ರೋಹಿಣಿ ಸಿಂಧೂರಿ. ಈಗ ಮೈಸೂರು ಡಿಸಿಯಾಗಿರುವ ರೋಹಿಣಿ, ಕೆಲಸಗಳಿಗೆ ಎಷ್ಟು ಖ್ಯಾತಿ ಪಡೆದರೋ.. ವಿವಾದಗಳಿಂದ ಅದಕ್ಕಿಂತಲೂ ಹೆಚ್ಚು ಫೇಮಸ್ ಆದವರು. ಇನ್ನು ರೂಪಾ ಮೌದ್ಗಿಲ್. ಐಪಿಎಸ್ ಆಫೀಸ್ ಆಫೀಸರ್. ಇವರ ಪತಿ ಮನೀಶ್ ಮೌದ್ಗಿಲ್ ಐಎಎಸ್ ಅಧಿಕಾರಿ. ಇವರಿಬ್ಬರ ಮಧ್ಯೆ ಅನಿವಾರ್ಯವಾಗಿ ಕರ್ಮದ ಪ್ರತಿಕ್ರಿಯೆ ನೀಡಿದ್ದಾರೆ ಕುಸುಮಾ. ಆತ್ಮಹತ್ಯೆ ಮಾಡಿಕಕೊಂಡ ಐಎಎಸ್ ಅಧಿಕಾರಿ ಡಿ.ಕೆ.ರವಿ ಪತ್ನಿ ಕುಸುಮಾ. ಐಪಿಎಸ್ ರೂಪಾ ಸ್ಫೋಟಿಸಿದ ಫೋಟೋ ಬಾಂಬ್ ಇಡೀ ರಾಜ್ಯ ಭಾನುವಾರ ದಿಗ್ಗನೆದ್ದು ಕೂತಿದ್ದ ರೂಪಾ ಅವರು ಸಿಂಧೂರಿ ಅವರ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಾಗ. ಅಷ್ಟೇ ಅಲ್ಲ, ರೋಹಿಣಿ ಸಿಂಧೂರಿ ಕೆಲವು ಅಧಿಕಾರಿಗಳಿಗೆ ನೋಡಬಾರದ ಕಳಿಸಬಾರದ ಫೊಟೋ ಕಳಿಸಿದ್ದಾರೆ. ಆಕೆಯ ಕ್ಯಾರೆಕ್ಟರ್ ಬಗ್ಗೆ ಅನುಮಾನವಿದೆ ಎಂದೆಲ್ಲ ಆರೋಪಿಸಿದ್ದ ರೂಪಾ 20 ಪ್ರಶ್ನೆಗಳನ್ನೆತ್ತಿದ್ದರು.
ರೋಹಿಣಿ ಸಿಂಧೂರಿ ಪ್ರೊಬೆಷನರಿ ಡಿಸಿ ಆಗಿದ್ದಾಗ ಅವರ ಪತಿಯೊಂದಿಗಿನ ಸಂಬಂಧ ಹಾಳಾಗಿತ್ತು. ಆದರೆ, ಬರಬರುತ್ತಾ ಅವರ ಬಿಹೇವಿಯರ್ ಸರಿಯಾಗಿ ಕಾಣಿಸಲಿಲ್ಲ. ಕಳಿಸಬಾರದಂತ ಪಿಕ್ಸ್ ಕೆಲ ಐಎಎಸ್ ಅಧಿಕಾರಿಗಳಿಗೆ ಕಳಿಸಿದ್ದಾರೆ. ನಂತರ ಡಿ.ಕೆ. ರವಿ ಅವರ ವಿಚಾರ ಮಾಧ್ಯಮಗಳಿಂದ ಗೊತ್ತಾಯಿತು. ನನಗೆ ಗೊತ್ತಿರುವಷ್ಟು ಮಾಹಿತಿ ಹಂಚಿಕೊಂಡಿದ್ದೇನೆ. ಆದರೆ, ಈಗ ಹಂಚಿಕೊಂಡಿರುವ ಫೋಟೋಗಳು ಸ್ಯಾಂಪಲ್ ಅಷ್ಟೇ ಎಂದು ಹೇಳಿದ ರೂಪಾ ಶಾಸಕರ ಜೊತೆ ಸಂಧಾನಕ್ಕೆ ಹೋದರು ಅಂತಾ ಟಿವಿಯಲ್ಲಿ ನೋಡಿದ್ದೆ. ಯಾವ ನಿಯಮದಲ್ಲಿ ಸಂಧಾನ ಸಾಧ್ಯ. ಇವರ ಹತ್ತಿರ ಏನಿದೆ ಮುಚ್ಚಿಟ್ಟು ಕೊಳ್ಳೋಕೆ. ಆ ತರಹದ ಅಕ್ರಮ ಏನು ಮಾಡಿದ್ದಾರೆ. ಭಾರತದ ಇತಿಹಾಸದಲ್ಲಿ ಒಬ್ಬ ಐಎಎಸ್ ಅಧಿಕಾರಿ ಸಂಧಾನಕ್ಕೆ ಹೋಗಿರೋದು ಇದೇ ಮೊದಲು. ಇವರ ನಡವಳಿಕೆ ಸ್ಟಾರ್ಟಿಂಗ್ ಇಂದ ಹೇಗಿತ್ತು. ಎಷ್ಟೊ ವಿಚಾರಗಳು ಮೊದಲಿನಿಂದ ಗೊತ್ತಿಲ್ಲ ಎಂದು ಹೇಳಿದರು.
