ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡುವುದಿಲ್ಲ. ಹೈಕಮಾಂಡ್ ಇದಕ್ಕೆ ಒಪ್ಪುವುದಿಲ್ಲ. ಹೀಗೆಂದು ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಎನ್‍ಡಿಟಿವಿಗೆ ನೀಡಿದ್ದ ಸಂದರ್ಶನದ ಸಾರಾಂಶ ಅದು. ಆದರೆ ವರದಿ ಯಾವಾಗ ಅವರು ಹೇಳಿದಂತೆ ಬರಲಿಲ್ಲವೋ.. ಸಿದ್ದು ಕೆಂಡಾಮಂಡಲವಾದರು. ಎನ್‍ಡಿಟಿವಿಯನ್ನು ಅದಾನಿ ಟಿವಿ ಎಂದು ಲೇವಡಿ ಮಾಡಿ, ನಾನು ಹಾಗೆ ಹೇಳಿಲ್ಲ. ನಾನು ಹೇಳಿದ್ದೇ ಬೇರೆ. ವರದಿಯಾಗಿದ್ದೇ ಬೇರೆ ಎಂದರು. ಆಕ್ಚುವಲಿ ನಡೆದಿದ್ದೇನು ಎಂದರೆ..
ಸಂದರ್ಶನದಲ್ಲಿ ಆಂಕರ್ ಎಲೆಕ್ಷನ್ ನಡೆದು ಕಾಂಗ್ರೆಸ್ ಗೆದ್ದರೆ ಯಾರು ಸಿಎಂ ಆಗುತ್ತಾರೆ. ಡಿಕೆ ಶಿವಕುಮಾರ್ ಕೂಡಾ ಸ್ಪರ್ಧೆಯಲ್ಲಿದ್ದಾರೆ ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಉತ್ತರ ನೀಡುವ ಸಿದ್ದರಾಮಯ್ಯ ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹಕ್ಕಿದೆ. ನಾನು ಸಿಎಂ ಹುದ್ದೆಯ ಆಕಾಂಕ್ಷಿ. ಡಿಕೆ ಶಿವಕುಮಾರ್ ಕೂಡಾ ಆಕಾಂಕ್ಷಿ. ಆಸೆ ಇಟ್ಟುಕೊಳ್ಳೋದ್ರಲ್ಲಿ ತಪ್ಪೇನಿದೆ. ಕೊನೆಗೆ ನಿರ್ಧಾರವಾಗುವುದು ರಿಸಲ್ಟ್ ಬಂದ ಮೇಲೆ. ಆಗ ಶಾಸಕರು ಒಪ್ಪಬೇಕು. ಶಾಸಕರಿಂದ ಆಯ್ಕೆಯಾಗಬೇಕು ಎನ್ನುತ್ತಾರೆ. ಅಷ್ಟಕ್ಕೇ ಮುಗಿಯುವುದಿಲ್ಲ ಸಂದರ್ಶನ.


ಸಿದ್ದರಾಮಯ್ಯ ಹೀಗೆ ತಾವು ಹೇಳಿದ್ದನ್ನು ಹೇಳಿ, ಅದನ್ನು ಅತ್ತ ಸಮರ್ಥನೆ ಮಾಡಿಕೊಳ್ಳದೆ, ತಳ್ಳಿಯೂ ಹಾಕದೆ ಈ ರೀತಿ ಮಾತನ್ನಾಡುವುದು ಹೊಸದೇನೂ ಅಲ್ಲ. ಅಷ್ಟಕ್ಕೂ ಸಂದರ್ಶನದಲ್ಲಿ ಆಡಿರುವ ಮಾತುಗಳಲ್ಲಿ, ವಾಕ್ಯಗಳಲ್ಲಿ ಎಲ್ಲಿಯೂ ತಪ್ಪಾಗಿಲ್ಲ. ಅದರ ವಿಶ್ಲೇಷಣೆಯಷ್ಟೇ ಸಿದ್ದರಾಮಯ್ಯಗೆ ಸಿಟ್ಟು ಭರಿಸಿರುವುದು.
ಒಟ್ಟಿನಲ್ಲಿ ಈಗ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮಧ್ಯೆ ತಣ್ಣಗಿನ ಸಮರವೊಂದು ಚಾಲ್ತಿಯಲ್ಲಿದೆ. ನನಗೆ ಸಿದ್ದರಾಮಯ್ಯ ಅವರು ಏನೆಂದು ಗೊತ್ತು. ಅವರಿಗೂ ನಾನು ಏನು, ಹೇಗೆ ಅನ್ನೋದು ಗೊತ್ತು ಎಂದಿದ್ದಾರೆ ಡಿಕೆ ಶಿವಕುಮಾರ್. ಅಂದಹಾಗೆ ಶಾಸಕರ ಬೆಂಬಲ ಎಂಬ ಮಾತು ಬಂದ ಕೂಡಲೇ ಇದ್ದಕ್ಕಿದ್ದಂತೆ ಟಿಕೆಟ್ ಹಂಚಿಕೆಯಲ್ಲೇ ವಿನ್ನರ್ ಆಗಲು ಇಬ್ಬರೂ ಹೊರಟಿದ್ದಾರೆ ಎಂಬುದು ಒಳಗಿನ ಕಥೆ. ಅಂದರೆ ಕಾಂಗ್ರೆಸ್ ಪರ ಅಲೆಯಿರುವಾಗ ತಮಗೆ ಬೇಕಾದವರಿಗೆ, ತಮ್ಮವರಿಗೇ ಟಿಕೆಟ್ ಹಂಚಿದರೆ ತಾವು ಸಿಎಂ ಆಗಬಹುದು ಎಂಬ ಆಲೋಚನೆಯೇ ಈಗ ಆಕಾಂಕ್ಷಿಗಳಿಗೆ ಟೆನ್ಷನ್ ತಂದಿಟ್ಟಿರುವುದು.
ಟಿಕೆಟ್ ಹಂಚಿಕೆ ಮಾಡುವಾಗಲೇ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡಿ ಗೆಲ್ಲಿಸಿಕೊಳ್ಳುವ ಉತ್ಸಾಹದಲ್ಲಿದ್ದಾರೆ. ಹಾಗಾದಾಗ ಮುಂದೆ ಸಿಎಂ ಆಯ್ಕೆ ವಿಷಯ ಬಂದಾಗ ತಮಗೆ ಅನುಕೂಲವಾಗಲಿ ಎಂಬ ದೂರಾಲೋಚನೆಯೂ ಅವರಲ್ಲಿದೆ.



