ಒಂದು ದೇಶ ಯಾವ ರೀತಿ ಹಾಳಾಗಬಹುದು ಎಂಬುದಕ್ಕೆ ಪಾಕಿಸ್ತಾನಕ್ಕಿಂತ ಉದಾಹರಣೆ ಬೇಕಿಲ್ಲ. ಪಾಕಿಸ್ತಾನದಲ್ಲೀಗ ಅನ್ನಕ್ಕೂ ಗತಿಯಿಲ್ಲ. ರೇಷನ್ ಸಿಗುತ್ತೆ ಎಂದರೆ ಜನ ಪ್ರಾಣವನ್ನೂ ಲೆಕ್ಕಿಸದೆ ಓಡೋಡಿ ಬರುತ್ತಿದ್ದಾರೆ. ಡಾಲರ್ ಎದುರು ಪಾಕಿಸ್ತಾನದ ರೂಪಾಯಿಗೆ 225 ರೂ. ಮೌಲ್ಯ. ಇಂತಹ ರೂಪಾಯಿಯನ್ನಿಟ್ಟುಕೊಂಡು ಒಂದು ಕೆಜಿ ಗೋಧಿ ಕೊಳ್ಳಬೇಕೆಂದರೆ ಸಾವಿರಾರು ರೂಪಾಯಿ ಕೊಡಬೇಕು, ಬೇರೇನು ಮಾಡೋಕೆ ಸಾಧ್ಯ.
ಪಾಕಿಸ್ತಾನಕ್ಕೆ ಶಾಪವಲ್ಲ, ಮಾಡಿದ್ದ ಪಾಪಕ್ಕೆ ಶಿಕ್ಷೆ.


ಪಾಕ್ ಉತ್ತರ ಪ್ರದೇಶಕ್ಕಿಂತ ಸ್ವಲ್ಪ ದೊಡ್ಡದಾಗಿರುವ ದೇಶ ಅಷ್ಟೆ, ಆದರೆ ಪಾಕಿಸ್ತಾನದಲ್ಲಿರುವ ಸಂಪನ್ಮೂಲ ಹೇರಳವಾಗಿದೆ. ಅದನ್ನು ಬಿಟ್ಟು ಹೊರಟ ಪಾಕಿಸ್ತಾನ, ಹುಲ್ಲು ತಿಂದಾದರೂ ಸರಿ, ನಾವು ಪರಮಾಣು ಅಸ್ತ್ರ ತಯಾರಿಸುತ್ತೇವೆ ಎಂದು ಹೊರಟಿತು. ಧರ್ಮದ್ವೇಷವನ್ನಷ್ಟೇ ಬೋಧಿಸಿದ್ದ ಮಕ್ಕಳಲ್ಲಿ ಸ್ವಯಂ ಪ್ರತಿಭೆಗಳೆಲ್ಲಿ ಸಿಗಬೇಕು, ಕಡೆಗೆ ಅದನ್ನೂ ದುಡ್ಡು ಕೊಟ್ಟು ಖರೀದಿಸಿತು. ಭಾರತದ ಎದುರು ಮೀಸೆ ತಿರುವಿತು. ಅದರ ಜೊತೆ ಜೊತೆಗೆ ಅದೇ ಪಾಕಿಸ್ತಾನದ ಶಿಕ್ಷಣ, ಆರೋಗ್ಯ, ರಸ್ತೆಗಳಿಗೆ ಕೊಡಬೇಕಿದ್ದ ಹಣವನ್ನೆಲ್ಲ ಉಗ್ರರಿಗೆ ಸುರಿಯಿತು.
ಹೀಗೆ ನಡೆಯುತ್ತಿತ್ತು ನಾಟಕ..