ಸಂಧಾನ ವಿಷಯ ಬಂದಾಗ ಮೈ ಉರಿದೋಯ್ತು. ಜನ ಸಾಯ್ತಿದ್ರು ತನ್ನ ಮೋಜಿಗೆ ಸ್ವಿಮ್ಮಿಂಗ್ ಪೂಲ್ ಮಾಡಿಸಿಕೊಂಡ್ರು ಏನರ್ಥ. ಆಕೆಗೆ ಮಾನವೀಯತೆ ಇದ್ಯಾ. ಪ್ರಾಥಮಿಕ ತನಿಖೆಯಿಂದ ಡಾ. ರವಿ ಶಂಕರ್ ಅವರಿಂದ ಪ್ರೂವ್ ಆಗಿದೆ. ಪ್ರತೀಬಾರಿ ಇಷ್ಟೆಲ್ಲಾ ಮಾಡಿದ್ರೂ ಅವರಿಗೆ ಶಿಕ್ಷೆ ಆಗ್ತಿಲ್ಲ. ಅವರು ಒಂದು ಗುಳ್ಳೆ ಬೆಳೆಸ್ಕೊಂಡಿದ್ರು, ಅದನ್ನ ನಾನು ಇವತ್ತು ಹೊಡೆದಿದ್ದೇನೆ. ಆಕೆ ಸಿಂಪತಿ ತಗೊಳೋಕೆ ಪ್ರಯತ್ನ ಮಾಡಬಹುದು. ಕೆಲವರಿಗೆ ವಾಯ್ಸ್ ಇರುತ್ತೆ ಕೆಲವರು ನನ್ನಂಥವರು ಮಾತಾಡಬಹುದು ಎಂದರು.
ಕಳಿಸಬಾರದ ಫೋಟೋ ಕಳಿಸಿದ್ದಾರೆ: ಕಳಿಸಬಾರದಂತ ಪಿಕ್ಸ್ ಕೆಲ ಐಎಎಸ್ ಅಧಿಕಾರಿಗಳಿಗೆ ಕಳಿಸಿದ್ದಾರೆ. ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಗಮನಕ್ಕೆ ತಂದಿದ್ದೇನೆ. ಈಗ ಹಾಕಿರೊ ಪಿಕ್ಸ್ ಕೇವಲ ಸ್ಯಾಂಪಲ್ ಅಷ್ಟೆ. ಜವಬ್ದಾರಿಯುತ ಸ್ಥಾನದ ಐಎಎಸ್ ಅಧಿಕಾರಿ ಸ್ಪಾ ಪಿಕ್ಸ್ , ತಲೆ ದಿಂಬಿನ ಪಿಕ್ಸ್ ಕಳಿಸ್ತಾರೆ ಅಂದ್ರೆ ಏನರ್ಥ. ಇದರಲ್ಲಿ ಯಾವುದೇ ಪ್ರೈವೇಟ್ ಮ್ಯಾಟರ್ ಬರೋದಿಲ್ಲ. ಸರ್ವಿಸ್ ರೂಲ್ಸ್ ಪ್ರಕಾರ ಕೆಲ ನಿಯಮ ಪಾಲನೆ ಮಾಡಬೇಕು. ಸಂಧಾನ ವಿಷಯ ಬಂದಾಗ ಮೈ ಉರಿದೋಯ್ತು. ಆ ಪಿಕ್ಸ್ ಗಳು ಒಂದು ತಿಂಗಳ ಹಿಂದೆ ಸಿಕ್ಕಿದ್ದು..
