ರಾಹುಲ್ ಗಾಂಧಿ, ಈಗ ಕಾಂಗ್ರೆಸ್ ಅಧ್ಯಕ್ಷರಲ್ಲ. ಅಧಿಕೃತ ದಾಖಲೆಗಳ ಪ್ರಕಾರ ಅವರೂ ಎಲ್ಲರಂತೆಯೇ ಒಬ್ಬ ನಾಯಕ. ಆದರೆ ವಿವಾದಗಳಿಗೇನೂ ಕೊರತೆಯಿಲ್ಲ. ಭಾರತ್ ಜೋಡೋ ಯಾತ್ರೆಯ ಮೂಲಕ ಇಡೀ ದೇಶ ಸುತ್ತಿದ ರಾಹುಲ್ ಗಾಂಧಿ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ದೂರದ ಇಂಗ್ಲೆಂಡಿನ ಕೇಂಬ್ರಿಡ್ಜ್ ವಿವಿಯಲ್ಲಿ ಭಾಷಣ ಮಾಡುತ್ತಾ, ಭಾರತವನ್ನು ಟೀಕಿಸಿ, ಶತ್ರುದೇಶ ಚೀನಾವನ್ನು ಹೊಗಳಿರುವುದು ರಾಹುಲ್ ಗಾಂಧಿ ಹೆಚ್ಚುಗಾರಿಕೆ. ಇದೀಗ ಬಿಜೆಪಿ, ರಾಹುಲ್ ಗಾಂಧಿ ಆರೋಪಗಳಿಗೆ ಉತ್ತರ ನೀಡಿದ್ದು, ಇದೊಂದು ಷಡ್ಯಂತ್ರ ಎಂದು ಟೀಕಿಸಿದೆ.


ಬಿಜೆಪಿ ಉತ್ತರ : ರಾಹುಲ್ ಗಾಂಧಿ ಆರೋಪ ಮಾಡುತ್ತಾರೆ. ತನಿಖೆಗೆ ಮಾತ್ರ ಸಹಕಾರ ನೀಡುವುದಿಲ್ಲ. ಪೆಗಾಸಿಸ್ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದೆ. ರಾಹುಲ್ ಗಾಂಧಿ ತಮ್ಮ ಫೋನ್ ವಿಚಾರಣೆಗಾಗಿ ಸಲ್ಲಿಕೆ ಮಾಡಿ ಎಂದು ಕೋರ್ಟ್ ಸೂಚಿಸಿತ್ತು. ಆದರೆ ರಾಹುಲ್ ಗಾಂಧಿ ಫೋನ್ ನೀಡಲು ನಿರಾಕರಿಸಿದ್ದಾರೆ. ಈ ಕುರಿತು ವಿಚಾರಣೆ ನಡೆಸಿ ಪೆಗಾಸಿಸ್ ಕುರಿತು ಯಾವುದೇ ಆಧಾರವಿಲ್ಲ, ವಿಪಕ್ಷಗಳ ಆರೋಪಗಳನ್ನು ತಳ್ಳಿ ಹಾಕಿದೆ.
ರಾಹುಲ್ ಆರೋಪ : ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ, ಸ್ವತಂತ್ರವಾಗಿ ಏನೂ ವ್ಯಕ್ತಪಡಿಸಲು ಸಾಧ್ಯವಿಲ್ಲ.
ಬಿಜೆಪಿ ಉತ್ತರ : ರಾಹುಲ್ ಗಾಂಧಿ ಇತ್ತೀಚೆಗೆ 40,000 ಕಿಲೋಮೀಟರ್ ಯಾತ್ರೆ ಪೂರೈಸಿದ್ದಾರೆ. ಮೋದಿ ಸರ್ಕಾರ ನೀಡಿದ ಭದ್ರತೆಯಲ್ಲಿ ಯಾವುದೇ ಆತಂಕವಿಲ್ಲದೆ ಸಾಗಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಬಿಜೆಪಿ ನಾಯಕರನ್ನು ಹೇಗೆ ನಡೆಸಿಕೊಳ್ಳಲಾಗಿದೆ ಎಂಬುದನ್ನು ನೆನಪಿಸಿಕೊಳ್ಳಿ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಿಜೆಪಿಯವರು ಬಹಿರಂಗ ಪಾದಯಾತ್ರೆ ಮಾಡುವುದಕ್ಕೂ ಅವಕಾಶ ಇರಲಿಲ್ಲ. ಇದೇ ಕಾಶ್ಮೀರದಲ್ಲಿ ತಿರಂಗ ಯಾತ್ರೆಗೆ ಯಾವೆಲ್ಲ ಅಡ್ಡಿ ಆತಂಕಗಳಿದ್ದವು, ನೆನಪಿಸಿಕೊಳ್ಳಿ ಎಂದಿದೆ.
ರಾಹುಲ್ ಆರೋಪ : ಅಲ್ಪಸಂಖ್ಯಾತರ ಮೇಲೆ ದಾಳಿಯಾಗುತ್ತಿದೆ. ಅವರನ್ನು ಎರಡನೇ ದರ್ಜೆ ನಾಗರೀಕರಾಗಿ ನೋಡಲಾಗುತ್ತಿದೆ.
