ಇದು ಡಿ.ರೂಪಾ ಮೌದ್ಗಿಲ್ ಮತ್ತು ರೋಹಿಣಿ ಸಿಂಧೂರಿ ಮಧ್ಯೆ ನಡೆದ ಆಡಿಯೋ ಸಂಭಾಷಣೆ ಅಲ್ಲ. ಆದರೆ ಆರ್.ಟಿ.ಐ.ಕಾರ್ಯಕರ್ತ ಗಂಗರಾಜು ಎಂಬುವವರ ಜೊತೆ ರೂಪಾ ಆಡಿದ ಮಾತುಕತೆ. ಬೇಕಾದ್ರೆ ರೆಕಾರ್ಡ್ ಮಾಡ್ಕೋ ಎಂದೇ ಮಾತನಾಡುವ ರೂಪಾ, ಗಂಗಾಧರ್ ಅವರಿಗೆ ಫೋನ್ ಮಾಡಿದ ಸಮಯ ಅಚ್ಚರಿ ಹುಟ್ಟಿಸೋದು ಸತ್ಯ. ಏಕೆಂದರೆ ರೂಪಾ ಅವರ ಪತಿಯ ಕಚೇರಿಗೆ ದೂರು ಕೊಡಲು ಹೋಗಿದ್ದ ಗಂಗರಾಜು, ದೂರು ಕೊಟ್ಟ ಕೇವಲ 5 ನಿಮಿಷಗಳಲ್ಲಿ ರೂಪಾ ಫೋನ್ ಮಾಡಿದ್ದರಂತೆ. ಜಸ್ಟ್ 5 ನಿಮಿಷಗಳಲ್ಲಿ ರೂಪಾಗೆ ಸುದ್ದಿ ಕೊಟ್ಟಿದ್ದು ಯಾರು? ಪತಿಯ ಕಚೇರಿಯಲ್ಲಿಯೇ ಬೇಹುಗಾರಿಕೆ ನಡೆಸುತ್ತಿದ್ದರಾ? ಪತಿಯ ಮೇಲೇಕೆ ರೂಪಾಗೆ ಅನುಮಾನ? ರೋಹಿಣಿ ಸಿಂಧೂರಿ ಹೆಸರು ಎಳೆದು ತಂದರೇಕೆ? ಕಂಪ್ಲೀಟ್ ಆಡಿಯೋ ನೋಡಿದರೆ ಗೊತ್ತಾಗುವ ಕಥೆಯೇ ಬೇರೆ..


ಗಂಗರಾಜು: ಹೇಗಿದ್ದೀರಾ ಮೇಡಂ, ಆರಾಮ್ ಇದ್ದೀರಾ?
ಡಿ. ರೂಪಾ: ನೀವು ಹೋರಾಟಗಾರರಾ, ಏನು ಅಂಥ
ಗಂಗರಾಜು: ನಾವು ಇಲ್ಲಿ ಸಾಮಾಜಿಕ ಹೋರಾಟಗಾರ ಮೇಡಂ
ಡಿ. ರೂಪಾ: ನೀವು ಪದೇಪದೆ ಎಷ್ಟೋ ಸಲ ರೋಹಿಣಿ ಸಿಂಧೂರಿಯಿಂದ ಕಂಪ್ಲೇಂಟ್ ತಗೊಂಡು ಹೋಗಿ ಸವರ್Éೀ ಆಫಿüೀಸ್ಗೆ ಕೊಟ್ಟಿದ್ದೀರಿ ಅಲ್ವಾ?
ಗಂಗರಾಜು: ಇಲ್ಲ..ಇಲ್ಲ.. ರೋಹಿಣಿ ಸಿಂಧೂರಿಯವರು ಮೈಸೂರಿನಲ್ಲಿದ್ದಾಗ ಅವರಿಗೆ ಕಂಪ್ಲೇಂಟ್ ಕೊಟ್ಟಿದ್ದೆ. ಡಿಸಿಯಾಗಿದ್ರು ಅವರು. ಅದಕ್ಕಿಂತ ಮುಂಚೆ ಸಂಬಂಧಿತ ಅಧಿಕಾರಿಗಳಿಗೆ ದೂರು ಕೊಡ್ತೀನಿ. ಸ್ಟೆಪ್ ಬೈ ಸ್ಟೆಪ್ ಹೋಗಿದ್ದೀನಿ
ಡಿ. ರೂಪಾ : ಯಾಕೆ ಆಯಮ್ಮ ಇದ್ದಾಗ ಮಾತ್ರ ಕೊಟ್ಟಿದ್ದೀರಾ? ಅದಕ್ಕಿಂತ ಮುಂಚೆ ಯಾಕೆ ಕೊಟ್ಟಿಲ್ಲ?
