Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Politics

ರಾಹುಲ್ ಗಾಂಧಿಗೆ ರಾಹುಲ್ ಗಾಂಧಿಯೇ ವಿಲನ್ : ಅವತ್ತು ಅದನ್ನು ಹರಿದು ಹಾಕದಿದ್ದರೆ..

SpeciallU by SpeciallU
March 24, 2023
in Politics
Reading Time: 1 min read
0 0
0
ರಾಹುಲ್ ಗಾಂಧಿಗೆ ರಾಹುಲ್ ಗಾಂಧಿಯೇ ವಿಲನ್ : ಅವತ್ತು ಅದನ್ನು ಹರಿದು ಹಾಕದಿದ್ದರೆ..

ಒಂದು ಮಾತು.. ಏನೋ ಹೇಳೋಕೆ ಹೋಗಿ ಮಾಡಿಕೊಂಡ ಒಂದು ಎಡವಟ್ಟು.. ರಾಹುಲ್ ಗಾಂಧಿಯನ್ನು ನೇರವಾಗಿ ಜೈಲಿನ ಬಾಗಿಲಿಗೆ ಎಳೆದುಕೊಂಡು ಹೋಗಿದೆ. ಎಲ್ಲ ಕಳ್ಳರ ಹೆಸರಿನ ಸರ್`ನೇಮ್ ಕೂಡಾ ಮೋದಿಯೇ ಆಗಿರುತ್ತದೆ ಏಕೆ..? ಎಂದು ಮಾತನಾಡಿದ್ದರು ರಾಹುಲ್ ಗಾಂಧಿ. ತೀರಾ ಹಿಂದೇನಲ್ಲ. 2019ರಲ್ಲಿ ಲೋಕಸಭೆ ಚುನಾವಣೆ ಆಗಿತ್ತಲ್ಲ.. ಆಗ ಕೋಲಾರಕ್ಕೆ ಬಂದು ಪ್ರಚಾರ ಮಾಡುವಾಗ ರಾಹುಲ್ ಈ ಮಾತು ಹೇಳಿದ್ದರು. ಈಗ ಅದೇ ಕೇಸಲ್ಲಿ ಜೈಲು ಶಿಕ್ಷೆಯಾಗಿದೆ. ಒಂದಲ್ಲ.. ಎರಡು ವರ್ಷ. ಜೊತೆಗೆ ದಂಡ ಬೇರೆ. ಆದರೆ.. ಇಲ್ಲಿ ರಾಹುಲ್ ಗಾಂಧಿಗೆ ರಾಹುಲ್ ಗಾಂಧಿಯೇ ವಿಲನ್ ಆಗಿದ್ದು ಹೇಗೆ ಅನ್ನೋಕೆ ಕಾರಣವೂ ಇದೆ.

ಸುಗ್ರೀವಾಜ್ಞೆಯನ್ನು ಹರಿದು ಹಾಕಿದ್ದರು ರಾಹುಲ್ ಗಾಂಧಿ :
ಅದು 2013ನೇ ಇಸವಿ. ಲಾಲೂ ಪ್ರಸಾದ್ ಯಾದವ್ ಮೇಲಿನ ಮೇವು ಹಗರಣದ ತೀರ್ಪು ಬರುವ ಸಮಯವಾಗಿತ್ತು. ತೀರ್ಪು ಹೊರಬೀಳುವ ಒಂದು ದಿನ ಮೊದಲು ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಒಂದು ಸುಗ್ರೀವಾಜ್ಞೆ ಹೊರತಂದಿದ್ದರು. ಯಾವುದೇ ಜನಪ್ರತಿನಿಧಿ 2 ವರ್ಷ ಜೈಲು ಶಿಕ್ಷೆಗೆ ಗುರಿಯಾದರೆ ಅವರು ತನಗೆ ಲಭ್ಯವಿರುವ ಎಲ್ಲಾ ಕಾನೂನಿನ ಅವಕಾಶ ಬಳಸಿಕೊಳ್ಳುವ ತನಕವೂ ಹುದ್ದೆಯಿಂದ ಅನರ್ಹವಾಗದಂತೆ ರಕ್ಷಣೆ ನೀಡುವ ಕಾಯ್ದೆಯನ್ನು 2013ರಲ್ಲಿ ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಅಂದಿನ ಪ್ರಧಾನಿ ಮನಮೋಹನ್ಸಿಂಗ್ ಸರ್ಕಾರ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಯಾವುದೇ ಜನಪ್ರತಿನಿಧಿಗೆ ಶಿಕ್ಷೆಯಾದರೆ ಅವರು ಅದರ ವಿರುದ್ಧ ಮೇಲ್ಮನವಿ ಸಲ್ಲಿಸಲು 90 ದಿನಗಳ ಅವಕಾಶ ಕಲ್ಪಿಸಿತ್ತು. ಈ ಮಸೂದೆ ರಾಷ್ಟ್ರಪತಿ ಬಳಿಗೆ ಹೋಗಿದ್ದ ವೇಳೆ ದಿಢೀರನೆ ಪತ್ರಿಕಾಗೋಷ್ಠಿ ಕರೆದಿದ್ದ ರಾಹುಲ್, ಈ ಸುಗ್ರೀವಾಜ್ಞೆ ಅಸಂಬದ್ಧ ಎಂದು ಹೇಳಿ, ಅದರ ಪ್ರತಿಗಳನ್ನು ಹರಿದು ಹಾಕಿದ್ದರು. ಹೀಗಾಗಿ ಸುಗ್ರೀವಾಜ್ಞೆ ಜಾರಿಗೆ ಬಂದಿರಲಿಲ್ಲ. ಯಾವಾಗ ಖುದ್ದು ರಾಹುಲ್ ಗಾಂಧಿ ಕಾಯ್ದೆಯ ಪ್ರತಿಯನ್ನು ಹರಿದು ಹಾಕಿದರೋ.. ಸುಗ್ರೀವಾಜ್ಞೆಯೂ ಜಾರಿಗೆ ಬರಲಿಲ್ಲ

Related posts

ಗ್ಯಾರಂಟಿಯಿಂದ ಹೊರೆ : ಡಿಕೆ ಶಿವಕುಮಾರ್‌ ಒಪ್ಪಿಕೊಂಡ ಸತ್ಯ

ಈಗ ಮೀಡಿಯಾಗಳ ಮೇಲೆ ಮೋದಿಯದ್ದೂ ಟೀಕೆ..!

2013ರಲ್ಲೂ ಹೀರೋ ಮತ್ತು ವಿಲನ್ ಆಗಿದ್ದ ರಾಹುಲ್ ಗಾಂಧಿ :
2013ರಲ್ಲಿಯೂ ರಾಹುಲ್ ಗಾಂದಿ ಮಿಶ್ರ ಪ್ರತಿಕ್ರಿಯೆ ಎದುರಿಸಿದ್ದರು ರಾಹುಲ್ ಗಾಂಧಿ. ಮನಮೋಹನ್ ಸಿಂಗ್ ಅವರಿಗೆ ವೈಯಕ್ತಿಕವಾಗಿ ಹೇಳಬಹುದಿತ್ತು. ಅವರದ್ದೇ ಪಕ್ಷದ ಹೇಳಿದ್ದನ್ನು ಕೇಳುವ ಪ್ರಧಾನಿಯಾಗಿದ್ದರು ರಾಹುಲ್ ಗಾಂಧಿ. ಸೋನಿಯಾ ಗಾಂಧಿಯವರ ಮೂಲಕವೇ ಆ ಮಾತು ಹೇಳಿಸಬಹುದಿತ್ತು ಎಂಬ ಮಾತು ಒಂದು ಕಡೆಯಿಂದ ಬಂದಿದ್ದರೆ, ಇನ್ನೊಂದು ಕಡೆಯಿಂದ ಭ್ರಷ್ಟಾಚಾರದ ವಿರುದ್ಧ ರಾಹುಲ್ ಗಾಂಧಿ ಕ್ಲಿಯರ್ ಆಗಿದ್ದಾರೆ ಎಂದು ಹೊಗಳಲಾಗಿತ್ತು. ಪಕ್ಷ, ಅಧಿಕಾರಕ್ಕಿಂತ ಕ್ಲೀನ್ ಇಮೇಜ್ ಮುಖ್ಯ ಎಂದು ರಾಹುಲ್ ಗಾಂಧಿ ಬಯಸುತ್ತಿದ್ದಾರೆ ಎನ್ನಲಾಗಿತ್ತು. ಅದು ಅಣ್ಣಾ ಹಜಾರೆ ಹೋರಾಟ ತೀವ್ರಗೊಳ್ಳುತ್ತಿದ್ದ ಸಮಯ. ಎಲೆಕ್ಷನ್ ಹತ್ತಿರದಲ್ಲಿತ್ತು. ಆ ವೇಳೆಗೆ ಹೊಸ ಇಮೇಜ್ ಸೃಷ್ಟಿಸಿಕೊಳ್ಳೋ ತಂತ್ರಗಾರಿಕೆ ಎಂಬ ಮಾತುಗಳೂ ಕೇಳಿ ಬಂದಿದ್ದವು.

