ಪ್ರತಿ ಮನೆಯ ಹೆಣ್ಣು ಮಕ್ಕಳಿಗೂ 2000 ರೂಪಾಯ್ ತಿಂಗಳಿಗೆ ಫ್ರೀ..
ಪ್ರತಿ ಬಿಪಿಎಲ್ ಕಾರ್ಡುದಾರನ ಒಬ್ಬೊಬ್ಬ ಸದಸ್ಯರಿಗೂ ತಿಂಗಳಿಗೆ 10 ಕೆಜಿ ಅಕ್ಕಿ ಫ್ರೀ
ಮನೆಯ ಕರೆಂಟ್ ಬಿಲ್, 200 ಯುನಿಟ್ ಫ್ರೀ..ಫ್ರೀ..
ಪದವೀಧರ ನಿರುದ್ಯೋಗಿಗಳಿಗೆ ತಿಂಗಳಿಗೆ 3 ಸಾವಿರ, ಡಿಪ್ಲೋಮಾ ಪದವೀಧರರಿಗೆ ತಿಂಗಳಿಗೆ 1,500 ರೂ.
ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರು ಎಲ್ಲಿಂದ ಎಲ್ಲಿಗೇ ಹೋದರೂ ಉಚಿತ, ಟಿಕೆಟ್ ಇಲ್ಲ
ಹೀಗೆ ಘೋಷಣೆ ಮಾಡಿದ್ದ ಕಾಂಗ್ರೆಸ್, ಇದೆಲ್ಲವನ್ನೂ ಮೊದಲ ಕ್ಯಾಬಿನೆಟ್ಟಿನಲ್ಲಿಯೇ ಜಾರಿಗೆ ತರುವುದಾಗಿ ಹೇಳಿತ್ತು. ಆದರೆ ಯೋಜನೆ ಜಾರಿಯ ಕುರಿತಂತೆ ತಾತ್ವಿಕ ಒಪ್ಪಿಗೆ ಬಿಟ್ಟು, ಮುಂದೆ ಹೋಗಿಲ್ಲ. ತಿಂಗಳು ಮುಗಿಯುತ್ತಿದೆ. ಈ ನಡುವೆ ಕಾಂಗ್ರೆಸ್ ಸರ್ಕಾರ ಬಂದ ದಿನವೇ ಷರತ್ತುಗಳು ಅನ್ವಯ ಎಂಬ ಸುಳಿವು ಕೊಟ್ಟಿದ್ದರು ಪರಮೇಶ್ವರ್. ಹಾದಿಬೀದಿಯಲ್ಲಿ ಹೋಗೋವ್ರಿಗೆಲ್ಲ ಕೊಡೋಕಾಗಲ್ಲ ಎಂದಿದ್ದರು ಡಿಕೆ ಶಿವಕುಮಾರ್. ಗ್ಯಾರಂಟಿ ಕೊಟ್ಟೇ ಕೊಡ್ತೇವೆ, ಆದರೆ ಕೇಂದ್ರ ಸರ್ಕಾರ ಎಷ್ಟು ಬಾಕಿ ಕೊಡಬೇಕಿದೆ ಗೊತ್ತಾ ಎಂದು ಕೇಳುವ ಮೂಲಕ ಬೇರೆಯದೇ ಸಿಗ್ನಲ್ ಕೊಟ್ಟಿದ್ದರು. ಇದೀಗ ಸಚಿವರಾಗಿರುವ ಸತೀಶ್ ಜಾರಕಿಹೊಳಿ, ಕೆ.ಎನ್.ರಾಜಣ್ಣ ಮೊದಲಾದವರು ಕೊಟ್ಟಿರುವ ಹೇಳಿಕೆ ಬೇರೆಯದೇ ಇದೆ.