ಗಂಗರಾಜು : ಅದಕ್ಕಿಂತ ಮುಂಚೇನು ನಾವು ಕೊಟ್ಟಿದ್ದೀವಿ. ಮುಂಚೆ ಡಿಸಿಗೆ ಕೊಟ್ಟಿದ್ದೀವಿ
ಡಿ. ರೂಪಾ : ಬಟ್ ಅವ್ರದ್ದು ಮಾತ್ರ ಯಾಕೆ ದೊಡ್ಡ ನ್ಯೂಸ್ ಆಯ್ತು?
ಗಂಗರಾಜು : ಯಾರದು?
ಡಿ. ರೂಪಾ : ಸಿಂಧೂರಿಯದ್ದು
ಗಂಗರಾಜು : ಗೊತ್ತಿಲ್ಲ.. ಅದೇನು ಇಶ್ಯೂ ಆಯ್ತು ಅಂದ್ರೆ.. ನಿಮಗೆ ಗೊತ್ತುಂಟಲ್ಲ.. ಅದರೊಳಗೆ ರಾಜಕಾರಣಿಗಳು ಎಂಟ್ರಿ ಆದ್ರು. ರಾಜಕಾರಣಿಗಳದ್ದು ಪ್ರಕರಣಗಳು ಬಂದವು.. ಹಾಗಾಗಿ ಇಶ್ಯೂ ಆಯ್ತು ಅಷ್ಟೇ.. ಇಶ್ಯೂ ಆಗಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಯ್ತು..
ಡಿ. ರೂಪಾ : ಆಯ್ತು ಈವಾಗ ಬಗಾದಿ ಗೌತಮ್ ಇದ್ದಾರಲ್ಲ.. ಅವರಿಗೆ ಕೊಟ್ಟಿದ್ದೀರಾ ನೀವು?
ಗಂಗರಾಜು : ಹೌದು.. ಅವ್ರಿಗೂ ಕೊಡ್ತೀವಿ.. ಈಗಿರುವ ರಾಜೇಂದ್ರ ಅವರಿಗೂ ಕೊಡ್ತೀವಿ.. ಇಲ್ಲಿ ನನಗೆ ಯಾರು ಕ್ರಮ ತೆಗೆದುಕೊಳ್ಳಲಿಲ್ಲ ಅಂದಾಗ ಅನಿವಾರ್ಯವಾಗಿ, ಇಲ್ಲಿ ಸರ್ವೇ ಇಲಾಖೆಗೂ ಕೊಡ್ತೀನಿ.. ಸರ್ವೇ ಇಲಾಖೆ, ಬಗಾದಿ ಗೌತಮ್ ಯಾರೂ ಕ್ರಮ ತೆಗೆದುಕೊಳ್ಳಲಿಲ್ಲ. ರೀಜನ್ ಕಮಿಷನರ್ ಕೂಡ ಕ್ರಮ ತೆಗೆದುಕೊಳ್ಳಲಿಲ್ಲ ಅಂದ್ರೆ ನಾವು ಎಲ್ಲಿಗೆ ಹೋಗ್ಬೇಕು ಸ್ಟೆಪ್ ಬೈ ಸ್ಟೆಪ್ ಹೋಗಲೇ ಬೇಕಾಗುತ್ತಲ್ವಾ?
ಡಿ. ರೂಪಾ: ನಿಮಗೆ ಕೆಲವು ವಿಷಯ ಹೇಳ್ತೀನಿ.. ಅದಕ್ಕೆ ರೆಸ್ಪಾನ್ಸ್ ಮಾಡಿ ನನಗೆ
ಡಿ. ರೂಪಾ: ಈಗ ನೀವು ಅಷ್ಟೆಲ್ಲ ಹುಡುಕಿ ಸಾರಾ ಮಹೇಶ್ ವಿರುದ್ಧ ಕಂಪ್ಲೇಂಟ್ ನೀಡಿದ್ರಿ. ಈಗ ಆಯಮ್ಮ ಆತನ ಹಿಂದೆ ಹೋಗಿ ಪದೇಪದೆ ಬೆಗ್ ಮಾಡಿ.. ನನ್ನ ಮೇಲೆ ಹಾಕಿರೋ ಕೇಸ್ ತೆಗೆದುಬಿಡಿ ಅಂತಾ ಕೇಳಿರೋದು ಸರೀನಾ?
ಗಂಗರಾಜು : ಸಿಂಧೂರಿಯವ್ರು ಏನೇ ತಪ್ಪು ಮಾಡಿರಲಿ ಮೇಡಂ.. ಅವರ ತಪ್ಪನ್ನ ನಾವು ಸಮರ್ಥಿಸಿಕೊಳ್ಳುವುದಿಲ್ಲ. ಅವರು ತಪ್ಪು ಮಾಡಿದ್ರೆ ಶಿಕ್ಷೆ ಆಗಲಿ. ನಾನು ಇದನ್ನ ಅವತ್ತು ಹೇಳಿದ್ದೆ.. ಇವತ್ತು ಹೇಳ್ತಿದ್ದೀನಿ.. ಅವರನ್ನ ಬಚಾವ್ ಮಾಡಬೇಕು ಅನ್ನೋ ಉದ್ದೇಶ ಏನಿಲ್ಲ..
