Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Politics

ಸಿದ್ದರಾಮಯ್ಯ ಉಲ್ಟಾ ಪಲ್ಟಾ.. ರಾಜಕೀಯ.. : ಸಿದ್ದರಾಮಯ್ಯ ಉತ್ತರ ನೀಡಲಾಗದ ಪ್ರಶ್ನೆಗಳೂ ಇವೆ..!

SpeciallU by SpeciallU
April 22, 2023
in Politics
Reading Time: 1 min read
0 0
0
ಸಿದ್ದರಾಮಯ್ಯ ಉಲ್ಟಾ ಪಲ್ಟಾ.. ರಾಜಕೀಯ.. : ಸಿದ್ದರಾಮಯ್ಯ ಉತ್ತರ ನೀಡಲಾಗದ ಪ್ರಶ್ನೆಗಳೂ ಇವೆ..!

ಸಿದ್ದರಾಮಯ್ಯ ಅವರಿಗೆ ತಾವೇ ಆಡಿದ್ದ ಮಾತುಗಳು ಯಾವ್ಯಾವ ರೀತಿ ಉಲ್ಟಾ ಹೊಡೆಯುತ್ತಿವೆ ಎಂದರೆ ಅವರ ಮಾತುಗಳೇ ಅವರಿಗೆ ತಿರುಗೇಟು ಕೊಡುತ್ತಿವೆ.
ಸಿದ್ದರಾಮಯ್ಯ ಇರೋದೇ ಹಾಗೆ. ಸಿದ್ದರಾಮಯ್ಯ ತಮ್ಮ ಪಕ್ಷದ ಹಿರಿ ಕಿರಿಯ ನಾಯಕರನ್ನೆಲ್ಲ ಅತ್ಯಂತ ಬಹುವಚನದಿಂದ, ಗೌರವ ಪೂರ್ವಕವಾಗಿಯೇ ಮಾತನಾಡುತ್ತಾರೆ. ಆದರೆ ಪ್ರತಿಪಕ್ಷಗಳ ನಾಯಕರ ವಿಚಾರಕ್ಕೆ ಬಂದರೆ.. ಸಿದ್ದರಾಮಯ್ಯ ಬದಲಾಗುತ್ತಾರೆ. ಏಕ್`ದಂ ಏಕವಚನ.. ಅವನಿಗೆ ತಲೆ ಸರಿ ಇಲ್ಲ.. ಅವನಿಗೆ ಬುದ್ದಿ ಇಲ್ಲ.. ಅವನೊಬ್ಬ ದಡ್ಡ.. ಮೂರ್ಖ.. ಎನ್ನುತ್ತಲೇ ಎದುರಾಳಿಗಳ ಜನ್ಮ ಜಾಲಾಡಿ ಬಿಡುತ್ತಾರೆ.

ಒಮ್ಮೊಮ್ಮೆ ಆ ಮಾತು ವಿವಾದವಾಗುವುದೂ ಉಂಟು. ಶ್ರೀರಾಮುಲು, ಈಶ್ವರಪ್ಪ, ಯಡಿಯೂರಪ್ಪ, ಕುಮಾರಸ್ವಾಮಿ, ಮೋದಿ, ಅಮಿತ್ ಶಾರನ್ನು ಟೀಕಿಸುವಾಗ ಏಕವಚನದ ಬಳಕೆಯೂ ಹಳಿತಪ್ಪಿ, ಉಲ್ಟಾ ಹೊಡೆಯವುದೂ ಉಂಟು. ಆಗೆಲ್ಲ ಅವರ ಬಳಿ ಒಂದು ಸಿದ್ಧ ಉತ್ತರ ಇರುತ್ತದೆ. ನನ್ನದು ಆಡುಭಾಷೆ. ನಮ್ಕಡೆ ಹಿಂಗೆಯಾ ಮಾತಾಡ್ದು.. ಹಳ್ಳಿ ಭಾಸೆ.. ಹೀಗೆ ಆನ್ಸರ್ ಕೊಡುವ ಸಿದ್ದರಾಮಯ್ಯ, ವಿವಾದವಾದ ಎರಡೇ ದಿನಗಳಲ್ಲಿ ಮತ್ತದೇ ಟ್ರ್ಯಾಕ್`ಗೆ ಮರಳಿರುತ್ತಾರೆ.

