ದೇಶವನ್ನು ಘಾಸಿಗೊಳಿಸಿದ್ದ ವಿವಾದಗಳಲ್ಲಿ ಒಂದು ಅಯೋಧ್ಯಾ ವಿವಾದ. ಅಯೋಧ್ಯೆಯಲ್ಲೇನೋ ಈಗ ರಾಮಮಂದಿರ ತಲೆ ಎತ್ತುತ್ತಿದೆ. 2024ರ ಜನವರಿಯಲ್ಲಿ ವರ್ಷದ ಮೊದಲ ದಿನವೋ ಅಥವಾ ಸಂಕ್ರಾಂತಿ ದಿನವೋ ರಾಮಲಲ್ಲಾ ತಲೆಯೆತ್ತಿ ನಿಲ್ಲಲಿದ್ದಾನೆ. ಅದೇ ರೀತಿ ದೇಶವನ್ನು ಕಾಡುತ್ತಿರುವ ಹಲವು ಧಾರ್ಮಿಕ ವಿವಾದಗಳಲ್ಲಿ ಪ್ರಮುಖವಾದವು ಕಾಶಿ ಮತ್ತು ಮಥುರಾ ದೇವಸ್ಥಾನ ವಿವಾದ. ಈ ವಿವಾದಗಳು ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿವೆ. ಆದರೆ ಎರಡೂ ಸಮುದಾಯಗಳು ಒಪ್ಪಿದರೆ ಶಾಂತಿ ಸೌಹಾರ್ದತೆಯಿಂದಲೇ ವಿವಾದ ಬಗೆಹರಿಸಬಹುದು ಎಂಬುದು ಆರ್.ಎಸ್.ಎಸ್. ವಾದ. ಇವುಗಳಿಗಾಗಿ ಪ್ರಕ್ರಿಯೆಗಳೂ ಶುರುವಾಗಿವೆ. ಎಲ್ಲರೂ ಒಪ್ಪಿದರೆ ಒಳ್ಳೆಯದಲ್ಲವೇ ಎಂಬ ನಿಟ್ಟಿನಲ್ಲಿ ಸಭೆಗಳು ನಡೆಯುತ್ತಿವೆ.

ಆರ್.ಎಸ್.ಎಸ್. ಕಡೆಯಿಂದ ಕಳೆದ ವರ್ಷ ಸೆಪ್ಟೆಂರ್ 23ರಂದು ಈ ಕುರಿತು ಮೊದಲ ಸಭೆ ನಡೆದಿತ್ತು. ಆರ್.ಎಸ್.ಎಸ್.ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ಇಮಾಮ್ ಅಸೋಸಿಯೇಷನ್ ಅಧ್ಯಕ್ಷ ಉಮರ್ ಅಹ್ಮದ್ ನಡುವೆ ಮಾತುಕತೆ ನಡೆದಿತ್ತು. ಅದರ ಮುಂದುವರಿದ ಭಾಗವಾಗಿ ಜನವರಿ 14ರಂದು ಮೀಟಿಂಗ್ ಇನ್ನೊಂದು ಸಭೆ ನಡೆದಿತ್ತು. ಮಾಜಿ ಗವರ್ನರ್ ನಜೀಬ್ ಜಂಗ್ ಮನೆಯಲ್ಲಿ ಸಭೆ ನಡೆದಿದ್ದ ಸಭೆ ಅದು.
ಆರ್.ಎಸ್.ಎಸ್. ಕಡೆಯಿಂದ ಇಂದ್ರೇಶ್ ಕುಮಾರ್, ಕೃಷ್ಣ ಗೋಪಾಲ್, ರಾಮ್ ಲಾಲ್ ಇದ್ದರೆ, ಮುಸ್ಲಿಂ ಚಿಂತಕರಾದ ಸಯ್ಯದ್ ಖುರೇಷಿ , ಶಾಹಿದ್ ಸಿದ್ದಿಕಿ, ಉದ್ಯಮಿ ಸಯ್ಯದ್ ಸೇರ್ವಾನಿ ಇದ್ದರು. ದಾರುಲ್ ಇಸ್ಲಾಮಿ ಹಿಂದ್, ಜಮಾತ್ ಇಸ್ಲಾಮಿ ಹಿಂದ್, ಜಾಮಿಯತ್ ಉಲ್ಮಾ ಇ ಹಿಂದ್, ಅಜ್ಮೀರ್ ದರ್ಗಾದ ಸಲ್ಮಾನ್ ಚಿಷ್ಟಿ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ವಿವಾದಗಳನ್ನು ಶಾಂತಿಯುತವಾಗಿ ಸೌಹಾರ್ದಯುತವಾಗಿ ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಮಾತುಕತೆಗಳಾಗಿವೆ.


