ಕುಮಾರಸ್ವಾಮಿಗೆ ಹೊಸ ತಲೆನೋವು ಶುರುವಾಗಿದೆ. ಮಂಡ್ಯದಲ್ಲಿ ಲೋಕಸಭೆಗೆ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ನಿಲ್ಲಿಸಿದಾಗ ಸುಮಲತಾ ಅಂಬರೀಷ್ ಹೆಸರಲ್ಲಿ ಅಡ್ಡಿ ಎದುರಾಗಿತ್ತು. ಇಡೀ ಲೋಕಸಭೆ ಕ್ಷೇತ್ರದ ಎಲ್ಲ ವಿಧಾನಸಭೆಗಳಲ್ಲೂ ಜೆಡಿಎಸ್ ಶಾಸಕರೇ ಇದ್ದರೂ ನಿಖಿಲ್ ಕುಮಾರಸ್ವಾಮಿ ಸೋತಿದ್ದರು. ಇದೀಗ ರಾಮನಗರ ಕ್ಷೇತ್ರದಲ್ಲಿ ಅನಿತಾ ಕುಮಾರಸ್ವಾಮಿ ಬದಲಿಗೆ ನಿಖಿಲ್ ಸ್ಪರ್ಧಿಸುತ್ತಿದ್ದಾರೆ. ಅಂದಹಾಗೆ ಇದು ಮೂಲತಃ ಕುಮಾರಸ್ವಾಮಿ ಅವರ ಕ್ಷೇತ್ರವೇ. ಕಳೆದ ಬಾರಿ ರಾಮನಗರ ಮತ್ತು ಚನ್ನಪಟ್ಟಣ ಎರಡೂ ಕಡೆ ಗೆದ್ದು, ರಾಮನಗರವನ್ನೇ ಬಿಟ್ಟುಕೊಟ್ಟಿದ್ದರು ಕುಮಾರಸ್ವಾಮಿ. ಆದರೆ ಇದೀಗ ಕೇಳಿ ಬರುತ್ತಿರುವ ಕಥೆ ಬೇರೆಯದೇ ಆಗಿದೆ.
ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಕಣಕ್ಕೆ ಇಳಿದಿರುವ ರಾಮನಗರ ಕ್ಷೇತ್ರದಲ್ಲಿ ಅವರಿಗೆ ಎದುರಾಳಿಯಾಗಿ ಕಾಂಗ್ರೆಸ್ನಿಂದ ಡಿ.ಕೆ.ಸುರೇಶ್ ಅವರನ್ನು ಕಣಕ್ಕಿಳಿಸುವ ಕುರಿತು ಚಿಂತನೆ ಹುಟ್ಟಿಕೊಂಡಿದೆ ಎನ್ನಲಾಗಿದೆ. ಈ ಹಠಾತ್ ಬೆಳವಣಿಗೆ ರಾಜ್ಯ ಕಾಂಗ್ರೆಸ್ ಹಾಗೂ ಕಾರ್ಯಕರ್ತರಿಗೂ ಸರ್ ಪ್ರೈಸ್ ಎನ್ನಬಹುದು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಸುರೇಶ್ ಅವರನ್ನು ರಾಜ್ಯ ರಾಜಕಾರಣಕ್ಕೆ ತರಬೇಕೋ ಅಥವಾ ಬೇಡವೋ ಎಂಬ ಚರ್ಚೆ ನಡೆದಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪಕ್ಷವನ್ನು ಚುನಾವಣೆಗೆ ಮುನ್ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಸುರೇಶ್ ರಾಜ್ಯ ರಾಜಕಾರಣ ರಂಗ ಪ್ರವೇಶ ಬೇಡ ಎಂದೂ ತೀರ್ಮಾನಿಸಲಾಗಿತ್ತು. ಆದರೆ, ಹಠಾತ್ ಬೆಳವಣಿಗೆಯೊಂದರಲ್ಲಿ ಸುರೇಶ್ ಅವರನ್ನು ರಾಮನಗರ ಕ್ಷೇತ್ರದಿಂದ ಕಣಕ್ಕೆ ಇಳಿಸುವ ಕುರಿತು ಪಕ್ಷದಲ್ಲಿ ಚಿಂತನೆ ಆರಂಭವಾಗಿದೆ ಎನ್ನಲಾಗಿದೆ.