Related posts

ಗ್ಯಾರಂಟಿಯಿಂದ ಹೊರೆ : ಡಿಕೆ ಶಿವಕುಮಾರ್‌ ಒಪ್ಪಿಕೊಂಡ ಸತ್ಯ

ಈಗ ಮೀಡಿಯಾಗಳ ಮೇಲೆ ಮೋದಿಯದ್ದೂ ಟೀಕೆ..!

ಅದಷ್ಟೇ ಅಲ್ಲ, ಇತ್ತಿಚೆಗೆ ಸಿದ್ದರಾಮಯ್ಯ ವರುಣಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸೋಕೆ ಹೋಗಿದ್ದಾಗ ತಮ್ಮ ಮೊಮ್ಮಗ ಧವನ್`ರನ್ನು ತಮ್ಮ ವಾರಸ್ದಾರ ಎಂದು ಘೋಷಿಸಿಬಿಟ್ಟರು. ತಮ್ಮ ಮಗ ಯತೀಂದ್ರ ಹಾಗೂ ಮೊಮ್ಮಗ ತಮ್ಮ ಉತ್ತರಾಧಿಕಾರಿಗಳು ಎಂದು ವೇದಿಕೆಯಲ್ಲೇ ಹೇಳಿದರು. ಈ ವೇಳೆ ಸಿದ್ದರಾಮಯ್ಯ ತಾವು ಜೆಡಿಎಸ್ ಬಿಟ್ಟಿದ್ದಕ್ಕೆ ಕಾರಣ ಮತ್ತು ಹೋರಾಡಿದ್ದು ವಂಶ ರಾಜಕೀಯದ ವಿರುದ್ಧ ಎಂದು ಮರೆತೇಬಿಟ್ಟರು. ನೀವು ಹೋರಾಡಿದ್ದು ವಂಶ ರಾಜಕೀಯ ಬೇಡ ಎಂದೇ ಅಲ್ವಾ.. ಎಂದು ಪ್ರಶ್ನಿಸಿದರೆ ನಾನೆಲ್ಲಿ ಹಾಗೆ ಹೇಳಿದ್ದೇನೆ ಎಂದು ಉಲ್ಟಾ ಹೊಡೆಯುವ ಕಲೆ ಸಿದ್ದರಾಮಯ್ಯ ಅವರಿಗೆ ಸರಿಯಾಗಿ ಸಿದ್ಧಿಸಿದೆ.

ಇದೇ ವೇಳೆ ಧವನ್ ಮಾಧ್ಯಮಗಳ ಎದುರು ಮಾತನಾಡುವಾಗ ಸರಿಯಾದ ಕನ್ನಡ ಬಾರದೆ ತೊದಲಿದ್ದನ್ನು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಯಿತು. ಕನ್ನಡ, ವ್ಯಾಕರಣ, ಛಂದಸ್ಸು, ಸಂಧಿ, ಸಮಾಸಗಳ ಬಗ್ಗೆ ಸದನದಲ್ಲೂ ಮಾತನಾಡಿ ಎದುರಾಳಿಗಳಿಗೆ ಕನ್ನಡ ಗೊತ್ತಿಲ್ಲ ಎಂದು ಲೇವಡಿ ಮಾಡಿದ್ದೇ ಇಲ್ಲಿ ಸೋಷಿಯಲ್ ಮೀಡಿಯಾ ಟ್ರೋಲಿಗರ ಅಸ್ತ್ರವಾಗಿ ಹೋಯ್ತು. ಆದರೆ ಇಲ್ಲಿ ಸಿದ್ದರಾಮಯ್ಯ ಉತ್ತರ ಕೊಡಲಿಲ್ಲ.

ಸಿದ್ದರಾಮಯ್ಯ ಅವರನ್ನು ಬೆಂಬಲಿಸುವ ಬುದ್ದಿಜೀವಿಗಳು ಉತ್ತರ ಕೊಟ್ಟರು. ಇನ್ನೂ ಚಿಕ್ಕ ಹುಡುಗ, ವಯಸ್ಸಿನ್ನೂ 17, ವೋಟು ಹಾಕುವ ವಯಸ್ಸೂ ಆಗಿಲ್ಲ. ತಿದ್ದಿಕೊಳ್ತಾನೆ, ಕನ್ನಡ ಕಲಿಯುತ್ತಾನೆ ಬಿಡಿ ಎಂದು ಟ್ರೋಲಿಗರನ್ನು ಸಮಾಧಾನ ಪಡಿಸುವ ಮಾತನ್ನಾಡಿದರು.

