Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Politics

ರಮೇಶ್ ಜಾರಕಿಹೊಳಿ v/s ಲಕ್ಷ್ಮೀ ಹೆಬ್ಬಾಳ್ಕರ್ ವಾರ್ : ಡಿಕೆ ಶಿವುಕಮಾರ್ ಗೇಮ್.. ಸಿದ್ದರಾಮಯ್ಯ ಫೋನ್ ಲಕ್ಷ್ಮಣ ಸವದಿ ಆಪರೇಷನ್

SpeciallU by SpeciallU
April 15, 2023
in Politics
Reading Time: 1 min read
0 0
0
ರಮೇಶ್ ಜಾರಕಿಹೊಳಿ v/s ಲಕ್ಷ್ಮೀ ಹೆಬ್ಬಾಳ್ಕರ್ ವಾರ್ : ಡಿಕೆ ಶಿವುಕಮಾರ್ ಗೇಮ್.. ಸಿದ್ದರಾಮಯ್ಯ ಫೋನ್ ಲಕ್ಷ್ಮಣ ಸವದಿ ಆಪರೇಷನ್

ಬೆಳಗಾವಿ ಜಿಲ್ಲೆಯೇ ಇಡೀ ರಾಜ್ಯದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದೆ. 2018ರಿಂದ ಶುರುವಾದ ಬೆಳಗಾವಿ ಸೆಂಟರ್ ಪಾಲಿಟಿಕ್ಸಿ, ಈ ಬಾಗಿ ಇನ್ನಷ್ಟು ಎತ್ತರಕ್ಕೆ ತಲುಪಿದೆ. ಕುಮಾರಸ್ವಾಮಿ ಸರ್ಕಾರದ ಪತನ ಆರಂಭವಾಗಿದ್ದು ರಮೇಶ್ ಜಾರಕಿಹೊಳಿ ರಾಜೀನಾಮೆಯಿಂದ. ಲಕ್ಷ್ಮೀ ಹೆಬ್ಬಾಳ್ಕರ್ ಜೊತೆಗಿನ ಮುನಿಸು, ವಾಗ್ಯುದ್ಧ.. ಆನಂತರ ಸಿಡಿ ಹಗರಣ, ಬೆತ್ತಲೆ ಗೇಮ್`ನಲ್ಲಿ ರಾಜೀನಾಮೆ ಕೊಟ್ಟ ರಮೇಶ್ ಜಾರಕಿಹೊಳಿ ಈ ಬಾರಿ ಲಕ್ಷ್ಮೀ ಹೆಬ್ಬಾಳ್ಕರ್ ಸೋಲಿಗೆ ಪಣ ತೊಟ್ಟು ನಿಂತಿದ್ದಾರೆ. ಆ ಆಟದ ಮುಂದುವರಿದ ಭಾಗವೇ ಆಪರೇಷನ್ ಲಕ್ಷ್ಮಣ ಸವದಿ. ಡಿಕೆ ಶಿವುಕಮಾರ್ ಗೇಮ್.. ಸಿದ್ದರಾಮಯ್ಯ ಫೋನ್ ಇತ್ಯಾದಿ..ಇತ್ಯಾದಿ..

