ಬಿಜೆಪಿ ಸಂಸದ ಪ್ರತಾಪ್ ಸಿಂಹ ಸದಾ ಸುದ್ದಿಯಲ್ಲಿರುತ್ತಾರೆ. ವಿವಾದಾತ್ಮಕ ಹೇಳಿಕೆಗಳನ್ನು ಸೈಡಿಗಿಟ್ಟರೆ ಸುದ್ದಿಯಾಗುವುದು ಅಭಿವೃದ್ಧಿ ಕೆಲಸಗಳಿಂದಲೇ. ಬೆಂಗಳೂರು-ಮೈಸೂರು ಹೈವೇ, ಒಡೆಯರ್ ಎಕ್ಸ್‍ಪ್ರೆಸ್ ರೈಲು, ಮೈಸೂರು ಏರ್`ಪೋರ್ಟ್ ಸೇರಿದಂತೆ ಹಲವು ಕಾಮಗಾರಿಗಳ ಮೂಲಕ ರಾಜ್ಯದಾದ್ಯಂತ ಸುದ್ದಿಯಲ್ಲಿರುವ ಪ್ರತಾಪ್ ಸಿಂಹ, ಎಲ್ಲ ಕ್ರೆಡಿಟ್`ನ್ನೂ ತಮಗೇ ಕೊಟ್ಟುಕೊಳ್ತಾರೆ ಅನ್ನೋದು ಕಂಪ್ಲೇಂಟು. ಅವರು ಮಾಡಿಸಿರುವ ಕೆಲಸಕ್ಕೆ ಅವರು ಕ್ರೆಡಿಟ್ ತಗೊಂಡ್ರೆ ತಪ್ಪೇನು? ಇದು ಪ್ರತಾಪ್ ಸಿಂಹ ಬೆಂಬಲಿಗರ ಪ್ರಶ್ನೆ. ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಹೆಚ್.ಡಿ.ರೇವಣ್ಣ ಶ್ರಮ, ಎಚ್.ಸಿ.ಮಹದೇವಪ್ಪ, ಅಸ್ಕರ್ ಫರ್ನಾಂಡಿಸ್ ಕೆಲಸವನ್ನೂ ಪರಿಗಣಿಸಿ ಅನ್ನೋದು ವಿರೋಧಿಗಳ ವಾದ. ಹೀಗೆ ವಾದವಿವಾದಗಳೇನೇ ಇದ್ದರೂ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ ಪ್ರತಾಪ್ ಸಿಂಹ.
ರಾಜ್ಯದಿಂದ ಲೋಕಸಭೆಗೆ ಆಯ್ಕೆಯಾಗಿರುವ ಎಲ್ಲ 28 ಸಂಸದರಲ್ಲಿ ಪ್ರತಾಪ್ ಸಿಂಹ ಅವರೇ ನಂ.1
ಅನುದಾನ ಬಳಕೆಯಲ್ಲಿ ಪ್ರತಾಪ್ ಸಿಂಹ ನಂ.1 :
ಸಂಸದರ ಪ್ರತಿ ಕ್ಷೇತ್ರಕ್ಕೆ ವಾರ್ಷಿಕ 5 ಕೋಟಿ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಆಯಾ ಕ್ಷೇತ್ರದ ಸಂಸದರು ವಿವಿಧ ಕಾಮಗಾರಿಗಳಿಗೆ ಈ ಅನುದಾನ ಶಿಫಾರಸು ಮಾಡಬಹುದು. ಅದರ ಆಧಾರದ ಮೇರೆಗೆ ಜಿಲ್ಲಾಧಿಕಾರಿ ಮುಂದಿನ ಕ್ರಮ ಕೈಗೊಳ್ಳುತ್ತಾರೆ. ಕೇಂದ್ರ ಸರ್ಕಾರ ಕೆಲ ಸಂಸದರಿಗೆ 9.50 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಈ ರೀತಿ .9.50 ಕೋಟಿ (ಬಡ್ಡಿ ಸೇರಿಸಿ 12.14 ಕೋ ಬಿಡುಗಡೆಯಾಗಿರುವವರ ಪೈಕಿ ಅನುದಾನ ಬಳಕೆಯಲ್ಲಿ ಪ್ರತಾಪ್ ಸಿಂಹ ಮೊದಲ ಸ್ಥಾನದಲ್ಲಿದ್ದಾರೆ. ಪ್ರತಾಪ್ಸಿಂಹ ಅವರ ಕ್ಷೇತ್ರಕ್ಕೆ ನಿಗದಿಯಾದ 9.50 ಕೋಟಿ (ಬಡ್ಡಿ ಸೇರಿಸಿ 12.14 