ಐಶ್ವರ್ಯ ಮಹದೇವು. ಮಾಜಿ ಶಾಸಕ ಮಂಚನಹಳ್ಳಿ ಮಹದೇವು ಪುತ್ರಿ. ಬೆಂಕಿ ಮಹದೇವು ಎಂದೇ ಖ್ಯಾತರಾಗಿದ್ದ ಮಹದೇವು, ಈಗಿಲ್ಲ. ಒಂದು ಕಾಲದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇಬ್ಬರಿಗೂ ಆತ್ಮೀಯರಾಗಿದ್ದ ಮಹದೇವು, ಸಿದ್ದರಾಮಯ್ಯ ಜೊತೆ ಜೆಡಿಎಸ್`ನಲ್ಲಿದ್ದವರೇ. ಹೆಚ್.ವಿಶ್ವನಾಥ್ ವಿರುದ್ಧ ಗೆದ್ದಿದ್ದ ಅವರಿಗೆ ನಂತರದ ಚುನಾವಣೆಯಲ್ಲಿ ಟಿಕೆಟ್ ಸಿಕ್ಕಿರಲಿಲ್ಲ. ಸ್ವತಃ ಅದನ್ನು ಸಿದ್ದರಾಮಯ್ಯ ಬಹಿರಂಗ ವೇದಿಕೆಯಲ್ಲಿ ಹೇಳಿಕೊಂಡಿದ್ದರು ಸಿದ್ದರಾಮಯ್ಯ.


ಐಶ್ವರ್ಯ ಮಹದೇವು ಕಣ್ಣೀರು ಹಾಕಿದ್ದೇಕೆ?
ಸಾಲಿಗ್ರಾಮದಲ್ಲಿ ನಡೆದ ಸಮಾವೇಶದಲ್ಲಿ ಐಶ್ವರ್ಯ ಮಹದೇವು ಡಿಕೆ ಶಿವಕುಮಾರ್ ಅವರು ನನ್ನ ತಂದೆಯಂತೆ. ತಂದೆಯನ್ನು ಕಳೆದುಕೊಂಡು 17 ವರ್ಷವಾಗಿದೆ. ಆಗಿನಿಂದಲೂ ನನಗೆ ಬೆಂಬಲವಾಗಿರುವುದು ಡಿಕೆ ಶಿವಕುಮಾರ್ ಎಂದು ಬಹಿರಂಗವಾಗಿ ಹೇಳಿದ್ದರು. ಅದು ಡಿಕೆ ಶಿವಕುಮಾರ್ ಭಾಷಣ ಆರಂಭವಾಗುವುದಕ್ಕೆ ಮುನ್ನ. ಅಷ್ಟೇ ಅಲ್ಲ, ಅದೇ ವೇದಿಕೆಯಲ್ಲಿ ರಾಜಕೀಯ ಅಂದ್ರೆ ಜವಾಬ್ದಾರಿ. ಒಬ್ಬ ವ್ಯಕ್ತಿಗೆ ವೋಟ್ ಹಾಕಿದರೆ, ಆ ವ್ಯಕ್ತಿ ಪರವಾಗಿಯೇ ಇರಬೇಕು. 

ಡಿಕೆಶಿ ಸಿಎಂ ಆಸೆಗೆ ಐಶ್ವರ್ಯ ಮಹದೇವು ಚಪ್ಪಾಳೆ
ವಿಶೇಷವೆಂದರೆ ಇದೇ ವೇದಿಕೆಯಲ್ಲಿ ರವಿಶಂಕರ್ ಅವರ ಹೆಸರು ಘೋಷಿಸಿದ ಡಿಕೆ ಶಿವಕುಮಾರ್, ವೇದಿಕೆಯಲ್ಲಿಯೇ ಬೆಂಕಿ ಮಹದೇವು ಅವರನ್ನು ನೆನಪಿಸಿಕೊಂಡರು. ಐಶ್ವರ್ಯ ಮಹದೇವು ಅವರಿಗೆ ಸೂಕ್ತ ಸ್ಥಾನಮಾನ ನೀಡುವ ಭರವಸೆ ಅವರ ಮಾತುಗಳಲ್ಲಿಯೇ ಇತ್ತು. ಐಶ್ವರ್ಯ, ತಾನು ಯಾವ ತೀರ್ಮಾನ ತೆಗೆದುಕೊಂಡರೂ ಸರಿ. ಪಕ್ಷ ಮುಖ್ಯ ಎಂದಿದ್ದಾರೆ ಎಂದರು. ಆಗಲೂ ಐಶ್ವರ್ಯ ಮಹದೇವು ಕಣ್ಣೊರೆಸಿಕೊಳ್ಳುತ್ತಲೇ ಇದ್ದರು. ಆದರೆ ಯಾವಾಗ ಡಿಕೆ ಶಿವಕುಮಾರ್ ವಿಧಾನನೌಧದ 3ನೇ ಮಹಡಿಯಲ್ಲಿ ಕೂರುವಂಎ ನನ್ನನ್ನು ಗೆಲ್ಲಿಸಿ ಎಂದರೋ.. ಆಗ ನೋವಿನಲ್ಲೂ ನಗುತ್ತಲೇ ಚಪ್ಪಾಳೆ ತಟ್ಟಿದರು ಐಶ್ವರ್ಯ ಮಹದೇವು. ವಿಧಾನಸೌಧದ ಮೂರನೇ ಮಹಡಿಯಲ್ಲಿರುವುದು ಸಿಎಂ ಕಚೇರಿ. ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ದು ಹೀಗೆ.



