ಇದು ಒಂದು ದಿನದ ಕಥೆ ಅಲ್ಲ. ಒಂದು ದಿನ ಅಥವಾ ತಿಂಗಳು ಅಥವಾ ಒಂದೆರಡು ವರುಷಗಳಲ್ಲಿ ಗಳಿಸಿಕೊಂಡ ನಾಯಕತ್ವ ಅಲ್ಲ. ಜೆಡಿಎಸ್`ಗೆ ದೇವೇಗೌಡರಿದ್ದಂತೆ, ಬಿಜೆಪಿಗೆ ಯಡಿಯೂರಪ್ಪರಿದ್ದಾರೆ. ಹೀಗಾಗಿಯೇ ಕಳೆದ ಕೆಲ ದಿನಗಳಿಂದ ರಾಜ್ಯಾದ್ಯಂತ ಬಿಜೆಪಿಗೆ ಮುಜುಗರ ಸೃಷ್ಟಿಸುತ್ತಿದ್ದ, ಗೊಂದಲ ಮೂಡಿಸುತ್ತಿದ್ದ ಹಲವು ಭಿನ್ನಮತ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿದೆ. ಬಿಜೆಪಿಯಿಂದ ಒಂದು ಕಾಲು ಹೊರಗಿಟ್ಟಿದ್ದವರು ಇದ್ದಕ್ಕಿದ್ದಂತೆ ಸೈಲೆಂಟ್ ಆಗಿ ಬಿಜೆಪಿಗೆ ಜೈ ಎನ್ನುತ್ತಿದ್ದಾರೆ.
ಮಂಡ್ಯದ ನಾರಾಯಣ ಗೌಡ ಸೈಲೆಂಟ್ ಸೀಕ್ರೆಟ್




ಕೆಲವು ವಿಚಾರಗಳಲ್ಲಿ ಮಾತನಾಡಿ ವಿವಾದ ಬಗೆಹರಿಸಿದರೆ, ಕೆಲವು ಕಡೆ ಮಾತನಾಡದೆಯೇ ವಿವಾದ ಬಗೆಹರಿಸಬೇಕು. ವಿ.ಸೋಮಣ್ಣ ವಿಚಾರದಲ್ಲಿಯೂ ಅಷ್ಟೆ, ಸೋಮಣ್ಣ ಬಹಿರಂಗವಾಗಿ ಏನೇ ಮಾತನಾಡಿದರೂ, ಸೋಮಣ್ಣ ಪುತ್ರ ನಾಲಗೆ ಹರಿಯಬಿಟ್ಟರೂ.. ಯಡಿಯೂರಪ್ಪ ತಾಳ್ಮೆಯಿಂದಲೇ ವರ್ತಿಸಿದರು. ಹೈಕಮಾಂಡ್ ನಾಯಕರು ಸೋಮಣ್ಣ ಜೊತೆ ಮಾತನಾಡಿದರು. ಖಡಕ್ ಆಗಿ ಗರಂ ಆಗಿದ್ದು ವಿಜಯೇಂದ್ರ ಅವರೇ ಹೊರತು, ಯಡಿಯೂರಪ್ಪ ಅಲ್ಲ. ಸೋಮಣ್ಣ ವಿವಾದ ಮತ್ತು ವಿಚಾರದಲ್ಲಿ ಮೌನವಾಗಿದ್ದುಕೊಂಡೇ ಪಕ್ಷದೊಳಗೆ ಎದ್ದಿದ್ದ ಬಿಕ್ಕಟ್ಟು ಬಗೆಹರಿಸಿದರು.