ಸತೀಶ್ ಜಾರಕಿಹೊಳಿ, ಸಚಿವ : ಚುನಾವಣೆ ಸಮಯದಲ್ಲಿ ಮನೆ ಮನೆಗೆ ಗ್ಯಾರಂಟಿ ಕಾರ್ಡ್ ಎಸೆದ ಹಾಗೆ ಎಲ್ಲರಿಗೂ ಗ್ಯಾರಂಟಿ ಯೋಜನೆ ಕೊಡಲು ಸಾಧ್ಯವಿಲ್ಲ. ಚುನಾವಣೆಗೂ ಮುನ್ನ ಕಾಂಗ್ರೆಸ್ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳಿಗೆ ಷರತ್ತುಗಳು ಅನ್ವಯ ಆಗಲಿವೆ. ಎಲ್ಲರಿಗೂ ಗ್ಯಾರಂಟಿ ಯೋಜನೆ ಕೊಡಲು ಆಗಲ್ಲ. ನಿರ್ಗತಿಕರು, ಬಡವರನ್ನು ಗುರುತಿಸಿ ಯೋಜನೆ ತಲುಪಿಸುತ್ತೇವೆ. ಗ್ಯಾರಂಟಿ ಯೋಜನೆ ಜಾರಿ ಸ್ವಲ್ಪ ವಿಳಂಬವಾಗಬಹುದು. ಆದರೆ ಕೊಟ್ಟ ಭರವಸೆ ಈಡೇರಿಸಲು ಸರ್ಕಾರ ಬದ್ಧವಿದೆ. ಆದಾಯ ತೆರಿಗೆ ಪಾವತಿಸುವವರಿಗೆ, ಸರ್ಕಾರಿ ನೌಕರರಿಗೆ ಗ್ಯಾರಂಟಿ ಕೊಡಲು ಸಾಧ್ಯವಿಲ್ಲ. ಇನ್ನೂ ಕೆಲವರು ನಮಗೆ ಗ್ಯಾರಂಟಿ ಬೇಡ ಅಂದಿದ್ದಾರೆ. ಅಂಥವರಿಗೆ ಸರ್ಕಾರ ನಿಯಮ ಮಾಡಬೇಕು ಅಲ್ವಾ? ಬೇಡ ಅಂದವರಿಗೆ ಕಾನೂನು ತರುತ್ತೇವೆ. ಕೆಲ ಕಡೆ ಮೀಟರ್ ಇಲ್ಲದೆ ನೇರವಾಗಿ ವಿದ್ಯುತ್ ಪಡೆಯುತ್ತಿದ್ದಾರೆ. ಮೊದಲು ಮೀಟರ್ ಹಾಕಿ ಅವರನ್ನು ಮುಖ್ಯವಾಹಿನಿಗೆ ತರಬೇಕು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಗ್ಯಾರಂಟಿ ಕೇವಲ ಕರ್ನಾಟಕದ ಮಹಿಳೆಯರಿಗಷ್ಟೇ ಅನ್ವಯ ಆಗಲಿದೆಯೇ ಹೊರತು ಹೊರಗಿನವರಿಗಲ್ಲ. ನಾವು ಗ್ಯಾರಂಟಿ ಕೊಡಲ್ಲ ಎನ್ನಲ್ಲ. ಸುಮ್ಮನೆ ಕೊಡಲು ಆಗುವುದಿಲ್ಲ. ಇನ್ನೂ ಬಹಳ ದಿನ ಇದೆ.
ಕೆ.ಎನ್.ರಾಜಣ್ಣ, ಸಚಿವ : ಚುನಾವಣಾ ಸಮಯದಲ್ಲಿ ಮನೆ, ಮನೆಗೆ ಗ್ಯಾರಂಟಿ ಕಾರ್ಡ್ ನೀಡಿದ ಹಾಗೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಸಾಧ್ಯವಿಲ್ಲ. ನಿರ್ಗತಿಕರು, ಬಡವರು ಯಾರಿದ್ದಾರೆ ಅವರನ್ನು ಗುರುತಿಸಿ ಗ್ಯಾರಂಟಿ ಯೋಜನೆಗಳನ್ನು ತಲುಪಿಸುತ್ತೇವೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ 5 ಗ್ಯಾರಂಟಿಗಳನ್ನು ಜಾರಿ ಮಾಡಿಯೇ ತೀರುತ್ತೇವೆ. ಆದರೆ, ಎಲ್ಲರಿಗೂ ಈ ಯೋಜನೆಗಳನ್ನು ನೀಡಲು ಸಾಧ್ಯವಿಲ್ಲ.
ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ಸಿಗರು ನೀಡುತ್ತಿರುವ ಹೇಳಿಕೆಗಳು ಹಾಗೂ ಅವುಗಳನ್ನು ಕೇಳಿದ ಜನರಿಗೂ ಶಾಕ್ ಆಗಿದೆ. ಏಕೆಂದರೆ ಯೋಜನೆಗಳನ್ನು ಹೇಗೆ ಜಾರಿಗೆ ತರುತ್ತೀರಿ, ಷರತ್ತುಗಳಿವೆಯೇ ಎಂದು ಹಲವು ಮಾಧ್ಯಮಗಳು ಪ್ರಶ್ನಿಸಿದ್ದವು. ಆದರೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮೊದಲಾದವರು ಯಾವುದೇ ಷರತ್ತುಗಳಿಲ್ಲ ಎಂದು ವೇದಿಕೆಗಳ ಮೇಲೆ ಬಹಿರಂಗವಾಗಿ ಘೋಷಿಸಿದ್ದೂ ಆಗಿತ್ತು. ಇನ್ನೂ ಪ್ರಶ್ನೆ ಮಾಡಿದ್ದ ಪತ್ರಕರ್ತರಿಗೆ ಸಿದ್ದರಾಮಯ್ಯ ಬೈದಿದ್ದೂ ಆಗಿತ್ತು. ಆದರೆ ಇದೀಗ ಇದ್ದಕ್ಕಿದ್ದಂತೆ ಕಾಂಗ್ರೆಸ್ಸಿಗರ, ಸಚಿವರ ಹೇಳಿಕೆಗಳು ಉಲ್ಟಾ



