ಭಾರತ ಚಿತ್ರರಂಗದ ಹೆಮ್ಮೆಯ ಗಾಯಕ ಸೋನು ನಿಗಮ್ ಮೇಲೆ ಮುಂಬೈನಲ್ಲಿ ಹಲ್ಲೆಯಾಗಿದೆ. ಹಲ್ಲೆ ಮಾಡಿರುವುದು ಶಿವಸೇನಾ ಶಾಸಕನ ಮಗ. ಮುಂಬೈನ ಚಂಬುರ್ ಬಳಿ ಸೋನು ನಿಗಮ್ ಕಾರ್ಯಕ್ರಮವಿತ್ತು. ವೇದಿಕೆ ಮೇಲೆ ಸೋನು ನಿಗಮ್ ಹಾಡುತ್ತಿದ್ದರು. ಈ ವೇಳೆ ದಿಢೀರ್ ಎಂದು ತನ್ನ ಬೆಂಗಾವಲು ಪಡೆಯೊಂದಿಗೆ ಬಂದ ಶಿವಸೇನಾ ಶಾಸಕ ಪ್ರಕಾಶ್ ಪಟ್ನೇಕರ್ ಮಗ ಸ್ವಪ್ನಿಲ್ ಪಟ್ನೇಕರ್ ಹಾಗೂ ಅವರ ಸೋದರಳಿಯನ ಮಧ್ಯೆ ಜಗಳ ಶುರುವಾಯ್ತು. ಅಲ್ಲಿಗೇ ನಿಲ್ಲಲಿಲ್ಲ. ಕನ್ಸರ್ಟ್ ಮುಗಿಸಿ ವಾಪಸ್ ಆಗುತ್ತಿದ್ದ ಸೋನು ನಿಗಮ್ ಸುತ್ತುವರಿದ ಸ್ವಪ್ನಿಲ್ ಪಟ್ನೇಕರ್ ಮತ್ತವನ ಗ್ಯಾಂಗ್, ಸೋನು ನಿಗಮ್ ಹಾಗೂ ಬೆಂಗಾವಲಿನವರ ಮೇಲೆ ಹಲ್ಲೆ ನಡೆಸಿದೆ. ಸೋನು ನಿಗಮ್ ಅವರ ತಂಡದಲ್ಲಿದ್ದ ರಬ್ಬಾನಿ ಎಂಬುವವರಿಗೆ ಗಾಯವಾಗಿದೆ. ಸೋನು ನಿಗಮ್ ಅವರನ್ನೂ ಮೆಟ್ಟಿಲ ಮೇಲೆ ತಳ್ಳಲಾಗಿದ್ದು, ಅವರೂ ಬಿದ್ದಿದ್ದಾರೆ. ಗಂಭೀರ ಗಾಯಗಳಾಗಿಲ್ಲ.