ಡಿ. ರೂಪಾ: ಆಕೆ ಎಚ್ಡಿಂ ಕುಮಾರಸ್ವಾಮಿ, ಎಚ್ಡಿೆ ದೇವೇಗೌಡ ಅವರ ಬಳಿ ಎಲ್ಲ ಹೋಗಿ ಕೇಳಿದ್ದಾರೆ. ಆದ್ರೂ ಸಾರಾ ಮಹೇಶ್ ಕೇಸ್ ವಾಪಸ್ ತೆಗೆದುಕೊಂಡಿಲ್ಲ. ಆಮೇಲೆ ಸ್ಪೀಕರ್ ಕಾಗೇರಿ ಹತ್ತಿರ ಹೋಗಿದ್ದಾರೆ, ಅವ್ರು ಒಂದು ಮಾತು ಹೇಳಿದ್ದಾರೆ. ಆದ್ರೆ ವಾಪಸ್ ತಗೊಂಡಿಲ್ಲ.
ಡಿ. ರೂಪಾ: ಕೆಲವು ಐಎಎಸ್ ಆಫಿüೀಸರ್ಸ್ ಮೂಲಕ ಹೇಳಿಸಿದ್ದಾರೆ. ರಮಣರೆಡ್ಡಿ ಮೂಲಕ ಹೇಳಿಸಿದ್ದಾರೆ. ಮಣಿವಣ್ಣನ್ ಅಂತೂ ಅವರ ಹತ್ತಿರ ಹೋಗಿ ಒಂದು ಸಾರಿ ಸಿಂಧೂರಿಯನ್ನ ಭೇಟಿಯಾಗುವಂತೆ ಕೇಳಿಕೊಂಡಿದ್ದಾರೆ. ಕೊನೆಗೆ ಬೆಳಗಾವಿಯಲ್ಲಿ ಮಣಿವಣ್ಣನ್ ಬೇಡಿಕೊಂಡ ಮೇಲೆ ಅವರು ಈಕೆಯನ್ನ ಭೇಟಿಯಾಗಿದ್ದಾರೆ.
ಡಿ. ರೂಪಾ: ಆಗ ಈಕೆ ಹೇಳಿದ್ದಾಳೆ.. ನಾವು ಏನು ಮಾಡೋದಕ್ಕೂ ತಯಾರಿದ್ದೇನೆ. ಕೇಸ್ ವಾಪಸ್ ತಗೊಳ್ಳಿ ಅಂತಾ.. ಆದ್ರೂ ಕೇಸ್ ಹಿಂಪಡೆದುಕೊಂಡಿಲ್ಲ. ಅಲ್ಲ ಈಕೆ ಸರಿಯಿದ್ರೆ ಕೇಸ್ ವಾಪಸ್ ತಗೊಳ್ಳಿ ಅಂತಾ ಯಾಕೆ ಹೋಗಬೇಕು?
ಡಿ. ರೂಪಾ: ಡಿಸಿ ಮನೆಯಲ್ಲಿದ್ದ ಸಾಮಾನುಗಳು ಎಲ್ಲಿ ಹೋದವು?
ಗಂಗರಾಜು: ಮೇಡಂ ಅದರ ಬಗ್ಗೆ ತನಿಖೆಯಾಗಲಿ.. ಸರ್ಕಾರ ಒತ್ತಡ ಹಾಕಲಿ.. ಅದರ ಬಗ್ಗೆ ಮಾಹಿತಿಯಿದ್ರೆ ನಾನು ಕೂಡ ಕೇಳ್ತಿನಿ.. ಅದ್ರ ಬಗ್ಗೆ ತನಿಖೆ ನಡೆಯಲಿ.
ಗಂಗರಾಜು: ಇವರಿಬ್ರೂ ಕಾಂಪ್ರಮೈಸ್ ಆದ್ರೆ ಅಲ್ಲಿ ಮಾಡಿದ ಅಕ್ರಮ ಎಲ್ಲ ಮುಚ್ಚಿಹೋಗುತ್ತಾ? ನಾನು ಬಿಡಲ್ಲ..
ಡಿ. ರೂಪಾ: ಅವಳದ್ದು ಕೆಲವು ಚಾಟ್ ಇದೆ.. ಆಕೆ ಚಾಟ್ ಮಾಡಿದ್ದು ನನಗೆ ಸಿಕ್ಕಿದೆ. ಮನೆ ಕಟ್ಟಿಸ್ತಿದ್ದಾರೆ ಜಾಲಹಳ್ಳಿಯಲ್ಲಿ, ಕಟ್ಟಿಸಿಕೊಳ್ಳಲಿ ಪರವಾಗಿಲ್ಲ.. ಒಂಡು ಕಡೆ ಚಾಟ್ನಿಲ್ಲಿ ಹಾಕ್ತಾರೆ. ಡೋರ್ ಇದಿಯಲ್ಲ ಅದರ ಹಿಂಜ್ಗೆ್ 6 ಲಕ್ಷ ಹಾಕಿದ್ದೀನಿ.. ಆದ್ರೂ ಅಸಹ್ಯ ಕಾಣಿಸ್ತಿದೆ… ಒಂದು ಡೋರ್ ಹಿಂಜ್ಗೆಳ 6 ಲಕ್ಷ ಅಂದ್ರೆ ದುಡ್ಡು ಎಲ್ಲಿಂದ ಬರ್ತಿದೆ?