ಹೀಗೆ ಹಠಾತ್ ಆಗಿ ಸುರೇಶ್ ಅವರನ್ನು ರಾಜ್ಯ ರಾಜಕಾರಣಕ್ಕೆ ಅದರಲ್ಲೂ ಕುಮಾರಸ್ವಾಮಿ ಅವರ ಪುತ್ರರಾದ ನಿಖಿಲ್ ಎದುರಾಳಿಯಾಗಿ ಕಣಕ್ಕೆ ಇಳಿಸುವ ಚಿಂತನೆಗೆ ಮುಂದಾಗಿರುವುದಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಈ ಬಾರಿಯ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಒಂದೊಂದು ಕ್ಷೇತ್ರದ ಗೆಲವೂ ಮುಖ್ಯವಾಗಿರುವ ಹಿನ್ನೆಲೆಯಲ್ಲಿ ಸುರೇಶ್ ಅವರನ್ನು ಕಣಕ್ಕೆ ಇಳಿಸುವ ಬಗ್ಗೆ ಪಕ್ಷದಲ್ಲಿ ಚಿಂತನೆ ನಡೆದಿದೆ ಎನ್ನಲಾಗಿದೆ.
ರಾಮನಗರಕ್ಕೆ ಡಿಕೆಸು ಸ್ಪರ್ಧೆ ಹಿಂದಿನ ತಂತ್ರಗಾರಿಕೆ
ನಿಖಿಲ್ ವಿರುದ್ಧ ಡಿಕೆ ಸುರೇಶ್ ಸ್ಪರ್ಧೆ ಮಾಡಿದರೆ ಆ ಮೂಲಕ ಕುಮಾರಸ್ವಾಮಿಯವರನ್ನು ರಾಮನಗರಕ್ಕೆ ಕಟ್ಟಿ ಹಾಕಬಹುದು. ಮಗನನ್ನು ಗೆಲ್ಲಿಸಲೇಬೇಕೆಂದು ಹಠ ತೊಟ್ಟ ಕುಮಾರಸ್ವಾಮಿ ರಾಮನಗರಕ್ಕೆ ಸೀಮಿತಗೊಂಡರೆ ಆಗ ಲಾಭವಾಗುವುದು ಕಾಂಗ್ರೆಸ್ಸಿಗೆ. ವಿಶೇಷವಾಗಿ ಒಕ್ಕಲಿಗರ ಮತಗಳನ್ನು ಗಟ್ಟಿ ಮಾಡಿಕೊಳ್ಳೋ ಯೋಜನೆಯೂ ಇದೆ. ಅಷ್ಟೇ ಅಲ್ಲ, ಕುಮಾರಸ್ವಾಮಿವರನ್ನು ಹೀಗೆ ಕಟ್ಟಿಹಾಕಿದರೆ ಆ ಮೂಲಕ ಅವರು ಫ್ಯಾಮಿಲಿ ಪಾರ್ಟಿ ಎಂಬ ಸಂದೇಶವನ್ನೂ ಕೊಡಬಹುದು ಎನ್ನುವುದು ಡಿಕೆ ಶಿವಕುಮಾರ್ ಲೆಕ್ಕಾಚಾರ. ಆ ಮೂಲಕ ಕನಕಪುರದಲ್ಲಿ ಪ್ರಾಬ್ಲಂ ಆಗಬಾರದೆ ಎಂದರೆ ಉತ್ತರ ಸಿಂಪಲ್. ಡಿಕೆ ಸುರೇಶ್`ಗೆ ಅದೊಂದು ಸಮಸ್ಯೆಯೇ ಅಲ್ಲ. ಲೋಕಸಭೆ ಕ್ಷೇತ್ರವೂ ಅವರ ವ್ಯಾಪ್ತಿಯಲ್ಲೇ ಇರುವುದರಿಂದ ಸಲೀಸಾಗಿ ಹ್ಯಾಂಡಲ್ ಮಾಡುವ ಚಾಕಚಕ್ಯತೆ ಡಿಕೆ ಸುರೇಶ್ ಅವರಿಗೆ ಇದೆ. ಅಲ್ಲಿಗೆ..