ಇದೆಲ್ಲಕ್ಕಿಂತ ಸಿದ್ದರಾಮಯ್ಯಗೆ ಉಲ್ಟಾ ಹೊಡೆದಿದ್ದು ಲಕ್ಷ್ಮಣ ಸವದಿ ಅವರನ್ನು ಕಾಂಗ್ರೆಸ್ಸಿಗೆ ಬರಮಾಡಿಕೊಂಡಾಗ. ಏಕೆಂದರೆ ಇದೇ ಸಿದ್ದರಾಮಯ್ಯ ಲಕ್ಷ್ಮಣ ಸವದಿಯವರ ಸದನದೊಳಗೆ ಬ್ಲೂ ಫಿಲ್ಮ್ ಪ್ರಕರಣವನ್ನು ಅದ್ಯಾವ ರೀತಿ ಲೇವಡಿ ಮಾಡಿದ್ದರೆಂದರೆ, ಆ ಮಾತು ಈಡೇರಬೇಕೆಂದರೆ ಲಕ್ಷ್ಮಣ ಸವದಿ ರಾಜಕೀಯ ಜೀವನದಿಂದ ಹೊರಹೋಗಿ ಮನೆಯಲ್ಲಿರಬೇಕಷ್ಟೆ. ಆದರೆ ಅದೇ ಲಕ್ಷ್ಮಣ ಸವದಿಗೆ ಬಿಜೆಪಿ ಟಿಕೆಟ್ ಕೊಡದೇ ಹೋದಾಗ, ಅವರಿಗೆ ರಾಜಕೀಯ ಜೀವನ ನೀಡಿದ್ದೂ ಇದೇ ಸಿದ್ದರಾಮಯ್ಯ. ಒನ್ಸ್ ಎಗೇನ್ ಇಲ್ಲಿಯೂ ಸಿದ್ದರಾಮಯ್ಯ ಪ್ರಶ್ನೆಗಳಿಗೆ ಉತ್ತರ ಕೊಡಲಿಲ್ಲ.

ಅದರ ಜೊತೆ ಜಗದೀಶ್ ಶೆಟ್ಟರ್ ಪ್ರಕರಣವೂ ಇದೆ. ಶೆಟ್ಟರ್ ಅವರಿಗೆ ಬಿಜೆಪಿ ಟಿಕೆಟ್ ತಪ್ಪಿಸಿದಾಗ, ಕಾಂಗ್ರೆಸ್`ನವರು ಆಹ್ವಾನ ಮಾಡಿಕೊಂಡರಲ್ಲ, ಲಿಂಗಾಯತರನ್ನು ಬಿಜೆಪಿ ತುಳಿಯುತ್ತಿದೆ. ಯಡಿಯೂರಪ್ಪರನ್ನು ತುಳಿಯುತ್ತಿದೆ ಎನ್ನುತ್ತಿರುವವರು ಇದೇ ಸಿದ್ದರಾಮಯ್ಯ ಮತ್ತು ಡಿಕೆಶಿವಕುಮಾರ್. ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೊಡೆದಾಟ ಮಾಡಿದ್ದ ಎಂಬಿ ಪಾಟೀಲ್, ವಿನಯ್ ಕುಲಕರ್ಣಿ ಕೂಡಾ ಇದೇ ಮಾತು ಹೇಳುತ್ತಿದ್ದಾರೆ. ಹೀಗೆ ಲಿಂಗಾಯತರನ್ನು ಬೆಳೆಸಬೇಕು ಎನ್ನುವವರು ಲಿಂಗಾಯತರನ್ನು ವಿಭಜನೆ ಮಾಡಲು ಹೋಗಿದ್ದಾದರೂ ಏಕೆ ಎಂಬ ಪ್ರಶ್ನೆಗೂ ಸಿದ್ದರಾಮಯ್ಯ ಉತ್ತರ ಕೊಡಲ್ಲ.