ಗಂಗರಾಜು: ದುಡ್ಡು ಎಲ್ಲಿಂದ ಬರ್ತಿದೆ?
ಡಿ. ರೂಪಾ: ಆಮೇಲೆ ಇನ್ನೊಂದು ಕಡೆ ಹಾಕ್ತಾರೆ ಜರ್ಮನಿಯಿಂದ 26 ಲಕ್ಷಕ್ಕೆ ಕಿಚನ್ ಅಪ್ಲೈಯೆನ್ಸಸ್ ತರಿಸ್ತಾರೆ.. ಅದಕ್ಕೆ ಕೇಳ್ತಾರೆ ನಮ್ಮನೆಯವರನ್ನ.. ಇದಕ್ಕೆ ಡ್ಯೂಟಿ ಫ್ರೀ ಹೆಂಗ್ ಮಾಡಿಸೋದು.. ನನ್ನ ಬ್ಯಾಚ್ಮೇ ಟ್ ಇದ್ದಾನೆ.. ಫಾರಿನ್ ಸರ್ವಿಸ್ ಆಫಿüೀಸರ್.. ಅವನೇನಾದ್ರೋ ಮಾಡ್ತಾನೇನೋ.. ಅವನ ವೈಫ್ ಜೊತೆ ಮಾತಾಡ್ಬೇಕಾಗುತ್ತೆ.. ಆಕೆ ಇರೋದು ಅಲ್ಲಿ. ಇಲ್ಲಿಗೆ ಬಂದ್ಮೇಲೆ ವಾರಂಟಿ ಸಿಗುತ್ತಾ.. ಹೀಗೆ 26 ಲಕ್ಷದ ಕಿಚನ್ ಅಪ್ಲೈಯನ್ಸಸ್ ಅದು..
ಗಂಗರಾಜು: ಹೂಂ ನೋಡಿ.. ಇದೆಲ್ಲಾ ಎಲ್ಲಿಂದ ಬಂತು ದುಡ್ಡು..?
ಡಿ. ರೂಪಾ: 6 ಲಕ್ಷದ ಹಿಂಜ್, 26 ಲಕ್ಷದ ಕಿಚನ್ ಅಪ್ಲೈಯನ್ಸಸ್.. ಫರ್ನಿಚರ್ ಅಂತೂ ಕೋಟಿ ಕೋಟಿ ಇದೆ. ಅದನ್ನೆಲ್ಲಾ ನಾನು ಸರಿಯಾಗಿ ಓದಿಲ್ಲ. ನಾನು ನಿಮಗೂ ಕಳುಹಿಸ್ತೀನಿ ಗಂಗರಾಜು.. ನೀವೂ ನೋಡ್ಕೊಳ್ಳಿ.. ನೀವು ಯಾರ್ ಪರ ನಿಂತಿದ್ದೀರಿ ಡಿಸೈಡ್ ಮಾಡಿ..
ಗಂಗರಾಜು: ಕಾಂಪ್ರಮೈಸ್ ಆದ್ವಿ ನಾವು ಅಂತಾ ಅವತ್ತು ಮೈಸೂರು ಎಂಎಲ್ಸಿತ ನಂಜೇಗೌಡ್ರು ಹೇಳಿದ್ರು. ನಾನ್ ಅವತ್ತು ಹೇಳಿದೆ ಅವರು ಕಾಂಪ್ರಮೈಸ್ ಆದ ತಕ್ಷಣ ನಾನು ನನ್ನ ಹೋರಾಟ ಬಿಡಲ್ಲ. ಹಂಗಾದ್ರೆ ನೀವು ಏನ್ ಆಪಾದನೆ ಮಾಡಿದ್ರಿ, ಅದನ್ನೆಲ್ಲಾ ಬಿಟ್ಬಿಡ್ತಿದ್ದೀರಾ ಅಂತಾ ಕೇಳಿದೆ. ಇಲ್ಲಾ ರಾಜಿ ಮಾಡಿಸಿದೆ.. ಸಾರಾ ಮಹೇಶ್ ಅವ್ರಿಗೂ ಸಿಂಧೂರಿ ಅವ್ರಿಗೂ ರಾಜಿ ಮಾಡಿಸಿದೆ ಅಂದ್ರು.. ಆಮೇಲೆ ನನ್ನ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಅಂತಾ ಹೇಳಿದೆ.
ಡಿ. ರೂಪಾ: ಆಕೆ ನೀವು ತಿಳಿದಷ್ಟು ಸಾಚಾ ಇಲ್ಲ.. ಆಕೆ ತೆಲುಗು.. ಸರಿಯಾಗಿ ಕನ್ನಡ ಮಾತಾಡಾಕೆ ಬರಲ್ಲ. ಆದ್ರೆ ಅವರ ಹಸ್ಬೆಂಡ್ ಅಣ್ಣನನ್ನ ಪಾಲಿಟಿಕ್ಸ್ಗೆಆ ತರೋಕೆ ನೋಡ್ತಿದ್ದಾರೆ.
ಡಿ. ರೂಪಾ: ಇಂಥ ಡೋಂಗಿಗಳನ್ನ.. ಈ ಥರದ ಊಸರವಳ್ಳಿಗಳನ್ನ ನೀವು ಯಾಕೆ ಸಪೆÇೀರ್ಟ್ ಮಾಡ್ತೀರಿ..?
ಗಂಗರಾಜು: ಸಾರಿ ಮೇಡಮ್.. ಆಯಮ್ಮ ಏನೇ ತಪ್ಪು ಮಾಡಿದ್ರೂ ಸಪೆÇೀರ್ಟ್ ಮಾಡ್ತಿದ್ದೀವಿ ಅಂತಾ ತಿಳ್ಕೊಳ್ಬೇಡಿ.. ದಯಮಾಡಿ.. ಸಿಂಧೂರಿ ವಿರುದ್ಧ ಏನಾದ್ರೂ ದಾಖಲೆ ಸಿಕ್ಕಿದ್ರೆ ನಾನು ಹೋರಾಟ ಮಾಡ್ತೀನಿ.. ನಾನ್ ಖಂಡಿತಾ ಮಾತಾಡ್ತೀನಿ. ನಾನು ಅವರನ್ನ ಸಪೆÇೀರ್ಟ್ ಮಾಡ್ತೀದ್ದೀನಿ ಅಂದ್ಕೋಬೇಡಿ. ಮೈಸೂರಲ್ಲಿ ಭೂ ಅಕ್ರಮ ಯಥೇಚ್ಛವಾಗಿ ನಡಿತಿರೋದನ್ನ ವಿರೋಧ ಮಾಡ್ತಿದ್ದೀನಿ. ನಾನು ಯಾರನ್ನೂ ಸಪೆÇೀರ್ಟ್ ಮಾಡ್ತಿಲ್ಲ. ಇಲ್ಲಿದ್ದಾಗ ಯಾಕ್ ಸಪೆÇೀರ್ಟ್ ಮಾಡಿದ್ದು ಅಂದ್ರೆ.. ಒಬ್ಬ ಅಧಿಕಾರಿ ತೇಜೋವಧೆ ಮಾಡಿದ ಒಂದು ಉದ್ದೇಶಕ್ಕೆ ಸಪೆÇೀರ್ಟ್ ಮಾಡಿದ್ದು..
ಡಿ. ರೂಪಾ: ನಮ್ಮನೆಯವರು ಲ್ಯಾಂಡ್ ರೆಕಾರ್ಡ್ ಡಿಪಾರ್ಟ್ಮೆಂ್ಟ್ನಡಲ್ಲಿ ಇರೋದು.. ಅವರ ಫ್ಯಾಮಿಲಿ ಬ್ಯುಸಿನೆಸ್ ರಿಯಲ್ ಎಸ್ಟೇಟ್.. ನಿಮಗೆ ಗೊತ್ತಿರ್ಬೇಕು..
ಗಂಗರಾಜು: ಹೌದು.. ಹೌದು,..
ಡಿ. ರೂಪಾ: ನನ್ನ ಹತ್ರ ಚಾಟ್ ಡಾಕ್ಯುಮೆಂಟ್ ಇದೆ.. ಅವರು ಕಬಿನಿಯಲ್ಲಿ ಒಂದು 4 ಪಹಣಿ ಹಾಕಿದ್ದಾರೆ.. ಹಾಕ್ಬಿಟ್ಟು ಕೇಳ್ತಾರೆ ಈ ಲ್ಯಾಂಡ್ ತಗೋಬಹುದಾ..? ಈ ಲ್ಯಾಂಡ್ ಸರಿ ಇದಿಯಾ ಅಂತಾ ಕೇಳ್ತಾರೆ.. ಇನ್ನೊಂದ್ ಕಡೆ ಅದ್ಯಾವುದೋ ಗುಜ್ಜಮ್ಮ ಅನ್ನೋದು.. ನೋಡಿ ಇದು ಅವ್ರದ್ದು.. ಇವ್ರದ್ದು.. ನಮ್ ರಿಲೇಟಿವ್ದು್.. ಪೆÇೀಡಿ ಆಗ್ಬೇಕು.. ತುಂಬಾ ಜನ್ರ ಹೆಸರಿದೆ ಮಾಡ್ಕೊಡಿ.. ನೋಡಿ ಅಂತಾ ಅದನ್ನ ಕಳುಹಿಸಿದ್ದಾರೆ.. ಈ ಥರ ಸುಮಾರು ಲ್ಯಾಂಡ್.. ಇದನ್ನ ತಗೋಬಹುದಾ..? ಅದನ್ನ ತಗೋಬಹುದಾ..? ಅದ್ರ ಮೇಲೆ ಲೋನ್ ಇದ್ಯಾ..? ಇದು ಇಸಿ ಸರಿ ಇದಿಯಾ..? ಡಿಸ್ಪ್ಯೂ ಟ್ ಲ್ಯಾಂಡ್ಗಕಳನ್ನೂ ತಗೊಂಡಿದ್ದಾರೆ ಅವ್ರು. ಪವರ್ ಇಟ್ಕೊಂಡು ಏನೋ ಒಂದು ಮಾಡ್ಕೋಬಹುದು ಅನ್ನೋ ದೃಷ್ಟಿಯಲ್ಲಿ..