ಬಿಜೆಪಿ ಉತ್ತರ : 2014ರ ಬಳಿಕ ಭಾರತದಲ್ಲಿ ದಾಖಲಾದ ಕೋಮುಗಲಭೆ ಸಂಖ್ಯೆ ಅತೀ ಕಡಿಮೆ. ಇನ್ನು ಅಲ್ಪಸಂಖ್ಯಾತ ಕುಟುಂಬಗಳು ನೆಮ್ಮದಿಯ ಜೀವನ ನಡೆಸುತ್ತಿದೆ. ಹಲವು ಅಲ್ಪಸಂಖ್ಯಾತ ನಾಯಕರು ಮೋದಿ ನಾಯಕತ್ವ ಮೆಚ್ಚಿಕೊಂಡು, ಬೆಂಬಲ ಸೂಚಿಸಿದ್ದಾರೆ.
ರಾಹುಲ್ ಆರೋಪ : ಕಾಶ್ಮೀರದಲ್ಲಿ ಉಗ್ರರನ್ನು ನಾನು ನೋಡಿದೆ. ಅವರು ನನ್ನನ್ನು ನೋಡಿದರು. ಆದರೆ ಅವರು ನನ್ನನ್ನು ಗುರಿಯಾಗಿಸಿ ದಾಳಿ ಮಾಡುವುದಿಲ್ಲ ಅನ್ನೋದು ಖಚಿತ.
ಬಿಜೆಪಿ ಉತ್ತರ : ಈ ಘಟನೆಯನ್ನು ಭದ್ರತಾ ಪಡೆಗೆ ರಾಹುಲ್ ಗಾಂಧಿ ಯಾಕೆ ವರದಿ ಮಾಡಿಲ್ಲ? ರಾಹುಲ್ ಗಾಂಧಿ ಹಾಗೂ ಉಗ್ರರ ನಡುವೆ ಯಾವುದಾದರೂ ಒಪ್ಪಂದ ಆಗಿದೆಯಾ? ಉಗ್ರರೂ ನಮ್ಮೊಂದಿಗೆ ಹೆಜ್ಜೆ ಹಾಕಿದರು ಎನ್ನುವುದರ ಗಂಭೀರತೆ ರಾಹುಲ್ ಗಾಂಧಿಗೆ ಅರ್ಥವಾಗುವುದಿಲ್ಲವಾ?
ರಾಹುಲ್ ಆರೋಪ : ಚೀನಾ ಸೂಪರ್ ಪವರ್ ದೇಶ. ಬೆಲ್ಟ್ ಅಂಡರ್ ರೋಡ್ (ಬಿ.ಆರ್.ಐ) ಉದಾಹರಣೆಯಾಗಿ ನೀಡಿದ್ದಾರೆ.
ಬಿಜೆಪಿ ಉತ್ತರ : ಇಂದು ಹಲವು ದೇಶಗಳಲ್ಲಿ ಎದುರಿಸುತ್ತಿರುವ ಆರ್ಥಿಕ ಹಾಗೂ ಸಾಲದ ಬಿಕ್ಕಟ್ಟಿಗೆ ಚೀನಾ ಕಾರಣವಾಗಿದೆ.ಅಂಕಲ್ ಪಿತ್ರೋಡಾ ಇದನ್ನು ರಾಹುಲ್ ಗಾಂಧಿಗೆ ತಿಳಿಸಿ ಹೇಳಬೇಕು.
ರಾಹುಲ್ ಆರೋಪ : ಭಾರತ ಯುರೋಪ್ ಮಾದರಿ ರಾಜ್ಯಗಳ ಒಕ್ಕೂಟ.
ಬಿಜೆಪಿ ಉತ್ತರ : ಭಾರತ ಹಾಗೂ ಭಾರತದ ನಾಗರೀಕತೆಯೂ ಯೂರೋಪ್ ರಾಜಕೀಯ ಅಸ್ತಿತ್ವಕ್ಕೆ ಬರುವುದಕ್ಕೂ ಸಾವಿರಾರೂ ವರ್ಷಗಳ ಮೊದಲೇ ಅಸ್ತಿತ್ವದಲ್ಲಿದೆ. ಅದರೂ ನಾವು ಅವರ ಮಾದರಿಯನ್ನು ಹೊಂದ್ದಿದೇವೆ?
ರಾಹುಲ್ ಆರೋಪ: ಕಮ್ಯೂನಿಸ್ಟ್ ಪಕ್ಷದ ಸದಸ್ಯರು ತಮ್ಮ ಆಲೋಚನೆಗಳಿಂದ ಭದ್ರ ದೇಶವನ್ನು ರೂಪಿಸಿದ್ದಾರೆ. ಚೀನಾದಿಂದ ಆಕರ್ಷಿತನಾಗಿದ್ದೇನೆ.
ಬಿಜೆಪಿ ಉತ್ತರ : ಚೀನಾದಿಂದ ಗಾಂಧಿ ಕುಟುಂಬ ದೇಣಿಗೆ ಪಡೆದ ಋಣ ತೀರಿಸಲು ರಾಹುಲ್ ಗಾಂಧಿ ಈ ಪ್ರಶಂಸೆ ಮಾಡಿದ್ದಾರೆ.
ಇವುಗಳಲ್ಲಿ ಚೀನಾವನ್ನು ಹೊಗಳಿರುವುದಷ್ಟೇ ಅಲ್ಲ, ಭಾರತ್ ಜೋಡೋ ಪಾದಯಾತ್ರೆಯಲ್ಲಿ ನಮ್ಮೊಂದಿಗೆ ಉಗ್ರರೂ ಇದ್ದರು. ನನಗೆ ಏನೂ ಮಾಡಲಿಲ್ಲ ಎನ್ನುವುದು ಒಬ್ಬ ನಾಯಕನ ಹತಾಶೆ, ಪೆದ್ದುತನವನ್ನು ತೋರಿಸುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.