ಈಗ ಜೈಲು ಖಾಯಮ್ ಆಗುತ್ತಾ..?
ರಾಹುಲ್ ಗಾಂಧಿ ದೋಷಿ ಎಂದಿರುವ ಕೋರ್ಟ್ ಅವರಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ದಂಡ ವಿಧಿಸಿದೆ. ನಿಯಮದ ಪ್ರಕಾರವೇ ಹೋದಲ್ಲಿ ರಾಹುಲ್ ಗಾಂಧಿ ಅನರ್ಹರಾಗುತ್ತಾರೆ ಅನ್ನೋದರಲ್ಲಿ ಯಾವುದೇ ಸಂದೇಹವಿಲ್ಲ. 2013ರ ಜುಲೈ 10 ರಂದು ಲಿಲಿ ಥಾಮಸ್ ವಿರುದ್ಧ ಯೂನಿಯನ್ ಆಫ್ ಇಂಡಿಯಾದ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಯಾವುದೇ ಸಂಸದರು, ಎಂಎಲ್ಎ ಅಥವಾ ಎಂಎಲ್ಸಿ ಅಪರಾಧದಲ್ಲಿ ತಪ್ಪಿತಸ್ಥರೆಂದು ಮತ್ತು ಕನಿಷ್ಠ 2 ವರ್ಷಗಳ ಜೈಲು ಶಿಕ್ಷೆಯನ್ನು ಪಡೆದರೆ, ತಕ್ಷಣವೇ ಸದನದ ಸದಸ್ಯತ್ವವನ್ನು ಕಳೆದುಕೊಳ್ಳುತ್ತಾರೆ.
ಆದರೆ, ಇದರ ನಿರ್ಧಾರ ಮಾಡುವ ಹಕ್ಕು ಸ್ಪೀಕರ್ಗೆ ಇರುತ್ತದೆ. ಜನತಾ ಪ್ರಾತಿನಿಧ್ಯ ಕಾಯಿದೆಯ ಸೆಕ್ಷನ್ 8 ರ ಪ್ರಕಾರ, ಯಾವುದೇ ಅಪರಾಧದ ಅಪರಾಧಿ ಮತ್ತು ಎರಡು ವರ್ಷಗಳಿಗಿಂತ ಕಡಿಮೆಯಿಲ್ಲದ ಜೈಲು ಶಿಕ್ಷೆಗೆ ಒಳಗಾದ ವ್ಯಕ್ತಿಯನ್ನು ಅಂತಹ ಅಪರಾಧ ನಿರ್ಣಯದ ದಿನಾಂಕದಿಂದ ಅನರ್ಹಗೊಳಿಸಲಾಗುತ್ತದೆ ಮತ್ತು ಬಿಡುಗಡೆಯಾದ ಮುಂದಿನ ಆರು ವರ್ಷಗಳ ಅವಧಿಗೆ ಅನರ್ಹಗೊಳಿಸಲಾಗುತ್ತದೆ.

