ಹಾಸನದ ಯುದ್ಧ ಮುಗಿಯುವುದಿಲ್ಲ. ಮುಗಿಯುವ ಲಕ್ಷಣಗಳೂ ಇಲ್ಲ. ಪ್ರೀತಮ್ ಗೌಡ-ರೇವಣ್ಣ ಜಟಾಪಟಿಯೊಂದಿಗೆ ಶುರುವಾದ ಸಮರ, ಭವಾನಿ ರೇವಣ್ಣ ಅವರ ಎಂಟ್ರಿಯೊಂದಿಗೆ ಹೊಸ ಮಜಲು ಪ್ರವೇಶಿಸಿದೆ. ಶಿವರಾತ್ರಿ, ಯುಗಾದಿ ಕಳೆದು ಚುನಾವಣೆಗೆ ದಿನಗಣನೆ ಶುರುವಾಗಿರುವ ಹೊತ್ತಿನಲ್ಲೂ ರೇವಣ್ಣ-ಪ್ರೀತಮ್ ಗೌಡ ಸಮರ ಮುಗಿದಿಲ್ಲ. ನಿರೀಕ್ಷೆಯಂತೆಯೇ ಜೋರಾಗಿದೆ.
ಅವರು ಉದ್ಘಾಟನೆ, ಶಂಕುಸ್ಥಾಪನೆ ಮಾಡಲಿ ಅವರ ಕಲ್ಲನ್ನು ನದಿಗೆ ಎಸೆಯುತ್ತೇವೆ ಎಂಬ ಮಾಜಿ ಸಚಿವ ರೇವಣ್ಣ ಹೇಳಿಕೆಗೆ ಪ್ರೀತಂಗೌಡ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರು ಮಾಡಿದ್ದನ್ನ ನಾನು, ನಾನು ಮಾಡಿದ್ದನ್ನ ಅವರು ನದಿಗೆ ಎಸೆಯಬಾರದು. ಅದು ಸಭ್ಯ ವರ್ತನೆ ಅಲ್ಲ, ಬಹುಶಃ ರೇವಣ್ಣ ಅವರು ಚುನಾವಣೆ ಒತ್ತಡ, ರಾಜಕೀಯ ಒತ್ತಡದಿಂದ ಮಾತನಾಡಿರಬಹುದು ಮೂರು ಬಾರಿ ನಾಲ್ಕು ಬಾರಿ ಸಚಿವರು, ಐದು ಬಾರಿ ಶಾಸಕರಾಗಿರುವವರು. ಯಾವುದೊ ಒತ್ತಡದಲ್ಲಿ ಮಾತಾಡಿರಬಹುದು, ಬಾಯಿತಪ್ಪಿ ಹಾಗೆ ಮಾತಾಡಿರಬಹುದು ಎಂದು ಪ್ರೀತಂಗೌಡ ಎಂದು ಸೌಮ್ಯ ಮಾತುಗಳಲ್ಲೇ ಪ್ರೀತಮ್ ಗೌಡ ತಿರುಗೇಟು ಕೊಟ್ಟಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರು ಶಂಕುಸ್ಥಾಪನೆ ಮಾಡಿದ ವಿಮಾನ ನಿಲ್ದಾಣ ಯೋಜನೆಗೆ ಮತ್ತೆ ಅಡಿಗಲ್ಲು ಹಾಕಿರೊ ವಿಚಾರವಾಗಿ ವಿಮಾನ ನಿಲ್ದಾಣಕ್ಕೆ ಅನುದಾನ ಕೊಟ್ಟಿದ್ದು ಯಡಿಯೂರಪ್ಪ ಅವರು. ಹಾಸನಕ್ಕೆ ಬಂದ ವೇಳೆಯೇ ಇನ್ನೂರು ಕೋಟಿ ಅನುದಾನ ಕೊಡೊದಾಗಿ ಹೇಳಿದ್ರು. ಅದರಂತೆ ಹಣ ಕೊಟ್ಟು ಟೆಂಡರ್ ಕರೆದು ಕೆಲಸ ಆರಂಭ ಆಗಿ ಈಗ ಗುದ್ದಲಿ ಪೂಜೆ ಆಗಿದೆ. ಹಣ ಯಾವತ್ತು ಬಿಡುಗಡೆ ಆಗಿದೆ, ಯಾವತ್ತು ಟೆಂಡರ್ ಕರೆಯಲಾಗಿದೆ, ಯಾವಾಗ ಕಾಮಗಾರಿ ಆರಂಭವಾಗಿದೆ ಎಂದು ಪರಿಶೀಲಿಸಿ ಎಂದು ರೇವಣ್ಣ ಆರೋಪಕ್ಕೆ ತಿರುಗೇಟನ್ನೂ ಕೊಟ್ಟರು.
ರೇವಣ್ಣ ಸ್ಪರ್ಧೆ ಮಾಡಿದ್ರೆ ಐವತ್ತು ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂಬ ಸವಾಲು ವಿಚಾರವಾಗಿ ನಂದೇನಿಲ್ಲ ಜನರು ಏನು ಹೇಳ್ತಾರೆ ಅದಕ್ಕೆ ಬದ್ದ. ಆಗ ನಾನು ಶಾಸಕನಾಗಿ ಅಭಿವೃದ್ಧಿ ವಿಚಾರ ಬಂದಾಗ ಮಾತಾಡಿದ್ದೆ, ಈಗ ಅಭ್ಯರ್ಥಿ ಯಾಗಿ ಏನನ್ನೂ ಮಾತನಾಡಲ್ಲ. ನನ್ನ ಎಷ್ಟು ಸಾವಿರದಲ್ಲಿ ಗೆಲ್ಲಿಸುತ್ತಾರೆ ಎಂದು ಜನರು ತೀರ್ಮಾನ ಮಾಡ್ತಾರೆ ಎಂದಿದ್ದಾರೆ ಪ್ರೀತಮ್ ಗೌಡ. ಈ ಹಿಂದೆ ಹಾಸನದಿಂದ ನಾನು 50 ಸಾವಿರ ಮತಗಳಿಗಿಂತ ಒಂದು ಮತ ಕಡಿಮೆ ಅಂತರದಿಂದ ಗೆದ್ದರೂ ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸುತ್ತೇನೆ ಎಂದು ಪ್ರೀತಮ್ ಗೌಡ ಚಾಲೆಂಜ್ ಹಾಕಿದ್ದರು.
ನಾನು ಅದರ ಬಗ್ಗೆ ಮಾತನಾಡಿದರೆ ಅಪ್ರಸ್ತುತ ಆಗುತ್ತೆ. ಚುನಾವಣೆ ಸಮಯದಲ್ಲಿ ಮತದಾರರು ತೀರ್ಮಾನ ಮಾಡ್ತಾರೆ. ಪ್ರೀತಂಗೌಡ ಸರಿಯಾಗಿ ಹೇಳಿದ್ದಾನೆ ಅಂದ್ರೆ ಜನ ಸಾಮಾನ್ಯರೆ ಅದನ್ನು ಮಾಡ್ತಾರೆ. ನನ್ನದು ಯೂ ಟರ್ನ್ ಇಲ್ಲವೇ ಇಲ್ಲ, ನೇರವಾಗಿ ಹೋಗೋದೆ ನನ್ನ ಕೆಲಸ. ಯೂ ಟರ್ನ್ ಇಲ್ಲ, ಲೆಫ್ಟ್, ರೈಟ್ ಇಲ್ಲ ಎಂದಿದ್ದಾರೆ ಪ್ರೀತಮ್ ಗೌಡ.



