ಕೆಲವೇ ತಿಂಗಳು. ಇದೇ ವರ್ಷ ಜನವರಿ 15ನೇ ತಾರೀಕು ವೈಎಸ್`ವಿ ದತ್ತಾ ಕಾಂಗ್ರೆಸ್ ಸೇರಿದ್ದರು. ಜೆಡಿಎಸ್ ತೊರೆದಿದ್ದರು. ವದಂತಿ, ಸುದ್ದಿ, ಚರ್ಚೆಗಳು ಚಾಲ್ತಿಯಲ್ಲಿದ್ದವಾದರೂ ಎಷ್ಟೋ ಜನ ಜೆಡಿಎಸ್ ಕಾರ್ಯಕರ್ತರೇ ನಂಬಿರಲಿಲ್ಲ. ಏಕೆಂದರೆ ದತ್ತಾ ಮತ್ತು ದೇವೇಗೌಡರದ್ದು ಹೆಚ್ಚೂ ಕಡಿಮೆ 4 ದಶಕಗಳ ಬಾಂಧವ್ಯ. ದೇವೇಗೌಡರ ಮಾನಸ ಪುತ್ರನಂತೆಯೇ ಇದ್ದ ದತ್ತಾ ಅವರು ದೇವೇಗೌಡರ ಸಖ್ಯ ತೊರೆಯುವುದು ಎಂದರೇನು.. ದೇವೇಗೌಡರನ್ನು ಕಾಡುತ್ತಿರುವ ಶತ್ರು ಸಿದ್ದರಾಮಯ್ಯ ಜೊತೆ ಸೇರಿ ಕಾಂಗ್ರೆಸ್ಸಿಗೆ ಹೋಗುವುದು ಎಂದರೇನು.. ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ದತ್ತಾ ಜೆಡಿಎಸ್ ಬಿಟ್ಟಿದ್ದು ಸತ್ಯ. ಕಾಂಗ್ರೆಸ್ ಸೇರಿದ್ದು. ಇದೀಗ 3 ತಿಂಗಳು ಕಳೆಯುವ ಮುನ್ನವೇ ದತ್ತಾ ಮರಳಿ ಗೂಡು ಸೇರಿದ್ದಾರೆ. ಜೆಡಿಎಸ್`ಗೆ ವಾಪಸ್ ಆಗಿದ್ದಾರೆ. ಆದರೆ ಇದು ಕುಮಾರಸ್ವಾಮಿಯವರಿಗೇ ಗೊತ್ತಿಲ್ಲ. ಅದೇ ಟ್ವಿಸ್ಟು.


ಒಮ್ಮೆ ಶಾಸಕರಾಗಿದ್ದಾರೆಂದ ಮೇಲೆ ಅಭಿಮಾನಿಗಳ ಬಳಗವೊಂದು ಸಹಜವಾಗಿಯೇ ಸೃಷ್ಟಿಯಾಗಿರುತ್ತದೆ. ಹೀಗಾಗಿ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿದ ದತ್ತಾ ಪಕ್ಷೇತರರಾಗಿ ನಿಲ್ಲುತ್ತೇನೆ. ನನ್ನ ಬಳಿ ಹಣ ಇಲ್ಲ ಎಂದರು. ಜನರೇ ನೂರು..ಸಾವಿರ..ಲಕ್ಷಗಳವರೆಗೆ ದತ್ತಾ ಅವರ ಜೋಳಿಗೆ ತುಂಬಿಸಿದರು. ಆದರೆ ಅದಾದ ಮರುದಿನವೇ ಮತ್ತೆ ದತ್ತಾ ಜೆಡಿಎಸ್ ಸೇರ್ತಾರಂತೆ ಎಂಬ ಮಾತು ಕೇಳಿ ಬಂತು.


ಅದೇ ದತ್ತಾ ಇದೀಗ ಕಾಂಗ್ರೆಸ್ ಸದಸ್ಯತ್ವವನ್ನು ಬಿಟ್ಟು ಜೆಡಿಎಸ್ ಸೇರಿದ್ದಾರೆ. ಅದೇ ಕಡೂರಿನಲ್ಲಿ. ದತ್ತ ಅವರನ್ನು ವೆಲ್ ಕಂ ಮಾಡಿಕೊಂಡವರು ಹೆಚ್.ಡಿ.ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ. ಕಾಂಗ್ರೆಸ್ ಸೇರಿದ್ದು ಜನವರಿ 15ಕ್ಕೆ. ಮರಳಿ ಜೆಡಿಎಸ್ ಸೇರಿದ್ದು ಏಪ್ರಿಲ್ 13ಕ್ಕೆ. ಮೂರು ತಿಂಗಳೂ ಇಲ್ಲ. ಮರಳಿ ಜೆಡಿಎಸ್ ಸೇರಿದ್ಧಾರೆ.