ಬಿಜೆಪಿ ಪಟ್ಟಿಯಲ್ಲಿ ಸವದಿ ಹೆಸರಿಲ್ಲ ಎನ್ನುತ್ತಿದ್ದಂತೆಯೇ ಅಲರ್ಟ್ ಆದವರು ಡಿಕೆ ಶಿವಕುಮಾರ್. ಕುಮಾರಸ್ವಾಮಿ ಕಾಂಟ್ಯಾಕ್ಟ್ ಮಾಡುವುದಕ್ಕೂ ಮೊದಲೆ ಸವದಿ ಸಂಪರ್ಕಕ್ಕೆ ಬಂದ ಡಿಕೆ, ಬೆಳಗಾವಿಯಲ್ಲಿನ ಪರಿಸ್ಥಿತಿ ನಿಭಾಯಿಸುವ ಹೊಣೆಗಾರಿಕೆಯನ್ನು ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೇ ಕೊಟ್ಟರು. ವಿಶೇಷ ವಿಮಾನ ಸಿದ್ದಗೊಳಿಸಿದರು. ಸಿದ್ದರಾಮಯ್ಯ ಅವರಿಗೆ ಅಲರ್ಟ್ ಕೊಟ್ಟರಾದರೂ ಅಖಾಡಕ್ಕೆ ಇಳಿದಿದ್ದು ಡಿಕೆ ಬಣವೇ. ಬೆಳಗಾವಿ ಕಾಂಗ್ರೆಸ್ಸಿನ ಪ್ರಭಾವಿ ಕಾಂಗ್ರೆಸ್ಸಿಗ, ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಸತೀಶ್ ಜಾರಕಿಹೊಳಿಯನ್ನು ದೂರವೇ ಇಟ್ಟ ಡಿಕೆ, ಲಕ್ಷ್ಮಣ ಸವದಿಯವರ ಸುತ್ತ ಕೋಟೆ ಕಟ್ಟಿಬಿಟ್ಟರು. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಸವದಿಯವರ ಜೊತೆಯಲೇ ಬೆಂಗಳೂರಿಗೆ ಬಂದರು. ಈ ನಡುವೆ ಲಕ್ಷ್ಮೀ ಹೆಬ್ಬಾಳ್ಕರ್ ಇಡೀ ಆಪರೇಷನ್`ನ ಬೆಳಗಾವಿ ಉಸ್ತುವಾರಿ ಹೊತ್ತಿದ್ದರೆ, ಬೆಂಗಳೂರಿನಿಂದಲೇ ಆಪರೇಟ್ ಮಾಡುತ್ತಾ ಹೋದವರು ಡಿಕೆ.

Related posts

ಗ್ಯಾರಂಟಿಯಿಂದ ಹೊರೆ : ಡಿಕೆ ಶಿವಕುಮಾರ್‌ ಒಪ್ಪಿಕೊಂಡ ಸತ್ಯ

ಈಗ ಮೀಡಿಯಾಗಳ ಮೇಲೆ ಮೋದಿಯದ್ದೂ ಟೀಕೆ..!

ಲಕ್ಷ್ಮಣ ಸವದಿ ಲಿಂಗಾಯತರು. ಹೀಗಾಗಿ ಕಾಂಗ್ರೆಸ್`ನಲ್ಲಿ ಭವಿಷ್ಯದಲ್ಲಿ ಏಳಬಹುದಾದ ಸಮಸ್ಯೆಗಳನ್ನು ಮೊದಲೇ ಬಗೆಹರಿಸಿಕೊಂಡ ಡಿಕೆ, ಎಂಬಿ ಪಾಟೀಲರೂ ಬೆಂಗಳೂರಿಗೆ ಬರುವಂತೆ ಮಾಡಿದರು. ಸುರ್ಜೇವಾಲಾ ಮತ್ತು ಸಿದ್ದರಾಮಯ್ಯ ಮುಂದೆ ಕೂರಿಸಿಯೇ ಎಲ್ಲ ಇತ್ಯರ್ಥ ಮಾಡಿದರು.
ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ ಡಿಕೆ ಶಿವಕುಮಾರ್, ಈ ಮೂಲಕ ತಮ್ಮ ಆಪ್ತ ಬಳಗದಲ್ಲಿರೋ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸವಾಲು ಹಾಕಿದವರಿಗೆ ಪ್ರತಿ ಸವಾಲ್ ಹಾಕಿದ್ದಾರೆ. ಬೆಳಗಾವಿ ಮತ್ತೊಬ್ಬ ಪ್ರಭಾವಿ ಲಿಂಗಾಯತ ನಾಯಕ ಲಕ್ಷ್ಮಣ ಸವದಿಯನ್ನು ಕಾಂಗ್ರೆಸ್ಸಿಗೆ ಕರೆತಂದು ಆ ಮೂಲಕ ಲಕ್ಷ್ಮೀ ಹೆಬ್ಬಾಳ್ಕರ್ ಬಲ ಹೆಚ್ಚಿಸಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೇ ನೇತೃತ್ವ ಮೂಲಕ ಬೆಳಗಾವಿಯ ನಂ.1 ಲೀಡರ್ ಯಾರು ಎಂಬ ಸಂದೇಶವನ್ನೂ ಕೊಟ್ಟಿದ್ದಾರೆ. ತಮ್ಮನ್ನು ಕೆಣಕಿದವರಿಗೆ ಸುಮ್ಮನೆ ಬಿಡಲ್ಲ ಎಂಬ ಸಂದೇಶ ನೀಡಿರುವುದು ರಮೇಶ್ ಜಾರಕಿಹೊಳಿಯವರಿಗೆ.
ಮತ್ತೂ ಒಂದು ಮೆಸೇಜ್ ಇದೆ. ಲಕ್ಷ್ಮಣ ಸವದಿ ಮೂಲತಃ ಬಿಜೆಪಿಯವರಲ್ಲ. ಜಾತ್ಯತೀತ ಜನತಾ ದಳದಲ್ಲಿದ್ದವರು. ಜೆಡಿಎಸ್`ನ ಕುಮಾರಸ್ವಾಮಿ, ಸವದಿ ಅವರ ಸಂಪರ್ಕಕ್ಕೆ ಬರದಂತೆ ನೋಡಿಕೊಂಡಿದ್ದಾರೆ. ಬಹುಶಃ ದೇವೇಗೌಡರು ಆಕ್ಟಿವ್ ಆಗಿದ್ದರೆ ಏನಾಗುತ್ತಿತ್ತೋ.. ಏನೋ.. ಒಟ್ಟಿನಲ್ಲಿ ಈ ಬಾರಿಯ ಯುದ್ಧದಲ್ಲಿ ಗೆದ್ದಿರುವದು ಡಿಕೆ ಶಿವಕುಮಾರ್ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್.