ಕೋಟಿ) ಬಿಡುಗಡೆ ಮಾಡಿದ್ದು, ಈ ಪೈಕಿ ಅವರು 11.87 ಕೋಟಿ ವೆಚ್ಚದ ಕಾಮಗಾರಿಗಳನ್ನು ಶಿಫಾರಸು ಮಾಡಿದ್ದಾರೆ. ಅಷ್ಟೂಹಣ ಮಂಜೂರಾಗಿದೆ. ಈ ಪೈಕಿ 11.74 ಕೋಟಿ ವೆಚ್ಚವಾಗಿದ್ದು, ಉಳಿಕೆ .0 ಲಕ್ಷ ಮಾತ್ರ. ಅವರ ಹಣ ಬಳಕೆ ಪ್ರಮಾಣ ಶೇ.121.60 ರಷ್ಟಿದೆ.
ನಂ.2 ಚಿಕ್ಕಬಳ್ಳಾಪುರ ಸಂಸದ ಬಿ.ಎನ್.ಬಚ್ಚೇಗೌಡ : ಇವರು 9.80 ಕೋಟಿ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದು, 9.79 ಕೋಟಿ ಮಂಜೂರಾಗಿದೆ. 9.50 ಕೋಟಿ ವೆಚ್ಚವಾಗಿದೆ. ಹಣ ಬಳಕೆಯ ಪ್ರಮಾಣ ಶೇ.99.11ರಷ್ಟಿದೆ.
ನಂ.3 ದಾವಣಗೆರೆಯ ಜಿ.ಎಸ್.ಸಿದ್ದೇಶ್ವರ : ಕೇಂದ್ರದಲ್ಲಿ ಸಚಿವರೂ ಆಗಿದ್ದ ಸಿದ್ದೇಶ್ವರ ಅವರ ಕ್ಷೇತ್ರಕ್ಕೆ 9.63 ಕೋಟಿ ಕಾಮಗಾರಿಗಳನ್ನು ಶಿಫಾರಸು ಮಾಡಿದ್ದು, 8.71 ಕೋಟಿ ವೆಚ್ಚವಾಗಿದೆ. ಬಳಕೆ ಪ್ರಮಾಣ ಶೇ.89.76 ರಷ್ಟಿದೆ.
ಶಿವಮೊಗ್ಗದ ಬಿ.ವೈ.ರಾಘವೇಂದ್ರ ಅವರು 14.02 ಕೋಟಿ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದು, 8.52 ಕೋಟಿ ವೆಚ್ಚವಾಗಿದೆ. ಮಂಡ್ಯದ ಸುಮಲತಾ ಅಂಬರೀಶ್ 9.30 ಕೋಟಿ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದು, 8.14 ಕೋಟಿ ವೆಚ್ಚವಾಗಿದೆ. ಬೀದರ್ನ ಭಗವಂತ್ ಖೂಬಾ .11.82 ಕೋಟಿ ಕಾಮಗಾರಿಗಳನ್ನು ಶಿಫಾರಸು ಮಾಡಿದ್ದು, .7.31 ಕೋಟಿ ವೆಚ್ಚವಾಗಿದೆ.
ಚಾಮರಾಜನಗರ ಸಂಸದ ಶ್ರೀನಿವಾಸಪ್ರಸಾದ್ .7.44 ಕೋಟಿ ಕಾಮಗಾರಿ ಶಿಫಾರಸು ಮಾಡಿದ್ದು, .7.13 ಕೋಟಿ ಬಳಕೆಯಾಗಿದೆ. ಪಿ.ಸಿ.ಗದ್ದಿಗೌಡರ್ ಅವರು .7.48 ಕೋಟಿ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದು, .6.62 ಕೋಟಿ ವೆಚ್ಚವಾಗಿದೆ. ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ 8.22 ಕೋಟಿ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದು, 6.51 ಕೋಟಿ ವೆಚ್ಚವಾಗಿದೆ.
