ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರದ ಗದ್ದುಗೆ ಏರಿದೆ. ಪಾಲಿಕೆಯ ನೂತನ ಮೇಯರ್ ಆಗಿ ವಿಶಾಲ್ ದರ್ಗಿ ಹಾಗೂ ಉಪಮೇಯರ್ ಆಗಿ ಶಿವಾನಂದ ಪಿಸ್ತಿ ಆಯ್ಕೆಯಾಗಿದ್ದಾರೆ.
ಕಲಬುರಗಿಯಲ್ಲಿ ಅತೀ ಹೆಚ್ಚು ಸ್ಥಾನ ಗಳಿಸಿದ್ದುದು ಬಿಜೆಪಿ. ಆದರೆ ಕಾಂಗ್ರೆಸ್ ಸಲೀಸಾಗಿ ಗೆಲ್ಲಬಹುದಾಗಿದ್ದ ಚುನಾವಣೆ ಇದು. ಒಟ್ಟು ಸ್ಥಾನ ಇದ್ದದ್ದು 65. ಬಿಜೆಪಿಗೆ 33 ಮತಗಳು ಸಿಕ್ಕರೆ, ಕಾಂಗ್ರೆಸ್ಸಿಗೆ 32 ಮತ ಸಿಕ್ಕವು. ಕಾಂಗ್ರೆಸ್ಸಿಗೆ 30ರ ಸಂಖ್ಯಾಬಲವಿತ್ತು. ಜೆಡಿಎಸ್ ಬೆಂಬಲ ನೀಡಿತ್ತು. ಅವರದ್ದು 4 ಸ್ಥಾನ. ಆದರೆ ಕೊನೆಗೆ ಬಂದಿದ್ದು ಮಾತ್ರ 32. ಕಾರಣ ಮಲ್ಲಿಕಾರ್ಜುನ ಖರ್ಗೆ.
ಪಾಲಿಕೆ ಚುನಾವಣೆಯಲ್ಲಿ ಎಲ್ಲರೂ ಮತ ಹಾಕುತ್ತಾರೆ. ಪಾಲಿಕೆ ವ್ಯಾಪ್ತಿಯಲ್ಲಿ ಮತಪತ್ರ ಇರುವ ಜನಪ್ರತಿನಿಧಿಗಳು ಅಂದರೆ ವಿಧಾನಸಭೆ, ವಿಧಾನಪರಿಷತ್ ಶಾಸಕರು, ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರೂ ಮತ ಹಾಕಬಹುದು. ರಾಜ್ಯಸಭೆ ಸದಸ್ಯರಾಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಮತ ಇದ್ದದ್ದು ಕಲಬುರಗಿ ಪಾಲಿಕೆ ವ್ಯಾಪ್ತಿಯಲ್ಲಿ. ಖರ್ಗೆಯವರು ಬಂದು ಮತ ಹಾಕಿದ್ದರೆ ಆಗ ಪಾಲಿಕೆಯಲ್ಲಿ ಸಂಖ್ಯಾಬಲ ಸಮಸಮವಾಗುತ್ತಿತ್ತು. ಆಗ ಲಾಟರಿ ಆಯ್ಕೆ ಇರುತ್ತಿತ್ತು. ಅದು ಅದೃಷ್ಟದ ಆಟ.
ಅಷ್ಟೇ ಅಲ್ಲ, ಖರ್ಗೆಯವರು ನೇರವಾಗಿ ಅಖಾಡಕೆಕ ಇಳಿದಿದ್ದರೆ ನಡೆಯುತ್ತಿದ್ದ ಆಟವೇ ಬೇರೆ.
ಒಟ್ಟಿನಲ್ಲಿ ಈಗ ಮಲ್ಲಿಕಾರ್ಜುನ ಖರ್ಗೆಯವರ ಗೈರು ಹಾಜರಿಯಿಂದಾಗಿ ಕಲಬುರಗಿ ಪಾಲಿಕೆಯಲ್ಲಿ ಬಿಜೆಪಿ ಬಾವುಟ ಹಾರಿದೆ.