ಹಲವು ನಾಯಕರ ಜೊತೆ ಖಾಸಗಿ ಮಾತುಕತೆ, ಭಿನ್ನಮತ ಶಮನ
ಬಿಜೆಪಿಯಲ್ಲಿ ನಾಯಕರಿಗೇನೂ ಕೊರತೆ ಇಲ್ಲ. ಆದರೆ ಬಹುತೇಕ ನಾಯಕರ ಶಕ್ತಿ, ಸಾಮಥ್ರ್ಯ ತಮ್ಮ ಕ್ಷೇತ್ರ ಬಿಟ್ಟರೆ ಇನ್ನೊಂದು ಕ್ಷೇತ್ರಕ್ಕೆ ಸೀಮಿತ. ನಾಲ್ಕು ಕ್ಷೇತ್ರಗಳಲ್ಲಿ ಪ್ರಭಾವ ಬೀರುವ ನಾಯಕರೂ ಕೂಡಾ ಹೆಚ್ಚೇನಿಲ್ಲ. ಇಡೀ ರಾಜ್ಯದಲ್ಲಿ ಸ್ಥಳೀಯ ಕಾರ್ಯಕರ್ತರ ಹೆಸರನ್ನು ಕೂಡಾ ಗುರುತು ಹಿಡಿದು ಮಾತನಾಡಿಸುವ, ಗದರುವ, ಬೈದು ಬುದ್ದಿ ಹೇಳುವ ಶಕ್ತಿ ಇರುವುದು ಯಡಿಯೂರಪ್ಪ ಅವರಿಗೆ ಮಾತ್ರ. ಹೀಗಾಗಿಯೇ ಸ್ಥಳೀಯ ಮಟ್ಟದ ಹಲವು ಭಿನ್ನಮತಗಳನ್ನು ಸೈಲೆಂಟ್ ಆಗಿಯೇ ಸೈಡಿಗೆ ಕೂರಿಸಿದ್ದಾರೆ ಯಡಿಯೂರಪ್ಪ.


ಅಮಿತ್ ಶಾ ಅವರಿಗೂ ಯಡಿಯೂರಪ್ಪ ಅವರಿಗೂ ಅಷ್ಟಕ್ಕಷ್ಟೆ ಎನ್ನುವ ಮಾಧ್ಯಮ ವರದಿಗಳ ನಡುವೆಯೇ ಯಡಿಯೂರಪ್ಪ ಅವರನ್ನು ಗೌರವದಿಂದ ನಡೆಸಿಕೊಳ್ಳುವ ಹಾಗೂ ಅದನ್ನು ಇಡೀ ಕರ್ನಾಟಕಕ್ಕೆ ತಿಳಿಸುವ ಪ್ರಯತ್ನ ಜಾರಿಯಲ್ಲಿಟ್ಟಿದೆ ಹೈಕಮಾಂಡ್. ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಬಂದು, ಯಡಿಯೂರಪ್ಪ ಹುಟ್ಟು ಹಬ್ಬದ ದಿನವೇ ಉದ್ಘಾಟನೆ ಮಾಡಿದ್ದು ಇದಕ್ಕೆ ಸಾಕ್ಷಿ. ಸಿಎಂ ಬಸವರಾಜ ಬೊಮ್ಮಾಯಿ ಅವರಂತೂ ಬಸ್ ನಿಲ್ದಾಣ ಉದ್ಘಾಟನೆ ಸಂದರ್ಭದಲ್ಲಿ ನಾನು ಸಿಎಂ ಆಗಿದ್ದು ಯಡಿಯೂರಪ್ಪರಿಂದ. ನಮ್ಮ ನಾಯಕ ಯಡಿಯೂರಪ್ಪ, ನಾನು ನಿಮಿತ್ತ ಎಂದಿದ್ದರು. ಅಮಿತ್ ಶಾ ಎಲ್ಲಿಯೇ ಹೋದರೂ ಯಡಿಯೂರಪ್ಪಾಜಿ ಎಂದೇ ಸಂಬೋಧಿಸುತ್ತಾರೆ. ಈ ದಿನ ಅಮಿತ್ ಶಾ ಬ್ರೇಕ್ ಫಾಸ್ಟ್ ಯಡಿಯೂರಪ್ಪ ಮನೆಯಲ್ಲಿಯೇ. ಒಟ್ಟಿನಲ್ಲಿ ಬಿಎಸ್‍ವೈ ಪವರ್ ಬಿಜೆಪಿ ಹೈಕಮಾಂಡಿಗೂ ಗೊತ್ತಾದಂತಿದೆ.