ಭಾರತದಲ್ಲಿ ಒಂದು ಖಡಕ್ ಸರ್ಕಾರ ಬರುವವರೆಗೆ, ನೀವು ಬಂದೂಕು ಹಿಡಿದರೆ ನಾವು ಬಾಂಬ್ ಹಾಕ್ತೀವಿ, ನೀವು ಉಗ್ರರನ್ನು ಛೂ ಬಿಟ್ಟರೆ ನಾವು ಸೈನಿಕರನ್ನೇ ನುಗ್ಗಿಸಿ ರಾಜಾರೋಷವಾಗಿ ಹೊಡೆಯುತ್ತೇವೆ ಎಂಬ ಭಯ ಹುಟ್ಟುವವರೆಗೆ ಪಾಕ್ ಆಡಿದ್ದೇ ಆಟ. ಪಾಕ್ ಭಯೋತ್ಪಾದಕರನ್ನು ನುಗ್ಗಿಸುವುದು, ಕೊಲ್ಲುವುದು. ಭಾರತದವರು ಇದರಲ್ಲಿ ಪಾಕ್ ಕೈವಾಡವಿದೆ, ನಾವು ಖಂಡಿಸುತ್ತೇವೆ ಎನ್ನುವುದು. ಪಾಕಿಸ್ತಾನ ಅದನ್ನು ಅತ್ಯುಗ್ರವಾಗಿ ನಿರಾಕರಿಸಿ, ಸಾಕ್ಷ್ಯಗಳಿದ್ದರೆ ಕೊಡಿ. ನಾವೇ ಕ್ರಮ ಕೈಗೊಳ್ಳುತ್ತೇವೆ ಎನ್ನುವುದು. ವಿಪರೀತಕ್ಕೆ ಹೋದಾಗ ಅಮೆರಿಕವೋ, ಬ್ರಿಟನ್ನೋ, ವಿಶ್ವಸಂಸ್ಥೆಯೋ ಮಧ್ಯ ಪ್ರವೇಶ ಮಾಡಿ ಕೂಲ್ ಕೂಲ್, ಮಾತುಕತೆಯ ಮೂಲಕ ವಿವಾದ ಬಗೆಹರಿಸೋಣ ಎಂದು ತಲೆ ಸವರುವುದು ನಡೆದೇ ಇತ್ತು. ತಿರುಗಿಬಿದ್ದಾಗ ಆಗಿದ್ದೇ ಬೇರೆ. ಆಗ ಉಗ್ರರಿಗೆ ಕೊಡುತ್ತಿದ್ದ ಬಿಡಿಗಾಸು ಡಬಲ್ ಆಯಿತು. ಉಗ್ರರನ್ನು ತೋರಿಸಿ ಪಾಕಿಸ್ತಾನದ ಅಧಿಕಾರಿಗಳು, ಮಂತ್ರಿಗಳು ನುಂಗಿದ್ದರಲ್ಲ, ಅದು ಪ್ರಭಾವ ಬೀರೋಕೆ ಶುರುವಾಯ್ತು.
ತಾಲಿಬಾನ್.. ಒಂದು ಪ್ರವಾಹ.. ಹಣೆಬರಹ ಬದಲಿಸಿತು..
ಅದೇ ಹೊತ್ತಿಗೆ ಅತ್ತ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಮತ್ತೆ ಬಂಡೆದ್ದು, ತಾಲಿಬಾನಿಗಳು ಅಮೆರಿಕದವರನ್ನೆಲ್ಲ ಒದ್ದೋಡಿಸಿದರಲ್ಲ, ಆಗ ಉಗ್ರರದ್ದೇ ಸರ್ಕಾರವಾಯಿತು. ತಾಲಿಬಾನಿಗಳನ್ನು ತೋರಿಸಿ ಪಾಕ್ ಆಡುತ್ತಿದ್ದ ಆಟಗಳು ಅಮೆರಿಕಕ್ಕೆ ಗೊತ್ತೂ ಇತ್ತು. ಈಗ ಅಮೆರಿಕಕ್ಕೆ ಅಲ್ಲಿ ಗುಡಿಸಿ ಗುಂಡಾಂತರ ಮಾಡುವಂತದ್ದೇನೂ ಇರಲಿಲ್ಲ. ಇತ್ತ ಪಾಕಿಸ್ತಾನದ ಉಗ್ರರು ಎಷ್ಟೆಂದರೂ ವಿಷ. ಧರ್ಮದ ನಶೆಯೇರಿಸಿಕೊಂಡಿದ್ದವರಿಗೆ ತಾಲಿಬಾನಿಗಳೆಂದರೆ ಲವ್ವೋ ಲವ್ವು. ಅದರ ಮಧ್ಯೆ ಬಂದ ಭೀಕರ ಪ್ರವಾಹ ಪಾಕಿಸ್ತಾನವನ್ನು ಬೆತ್ತಲು ಮಾಡಿಬಿಟ್ಟಿತು. ಇತ್ತು ಬೆಳೆ ಬೆಳೆಯೋಕೆ ಭೂಮಿಯಿಲ್ಲ. ದುಡಿಯೋ ಜನರ ಕೈಗೆ ತಾವೇ ಬಂದೂಕು ಕೊಟ್ಟು ಧರ್ಮದ್ವೇಷ ಸೃಷ್ಟಿಸಿದ್ದಾಗಿದೆ. ಜೊತೆಗೆ ಭಾರತದ ಮೇಲಿನ ದ್ವೇಷದಿಂದ, ಇಲ್ಲಿ ಕಡಿಮೆ ಬೆಲೆಗೆ ದೊರಕುವ ವಸ್ತುಗಳನ್ನು ದೂರದೇಶದಿಂದ ದುಬಾರಿ ಬೆಲೆಗೆ ತರಿಸಿ ವಿನಾಕಾರಣ ಬೆಲೆ ಹೆಚ್ಚಿಸಿಕೊಂಡಿದ್ದೂ ಆಗಿದೆ. ಕೆರೆಯ ಮೇಲೆ ಮುನಿಸಿಕೊಂಡರೆ ನಾರುವುದು ನಮ್ಮ ಹಿಂಭಾಗವೇ ಎನ್ನುವುದು ಒಂದು ಗಾದೆ. ಆ ಗಾದೆಗೆ ತಕ್ಕಂತೆಯೇ ಪಾಕಿಸ್ತಾನ ಹಂತ ಹಂತವಾಗಿ ದಿವಾಳಿ ಎದ್ದುಬಿಟ್ಟಿತು.


ಹೌದು, ಪಾಕಿಸ್ತಾನದ ಬಳಿ ಈಗಿರುವ ವಿದೇಶಿ ವಿನಿಮಯ 4 ಸಾವಿರ ಕೋಟಿ ರೂಪಾಯಿ, ಅಷ್ಟೆ, ಪಾಕಿಸ್ತಾನದಂತಹ ದೇಶಕ್ಕೆ ಇದು ಅಗತ್ಯ ವಸ್ತುಗಳ ಪೂರೈಕೆಗೆ 3 ವಾರಗಳ ಮಟ್ಟಿಗೆ ಆಗುತ್ತೆ. ಸಾಲ ಪಡೆಯೋಕೆ ದೇಶದ ಮೌಲ್ಯದ ಶೇ.65 ಪಟ್ಟು ಮೀರಿ ಸಾಲ ಮಾಡಿದ್ದಾಗಿದೆ. ಸಿಂಪಲ್ಲಾಗ್ ಹೇಳಬೇಕೆಂದರೆ 1 ಲಕ್ಷ ರೂ. ಮೌಲ್ಯದ ಆಸ್ತಿ ತೋರಿಸಿ, 65 ಲಕ್ಷ ಸಾಲ ಪಡೆದು ಖರ್ಚು ಮಾಡಿದವನ ಕಥೆ ಇದು. ಈಗ ಸಾಲ ಪಡೆಯೋಕೆ ಬೇಕಾದ ಅರ್ಹತೆಯೂ ಇಲ್ಲ. ಯೋಗ್ಯತೆಯೂ ಇಲ್ಲ. ಸಾಲ ಸಿಕ್ಕಲ್ಲ,, ಸರಿ. ಆಮೇಲೆ.. ಯಾರಾದರೂ ಭಿಕ್ಷೆ ಕೊಟ್ಟರೆ ಉಂಟು. ಇಲ್ಲದಿದ್ದರೆ ಇಲ್ಲ. ಅಲ್ಲೀಗ ಎಲ್ಲರಿಗೂ ಪೆಟ್ರೋಲ್, ಡೀಸೆಲ್ ಸಿಕ್ಕಲ್ಲ. ಕರೆಂಟ್ ಇಲ್ಲ. ಆಸ್ಪತ್ರೆಗೆ ಹೋದರೆ ಔಷಧಿಗಳಿಲ್ಲ. ಎಮರ್ಜೆನ್ಸಿಯಾದರೆ ವೆಂಟಿಲೇಟರ್ ಇಲ್ಲ. ಈಗಾಗಲೇ ಸಿಕ್ಕ ಸಿಕ್ಕಲ್ಲಿ ದರೋಡೆಗಳಾಗುತ್ತಿವೆ. ಧರ್ಮಕ್ಕಿಂತ ಹೊಟ್ಟೆಯ ಧರ್ಮ ದೊಡ್ಡದು ಎನ್ನುವುದು ಅನ್ನವೂ ಸಿಕ್ಕದಿದ್ದಾಗ ಗೊತ್ತಾಗಿದೆ. ಕೆಲವರಂತೂ ಬಹಿರಂಗವಾಗಿಯೇ ಸಭೆ ನಡೆಸಿ ನಮ್ಮನ್ನು ಭಾರತಕ್ಕೆ ಸೇರಿಸಿಕೊಳ್ಳಿ ಎಂದು ಕಣ್ಣೀರಿಡತೊಡಗಿದ್ದಾರೆ. ಇವೆಲ್ಲದರ ನಡುವೆಯ ಸಾಲ ಕೊಡೋಕೆ ಆಗಲ್ಲ ಆಗಲ್ಲ ಎನ್ನುತ್ತಿದ್ದ ವಿಶ್ವಸಂಸ್ಥೆಯ ಐಎಂಎಫ್ ಒಂದಿಷ್ಟು ಸಾಲ ಕೊಡೋಕೆ ಒಪ್ಪಿದೆ.


