ತಮ್ಮ ವಿರುದ್ಧದ ಆರೋಪಗಳನ್ನೆಲ್ಲ ಗೆಲುವಿನ ಏಣಿಯಾಗಿ ಬಳಸಿಕೊಳ್ಳುವ ಮೋದಿಗೆ ಜನ ಬೆಂಬಲವಂತೂ ಇದೆ. ಮೋದಿಯವರನ್ನು ಪ್ರೀತಿಸುವವರೆಷ್ಟೋ ಅಷ್ಟೇ ಜನ ಮೋದಿಯನ್ನು ದ್ವೇಷಿಸುತ್ತಾರೆ. ಇಡೀ ಇಂಡಿಯಾದಲ್ಲೇ ಅತೀ ಹೆಚ್ಚು ವೋಟು ಪಡೆದಿರಬಹುದು, ಜಾಗತಿಕವಾಗಿ ಸತತವಾಗಿ ನಂ.1 ಜನಪ್ರಿಯ ನಾಯಕನಾಗಿರಬಹುದು, ಆದರೆ ದ್ವೇಷಿಸುವವರಿಗೆ ಕೊರತೆಯಂತೂ ಇಲ್ಲ. ಇದೀಗ ತ್ರಿಪುರ, ನಾಗಾಲ್ಯಾಂಡ್ ಮತ್ತು ಮೇಘಾಲಯಗಳ ಎಲೆಕ್ಷನ್ ಮುಗಿದಿದೆ. ತ್ರಿಪುರದಲ್ಲಿ ಮತ್ತೊಮ್ಮೆ, ನಾಗಾಲ್ಯಾಂಡ್‍ನಲ್ಲಿ ಮಿತ್ರಪಕ್ಷದ ಜೊತೆ ಹಾಗೂ ಮೇಘಾಲಯದಲ್ಲಿ ಸರ್ಕಾರ ರಚಿಸುತ್ತಿರುವ ಪಕ್ಷಕ್ಕೆ ಬೆಂಬಲ ನೀಡುವುದರೊಂದಿಗೆ ಮೂರಕ್ಕೆ ಮೂರರಲ್ಲೂ ಅಧಿಕಾರ ಹಿಡಿದಿದೆ ಬಿಜೆಪಿ. ಬಿಜೆಪಿಯ ಈ ಗೆಲುವನ್ನು ದೆಹಲಿಯಲ್ಲಿ ಕಾರ್ಯಕರ್ತರ ಜೊತೆ ಅದ್ಧೂರಿಯಾಗಿ ಆಚರಿಸಿದ ಪ್ರಧಾನಿ ಮೋದಿ ಕೆಲವರು ‘ಮರ್ ಜಾ ಮೋದಿ’ (ಸತ್ತು ಹೋಗಿ) ಎಂದು ಹೇಳುತ್ತಿದ್ದರೆ, ಜನರು ಮಾತ್ರ ‘ಮತ್ ಜಾ ಮೋದಿ’ (ಎಲ್ಲೂ ಹೋಗಬೇಡಿ) ಎಂದು ಹೇಳುತ್ತಿದ್ದಾರೆ. ಇದಕ್ಕೆ 3 ರಾಜ್ಯಗಳಲ್ಲಿ ಬಿಜೆಪಿ ಜಯಗಳಿಸಿರುವುದೇ ಸಾಕ್ಷಿ ಎಂದು ಹೇಳಿದ್ದಾರೆ.
The mood in Meghalaya is clear…record affection for BJP! pic.twitter.com/BKYIUZ6V94
— Narendra Modi (@narendramodi) February 24, 2023
ಮೇಘಾಲಯ ನಾಗಾಲ್ಯಾಂಡ್ ಮತ್ತು ತ್ರಿಪುರದಲ್ಲಿನ ಬಿಜೆಪಿ ಗೆಲುವನ್ನು ‘ತ್ರಿವೇಣಿ ಗೆಲುವು’ ಎಂದು ಕರೆದಿರುವ ಅವರು, ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳು, ಸರ್ಕಾರದ ಕಾರ್ಯ ವೈಖರಿ ಮತ್ತು ಪಕ್ಷದ ಕಾರ್ಯಕರ್ತರ ಸಮರ್ಪಣೆಗೆ ಒಲಿದ ಜಯ ಎಂದು ಹೇಳಿದ್ದಾರೆ. ಬಿಜೆಪಿಯ ವಿರುದ್ಧ ವಿಪಕ್ಷಗಳು ನಕಾರಾತ್ಮಕವಾದ ಹೇಳಿಕೆಗಳನ್ನು ನೀಡುತ್ತಲೇ ಬಂದಿವೆ. ಆದರೆ ಬಿಜೆಪಿ ಮೊದಲು ಗೋವಾದಲ್ಲಿ, ಇದೀಗ ಈಶಾನ್ಯ ರಾಜ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿದೆ ಎಂದು ಹೇಳಿದ್ದಾರೆ.