ತುಮಕೂರಿನ ಜಿ.ಎಸ್.ಬಸವರಾಜ್ 11.13 ಕೋಟಿ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದು, 7.82 ಕೋಟಿ ವೆಚ್ಚವಾಗಿದೆ. ಹಾವೇರಿಯ ಶಿವಕುಮಾರ್ ಉದಾಸಿ 7.91 ಕೋಟಿ ಕಾಮಗಾರಿ ಶಿಫಾರಸು ಮಾಡಿದ್ದು, 7.33 ಕೋಟಿ ವೆಚ್ಟವಾಗಿದೆ. ರಾಯಚೂರಿನ ರಾಜಾ ಅಮರೇಶ ನಾಯಕ 9.62 ಕೋಟಿ ಕಾಮಗಾರಿಗಳನ್ನು ಶಿಫಾರಸು ಮಾಡಿದ್ದು, 7.05 ಕೋಟಿ ವೆಚ್ಚವಾಗಿದೆ.
ಬೆಂಗಳೂರು ಗ್ರಾಮಾಂತರದ ಡಿ.ಕೆ.ಸುರೇಶ್ 7.15 ಕೋಟಿ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದು, .6.30 ಕೋಟಿ ವೆಚ್ಚವಾಗಿದೆ. ಚಿತ್ರದುರ್ಗದ ಎ.ನಾರಾಯಣಸ್ವಾಮಿ 8.50 ಕೋಟಿ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದು, 6.10 ಕೋಟಿ ವೆಚ್ಚವಾಗಿದೆ. ಕೊಪ್ಪಳದ ಕರಡಿ ಸಂಗಣ್ಣ ಅವರು 6.86 ಕೋಟಿ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದು, 6.08 ಕೋಟಿ ವೆಚ್ಚವಾಗಿದೆ.
ಕೋಲಾರದ ಎಸ್.ಮುನಿಸ್ವಾಮಿ 5.75 ಕೋಟಿ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದು, 5.17 ಕೋಟಿ ವೆಚ್ಚವಾಗಿದೆ. ಬಳ್ಳಾರಿಯ ವೈ.ದೇವೇಂದ್ರಪ್ಪ 4.89 ಕೋಟಿ ಕಾಮಗಾರಿಗೆ ಶಿಫಾರಸು ಮಾಡಿದ್ದು, ಈ ಪೈಕಿ .4.66 ಕೋಟಿ ವೆಚ್ಚವಾಗಿದೆ. ಕೇಂದ್ರದಲ್ಲಿ ಸಚಿವರೂ ಆಗಿರುವ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸರಾಗಿರುವ ಶೋಭಾ ಕರಂದ್ಲಾಜೆ 4.93 ಕೋಟಿ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದು, 4.29 ಕೋಟಿ ವೆಚ್ಚವಾಗಿದೆ.
ಚಿಕ್ಕೋಡಿಯ ಅಣ್ಣಾ ಸಾಹೇಬ್ ಜೊಲ್ಲೆ 6.10 ಕೋಟಿ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದು, 3.99 ಕೋಟಿ ವೆಚ್ಚ ಮಾಡಲಾಗಿದೆ. ಬೆಂಗಳೂರು ಉತ್ತರ ಸಂಸದ ಡಿ.ವಿ.ಸದಾನಂದಗೌಡ 6.55 ಕೋಟಿ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದು, 3.90 ಕೋಟಿ ವೆಚ್ಚವಾಗಿದೆ. ಧಾರವಾಡ ಸಂಸದ ಕೇಂದ್ರದ ಪ್ರಭಾವಿ ಸಚಿವರೂ ಆಗಿರುವ ಪ್ರಹ್ಲಾದ್ ಜೋಶಿ 5.71 ಕೋಟಿ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದು, 3.50 ಕೋಟಿ ವೆಚ್ಚವಾಗಿದೆ.