ಐಎಂಎಫ್ ಸಾಲ ಕೊಡ್ತದೆ, ಆದರೆ.. ಷರತ್ತುಗಳು ಅನ್ವಯ
ಮೊದಲು ಸಾಲ ಕೊಡಲು ಒಪ್ಪದೇ ಇದ್ದ ಐಎಂಎಫ್ ಸಾಲ ಕೊಡುವುದಕ್ಕೆ ಒಪ್ಪಿದ್ದೇಕೆ ಎಂಬ ಪ್ರಶ್ನೆ ಕಾಡುವುದು ಸಹಜವೇ. ಸಾಲ ಕೊಡಬೇಕೆಂದರೆ ನಾವು ಹೇಳಿದಂತೆ ಕೇಳಬೇಕು ಎಂದಿರೋ ಐಎಂಎಫ್, ಡಾಲರ್ ಎದುರು ಪಾಕಿಸ್ತಾನದ ರೂಪಾಯಿ ಮೌಲ್ಯವನ್ನ 256 ರೂಪಾಯಿಗೆ ಏರಿಸಿದೆ. ಹಾಗಂತ ಮೊದಲು ಕಡಿಮೆ ಇತ್ತು ಎಂದಲ್ಲ. ಡಾಲರ್ ಎದುರು ಪಾಕ್ ರೂಪಾಯಿ ಮೌಲ್ಯ 175 ರೂ. ಇತ್ತು. ಈಗ 225 ರೂ. ಮೊದಲು ನೋನೋ.. ಪ್ಲೀಸ್ ಎನ್ನುತ್ತಿದ್ದ ಪಾಕಿಸ್ತಾನಕ್ಕೆ ಮತ್ತೊಂದು ಅವಕಾಶವನ್ನೇ ಕೊಟ್ಟಿಲ್ಲ ಐಎಂಎಫ್. ಕೊನೆಗೂ ರೂಪಾಯಿ ಅಪಮೌಲ್ಯಕ್ಕೆ ಪಾಕ್ ಒಪ್ಪಿದೆ. ಅಷ್ಟೇ ಅಲ್ಲ, ಇನ್ನು ಮೇಲೆ ಪಾಕಿಸ್ತಾನ ಸರ್ಕಾರ ಸರ್ಕಾರಿ ನೌಕರರಿಗೆ ಕೊಡುತ್ತಿರುವ ವೇತನವನ್ನು ಕಡಿಮೆ ಮಾಡಬೇಕು. ಅಷ್ಟೇ ಅಲ್ಲ, ಪೆಟ್ರೋಲ್, ಡೀಸೆಲ್ ಭತ್ಯೆ ಕೊಡುವಂತಿಲ್ಲ. ಸರ್ಕಾರಿ ವಾಹನಗಳ ಸಂಖ್ಯೆಯೂ ಕಡಿತಗೊಳ್ಳಬೇಕು. ಅಡುಗೆ ಅನಿಲ, ಕರೆಂಟ್ ರೇಟ್ ಇನ್ನೂ ದುಬಾರಿಯಾಗಬೇಕು. ಆಂತರಿಕ ಭದ್ರತಾ ಏಜೆನ್ಸಿಗಳಿಗೆ ಹಣ ಖರ್ಚು ಮಾಡುವಂತಿಲ್ಲ. (ಇದು ಭಾರತಕ್ಕೆ ಲಾಭದಾಯಕವಾಗಲಿದೆ. ಏಕೆಂದರೆ ಆಂತರಿಕ ಭದ್ರತೆ ಹೆಸರಿನಲ್ಲಿಯೇ ಪಾಕ್ ಸರ್ಕಾರ, ಮಿಲಿಟರಿ ಹಾಗೂ ಐಎಸ್‍ಐ ಉಗ್ರ ಸಂಘಟನೆಗಳಿಗೆ ಹಣ ನೀಡುತ್ತಿದ್ದವು. ಅದನ್ನು ವಿವೇಚನಾ ನಿಧಿ ಹೆಸರಲ್ಲಿ ಖರ್ಚು ಮಾಡುತ್ತಿದ್ದವು) ಅಧಿಕಾರಿಗಳು, ಸೈನ್ಯಕ್ಕೆ ನೀಡಿರುವ ಕಟ್ಟಡಗಳನ್ನು ವಾಪಸ್ ಪಡೆದು ಸಾರ್ವಜನಿಕರಿಗೆ ಬಾಡಿಗೆ ಕೊಡಬೇಕು. ಸಂಸದರ ವೇತನವೂ ಶೇ.15ರಷ್ಟು ಕಡಿಮೆ ಆಗಬೇಕು. ಗಣ್ಯರ ವಿದೇಶ ಪ್ರಯಾಣಕ್ಕೆ ಕಡಿವಾಣ ಬೀಳಬೇಕು. ಇನ್ನು ಮುಂದೆ ಪಾಕಿಸ್ತಾನದ ಶ್ರೀಮಂತನೊಬ್ಬ ತನ್ನ ದುಡ್ಡಿನಲ್ಲೇ ಆದರೂ ಫಾರಿನ್ನಿಗೆ ಹೊರಟರೂ, ಪೈಸೆ ಪೈಸೆಗೂ ಲೆಕ್ಕ ಕೊಡಬೇಕು ಹಾಗೂ ದಂಡ ಕಟ್ಟಬೇಕು.
ಅಬ್ಬಾ..
ಇಷ್ಟೆಲ್ಲ ಷರತ್ತುಗಳನ್ನು ಒಪ್ಪಿಕೊಂಡರೆ ಪಾಕಿಸ್ತಾನ, ಪಾಕಿಸ್ತಾನವಾಗಿ ಉಳಿಯಲ್ಲ. ಅದು ಯಾರದ್ದೋ ತಾಳಕ್ಕೆ ತಕ್ಕಂತೆ ಕುಣಿಯುವಂತಾಗುತ್ತೆ, ಅಷ್ಟೆ. ಅದು ಸ್ವಾಭಿಮಾನ ಮರೆತು ಬದುಕುವ ರಣಹೇಡಿಯ ಬದುಕು. ಪಾಕಿಸ್ತಾನದ ನೆರವಿಗೆ ಮುಸ್ಲಿಂ ರಾಷ್ಟ್ರಗಳು ಬರಲಿಲ್ಲವಾ ಎಂದು ಪ್ರಶ್ನಿಸುವುದು ತಪ್ಪು. ಪುಂಡಪೋಕರಿಗಳನ್ನು ಹೆತ್ತ ತಂದೆತಾಯಿಯೇ ಸಹಿಸುವುದಿಲ್ಲ. ಇನ್ನು ಕೇವಲ ತಮ್ಮ ಧರ್ಮದವರಿದ್ದಾರೆ ಎಂಬ ಕಾರಣಕ್ಕೆ, ಧರ್ಮಕ್ಕಾಗಿ ರಕ್ತ ಸುರಿಸುತ್ತಾರೆ ಎಂಬ ಏಕೈಕ ಕಾರಣಕ್ಕೆ ದುಡ್ಡು ಖರ್ಚು ಮಾಡೋಕೆ ಶ್ರೀಮಂತ ರಾಷ್ಟ್ರಗಳಿಗೇನು ಹುಚ್ಚು ಹಿಡಿದಿದೆಯಾ?