ಸಂಸದ ಸ್ಥಾನ ಅಮಾನತು ಸದ್ಯಕ್ಕೆ ಸಾಧ್ಯವಿಲ್ಲ :
ಸಂಸತ್ ಸದಸ್ಯ ಸ್ಥಾನದಿಂದ ತಕ್ಷಣವೇ ಅವರು ಅನರ್ಹರಾಗೋದಿಲ್ಲ. ರಾಹುಲ್ ಗಾಂಧಿಗೆ 2 ವರ್ಷಗಳ ಜೈಲು ಶಿಕ್ಷೆ ನೀಡಲಾಗಿದ್ದರೂ ಇದು ತಕ್ಷಣವೇ ಜಾರಿಗೆ ಬರೋದಿಲ್ಲ. ಮುಂದಿನ 30 ದಿನಗಳು ರಾಹುಲ್ ಗಾಂಧಿ ಪಾಲಿಗೆ ಪ್ರಮುಖವಾದುದಾಗಿದೆ. ಸಂಸತ್ ಸದಸ್ಯರಾಗಿ ಮುಂದುವರಿಯಲು ಸೂರತ್ ಜಿಲ್ಲಾ ಕೋರ್ಟ್ ನೀಡಿದ್ದ ಆದೇಶವನ್ನು ಮೇಲಿನ ಕೋರ್ಟ್ಗೆ ತೆರಳು ರದ್ದು ಮಾಡಿಸಬೇಕು ಅಥವಾ ತಡೆಯಾಜ್ಞೆ ತರಬೇಕು. ತಡೆಯಾಜ್ಞೆ ತರದೇ ಹೋದರೆ, ಈ ತೀರ್ಪನ್ನು ಅಮಾನತಿನಲ್ಲಿಡಲು ಹೈಕೋರ್ಟ್ ಒಪ್ಪದಿದ್ದರೆ ಜೈಲು ಖಾಯಂ.

ರಾಹುಲ್ ಗಾಂಧಿ ತಪ್ಪಿತಸ್ಥರಾಗಿದ್ದೇಕೆ?
ರಾಹುಲ್ ಗಾಂಧಿ ಹೇಳಿಕೆ ಪ್ರಕಾರ ಎಲ್ಲ ಕಳ್ಳರ ಸರ್ ನೇಮ್ ಮೋದಿ ಎಂದೇ ಇರುತ್ತದೆ ಯಾಕೆ ಎನ್ನುವುದು. ಆದರೆ ಮೋದಿ ಎನ್ನುವುದು ಒಂದು ಸಮುದಾಯದಲ್ಲಿ ಹೆಚ್ಚು ಜನ ಇಡುವ ಹೆಸರು. ಅದು ಸಮುದಾಯವನ್ನೂ ತೋರಿಸುತ್ತದೆ. ಒಬ್ಬ ಸಂಸದರಾಗಿ ಒಂದು ಸರ್ ನೇಮ್ ಇಟ್ಟುಕೊಂಡ ಸಮುದಾಯದವರನ್ನು ಹಾಗೆ ಕರೆಯುವುದು, ಜರಿಯುವುದು ಎರಡೂ ತಪ್ಪು. ಹೀಗಾಗಿಯೇ ನ್ಯಾಯಾಲಯ ಈ ರೀತಿ ತೀರ್ಪು ನೀಡಿದೆ. ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದ ಕಾರಣಕ್ಕಲ್ಲ, ಬದಲಿಗೆ ಮೋದಿ ಎಂಬ ಕಮ್ಯುನಿಟಿಯನ್ನು ಕಳ್ಳರು ಎಂದ ಕಾರಣಕ್ಕೆ.

 

Tags: #ರಾಹುಲ್ ಗಾಂಧಿ #ಸುಗ್ರೀವಾಜ್ಞೆ #ಮನಮೋಹನ್ ಸಿಂಗ್ #ಮೋದಿ #ಸರ್ ನೇಮ್ #ಕಾಂಗ್ರೆಸ್ #RahulGandhi #Ordinance #ManmohanSingh #Modi #SirName #Congress
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.