Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Cinema

ಕಿಚ್ಚ ಸುದೀಪ್ ಸಿನಿಮಾ, ಜಾಹೀರಾತು ಪ್ರಸಾರ ಸ್ಥಗಿತ ಮಾಡೋಕೆ ಸಾಧ್ಯವಿಲ್ಲ : ಏಕೆ ಗೊತ್ತಾ..?

SpeciallU by SpeciallU
April 8, 2023
in Cinema, Politics
Reading Time: 1 min read
0 0
0
ಕಿಚ್ಚ ಸುದೀಪ್ ಸಿನಿಮಾ, ಜಾಹೀರಾತು ಪ್ರಸಾರ ಸ್ಥಗಿತ ಮಾಡೋಕೆ ಸಾಧ್ಯವಿಲ್ಲ : ಏಕೆ ಗೊತ್ತಾ..?

ಸುದೀಪ್ ರಾಜಕೀಯ ಪ್ರವೇಶ ಮಾಡುತ್ತೇನೆ. ಅದೂ ಸಿಎಂ ಬೊಮ್ಮಾಯಿ ಹಾಗೂ ಅವರ ಪರ ಇದ್ದವರಿಗೆ. ಅವರು ಹೇಳಿದವರಿಗೆ ಮಾತ್ರ. ಉಳಿದಂತೆ ನಾನು ಯಾವ ಪಕ್ಷಕ್ಕೂ ಸೇರಿಲ್ಲ. ಸೇರುತ್ತಿಲ್ಲ ಎಂದು ಹೇಳುತ್ತಿದ್ದಾರಾದರೂ, ದಾಳಿಗಂತೂ ಗುರಿಯಾಗಿದೆ. ಚಿತ್ರರಂಗದವರೇ ಆಗಿರುವ ಪ್ರಕಾಶ್ ರೈ ಒಂದು ಕಡೆ, ಅಹಿಂಸಾ ಚೇತನ್ ಇನ್ನೊಂದು ಕಡೆ ಮುಗಿಬಿದ್ದಿದ್ದರೆ, ಅತ್ತ ರಾಜಕೀಯ ನಾಯಕರೆಲ್ಲ ಅಟ್ಯಾಕ್ ಮಾಡೋಕೆ ಶುರು ಮಾಡಿದ್ದಾರೆ. ಪರ ವಿರೋಧಗಳು ಹೆಚ್ಚಾಗಿದೆ. ಇದೀಗ ಕಿಚ್ಚ ಸುದೀಪ್ ಅವರ ಚಿತ್ರಗಳ ಪ್ರಸಾರ, ಜಾಹೀರಾತುಗಳ ಪ್ರಸಾರಕ್ಕೆ ತಡೆ ಕೋರಬೇಕೆಂದು ಜೆಡಿಎಸ್, ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ಸುದೀಪ್ ಅವರ ಯಾವುದೇ ಚಿತ್ರ, ಜಾಹೀರಾತು, ಪ್ರಸಾರಕ್ಕೆ ನಿರ್ಬಂಧ ವಿಧಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದೆ.

ಇದಕ್ಕೂ ಮೊದಲು ಶಿವಮೊಗ್ಗದ ವಕೀಲ ಕೆಪಿ ಶ್ರೀಪಾಲ ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಕಿಚ್ಚ ಸುದೀಪ್ ಬೆಜಿಪಿಗೆ ಬೆಂಬಲ ಘೋಷಿಸಿದ ದಿನವೇ ಶ್ರೀಪಾಲ, ಆಯೋಗಕ್ಕೆ ಪತ್ರ ಬರೆದಿದ್ದರು. ಸುದೀಪ್ ಬಿಜೆಪಿಯ ಸ್ಟಾರ್ ಪ್ರಚಾರಕ. ಹೀಗಾಗಿ ಚುನಾವಣೆ ಮುಗಿಯುವ ವರೆಗೂ ಅವರ ಯಾವುದೇ ಚಲನ ಚಿತ್ರಗಳು ಚಿತ್ರ ಮಂದಿರಗಳಲ್ಲಿ, ಟಿವಿಗಳಲ್ಲಿ ಪ್ರದರ್ಶನವಾಗಬಾರದು. ಸುದೀಪ್ ನಡೆಸಿಕೊಡುವ ಟಿವಿ ಶೋಗಳು ಪ್ರಸಾರವಾಗದಂತೆ ಮತ್ತು ಅವರು ನಟಿಸಿರುವ ಜಾಯಿರಾತುಗಳು ಸಹ ಪ್ರಸಾರವಾಗದಂತೆ ಚುನಾವಣಾ ಆಯೋಗ ಕಟ್ಟು ನಿಟ್ಟಿನ ಕ್ರಮಜರುಗಿಸಬೇಕು ಎಂದು ಶ್ರೀಪಾಲ ದೂರಿನಲ್ಲಿ ಉಲ್ಲೇಖಿಸಿದ್ದರು.