ಅಷ್ಟೆಲ್ಲ ಏಕೆ, ಶೆಟ್ಟರ್ ವಿಷಯದ್ಲಲೇ ನಂಬಿದವರನ್ನು ಕೈಬಿಟ್ಟರು. ಮೋಸ ಮಾಡಿದರು ಎನ್ನುವವರು ದಲಿತ ಅಖಂಡ ಶ್ರೀನಿವಾಸ ಮೂರ್ತಿಯನ್ನೇಕೆ ಕಡೆಗಣಿಸಿದಿರಿ ಎಂಬ ಪ್ರಶ್ನೆಗೂ ಉತ್ತರ ಕೊಡಲ್ಲ. ವಿಚಿತ್ರ ಮತ್ತು ವಿಪರ್ಯಾಸವೆಂದರೆ ಲಿಂಗಾಯತ, ಒಕ್ಕಲಿಗರ ವಿಚಾರಗಳಲ್ಲಿ ಎಂಟ್ರಿ ಕೊಡುವ ಶಕ್ತಿ ಮಠಗಳಿಗೆ, ಸ್ವಾಮಿಗಳಿಗೆ ಇದೆ. ಆದರೆ ಅಷ್ಟೇ ಪ್ರಬಲವಾಗಿರುವ ದಲಿತ ಸಂಘಟನೆಗಳು ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎಂದು ಸುಮ್ಮನಿದ್ದು ಬಿಡುತ್ತಿರುವುದು. ಬಿಡಿ, ಆದರೆ ಇಲ್ಲಿಯೂ ಕಾಂಗ್ರೆಸ್ ಉತ್ತರ ಕೊಡಲ್ಲ. ಜಾಣ್ಮೆಯಿಂದ ಜಾರಿಕೊಳ್ಳುತ್ತಿದೆ.

ಅಷ್ಟೇ ಅಲ್ಲ, ಇದೀಗ ಈಶ್ವರಪ್ಪ ಅವರ ಜೊತೆ ಮೋದಿ ಮಾತನಾಡಿದ್ದನ್ನು ಪ್ರಶ್ನಿಸುತ್ತಿರುವ, ಒಬ್ಬ ಕೊಲೆಗಾರನ ಜೊತೆ ಮಾತನಾಡುತ್ತಿರುವುದು ತಪ್ಪು. ಅಪರಾಧ. ಅವಮಾನ ಎನ್ನುತ್ತಿರುವ ಕಾಂಗ್ರೆಸ್ ನಾಯಕರಾರೂ, ವಿನಯ್ ಕುಲಕರ್ಣಿ ವಿಷಯವನ್ನು ಕೈಗೆತ್ತಿಕೊಳ್ಳುತ್ತಿಲ್ಲ. ಉತ್ತರ ಕೊಡದೆ ನುಣುಚಿಕೊಳ್ಳುತ್ತಿದ್ದಾರೆ. ಅಂದಹಾಗೆ ವಿನಯ್ ಕುಲಕರ್ಣಿ ಆರೋಪಿಯಾಗಿರುವುದು ಬಿಜೆಪಿ ಮುಖಂಡನ ಹತ್ಯೆ ಕೇಸಿನಲ್ಲಿ. ಆಗ ಇದೇ ವಿನಯ್ ಕುಲಕರ್ಣಿ ವಿರುದ್ಧ ಹೋರಾಟ ನಡೆಸಿದ್ದವರು ಮಾಜಿ ಬಿಜೆಪಿ ಹಾಲಿ ಕಾಂಗ್ರೆಸ್ಸಿಗ ಜಗದೀಶ್ ಶೆಟ್ಟರ್. ವಿನಯ್ ಕುಲಕರ್ಣಿ ಪ್ರಕರಣಕ್ಕೆ ಉತ್ತರ ಕೊಡುತ್ತಿಲ್ಲ.

ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಿರುವ ಸಿದ್ದರಾಮಯ್ಯ, ಹಲವು ಪ್ರಶ್ನೆಗಳಿಗೆ ಉತ್ತರ ಕೊಡುತ್ತಿಲ್ಲ. ದಟ್ ಈಸ್ ಪಾಲಿಟಿಕ್ಸ್. ಹಾಗಾದರೆ ಬಿಜೆಪಿಯವರಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರಗಳಿವೆಯಾ.. ಅವುಗಳನ್ನು ಇನ್ನೊಮ್ಮೆ ಕೇಳೋಣ. ಮುಂದಿನ ಭಾಗದಲ್ಲಿ..

Tags: #ಧವನ್ #ಸಿದ್ದರಾಮಯ್ಯ #ಲಕ್ಷ್ಮಣಸವದಿ #ಜಗದೀಶ್ ಶೆಟ್ಟರ್ #ಕಾಂಗ್ರೆಸ್ #ಬಿಜೆಪಿ #Dhawan #Siddharamaiah #Lakshmanasavadi #Jagdeesh Shettar #Congress #BJP
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.