಸಣ್ಣ ಬಂಡವಾಳದಲ್ಲಿ ನಿರ್ಮಿಸಿದ ಚಿತ್ರ. ಸೂಪರ್ ಹಿಟ್ ಆಗಿದೆ. ಬ್ಲಾಕ್ ಬಸ್ಟರ್ ಚಿತ್ರ ಎನಿಸಿಕೊಂಡಿದೆ. ನೂರಾರು ಕೋಟಿ ಬಿಸ್ನೆಸ್ ಮಾಡಿದೆ. ಳೀಯ ಸಂಸ್ಕೃತಿ, ಆಚರಣೆಯ ಕಥಾಹಂದರ ಇರುವ ಚಿತ್ರ ಈ ಚಿತ್ರದ ತಯಾರಿಕೆಗೆ ಸಣ್ಣ ಬಂಡವಾಳವನ್ನೇ ಹೂಡಲಾಗಿದೆ. ಆದರೆ, ಈಗ ಆ ಚಿತ್ರ 300 ಕೋಟಿಗೂ ಹೆಚ್ಚು ಗಳಿಸಿದೆ. ಕಡಿಮೆ ಬಜೆಟ್ಟಿನಲ್ಲಿ ತಯಾರಾದ ಸಿನಿಮಾ 20 ಪಟ್ಟಿಗೂ ಹೆಚ್ಚು ಗಳಿಕೆ ಮಾಡಿದೆ. ಹೂಡಿಕೆದಾರರೂ ಅಷ್ಟೆ. ಅವರು ಯಾವತ್ತೂ ಹಾಕಿದ ಬಂಡವಾಳಕ್ಕಿಂತ ಹೆಚ್ಚು ಹೆಚ್ಚು ಆದಾಯದ ನಿರೀಕ್ಷೆಯಲ್ಲಿರುತ್ತಾರೆ. ಇದೇ ಕಾರಣಕ್ಕೆ ಕರ್ನಾಟಕದಲ್ಲಿ ಹೂಡಿಕೆ ಮಾಡಲು ಎಲ್ಲರೂ ಆಸಕ್ತಿ ತೋರಿಸುತ್ತಿದ್ದಾರೆ ಎಂದಿರುವುದು ಪಿಯೂಷ್ ಗೋಯೆಲ್. ಅಂದಹಾಗೆ ಪಿಯೂಷ್ ಗೋಯೆಲ್ ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ.
ಅವರು ವೇದಿಕೆಯಲ್ಲಿ ಅಷ್ಟು ಹೇಳಿ ಮುಗಿಯುತ್ತಿದ್ದಂತೆ ಎದ್ದು ನೇರವಾಗಿ ಗರುಡಾಮಾಲ್‍ಗೆ ಹೋದ ನಿರ್ಮಲಾ ಸೀತರಾಮನ್ ಕಾಂತಾರ ನೋಡಿ ಥ್ರಿಲ್ಲಾಗಿದ್ದಾರೆ. ಧರ್ಮಸ್ಥಳದಲ್ಲಿದದ್ದ ಚಿತ್ರದ ಹೀರೋ ಕಮ್ ಡೈರೆಕ್ಟರ್ ರಿಷಬ್ ಶೆಟ್ಟಿಯವರಿಗೆ ಫೋನ್ ಮಾಡಿ ಖುದ್ದು ಮಾತನಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ಕಾಂತಾರದ ಬಿಸಿನಸ್ ವಿಷಯ ಬಿಡಿ. ಅದು ಹೊಸ ಹೊಸ ದಾಖಲೆಗಳನ್ನು ಬೇಟೆಯಾಡಿ ಮುನ್ನುಗ್ಗುತ್ತಿದೆ. ಹಿಂದಿಯಲ್ಲಿ 50 ಕೋಟಿ ಬಾರ್ಡರ್ ದಾಟಿರುವ ಬಾಕ್ಸಾಫೀಸ್ ಬೇಟೆ ವಿಶ್ವದಾದ್ಯಂತ 300 ಕೋಟಿ ದಾಟಿದೆ. ಹೊಬಾಳೆಯವರು ಫುಲ್ ಖುಷಿಯಾಗಿದ್ಧಾರೆ. ಏಕೆಂದರೆ ಅವರಿಗೂ ಇದು ಅನಿರೀಕ್ಷಿತ ಬ್ಲಾಕ್ ಬಸ್ಟರ್. ಹಿಟ್ ಆಗುವ ನಿರೀಕೆಯಿತ್ತಾದರೂ ಈ ಮಟ್ಟಿಗೆ ದೈವೀಕ ಯಶಸ್ಸು ಕಾಣುವ ನಿರೀಕ್ಷೆಯೇನೂ ಇರಲಿಲ್ಲ. ಕನ್ನಡದಲ್ಲಿ 150 ಕೋಟಿಗೂ ಹೆಚ್ಚು, ತೆಲುಗು ಹಾಗೂ ಹಿಂದಿಯಲ್ಲಿ 50 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿರುವ ಕಾಂತಾರ, ತಮಿಳು, ಮಲಯಾಳಂನಲ್ಲಿ ಉತ್ತಮ ಕಲೆಕ್ಷನ್ ದಾಖಲೆ ಬರೆಯುತ್ತಿದೆ.
ಅಷ್ಟೇ ಅಲ್ಲ, ಕೆಜಿಎಫ್ ಸಿನಿಮಾ ಕೂಡಾ ಬಿಸಿನೆಸ್ ಪಾಠ ಎಂದಿದ್ದಾರೆ ಪಿಯೂಷ್ ಗೋಯೆಲ್. ಕೆಜಿಎಫ್ ಚಾಪ್ಟರ್ 2 ಕೂಡಾ ಹಾಕಿದ ಬಂಡವಾಳಕ್ಕಿಂತ 10 ಪಟ್ಟು ಹೆಚ್ಚು ಲಾಭ ಗಳಿಸಿಕೊಟ್ಟಿತ್ತು. ಅಂದಹಾಗೆ ಬಿಸಿನೆಸ್ಸಿನ ವಿಷಯಕ್ಕೆ ಬಂದರೆ ಕಾಂತಾರದ ಯಶಸ್ಸು ಮುಂದಿನ ದಿನಗಳಲ್ಲಿ ಕನ್ನಡ ಚಿತ್ರಗಳಿಗೆ ಒಳ್ಳೆಯ ಮಾರುಕಟ್ಟೆಯನ್ನಂತೂ ಓಪನ್ ಮಾಡಲಿದೆ.