ಬೆಂಗಳೂರು ಕೇಂದ್ರದ ಪಿ.ಸಿ.ಮೋಹನ್ ಅವರು 3.15 ಕೋಟಿ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದು, 2.60 ಕೋಟಿ ವೆಚ್ಚವಾಗಿದೆ.
ವಿಜಯಪುರದ ರಮೇಶ್ ಜಿಗಜಿಣಗಿ 1.82 ಕೋಟಿ ಮಂಗಳಾ ಅಂಗಡಿ 1 ಕೋಟಿ ವೆಚ್ಚ ಮಾಡಿದ್ದಾರೆ. ಬಿಜೆಪಿಯ ಯಂಗ್ ಫೈರ್ ಎಂದೇ ಬಿಂಬಿಸಿಕೊಳ್ಳುತ್ತಿರುವ , ಬೆಂಗಳೂರು ದಕ್ಷಿಣದ ತೇಜಸ್ವಿ ಸೂರ್ಯ 1.67 ಕೋಟಿ ಖರ್ಚು ಮಾಡಿದ್ದಾರೆ. ಖ್ಯಾತಿ, ಪ್ರತಿಭೆಗೆ ಹೋಲಿಸಿಕೊಂಡರೆ ಇದು ಅಷ್ಟಕ್ಕಷ್ಟೇ ಎನ್ನಬೇಕು.
ಕೆಲಸ ಮಾಡದ ಸಂಸದರು ಎಂದೇ ಸೋಷಿಯಲ್ ಮೀಡಿಯಾದಲ್ಲಿ ಟೀಕೆಗೆ ಗುರಿಯಾಗುವ, ಹಿಂದೂ ಫೈರ್ ಬ್ರಾಂಡ್ ಅನಂತಕುಮಾರ್ ಹೆಗಡೆ 11.76 ಕೋಟಿ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದು, 8.61 ಕೋಟಿ ವೆಚ್ಚವಾಗಿದೆ.
ಪ್ರಜ್ವಲ್ ರೇವಣ್ಣ ಅವರು ಪ್ರತಿನಿಧಿಸುವ ಹಾಸನ ಕ್ಷೇತ್ರಕ್ಕೆ ಹಿಂದಿನ ಸಂಸದ ಎಚ್.ಡಿ.ದೇವೇಗೌಡರ ನಿಧಿಯೂ ಸೇರಿ ಒಟ್ಟು 19.50 ಕೋಟಿ ನಿಗದಿಯಾಗಿ, 14.50 ಕೋಟಿ ಬಿಡುಗಡೆಯಾಗಿದೆ. ಅವರು 18.93 ಕೋಟಿ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದು 10.40 ಕೋಟಿ ವೆಚ್ಚವಾಗಿದೆ.
ಪ್ರತಾಪ್ ಸಿಂಹ ನಂ.1 ಸ್ಟಾರ್ ಆದರೆ ಉಮೇಶ್ ಜಾಧವ್ ಝೀರೋ ಸ್ಟಾರ್. ಏಕೆಂದರೆ ಮಲ್ಲಿಕಾರ್ಜುನ ಖರ್ಗೆಯಂತಹ ಖರ್ಗೆಯವರನ್ನು ಸೋಲಿಸಿ ಕಲಬುರ್ಗಿ ಗೆದ್ದ ಉಮೇಶ್ ಜಾಧವ್ ಒಂದು ಪೈಸೆಯನ್ನೂ ಖರ್ಚು ಮಾಡಿಲ್ಲ. ಅವರಿಗೆ 12 ಕೋಟಿ ಪೈಕಿ 2.50 ಕೋಟಿ ಬಿಡುಗಡೆಯಾಗಿದೆ. ಅವರು ಯಾವುದೇ ಕಾಮಗಾರಿಗಳಿಗೆ ಶಿಫಾರಸು ಮಾಡಿಲ್ಲ. ಹೀಗಾಗಿ ಬಳಕೆಯ ಪ್ರಮಾಣ ಶೂನ್ಯ.