ಡಿ. ರೂಪಾ: ಇಂಥ ಸಾಕಷ್ಟು ಇನ್ಫಾರ್ಮೇಷನ್ ತಗೊಂಡಿದ್ದಾಳೆ.. ಇದು ಸರೀನಾ?
ಗಂಗರಾಜು: ತಪ್ಪು ಮೇಡಂ ಅದು.. ಕಾನೂನು ಚೌಕಟ್ಟಿನಲ್ಲಿ ತಗೋಬೇಕು
ಡಿ. ರೂಪಾ: ನಾನು ಅದ್ಕೆ ಹೇಳಿದ್ದೀನಿ.. ನಮ್ಮನೆಯವ್ರನ್ನ ಅಲ್ಲಿಂದ ಟ್ರಾನ್ಸ್ಫ.ರ್ ಮಾಡಿ ಅಂತಾ.. ಅವ್ರಿಗೆ ಮನೆ ಕಡೆ ಗಮನ ಕಡಿಮೆ ಆಗಿದೆ..
ಗಂಗರಾಜು: ಬೇಡ ಮೇಡಂ.. ಒಳ್ಳೆ ಹೆಸ್ರು ಮಾಡ್ತಿದ್ದಾರೆ.
ಡಿ. ರೂಪಾ: ನಾನು ಆಗಲೇ ಹೇಳಾಗಿದೆ. ಫ್ಯಾಮಿಲಿಗೆ ಏನು ಯೂಸ್ ಆಗ್ತಿಲ್ಲ. ಅವ್ರು ಮನೆ ಕಡೆ ಗಮನಾನೇ ಕೊಡ್ತಿಲ್ಲ. ಬರೀ ಇಂಥವ್ರ ಕೆಲಸ ಮಾಡಿಕೊಡ್ತಿದ್ದಾರೆ.
ಡಿ. ರೂಪಾ: ನೋಡಿ.. ನನಗೇನು ಇಂಪ್ರೆಶನ್ ಬಂತು.. ನಿಮ್ಮದು ಒರಿಜಿನಲ್ ಕಂಪ್ಲೇಂಟ್ ಇರಲಿಲ್ಲ.. ಆಕೆ ನಿಮ್ಮನ್ನ ಕರೆದು ನಿಮ್ಮ ಮೂಲಕ ಕಂಪ್ಲೇಂಟ್ ಕೊಡಿಸಿದ್ದು..
ಗಂಗರಾಜು: ಇಲ್ಲ..ಇಲ್ಲ ಮೇಡಂ, ನಾನು ಇಲ್ಲಿ ಒರಿಜಿನಲ್ ಕಂಪ್ಲೇಂಟ್ ಕೊಟ್ಟ ಮೇಲೆ ಮೈಸೂರಿನಲ್ಲಿ ತನಿಖೆನೇ ಮಾಡಲಿಲ್ಲ. ಆರ್ಸಿರ ಕಚೇರಿಯಲ್ಲಿ ಜಗಳ ಮಾಡಿದೆ.
ಡಿ. ರೂಪಾ: ಸರ್ವೇ ಡಿಪಾರ್ಟ್ಮೆಂನಟ್ಗೆುಲ್ಲ ಕಳಿಸಿದ್ರಲ್ಲಾರೀ..