ಆಕೆಗೆ ಬಿಹೇವಿಯರ್ ಸರಿ ಇರಲಿಲ್ಲ: ನಾನು ಮತ್ತು ನನ್ನ ಪತಿ ಮೌನಿಶ್ ಮೌದ್ಗಿಲ್ ಆಕೆಗೆ ಸಾಕಷ್ಟು ಸಹಾಯ ಮಾಡಿದ್ದೀವಿ. ಈಕೆ ಸಿಎಟೆಗೆ ಹೋಗಲು ಡ್ರಾಫ್ಟ್ ಮಾಡಿಕೊಟ್ಟಿದ್ದು ನಮ್ಮ ಮನೆಯವರು. ಬರು ಬರುತ್ತಾ ಇವರ ಬಗ್ಗೆ ಗೊತ್ತಾಯ್ತು. ಸರಿಯಾದ ದಾರಿಯಲ್ಲಿ ನಡೆದುಕೊಳ್ಳೋಕೆ ದಾರಿ ಇರುತ್ತದೆ. ಆಕೆ ಬಗ್ಗೆ ತಿಳಿದಿರೋದನ್ನೆಲ್ಲಾ ಬರೆದಿದ್ದೀನಿ. ನಾನು, ನಮ್ಮ ಮನೆಯವರು ಸಾಕಷ್ಟು ಹೆಲ್ಪ್ ಮಾಡಿದ್ದೀವಿ ಆಕೆಗೆ. ಆದ್ರೆ ಬರುಬುರುತ್ತಾ ಆಕೆಗೆ ಬಿಹೇವಿಯರ್ ಸರಿ ಇರಲಿಲ್ಲ. ಡಿಕೆ ರವಿ ಜೊತೆಗಿನ ವಿಚಾರ ಮಾಧ್ಯಮಗಳಲ್ಲಿ ಬಂತು. ಆಕೆ ಪ್ರೊಬೇಷನರಿ ಇದ್ದಾಗ ಡಿಸಿ ಹಾಗೂ ಆಕೆಯ ಪತ್ನಿಯ ಸಂಬಂಧ ಹಾಳಾಗಿದೆ. ಈ ಬಗ್ಗೆ ನೀವೆ ತನಿಖೆ ನಡೆಸಿ ಎಂದು ಪ್ರಶ್ನೆಯನ್ನು ಹಾಕಿದ್ದಾರೆ.
ಕಾನೂನು ಹೋರಾಟ : ರೋಹಿಣಿ ಸಿಂಧೂರಿ
ಟಿವಿ, ಪತ್ರಿಕೆ ಮತ್ತು ವೆಬ್`ಸೈಟುಗಳಿಗೆ ಪತ್ರ ಕಳಿಸಿರೋ ರೋಹಿಣಿ ಸಿಂಧೂರಿ ರೂಪಾ ಅವರು ರಿಲೀಸ ಮಾಡಿರುವ ಫೋಟೊ ಪ್ರಕಟ ಮಾಡದಂತೆ ಮನವಿ ಮಾಡಿದ್ಧಾರೆ. ಫೋಟೋ ಹಂಚಿಕೆ ಮಾಡಿರುವುದು ಆಧಾರಹರಿತ ಆರೋಪವಾಗಿದೆ. ನನ್ನ ತೇಜೋವಧೆ ಮಾಡುತ್ತಿದ್ದಾರೆ. ರೂಪಾ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ನನ್ನ ವಿರುದ್ಧ ಸುಳ್ಳು, ವೈಯಕ್ತಿಕ ನಿಂದನೆ ಮಾಡುತ್ತಿದ್ದಾರೆ. ಯಾವಾಗಲೂ ಸುದ್ದಿಯಲ್ಲಿರಬೇಕೆಂದು ಅವರು ಬಯಸುತ್ತಾರೆ. ಹೀಗಾಗಿ, ಈ ರೀತಿ ಮಾಡುತ್ತಿದ್ದಾರೆ. ಅವರು ಮಾನಸಿಕ ಸ್ಥಿಮಿತ ಕಳೆದುಕೊಮಡಿದ್ದು, ಮಾನಸಿಕ ರೋಗಕ್ಕೆ ಚಿಕತ್ಸೆ ಪಡೆದುಕೊಳ್ಳಬೇಕು. ಈಗ ತೇಜೋಧೆ ಮಾಡಲು ಮುಂದಾಗಿರುವ ರೂಪಾ ಅವರ ವಿರುದ್ಧ ನಾನು ಕಾನೂನಾತ್ಮಕ ಹೋರಾಟ ಮಾಡುತ್ತೇನೆ ಎಂದು ಮಾಧ್ಯಮ ಪ್ರಕಟಣೆ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ರೂಪಾ ಅವರಿಗೆ ಇದೊಂದು ಅಭ್ಯಾಸವಾಗಿ ಬಿಟ್ಟಿದೆ. ಅವರು ದ್ವೇಷ ಸಾಧಿಸಲು ಹೊರಟಿರುವುದು ಸಮಾಜಕ್ಕೆ ದೊಡ್ಡ ಅಪಾಯಕಾರಿ ಆಗಿದೆ ರೂಪಾ ಅವರು ಇತ್ತೀಚಿನ ವರ್ಷಗಳಲ್ಲಿ ಎಲ್ಲಾ ಹುದ್ದೆಗಳಿಗೆ ಇದೇ ರೀತಿ ಆರೋಪ ಮಾಡ್ತಿದ್ದಾರೆ. ಒಳ್ಳೆ ಕೆಲಸಗಳ ಕಡೆ ಗಮನ ಕೊಟ್ಟರೆ ಒಳ್ಳೆಯದು. ಇನ್ನೊಬ್ಬರನ್ನ ಗುರಿಯಾಗಿಸಿಕೊಂಡು ತೇಜೋವಧೆ ಮಾಡುವುದು ನಿಲ್ಲಿಸಬೇಕು. ನನ್ನ ವಿರುದ್ದ ಯಾವುದೋ ವೈಯಕ್ತಿಕ ಹಗೆ ಇಟ್ಟುಕೊಂಡು ಸುಳ್ಳು ಅಭಿಯಾನ ನಡೆಸ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನನ್ನ ಫೋಟೋಗಳ ಸ್ಕ್ರೀನ್ ಶಾಟ್ ಹಾಕಿದ್ದಾರೆ. ಅದನ್ನ ಯಾವ ಅಧಿಕಾರಿಗೆ ಕಳಿಸಿದ್ದೀನಿ ಅಂತಾ ಬಹಿರಂಗ ಮಾಡಬೇಕು. ಇದರ ಬಗ್ಗೆ ತನಿಖೆ ಆಗ್ಬೇಕು ಅಂತಾ ನಾನೂ ಆಗ್ರಹ ಮಾಡ್ತೇನೆ. ರೂಪಾ ವಿರುದ್ಧ ಕಾನೂನು ಕ್ರಮ ಕೈಗೊಳ್ತೀನಿ ಎಂದು ಹೇಳಿದ್ದಾರೆ.
ಡಿ.ಕೆ.ರವಿ ಪತ್ನಿ ಕುಸುಮಾ ರವಿ ಎಂಟ್ರಿ:
ಇಡೀ ರಾಜ್ಯ ರೋಹಿಣಿ ಸಿಂಧೂರಿ ಅವರ ಹೆಸರನ್ನು ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಕೇಳಿದ್ದು, ಐಎಎಸ್ ಅಧಿಕಾರಿ ಡಿಕೆ ರವಿ ಅವರ ಆತ್ಮಹತ್ಯೆ ಸಂದರ್ಭದಲ್ಲಿ. ಈಗ ಡಿಕೆ ರವಿ ಅವರ ಪತ್ನಿ ಕುಸುಮಾ, ಐಪಿಎಸ್ ಹಾಗೂ ಐಎಎಸ್ ಅಧಿಕಾರಿಗಳ ನಡುವಿನ ‘ಚಿತ್ರ’ ರಂಗಕ್ಕೆ ಎಂಟ್ರಿಯಾಗಿದ್ದು, ರೋಹಿಣಿ ಸಿಂಧೂರಿಗೆ ಏಟು ನೀಡುವಂತ ಟ್ವೀಟ್ ಮಾಡಿದ್ದಾರೆ. ‘ಮಾಡಿದ ಕರ್ಮ ಯಾವುದೇ ಕಾರಣಕ್ಕೂ ಬಿಡೋದಿಲ್ಲ. ತಕ್ಷಣವೇ ಬರಬಹುದು ಅಥವಾ ನಿಧಾನವಾಗಿ ಬರಬಹುದು. ಆದರೆ, ಬರೋದಂತೂ ಖಂಡಿತ’ ಎಂದು ಟ್ವೀಟ್ ಮಾಡಿದ್ದಾರೆ. ಕುಸುಮಾ ರವಿ ಅವರೀಗ ತಂದೆಯ ಹೆಸರನ್ನೇ ಸರ್ ನೇಮ್ ಆಗಿ ಬಳಸುತ್ತಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕುಸುಮಾ ನಾವು ಅನುಭವಿಸಿದ್ದ ನೋವು, ಮಾಡದೇ ಇರುವ ತಪ್ಪಿಗೆ ಎದುರಿಸಿದ ಅವಮಾನ ನೆನಪಿನಲ್ಲಿವೆ. ಅವುಗಳನ್ನು ಮರೆಯುವಂತೆಯೇ ಇರಲ್ಲ ಎಂದಿರುವ ಕುಸುಮಾ, ರೂಪಾ ಅವರ ಹೋರಾಟಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆದರೆ ನಾನು ರೂಪಾ ಅವರ ಪರವೂ ಅಲ್ಲ, ವಿರುದ್ಧವೂ ಅಲ್ಲ. ರೋಹಿಣಿಯವರ ಮೇಲೆ ರೂಪಾ ಮಾಡಿರುವ ಆರೋಪಗಳ ತನಿಖೆ ಆಗಿ ಸತ್ಯ ಹೊರಬರಬೇಕು ಎಂದಿದ್ದಾರೆ ಕುಸುಮಾ.
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes.The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.