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ಚುನಾವಣಾ ಆಯೋಗವೇನೋ ದೂರುಗಳನ್ನು ಸ್ವೀಕರಿಸಿದೆ. ಆದರೆ ಸುದೀಪ್ ಹಲವಾರು ಪ್ರಾಡಕ್ಟ್‍ಗಳಿಗೆ ಜಾಹೀರಾತು ನೀಡಿದ್ದಾರೆ. ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಬಿಗ್ ಬಾಸ್ ಬಿಟ್ಟರೆ ಬೇರೆ ಶೋಗಳಿಗೆ ಆಂಕರಿಂಗ್ ಮಾಡುತ್ತಿಲ್ಲ. ಹೀಗಾಗಿ ಟಿವಿ ಶೋಗೆ ಪ್ರಾಬ್ಲಂ ಆಗಲಿಕ್ಕಿಲ್ಲ. ಆದರೆ ಮರುಪ್ರಸಾರಕ್ಕೆ (ಇದ್ದರೆ)ಸಮಸ್ಯೆಯಾಗಬಹುದು. ಸಿನಿಮಾ ಕಬ್ಜ ಈಗಾಗಲೇ ಥಿಯೇಟರಿನಲ್ಲಿದೆ. ಆ ಚಿತ್ರದಲ್ಲಿರುವುದು ಕೆಲವೇ ನಿಮಿಷಗಳ ಪಾತ್ರ. ಮೂವಿ ಚಾನೆಲ್ಲುಗಳಲ್ಲಿ ಯಾವುದಾದರೂ ಚಾನೆಲ್ಲಿನಲ್ಲಿ ಸುದೀಪ್ ಸಿನಿಮಾ, ದೃಶ್ಯ ಪ್ರಸಾರವಾಗುತ್ತಲೇ ಇರುತ್ತೆ. ಹಾಡುಗಳಂತೂ ಕಡ್ಡಾಯ ಎಂಬಂತೆ ಇರುತ್ತವೆ. ಎಲ್ಲವನ್ನೂ ಬ್ಯಾನ್ ಮಾಡೋಕೆ ಸಾಧ್ಯವಾ..?

ಸುದೀಪ್ ಅವರಿಗೆ ಇದು ಅನ್ವಯವಾದರೆ ಆಗ ಬೇರೆಯದೇ ಸಮಸ್ಯೆ ಸೃಷ್ಟಿಯಾಗಲಿದೆ. ಉಪೇಂದ್ರ, ಪ್ರಜಾಕೀಯ ಪಕ್ಷದ ಅಧ್ಯಕ್ಷರು. ರಮ್ಯಾ, ತಾರಾ, ಶೃತಿ, ಜಯಮಾಲಾ, ಜಗ್ಗೇಶ್, ಉಮಾಶ್ರೀ, ಬಿಸಿ ಪಾಟೀಲ್, ಸಿಪಿ ಯೋಗೀಶ್ವರ್. ಸಾಧು ಕೋಕಿಲ, ನಿಖಿಲ್ ಕುಮಾರಸ್ವಾಮಿ ಭಾವನಾ ರಾಮಣ್ಣ, ಮಧು ಬಂಗಾರಪ್ಪ ಎಲ್ಲರೂ ಸಿನಿಮಾದವರೇ. ಇವರಲ್ಲಿ ಉಮಾಶ್ರೀ, ಬಿಸಿ ಪಾಟೀಲ್, ಸಿಪಿ ಯೋಗೀಶ್ವರ್, ನಿಖಿಲ್ ಚುನಾವಣಾ ಅಭ್ಯರ್ಥಿಗಳೂ ಹೌದು. ಏನ್ ಮಾಡುತ್ತೆ ಎಲೆಕ್ಷನ್ ಕಮಿಷನ್..?

ಅಭ್ಯರ್ಥಿಗಳು ಸಿನಿಮಾದವರಾಗಿದ್ದರೆ ಅದನ್ನು ಸ್ಥಗಿತಗೊಳಿಸಬಹುದು. ಹೀಗೆ ಈ ರೀತಿ ಪಕ್ಷದಲ್ಲಿರುವವರೆನ್ನೆಲ್ಲ ನಿಷೇಧ ಮಾಡುತ್ತಾ ಹೋದರೆ, ಟಿವಿ ಚಾನೆಲ್ಲುಗಳು ಪ್ರಸಾರವನ್ನೇ ನಿಲ್ಲಿಸಬೇಕಾಗುತ್ತೆ. ಅಭ್ಯರ್ಥಿಗಳಾಗಿದ್ದರೂ ಅಷ್ಟೆ, ಮತದಾನಕ್ಕೆ ಎರಡು ದಿನ ಮೊದಲು ಸ್ಥಗಿತ ಮಾಡಿಸಬಹುದು. ಅಷ್ಟೇ ಹೊರತಾಗಿ ಸ್ಟಾರ್ ಪ್ರಚಾರಕರೆಲ್ಲರ ಸಿನಿಮಾ ಜಾಹೀರಾತು ಪ್ರಸಾರವನ್ನು ಸ್ಥಗಿತಗೊಳಿಸುವುದು ಕಾರ್ಯಸಾಧ್ಯವಲ್ಲದ ವಿಷಯ. ಆದರೆ, ಆಯೋಗಕ್ಕೆ ಪರಮಾಧಿಕಾರವಂತೂ ಇದೆ. ಏನು ಮಾಡಲಿದೆಯೋ..

Tags: #ಸುದೀಪ್ #ಜಾಹೀರಾತು #ಚುನಾವಣಾಆಯೋಗ #ಬಿಜೆಪಿ #Sudeep #Advertisement #ElectionCommission #BJP #Starcampaigner
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.