ದತ್ತಾ ಬಳಿ ಇರೋದು ಎರಡೇ… ಎರಡು… ಒಂದು ಪಂಚೆ, ಒಂದು ಶರ್ಟ್ ಅಷ್ಟೆ. ನಾನೇ ಮಿನಿಸ್ಟರ್ ಆದಾಗ ಕಾರ್ ಕೊಡುಸ್ತೀನಿ ಅಂದೆ. ಬೇಡ ಸರ್. ನಂಗೇ ಆಟೋನೆ ಸಾಕು ಅಂದಿದ್ರು. 18ನೇ ತಾರೀಖು ದತ್ತಾ ನಾಪಪತ್ರ ಸಲ್ಲಿಕೆ ಮಾಡಲಿದ್ದಾರೆ ಅಂದು ಎಷ್ಟೆ ಕಷ್ಟ ಆದ್ರು ದೇವೆಗೌಡರು ಬರುತ್ತಾರೆ, ಬಂದೇ ಬರುತ್ತಾರೆ. ದತ್ತಾ ಅವರ ನಾಮಪತ್ರ ಸಲ್ಲಿಕೆಗೆ ದೇವೇಗೌಡರು ಪಕ್ಕದಲ್ಲಿ ಕೂತಿರ್ತಾರೆ. ನಾನು ಬದುಕಿರುವವರೆಗೇ ದತ್ತಾನ ಕೈ ಬಿಡಬಾರದು ಎಂದು ಹೇಳಿದ್ದಾರೆ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಹೇಳಿಕೆ ನೀಡಿದ್ದಾರೆ. ದೇವೇಗೌಡರೇ ಹೇಳಿದ ಮೇಲೆ ಎಲ್ಲಾ ಮುಗಿಯಿತು. ಘೋಷಣೆ ಅಭ್ಯರ್ಥಿ ಧನಂಜಯ್ ಅವರನ್ನ ಕರೆಸಿ ದೇವೇಗೌಡರು ಮಾತನಾಡುತ್ತಾರೆ. ಜೆಡಿಎಸ್ ಗೆಲ್ಲಬೇಕು, ಕಾರ್ಯಕರ್ತರು ಉಳಿಯಬೇಕು, ದೇವೇಗೌಡರು, ಕುಮಾರಣ್ಣ ನಿರ್ಣಯ ಮಾಡುತ್ತಾರೆ. ಅರ್ಜಿ ಹಾಕಿಸಲು ದೇವೇಗೌಡರು ನಾನೇ ಬರುತ್ತೇನೆ ಎಂದು ಹೇಳಿದ್ದಾರೆ.
ದತ್ತಾ ಸೇರಿದ್ದೇ ಕುಮಾರಸ್ವಾಮಿಗೆ ಗೊತ್ತಿಲ್ಲ
ದತ್ತಾ ಅವರ ಜೆಡಿಎಸ್ ಸೇರ್ಪಡೆ ವಿಚಾರ ದೇವೇಗೌಡರಿಗೆ ಬಿಟ್ಟದ್ದು, ಶಾಸಕರಾಗಿದ್ದಾಗಲೂ ತಮ್ಮ ಜತೆ ಸಂಪರ್ಕದಲ್ಲಿರಲಿಲ್ಲ. ದತ್ತಾಗೆ ನನ್ನ ಅವಶ್ಯಕತೆ ಇಲ್ಲ. ಅವರು ನನಗೆ ಬೇಕಾಗಿಲ್ಲ. ರೇವಣ್ಣ ಮತ್ತು ಪ್ರಜ್ವಲ್ ಅವರು ಅವರ ಜತೆಗೆ ಸಂಪರ್ಕದಲ್ಲಿದ್ದಾರೆ. ಕಡೂರು ಕ್ಷೇತ್ರ ಹಾಸನ ಲೋಕಸಭಾ ಕ್ಷೇತ್ರಕ್ಕೆ ಬರುವುದರಿಂದ ದತ್ತಾ ಅವರ ಮನೆಗೆ ಭೇಟಿ ನೀಡಿದ್ದಾರೆ. ದತ್ತಾ ಅವರು ದೊಡ್ಡವರು, ಅವರಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಅವರ ವಿಚಾರದಲ್ಲಿ ದೇವೇಗೌಡರು, ರೇವಣ್ಣ ನಿರ್ಧಾರ ಮಾಡುತ್ತಾರೆ ಎಂದಿದ್ದಾರೆ. ವೈಎಸ್ ವಿ ದತ್ತ ಸೇರ್ಪಡೆ ಬಗ್ಗೆ ಸಹ ಮಾಹಿತಿಯಿಲ್ಲ. ಪ್ರವಾಸ ಮುಗಿದ ಬಳಿಕ ಇದರ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದಿದ್ದಾರೆ.


ಧನಂಜಯ್ ಹೇಳೋದೇನು..?
ಧನಂಜಯ್ ಅವರಿಗೆ ಏನು ಹೇಳಬೇಕೋ ಗೊತ್ತಾಗದ ಸ್ಥಿತಿಯಲ್ಲಿದ್ಧಾರೆ. ದೇವೇಗೌಡರು ಮತ್ತು ಕುಮಾರಸ್ವಾಮಿ ಏನ್ ಹೇಳ್ತಾರೋ ನೊಡೋಣ. ಸದ್ಯಕ್ಕೆ ನಾನೇ ಅಭ್ಯರ್ಥಿ. ಅದು ಬದಲಾಗುವುದಿಲ್ಲ ಎಂಬ ವಿಶ್ವಾಸ ನನಗೆ ಇದೆ ಎನ್ನುವುದು ಧನಂಜಯ್ ವಾದ. ಕಡೂರಿನಲ್ಲಿ ದತ್ತಾ ಸೇರ್ಪಡೆ ಕಾರ್ಯಕ್ರಮಕ್ಕೆ ಧನಂಜಯ್ ಅವರನ್ನೂ ರೇವಣ್ಣ ಕರೆದಿದ್ದರಂತೆ. ಆದರೆ ಧನಂಜಯ ಹೋಗಿಲ್ಲ.