ಗಂಗರಾಜು: ಮೇಡಂ ನಾನು ಇಲ್ಲಿ ಆರ್ಸಿೆ ಕಚೇರಿಗೆ ಹೋಗಿ ಗಲಾಟೆ ಮಾಡಿದೆ. ಯಾಕೆ ಇದನ್ನ ತನಿಖೆ ಮಾಡ್ತಿಲ್ಲ. ಅವರು ದೂರು ಕೊಟ್ಟರೆ 24 ಗಂಟೆಯಲ್ಲಿ ತನಿಖೆ ಮಾಡಿ ಕ್ಲೀನ್ಚಿ ಟ್ ನೀಡಿದ್ರಿ. ನಾನು ಕೊಟ್ಟ ದೂರನ್ನ ಯಾಕೆ ತನಿಖೆ ಮಾಡ್ತಿಲ್ಲ ಅಂತಾ ಒತ್ತಾಯ ಮಾಡಿದ್ರೂ ಯಾರು ತನಿಖೆ ಮಾಡಲಿಲ್ಲ. ಎಲ್ಲ ಕೈ ಬಿಟ್ಟರು ನನಗೆ.. ಮೈಸೂರಲ್ಲಿ ಎಲ್ಲ ಸರ್ವೇ ಆಫಿüೀಸರ್ಗಿಳು ಅವರ ಕೈಗೊಂಬೆಯಾಗಿ ಕೆಲಸ ಮಾಡ್ತಾರೆ.
ಗಂಗರಾಜು: ಎಲ್ಲ ಅಧಿಕಾರಿಗಳು ಅವರಿಗೆ ಹೆದರುತ್ತಾರೆ. ಹಾಗಿದ್ದಾಗ ನಾನು ಇನ್ನೆಲ್ಲಿಗೆ ಹೋಗಲಿ ಹೇಳಿ ಮೇಡಂ.
ಡಿ. ರೂಪಾ: ಈಗ ನಾನು ಈ ಚಾಟ್ಗೆಳಲ್ಲಿರುವ ಕೆಲವು ಅಂಶಗಳನ್ನ ನಿಮಗೆ ಹೇಳಿದ್ರೆ ನೀವು ಮತ್ತೆ ಆಕೆಗೆ ಅಲರ್ಟ್ ಮಾಡ್ತೀರಿ.
ಗಂಗರಾಜು: ಅಲರ್ಟ್, ಗಿಲರ್ಟ್ ಏನಿಲ್ಲ.. ನನ್ನನ್ನ ದಯವಿಟ್ಟು ಆ ರೀತಿ ನೋಡಲೇಬೇಡಿ.
ಗಂಗರಾಜು: ಖಂಡಿತ ಇಲ್ಲ ಮೇಡಂ.. ಅವರ ಜೊತೆ ಮಾತು ಇಲ್ಲ.. ಬೆಂಗಳೂರಿಗೆ ಬಂದಾಗ ಒಂದು ಸಾರಿ ಭೇಟಿ ಮಾಡಿದ್ದೀನಿ.. ಅದು ಬಿಟ್ರೆ ಮತ್ತೆ ನಾನು ಹೋಗಿಲ್ಲ. ಇನ್ನು ನಮ್ಮ ಸಾಹೇಬ್ರನ್ನ ಭೇಟಿ ಮಾಡಿದ್ದೀನಿ ಎರಡು ಸಾರಿ ಬೆಂಗಳೂರಿಗೆ ಬಂದಾಗ.. ಆದ್ರೆ ಆಯಮ್ಮನ್ನ ಭೇಟಿ ಮಾಡೋಕೆ ಹೋಗಿಲ್ಲ.
ಡಿ. ರೂಪಾ: ಆಯ್ತು.. ಅವರ್ಯಾಕೆ ಕಾಂಪ್ರಮೈಸ್ಗೆಎ ಟ್ರೈ ಮಾಡ್ತಿದ್ದಾರೆ…ಅದು ಹೇಳಿ..
ಗಂಗರಾಜು: ನಾನೂ ಕೂಡ ಕೇಳಿದ್ದೀನಿ.. ಕಾಂಪ್ರಮೈಸ್ ಆಗಿದ್ದಾರೆ ಅಂತಾ ಸುದ್ದಿ ಬರ್ತಿದ್ದ ಹಾಗೆ ಅವರಿಗೆ ವೀಡಿಯೋ ಹಾಕಿ ಇದು ಏನಿದು? ಇದು ನಿಜಾನಾ ಅಂತಾ ಕೇಳಿದ್ದೀನಿ ಮೇಡಂ.. ನಿಮಗೆ ಅದರ ಸ್ಕ್ರೀನ್ ಶಾಟ್ ಕಳಿಸ್ತೀನಿ..