ಸಿದ್ದರಾಮಯ್ಯಗೆ ಒಂದೇ ಪ್ರಾಬ್ಲಂ : ಸಿದ್ದರಾಮಯ್ಯ ಕೂಡಾ ಆಪರೇಷನ್ ಸವದಿಯಲ್ಲಿ ಪ್ರಧಾನ ಪಾತ್ರ ವಹಿಸಿದ್ದವರೇ. ಸವದಿ ಯೆಸ್ ಎಂದಿದ್ದೇ ಸಿದ್ದರಾಮಯ್ಯ ಫೋನ್ ಮಾಡಿ ಮಾತನಾಡಿದ ಮೇಲೆ. ಆದರೆ ಈಗ ಸಿದ್ದರಾಮಯ್ಯ ತಮ್ಮ ಮಾತು ತಾವೇ ನುಂಗಿಕೊಳ್ಳಬೇಕು. ಇದೇ ಲಕ್ಷ್ಮಣ ಸವದಿ ಸದನದಲ್ಲಿ ಬ್ಲೂಫಿಲ್ಮ್ ನೋಡಿ ಸಿಕ್ಕಿಬಿದ್ದಿದ್ದನ್ನು ಯಾವ್ಯಾವ ರೀತಿಯಲ್ಲಿ ಲೇವಡಿ ಮಾಡಬಹುದೋ.. ಟೀಕೆ ಮಾಡಬಹುದೋ.. ಬಿಜೆಪಿಯನ್ನು ಎಷ್ಟರಮಟ್ಟಿಗೆ ಟೀಕಿಸಬಹುದೋ.. ಎಲ್ಲವನ್ನೂ ಸಿದ್ದರಾಮಯ್ಯ ಮಾಡಿಬಿಟ್ಟಿದ್ದಾರೆ. ಈಗ ಅದೇ ಲಕ್ಷ್ಮಣ ಸವದಿಯನ್ನು ಪ್ರಭಾವಿ ನಾಯಕ, ಆಶಾಕಿರಣ ಎಂದು ಹೊಗಳಬೇಕು. ಇದು ರಾಜಕೀಯ. ಏನ್ ಬೇಕಾದ್ರೂ ಆಗತ್ತೆ.

Tags: #ಸಿದ್ದರಾಮಯ್ಯ #ಡಿಕೆಶಿವಕುಮಾರ್ #ಕಾಂಗ್ರೆಸ್ #ಸಂದರ್ಶನ #ಸಿಎಂ #Siddharamaiah #DKShivakumar #Congress #Interview #CM
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.