ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಶಪಥ ಮಾಡಿ ಮಾಫಿಯಾ ಡಾನ್‍ಗಳನ್ನು ಮಟ್ಟ ಹಾಕಿದ್ದಾರೆ. ಅತೀಕ್ ಅಹ್ಮದ್, ಅವನ ತಮ್ಮ ಅರ್ಷದ್ ಅಹ್ಮದ್ ಮೀಡಿಯಾ ಕಣ್ಣೆದುರಲ್ಲೇ ಹಂತಕರಿಗೆ ಬಲಿಯಾಗಿದ್ದಾರೆ. ಇವರ ಮಗ ಎನ್‍ಕೌಂಟರ್ ಆಗಿದ್ದ. ಸಹಚರರೂ ಎನ್‍ಕೌಂಟರ್ ಆಗಿದ್ದರು. ಮಾಫಿಯಾವನ್ನು ಮಣ್ಣಲ್ಲಿ ಹೂತು ಹಾಕ್ತೇನೆ ಎಂದು ಪ್ರತಿಜ್ಞೆ ಮಾಡಿದ್ದ ಸಂತ ಸಿಎಂ ಯೋಗಿ ಆದಿತ್ಯನಾಥ್ ಪ್ರತಿಜ್ಞೆ ನೆರವೇರಿದೆ.. ಇನ್ನೊಂದು ವಿಷಯ, ಯೋಗಿ ಅಧಿಕಾರಕ್ಕೆ ಬಂದಮೇಲೆ ನಡೆದ ಶೂಟೌಟ್`ಗಳ ಸಂಖ್ಯೆ ಸುಮಾರು 11 ಸಾವಿರವಾದರೆ, ಎನ್`ಕೌಂಟರ್‍ನಲ್ಲಿ ಸತ್ತ ಕ್ರಿಮಿನಲ್ಲುಗಳ ಸಂಖ್ಯೆ ಸುಮಾರು 200.