ಗಂಗರಾಜು: ಇಲ್ಲ ನಾನು ಹೋಗಿಲ್ಲ ಅಂತಾ ಹೇಳಿದ್ರು. ಮತ್ತೆ ನನಗೊಂದು ಲೆಟರ್ ತೋರಿಸಿದ್ರು.. ಇವರೊಂದು ಲೆಟರ್ ಡ್ರಾಫ್ಟ್ ಮಾಡಿಕೊಂಡು ಹೋಗಿದ್ರಂತೆ.. ಆ ಕಾಪಿ ನಿಮಗೆ ಕಳಿಸಿಕೊಡ್ತೀನಿ.. ಸಾರಾ ಮಹೇಶ್ಗೆಾ ಲೆಟರ್ ಡ್ರಾಫ್ಟ್ ಮಾಡಿಕೊಂಡು ಹೋಗಿ.. ಇಲ್ಲಿವರೆಗೆ ನಾನು ಮಾಡಿರೋ ಆರೋಪ ಎಲ್ಲ ಸುಳ್ಳು.. ಚೌಟ್ರಿ ಕಾನೂನು ಬದ್ಧವಾಗಿ ಕಟ್ಟಿದ್ದಾರೆ.. ಏನೂ ಸಮಸ್ಯೆ ಇಲ್ಲ.. ಒತ್ತುವರಿಯಾಗಿಲ್ಲ.. ನಾನು ಹಿಂದೆ ಮಾಡಿದ ಆಪಾದನೆ ಎಲ್ಲ ಸುಳ್ಳು ಅಂತಾ ಒಂದು ಸಹಿ ಹಾಕಿ ಕೊಡಲು ಕೇಳಿದ್ರಂತೆ.. ಆ ಲೆಟರ್ ಕೂಡ ಕೊಟ್ಟಿದ್ದಾರೆ.
ಡಿ. ರೂಪಾ: ಯಾಕೆ ಅನ್ಕೊಳ್ಳಬಾರದು.. ಎಲ್ಲ ಕಣ್ಣಿಗೆ ಕಾಣಿಸುತ್ತಿದೆ ಅಲ್ವಾ
ಗಂಗರಾಜು: ಸಾಹೇಬ್ರು ಒಳ್ಳೆಯವರಿದ್ದಾರೆ.. ಅವರು ಖಂಡಿತ ಉನ್ನತ ಹುದ್ದೆಗೆ ಬರಬೇಕು.
ಡಿ. ರೂಪಾ: ನೀವು ಪದೇಪದೆ ಅಲ್ಲಿಗೆ ಹೋಗಬೇಡಿ.. ನಾನು ಅವರನ್ನ ಅಲ್ಲಿ ಇರೋದಕ್ಕೆ ಬಿಡೋದಿಲ್ಲ. ನಾನೇ ರಿಕ್ವೆಸ್ಟ್ ಮಾಡಿದ್ದೀನಿ.
ಗಂಗರಾಜು: ಬೇಡ ಮೇಡಂ.. ಯಾಕೆ ಮೇಡಂ.. ಒಳ್ಳೆ ಕೆಲಸ ಮಾಡೋ ಆಫಿüೀಸರ್ ಇರಲಿ ಬಿಡಿ ಮೇಡಂ..
ಡಿ. ರೂಪಾ: ಈ ಯಮ್ಮ ಪದೇಪದೆ ಹೋಗೋದು..
ಗಂಗರಾಜು: ಇಂಥದ್ದನ್ನ ಕಂಟ್ರೋಲ್ ಮಾಡಲಿ.. ಇಂಥದದ್ದನ್ನೆಲ್ಲ ಅಲೋ ಮಾಡಬೇಡಿ ಅಂತಾ ಹೇಳಿ..
ಡಿ. ರೂಪಾ: ಅಯ್ಯೋ ಆಯಮ್ಮ ಕ್ಯಾನ್ಸರ್ ಇದ್ದ ಹಾಗೆ.. ಎಲ್ಲಿ ಬಿಡ್ತಾಳೆ.. ಎಲ್ಲರನ್ನೂ ಬುಟ್ಟಿಗೆ ಹಾಕಿಕೊಳ್ತಾಳೆ. ಡಿಕೆ ರವಿ ವಿಷಯದಲ್ಲಿ ಆಗಿದ್ದು ಹಾಗೆನೇ…..
ಗಂಗರಾಜು: ಕ್ಯಾನ್ಸರ್ಗೂ್ ಟ್ರೀಟ್ಮೆಂ್ಟ್ ಇದೆ ಮೇಡಂ.. ಕೊಡೋಣ ಟ್ರೀಟ್ಮೆಂ.ಟ್.. ನಾನು ಸಾಹೇಬ್ರ ಹತ್ತಿರ ಮಾತಾಡ್ತೀನಿ.. ನನ್ನ ಜೊತೆನೂ ತುಂಬಾ ಕ್ಲೋಸ್ ಆಗಿ ಮಾತಾಡ್ತಾರೆ ಸಾಹೇಬ್ರು..
ಡಿ. ರೂಪಾ: ಅಯ್ಯೋ ಬಿಡಿ.. ಅವೆಲ್ಲ ಆಗಲ್ಲ.. 8 ವರ್ಷದಿಂದ ನೊಡ್ತಾ ಇದ್ದೀನಿ.. ಈಯಮ್ಮ ಅವರ ಹಿಂದೆನೇ ಬಿದ್ದಿದ್ದಾಳೆ.. ಎಲ್ಲ ಬರೆಸುಕೊಳ್ತಾಳೆ.. ಲೋಕಾಯುಕ್ತ ಕೇಸ್ ರಿಪ್ಲೈಗೂ ಇವರ ಹತ್ತಿರ ಮಾಡಿಸ್ಕೊತಾಳೆ



