ಮಂಡ್ಯ ಜಿಲ್ಲೆ, ಜೆಡಿಎಸ್`ನವರ ಭದ್ರಕೋಟೆ. ಇಲ್ಲಿರುವ ಐದಕ್ಕೆ ಐದೂ ಕ್ಷೇತ್ರಗಳಲ್ಲಿಯೂ ಇರುವುದು ಜೆಡಿಎಸ್ ಶಾಸಕರೇ. ಈಗ ಇದ್ದಕ್ಕಿದ್ದಂತೆ ಮಂಡ್ಯ ರಂಗೇರಿದೆ. ಅಫ್‍ಕೋರ್ಸ್, ರಾಜ್ಯದಲ್ಲಿ ಯಾವ ಚುನಾವಣೆಯೇ ಇರಲಿ, ಮಂಡ್ಯ ಸೆಂಟರ್ ಆಫ್ ಅಟ್ರ್ಯಾಕ್ಷನ್. ಪ್ರೊ.ನಂಜುಂಡಸ್ವಾಮಿಯವರ ರೈತ ಹೋರಾಟ, ಬೆಂಗಳೂರಿನ ಜೀವನಾಡಿಯಾಗಿರುವ ಕನ್ನಡಂಬಾಡಿ ಅಣೆಕಟ್ಟೆಗಳ ಹಿನ್ನೆಲೆಯಲ್ಲಿ ಮಂಡ್ಯ ಎಂದರೆ ರಾಜಕೀಯ ನಾಯಕರ ಹಾಟ್‍ಸ್ಪಾಟ್. ಎಸ್.ಎಂ.ಕೃಷ್ಣರನ್ನು ಮುಖ್ಯಮಂತ್ರಿ ಮಾಡಿದ್ದ ಇದೇ ಜಿಲ್ಲೆ, ಅಂಬರೀಷ್, ಸುಮಲತಾ ಬೆಳೆದು ನಿಂತವರು. ಇದೀಗ ಕರ್ನಾಟಕದ ಅಸೆಂಬ್ಲಿ ಚುನಾವಣೆ ಹತ್ತಿರವಾದಂತೆ ಮತ್ತೊಮ್ಮೆ ಹಾಟ್ ಸ್ಪಾಟ್ ಆಗುತ್ತಿದೆ ಮಂಡ್ಯ.


ಶಿವರಾಮೇಗೌಡ..ಚೆಲುವರಾಯಸ್ವಾಮಿ..ನಾಗಮಮಂಗಲ..ಮಂಡ್ಯ ಸುತ್ತ..
ಇದರ ನಡುವೆ ಎಲ್.ಆರ್.ಶಿವರಾಮೇಗೌಡ, ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿರೋದು ಮಂಡ್ಯದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದೆ. ಶಿವರಾಮೇಗೌಡರ ಅಖಾಡ ನಾಗಮಂಗಲ. ಅವರು ಈ ಹಿಂದೆ ಗೆದ್ದಿದ್ದದ್ದೂ ಅಲ್ಲಿಂದಲೇ. ಅಲ್ಲಿಗೆ ಶಿವರಾಮೇಗೌಡರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿಸುವುದು ಹಾಗೂ ಚೆಲುವರಾಯಸ್ವಾಮಿಯವರನ್ನು ಮಂಡ್ಯದಲ್ಲಿ ಕಣಕ್ಕಿಳಿಸುವುದು ಡಿಕೆ ಶಿವಕುಮಾರ್ ಯೋಜನೆ ಎಂಬ ಮಾತೂ ಇದೆ. ಆದರೆ ಶಿವರಾಮೇಗೌಡ, ಡಿಕೆಶಿ ಹಾಗೂ ಚೆಲುವರಾಯಸ್ವಾಮಿ ಯಾರೊಬ್ಬರೂ ಇದನ್ನು ಖಚಿತಪಡಿಸಿಲ್ಲ. ಆದರೆ ಮಂಡ್ಯದಲ್ಲಿ ಈ ಮಾತುಕತೆ ಜೋರಾಗಿ ನಡೆಯುತ್ತಿರುವುದು ಸತ್ಯ.
ಸುಮಲತಾ ವಿರುದ್ಧ ನಿಲ್ತಾರಾ ಡಿಕೆ?




ಕನಕಪುರಕ್ಕೆ ಯಾರು?
ಇದೂ ಕೂಡಾ ಡಿಕೆಶಿ ಬೆಂಬಲಿಗರನ್ನು ಕಾಡುತ್ತಿರುವ ಪ್ರಶ್ನೆ. ಸತತವಾಗಿ ಗೆಲ್ಲುತ್ತಿರುವ ಕನಕಪುರದಿಂದ ಡಿಕೆ ಶಿವಕುಮಾರ್ ಅವರಿಗೆ ಕನಕಪುರ ಒಂದು ಸವಾಲೇ ಅಲ್ಲ. ಏಕೆಂದರೆ ಕ್ಷೇತ್ರದಲ್ಲಿ ಡಿಕೆ ಸೋದರರ ಪ್ರಭಾವವೇ ಹಾಗಿದೆ. ಪ್ರತಿ ಚುನಾವಣೆಯಲ್ಲೂ ಗೆಲುವಿನ ಅಂತರ ಹೆಚ್ಚುತ್ತಲೇ ಇದೆ. ನಾಮಪತ್ರ ಸಲ್ಲಿಸಿ ರಾಜ್ಯ ಪ್ರವಾಸಕ್ಕೆ ಹೊರಟರೆ ಇಡೀ ಕ್ಷೇತ್ರ ನಿಭಾಯಿಸುವುದು ಮತ್ತು ಚುನಾವಣೆಯನ್ನು ಯಶಸ್ವಿಯಾಗಿ ನಡೆಸುವುದು ತಮ್ಮ ಹಾಗೂ ಸಂಸದ ಡಿಕೆ ಸುರೇಶ್. ಅಕಸ್ಮಾತ್ ಮಂಡ್ಯ ಅಥವಾ ಮದ್ದೂರಿಗೆ ಡಿಕೆ ಹೊರಟರೆ ಕನಕಪುರದಲ್ಲಿ ತಮ್ಮ ಮಗಳು, ಅಳಿಯ.. ಅಥವಾ ತಮ್ಮ ಕುಟುಂಬದ ಯಾರಿಗಾದರೂ ಟಿಕೆಟ್ ನೀಡಿ, ಕ್ಷೇತ್ರವನ್ನು ತಮ್ಮಲ್ಲೇ ಉಳಿಸಿಕೊಳ್ಳೋ ಯೋಚನೆಯೂ ಡಿಕೆ ಅವರಿಗಿದೆ ಎನ್ನಲಾಗುತ್ತಿದೆ.
ಆದರೆ.. ಈ ಎಲ್ಲವೂ ಈಡೇರುವುದಕ್ಕೆ ಅದರಲ್ಲೂ ವಿಶೇಷವಾಗಿ ಮಂಡ್ಯದಲ್ಲಿ ಕಾಂಗ್ರೆಸ್ ಅರಳುವುದಕ್ಕೆ ಮುನ್ನ ಜೆಡಿಎಸ್ ಬಲ ಕುಗ್ಗಿಸಬೇಕು ಹಾಗೂ ಬಲವಾಗಿಯೇ ಬೆಳೆಯುತ್ತಿರುವ ಬಿಜೆಪಿಯನ್ನೂ ಎದುರಿಸಬೇಕು. ಆದರೆ ಇಂಥಾದ್ದರ ಬಗ್ಗೆ ಚರ್ಚೆಯೇ ಆಗಿಲ್ಲ ಎಂತಿದ್ದಾರೆ ಡಿಕೆ ಶಿವಕುಮಾರ್.



