ಹಾಸನ. ವಿವಾದ..ಗೊಂದಲ..ಬಿಕ್ಕಟ್ಟು..ಕೌಟುಂಬಿಕ ಸಮರ..ಗುದ್ದಾಟಗಳೆಲ್ಲ ಸದ್ಯಕ್ಕೆ ಮುಗಿಯುವ ಲಕ್ಷಣಗಳಿಲ್ಲ. ಹೊರಗಿನಿಂದ ಎಲ್ಲವೂ ಚೆಂದ. ಆದರೆ ಒಳಗೆ ಆ ಪರಿಸ್ಥಿತಿ ಇಲ್ಲ. ದೇವೇಗೌಡರ ಕುಟುಂಬದಲ್ಲಿ ತಳಮಳಗಳಿವೆ. ಭವಾನಿ ರೇವಣ್ಣ ಅವರಿಗೆ ಹಾಸನಕ್ಕೆ ಟಿಕೆಟ್ ಕೊಡಬೇಕೋ ಬೇಡವೋ.. ಎಂಬ ಜಿಜ್ಞಾಸೆ ಮುಗಿದಿಲ್ಲ. ಬಗೆಹರಿದಿಲ್ಲ. ಭವಾನಿಯವರು ಓಪನ್ ಆಗಿ ಹೇಳಿಕೆ ಕೊಟ್ಟು, ಆಮೇಲೆ ಕೂಲ್ ಆಗಿದ್ದರೂ, ಬೆಂಕಿ ಆರಿಲ್ಲ. ಹೊಗೆಯಾಡುತ್ತಲೇ ಇದೆ. ಕುಮಾರಸ್ವಾಮಿ ಜೊತೆ ಈಗಾಗಲೇ ರೇವಣ್ಣ ಕುಟುಂಬ ಮಾತುಕತೆ ನಡೆಸಿದ್ದರೂ, ಕುಮಾರಸ್ವಾಮಿ ಅತ್ತಿಗೆಯ ಸ್ಪರ್ಧೆಗೆ ಎಸ್ ಎಂದಿಲ್ಲ. ಆದರೆ ಬಹಿರಂಗವಾಗಿ ಟಿಕೆಟ್ ಕೊಡೋಕೆ ಆಗಲ್ಲ ಎಂದಿದ್ದಾರೆ. ಇದೀಗ ಹೊಸ ಡೆಡ್ ಲೈನ್ ಫಿಕ್ಸ್ ಆಗಿದೆ.
ಹೊಸ ಡೆಡ್‍ಲೈನ್ ಶಿವರಾತ್ರಿ :ಕುಮಾರಸ್ವಾಮಿ ಹೇಳಿದಂತೆಯೇ ಆಗಿದ್ದರೆ ಇಷ್ಟು ಹೊತ್ತಿಗೆ ಹಾಸನದ ಗೊಂದಲಗಳೆಲ್ಲ ಬಗೆಹರಿದು ಪ್ರಚಾರ ಅದ್ಧೂರಿಯಾಗಿ ನಡೆಯಬೇಕಿತ್ತು. ಆದರೆ ಏಪ್ರಿಲ್ 4ರ ಡೆಡ್ ಲೈನ್ ಫೇಲ್ ಆಯ್ತು. ಏಪ್ರಿಲ್ 12ರ ಡೆಡ್ ಲೈನ್ ಕೂಡಾ ಡೆಡ್ ಆಯ್ತು. ಈಗ ಹೊಸ ಡೆಡ್ ಲೈನ್ ಫಿಕ್ಸ್ ಆಗಿದ್ದು, ಶಿವರಾತ್ರಿಯಂದು ದೇವೇಗೌಡರ ಇಡೀ ಕುಟುಂಬ ಒಟ್ಟಿಗೇ ಸೇರುವ ಸೂಚನೆಗಳಿವೆ. ಆ ದಿನ ದೇವೇಗೌಡರ ಸಮ್ಮುಖದಲ್ಲೇ ಮಾತುಕತೆ ನಡೆಯಲಿದೆ. ಆ ದಿನ ಫೈನಲ ಆಗಲಿದೆ ಹಾಸನ ರಹಸ್ಯ. ದೇವೇಗೌಡ-ಚೆನ್ನಮ್ಮ ದಂಪತಿ, ಕುಮಾರಸ್ವಾಮಿ-ಅನಿತಾ-ನಿಖಿಲ್ ಹಾಗೂ ರೇವಣ್ಣ-ಭವಾನಿ-ಪ್ರಜ್ವಲ್-ಸೂರಜ್ ಎಲ್ಲರೂ ಸಭೆಯಲ್ಲಿ ಭಾಗವಹಿಸ್ತಾರೆ. ಆ ದಿನವೇ ಎಲ್ಲ ಚರ್ಚೆಯೂ ನಡೆದು ಹಾಸನ ಟಿಕೆಟ್ ಯಾರಿಗೆ ಅನ್ನೋದು ಫೈನಲ್ ಆಗಲಿದೆ.
