ಶಾಸಕ ಸೂರಜ್ ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ಮಕ್ಕಳ ತಲೆ ಕೆಡಿಸುವ ಶಕುನಿಗಳಿದ್ದಾರೆ ಎಂದು ಟೀಕೆ ಮಾಡಿದ್ದಾರೆ.


ಇದಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿರುವುದು ಮಂತ್ರಾಲಯದಲ್ಲಿ. ಪತ್ನಿ ಅನಿತಾ ಕುಮಾರಸ್ವಾಮಿಯವರ ಜೊತೆ ಮಂತ್ರಾಲಯಕ್ಕೆ ಭೇಟಿ ನೀಡಿದ್ದರು. ಅಲ್ಲಿ ತಮ್ಮ ಮಕ್ಕಳನ್ನು ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು ಎಂದು ಅನಿತಾ ಬೇಡಿಕೊಂಡರು. ಕುಮಾರಸ್ವಾಮಿ ಅಣ್ಣನ ಮಕ್ಕಳು ನೀಡಿರುವ ಹೇಳಿಕೆಯಿಂದಾಗಿ ನೊಂದಿದ್ದಾರೆ ಎನ್ನಲಾಗಿದ್ದು, ತಮ್ಮ ಕುಟುಂಬದ ಗೊಂದಲ ಬಗೆಹರಿಸುವಂತೆ ಬೇಡಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.


ಅಷ್ಟೇ ಅಲ್ಲ, ನನ್ನ ಮತ್ತು ರೇವಣ್ಣ ಮಧ್ಯೆ ಹೊಡೆದಾಟದ ಕನಸು ಕಾಣುವುದು ಕೇವಲ ಭ್ರಮೆ ಎಂದಿದ್ದಾರೆ ಕುಮಾರಣ್ಣ. ನಾವು ಅಣ್ಣ-ತಮ್ಮ ಒಂದೇ ಎಂಬ ಸಂದೇಶ ರವಾನಿಸಿದ್ದಾರೆ ರೇವಣ್ಣ.



