ಕುದುರೆ ರೇಸ್. ಮೇಲ್ನೋಟಕ್ಕೆ ಒಂದು ಜೂಜಾಟ. ಆದರೆ ಕೆಲವರ ಪಾಲಿಗೆ ಅದು ಆಟ. ಅಂಬರೀಷ್ ಅವರಿಗೂ ಕುದುರೆ ರೇಸ್`ಗೂ ಅವಿನಾಭಾವ ನಂಟಿತ್ತು. ರೇಸ್ ಇತ್ತೆಂದರೆ ಅವರು ವಿಧಾನಸಭೆಗೂ ಹೋಗುತ್ತಿರಲಿಲ್ಲ. ಸ್ವಂತಕ್ಕೊಂದು ಕುದುರೆಯನ್ನು ಸಾಕಿದ್ದ ಅಂಬರೀಷ್, ಅದಕ್ಕಾಗಿ ಟೀಕೆಗಳನ್ನೂ ಎದುರಿಸಿದ್ದರು. ಎಂದಿನಂತೆ ಡೋಂಟ್ ಕೇರ್.


ಇಲ್ಲಿ ಫಿಲ್ಮ್ ಚೇಂಬರ್ ಇದೆ. ಹತ್ತಿರದಲ್ಲೇ ಗಾಂಧಿ ನಗರ ಇದೆ. ಇದು ಅಂಬರೀಷ್ ಅವರ ಕಾರ್ಯಕ್ಷೇತ್ರವಾಗಿದ್ದ ಜಾಗ. ಹಾಗಾಗಿ ಅವರ ಹೆಸರು ಅತ್ಯಂತ ಸೂಕ್ತ. ಅವರ ಅಭಿಮಾನಿಗಳ ಒತ್ತಾಸೆಯ ಮೇರೆಗೆ ಈ ಹೆಸರು ಇಟ್ಟಿದ್ದೇವೆ. ಇದು ಸಿಎಂ ಬೊಮ್ಮಾಯಿ ಮಾತು. ಮಾರ್ಚ್ 27ಕ್ಕೆ ಉದ್ಘಾಟನೆ ಮಾಡುತ್ತೇನೆ ಎಂದು ಹೇಳಿದ್ದ ಬಸವರಾಜ ಬೊಮ್ಮಾಯಿ ನುಡಿದಂತೆಯೇ ರಸ್ತೆಯನ್ನು ಉದ್ಘಾಟಿಸಿದ್ದಾರೆ.


ಅಂಬರೀಷ್ ಅವರನ್ನು 10 ವರ್ಷಗಳಿಂದ ಪ್ರೀತಿಯಿಂದ ಸಾಕಿ ಬೆಳೆಸಿದ ಅಭಿಮಾನಿಗಳಿಗೆ ನನ್ನ ನಮಸ್ಕಾರಗಳು. ಇದು ಅಂಬರೀಷ್ 50 ವರ್ಷ ಪೂರೈಸಿದ ವರ್ಷವಾಗಿದೆ. ಅಭಿಮಾನಿಗಳು ಈ ದಿನ ಯಾವಾಗ ಬರುತ್ತೆ ಅಂತ ಕಾಯ್ತಾ ಇದ್ದರು. ಕರ್ನಾಟಕ ಸರ್ಕಾರದ ಅನುದಾನದ ಅಡಿಯಲ್ಲಿ ಈ ಸುಂದರ ಸ್ಮಾರಕ ನಿರ್ಮಾಣ ಆಗಿದೆ. ನಾನು ಅಭಿಮಾನಿಗಳಿಗೆ ಹೇಳ್ತಾನೇ ಇದ್ದೆ. ಆ ದಿನ ಇಂದು ಬಂದಿದೆ ಎಂದು ಭಾವುಕರಾದ ಸುಮಲತಾ, ಮರೆಯದೆ ನೆನಪಿಸಿಕೊಂಡಿದ್ದು ಯಡಿಯೂರಪ್ಪ ಅವರನ್ನು. ಯಡಿಯೂರಪ್ಪ ಅವರಿಗೆ ನಾವು ಈ ಬೇಡಿಕೆ ಇಟ್ಟಾಗ ಕೊಂಚವೂ ನಿಧಾನಿಸದೆ ಕಾರ್ಯರೂಪಕ್ಕೆ ತಂದರು. ಅಂಬರೀಷ್ ಎಲ್ಲೇ ಇದ್ದರೂ ಖುಷಿಪಟ್ಟಿರ್ತಾರೆ. ಅವರು ನಿಜಕ್ಕೂ ದೇವರ ಮಗ ಎಂದರು ಸುಮಲತಾ.