ದೇಶದಲ್ಲಿ ಘಜ್ನಿ ಮೊಹಮ್ಮದ್, ಘೋರಿ ಮೊಹಮ್ಮದ್, ಮೊಘಲರು, ಸುಲ್ತಾನರು ಸಾವಿರಾರು ದೇವಸ್ಥಾನಗಳನ್ನು ನಾಶ ಮಾಡಿದ್ದಾರೆ. ಆ ಎಲ್ಲವುಗಳನ್ನೂ ಬಿಟ್ಟುಬಿಡೋಣ. ಎಲ್ಲ ಇತಿಹಾಸವನ್ನು ಹೊಸದಾಗಿ ಬರೆಯುವುದು ಬೇಡ. ಆದರೆ ಹಿಂದೂಗಳ ಗಟ್ಟಿ ನಂಬಿಕೆ ಇರುವುದು ಅಯೋಧ್ಯೆ, ಕಾಶಿ ಮತ್ತು ಮಥುರಾ ಮಂದಿರಗಳಲ್ಲಿ. ರಾಮ, ಕೃಷ್ಣ ಹಾಗೂ ಶಿವನ ಪುಣ್ಯಕ್ಷೇತ್ರಗಳು. ಈ ಮೂರು ಕ್ಷೇತ್ರಗಳನ್ನು ಹಿಂದೂಗಳಿಗೆ ಬಿಟ್ಟು ಬಿಡಿ, ಸೌಹಾರ್ದಯುತವಾಗಿ ವಿವಾದ ಬಗೆಹರಿಸಿಕೊಳ್ಳೋಣ ಎನ್ನವುದು ಆರ್.ಎಸ್.ಎಸ್. ವಾದ. ಈಗಾಗಲೇ ಅಯೋಧ್ಯೆ ವಿವಾದ ಭುಗಿಲೆದ್ದು, ಸಾವು ನೋವು ಹೋರಾಟಗಳನ್ನು ಕಂಡಿದೆ. ದಶಕಗಳ ಬಳಿಕ ಕನಸು ನನಸಾಗುತ್ತಿದೆ. ಕಾಶಿ ಮತ್ತು ಮಥುರಾಗಳನ್ನೂ ಆ ರೀತಿ ಆಗಲು ಬಿಡದೆ ಶಾಂತಿಯುತವಾಗಿ ಬಗೆಹರಿಸಿಕೊಳ್ಳೋಣ ಎನ್ನುವುದು ಆರ್.ಎಸ್.ಎಸ್. ವಾದ. ಈ ನಿಟ್ಟಿನಲ್ಲಿ ಸಭೆಗಳಾಗುತ್ತಿವೆ.
ಮಥುರಾ, ಕಾಶಿ ಸ್ಥಿತಿ ಏನಿದೆ?
ಮಥುರಾ ಮತ್ತು ಕಾಶಿ ಎರಡೂ ನ್ಯಾಯಾಲಯದಲ್ಲಿವೆ. ವಿಚಾರಣೆ ಹಂತದಲ್ಲಿವೆ. ಕಾಶಿಯಲ್ಲಿ ಜ್ಞಾನವಾಪಿ ಮಸೀದಿ, ಆ ಮಸೀದಿಯಲ್ಲಿ ಸಿಕ್ಕ ಶಿವಲಿಂಗ, ಶೃಂಗಾರ ಗೌರಿ, ನಂದಿ ವಿಗ್ರಹ.. ಮೊದಲಾದ ಅಲ್ಲಿ ಮೊದಲು ದೇಗುಲವಿತ್ತು ಎಂಬ ವಾದಕ್ಕೆ ಪುಷ್ಠಿಯೂ ಸಿಕ್ಕಿದೆ. ನ್ಯಾಯಾಲಯ ಹೇಳಬೇಕಷ್ಟೆ. ಇನ್ನು ಮಥುರಾ ವಿವಾದ ಕೂಡಾ ಕೋರ್ಟಿನಲ್ಲಿದೆ.
ಸಂಧಾನದ ಮೂಲಕ ವಿವಾದ ಬಗೆಹರಿಯುತ್ತಾ?





