ನಾನು ಒಕ್ಕಲಿಗ.. ನನಗೂ ಒಂದು ಚಾನ್ಸ್ ಕೊಡಿ. ಇದನ್ನು.. ಈ ಮಾತನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೋದಲ್ಲಿ.. ಬಂದಲ್ಲಿ.. ಅದರಲ್ಲೂ ಒಕ್ಕಲಿಗರ ಕೋಟೆಯಲ್ಲಿ ಹೋದಾಗಲೆಲ್ಲ ಹೇಳುತ್ತಿದ್ದಾರೆ. ಏಕೆಂದರೆ ಬೆಂಗಳೂರು ಗ್ರಾಮಾಂತರ & ನಗರ ಜಿಲ್ಲೆ, ರಾಮನಗರ, ಮಂಡ್ಯ, ಮೈಸೂರು, ಹಾಸನ, ಚಿಕ್ಕಬಳ್ಳಾಪುರ, ತುಮಕೂರು.. ಇಲ್ಲೆಲ್ಲ ಒಕ್ಕಲಿಗರು ಬಲಾಢ್ಯರು. ಅದರಲ್ಲೂ ಹಾಸನ, ಮಂಡ್ಯ, ರಾಮನಗರ ಜಿಲ್ಲೆಗಳು ಜೆಡಿಎಸ್`ನ ಭದ್ರಕೋಟೆ. ಇಲ್ಲಿ ಕಾಂಗ್ರೆಸ್ ವೀಕು. ಹೀಗಾಗಿಯೇ ಈ ಬಾರಿ ಕುಮಾರಸ್ವಾಮಿಯ ಅಸ್ತ್ರವನ್ನೇ ಡಿಕೆಶಿವಕುಮಾರ್ ಪ್ರಯೋಗ ಮಾಡುತ್ತಿದ್ದಾರೆ.


ಅಸ್ತ್ರ ನಂ.2 : ಕುಮಾರಸ್ವಾಮಿಯವರಿಗೆ ಎರಡು ಬಾರಿ ಸಿಎಂ ಮಾಡಿದ್ದೀರಿ. ದೇವೇಗೌಡರನ್ನು ಪ್ರಧಾನಿ ಮಾಡಿದ್ದೀರಿ. (ಈ ಮಾತು ಹೇಳುವಾಗ ಕುಮಾರಸ್ವಾಮಿಯವರನ್ನು ಸಿಎಂ ಮಾಡಿದ್ದರ ಹಿಂದೆ ಮತ್ತು ದೇವೇಗೌಡರು ಪ್ರಧಾನಿಯಾಗಿದ್ದರ ಹಿಂದೆ ನಮ್ಮ ಕೊಡುಗೆ ಇದೆ ಎಂದು ಹೇಳುವುದನ್ನು ಮರೆಯುವುದಿಲ್ಲ)
ಅಸ್ತ್ರ ನಂ.3 : ಕುಮಾರಸ್ವಾಮಿ 2ನೇ ಬಾರಿ ಸಿಎಂ ಆಗಿದ್ದಾಗ ಅವರ ಸರ್ಕಾರ ರಕ್ಷಣೆಗೆ ನಾನು ಕಡೆಯತನಕ ಹೋರಾಡಿದ್ದೆ ಎಂಬುದನ್ನು ಪದೇ ಪದೇ ನೆನಪಿಸುತ್ತಾರೆ. (ಈ ಲೆಕ್ಕಾಚಾರ ಇಟ್ಟುಕೊಂಡೇ ಆಗ ಕಣ್ಣಿಗೆ ಕಾಣುವಂತೆ ಹೋರಾಟ ಮಾಡಿದ್ದರಾ..? ಇದು ಈಗ ಕೇಳಿ ಬರುತ್ತಿರೋ ಪ್ರಶ್ನೆ)
ಅಸ್ತ್ರ ನಂ.4 : ಕುಮಾರಸ್ವಾಮಿ ಅವರಂತೆಯೇ ಒಕ್ಕಲಿಗರ ಭಾಗದಲ್ಲಿ ಎಮೋಷನಲ್ ಆಗಿ ಮಾತನಾಡುತ್ತಿದ್ದಾರೆ. ಸ್ವಾಮೀಜಿಗಳ ಜೊತೆ ಉತ್ತಮ ಬಾಂಧವ್ಯ ಮೈಂಟೇನ್ ಮಾಡುತ್ತಿದ್ದಾರೆ.
ಹೀಗೆ ಮಾತನಾಡುತ್ತಲೇ ಈ ಬಾರಿ ಮಿಸ್ ಆದರೆ ಮತ್ತೆಂದೂ ಸಾಧ್ಯವಿಲ್ಲ. ಕುಮಾರಸ್ವಾಮಿ ತಾವಾಗಿಯೇ ಅಧಿಕಾರ ಕಳೆದುಕೊಂಡರು ಎಂದು ಹೇಳುವುದು ಡಿಕೆ ಶಿವಕುಮಾರ್ ಗುರಿ ಮತ್ತು ತಂತ್ರ. ಆದರೆ ಕುಮಾರಸ್ವಾಮಿ ತಿರುಗೇಟು ಕೂಡಾ ಅಷ್ಟೇ ಇಂಟ್ರೆಸ್ಟಿಂಗ್. ಕಾಂಗ್ರೆಸ್ ಮತ್ತು ಬಿಜೆಪಿಯ ವರಿಷ್ಠರು ತಮ್ಮಿಬ್ಬರ ಜೊತೆ ಕಾಂಟ್ಯಾಕ್ಟ್‍ನಲ್ಲಿದ್ಧಾರೆ ಎಂಬ ಒಂದು ಮಾತು ಕಾಂಗ್ರೆಸ್ ಮತ್ತು ಬಿಜೆಪಿ ಹುರಿಯಾಳುಗಳನ್ನು ನಡುಗಿಸುತ್ತಿದೆ. ಸದ್ಯದ ಮಟ್ಟಿಗೆ ಎಲ್ಲ ಪಕ್ಷಗಳ ಸಮೀಕ್ಷೆಯಲ್ಲೂ ಈ ಬಾರಿ ಅತಂತ್ರ ಸರ್ಕಾರ ಎಂಬ ವಾದವೇ ಬಲವಾಗಿ ಬರುತ್ತಿದೆ.