ಹೆಚ್.ಡಿ.ರೇವಣ್ಣ ಡಬಲ್ ಸೂತ್ರ :ಇದು ಕುಮಾರಸ್ವಾಮಿಯವರದ್ದೇ ತಂತ್ರ. 2018ರಲ್ಲಿ ಕುಮಾರಸ್ವಾಮಿ ಪಕ್ಷದಿಂದ ತಾವು ಮತ್ತು ರೇವಣ್ಣ ಇಬ್ಬರೇ ಚುನಾವಣೆಗೆ ನಿಲ್ಲುವುದು ಎಂದು ಹೇಳಿಕೆ ಕೊಟ್ಟಿದ್ದರು. ಅದರಂತೆಯೇ ನಡೆದುಕೊಂಡಿದ್ದರೂ ಕೂಡಾ. ಆಗಲೂ ಭವಾನಿ ರೇವಣ್ಣ ಅವರಿಗೆ ಹಾಸನ ಜಿಲ್ಲೆಯ ಯಾವುದಾದರೂ ಕ್ಷೇತ್ರದಲ್ಲಿ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಇತ್ತು. ಆಗ ಕುಟುಂಬ ರಾಜಕಾರಣದ ಟೀಕೆಗೆ ಗುರಿಯಾತ್ತೇವೆ ಎಂದು ಹೇಳುವ ಮೂಲಕ ಅದನ್ನು ತಡೆಹಿಡಿದಿದ್ದರು. ಆದರೆ ತಾವು ರಾಮನಗರ ಮತ್ತು ಚನ್ನಪಟ್ಟಣ ಎರಡೂ ಕಡೆ ನಿಂತು ಗೆದ್ದು, ನಂತರ ರಾಮನಗರವನ್ನೇ ಬಿಟ್ಟುಕೊಟ್ಟರು. ಆಗ ಅನಿತಾ ಕುಮಾರಸ್ವಾಮಿ ಎಂಎಲ್`ಎ ಆದರು. ಅದಾದ ನಂತರ 2019ರಲ್ಲಿ ಮಂಡ್ಯಕ್ಕೆ ನಿಖಿಲ್ ಕುಮಾರಸ್ವಾಮಿ ಬಂದರು. ಹೀಗಾಗಿಯೇ ಹಾಸನಕ್ಕೆ ಪ್ರಜ್ವಲ್ ರೇವಣ್ಣ ಬರುವಂತಾಯಿತು ಎಂದು ಜೆಡಿಎಸ್ ಕಾರ್ಯಕರ್ತರೇ ಮಾತನಾಡಿಕೊಂಡರು. ಅದು ಬೇರೆಯದೇ ಕಥೆ.
ಈಗ ಅದೇ ಸೂತ್ರವನ್ನು ಅಂದರೆ ರಾಮನಗರ+ಚನ್ನಪಟ್ಟಣ ಸೂತ್ರವನ್ನು ಫಾಲೋ ಮಾಡಲು ರೇವಣ್ಣಮುಂದಾಗಿದ್ದಾರೆ ಎನ್ನಲಾಗಿದೆ. ಅಂದರೆ ತಾವು ಹಾಸನ ಮತ್ತು ಹೊಳೆನರಸೀಪುರ ಎರಡೂ ಕಡೆ ನಿಲ್ಲುವುದು. ಗೆಲ್ಲುವುದು ತಮಗೆ ಕಷ್ಟವಲ್ಲ. ಎರಡೂ ಕಡೆ ಗೆದ್ದ ನಂತರ ಒಂದು ಕ್ಷೇತ್ರಕ್ಕೆ ರಾಜೀನಾಮೆ ಕೊಟ್ಟು, ಮತ್ತೊಂದು ಕ್ಷೇತ್ರಕ್ಕೆ ಭವಾನಿ ರೇವಣ್ಣ ನಿಲ್ಲುವಂತೆ ಮಾಡುವುದು ಎಂಬುದೇ ಡಬಲ್ ಸೂತ್ರ. ಆದರೆ ಇವೆಲ್ಲದಕ್ಕೂ ಕೊನೆ ಹಾಡುವುದು 3ನೇ ಕ್ಲೈಮಾಕ್ಸ್`ನಲ್ಲಿ. ಅದು ಶಿವರಾತ್ರಿಯ ದಿನ ಎನ್ನುವುದೇ ವಿಶೇಷ.
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes.The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.