ಹಾಸನ ಅಭ್ಯರ್ಥಿ ವಿಚಾರದಲ್ಲಿ ನಾವು ನಿರ್ಧಾರ ಮಾಡುತ್ತೇವೆ. ಎಷ್ಟು ಸ್ಥಾನ ಪಡೆಯಲಿದೆ ಎಂದು ಮತದಾರರು ನಿರ್ಧರಿಸುತ್ತಾರೆ . ಒಂದು ಪ್ರಾದೇಶಿಕ ಪಕ್ಷಕ್ಕೆ ಯಾಕೆ ಇಷ್ಟೊಂದು ವಿರೋಧ. ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷವನ್ನು ಬೆಳೆಸುತ್ತಾರೆ. ಕರುಣಾನಿಧಿ ಕುಟುಂಬದಲ್ಲಿ ಏಳು ಜನ ಇದ್ದಾರೆ. ರಾಜ್ಯ ಸಭೆ, ಲೋಕಸಭೆ ಅಂತಾ ಬೇರೆ ಸ್ಥಾನದಲ್ಲಿದ್ದಾರೆ. ಒಂದು ಪ್ರಾದೇಶಿಕ ಪಕ್ಷವನ್ನು ಕೊಲ್ಲಲ್ಲು ಯಾಕೆ ಇಷ್ಟು ಪ್ರಯತ್ನ. ಈ ಪ್ರಶ್ನೆಯನ್ನು ಕಾಂಗ್ರೆಸ್, ಬಿಜೆಪಿ ತಮಿಳುನಾಡಿನಲ್ಲಿ ಕೇಳಲಿ ಎಂದಿದ್ದಾರೆ ಹೆಚ್.ಡಿ.ದೇವೇಗೌಡ.


ಹಾಸನ ಕ್ಷೇತ್ರದ ಟಿಕೆಟ್ ವಿಚಾರವಾಗಿ ಏನನ್ನೂ ಹೇಳುವುದಿಲ್ಲ. ಪದೇಪದೆ ಪ್ರಶ್ನಿಸಬೇಡಿ ಎಂದಿರೋ ದೇವೇಗೌಡ ಸಸ್ಪೆನ್ಸ್‍ನ್ನು ಹಾಗೆಯೇ ಇಟ್ಟಿದ್ದಾರೆ. ಅತ್ತ ಹಾಸನದಲ್ಲಿ ಮಾತನಾಡಿರುವ ಹೆಚ್.ಡಿ.ರೇವಣ್ಣ ಕೂಡಾ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ನನ್ನ ಮತ್ತು ಕುಮಾರಸ್ವಾಮಿ ಮಧ್ಯೆ ಬಿಕ್ಕಟ್ಟು ಮೂಡಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ ರೇವಣ್ಣ. ಪ್ರತಿದಿನ ನಮ್ಮದೇ ದಿನಾ ಪ್ರೋಗ್ರಾಂ ಮಾಡ್ತಿದ್ದೀರಿ, ಏಕೆ ಎಂದು ಟಿವಿ ಚಾನೆಲ್ಲುಗಳಿಗೆ ಪ್ರಶ್ನಿಸಿದ್ದಾರೆ.
ಅತ್ತ ಕುಮಾರಸ್ವಾಮಿ ಹಾಸನದ ವಿಚಾರವಾಗಿಯಾದರೂ ನಮ್ಮ ಪಕ್ಷಕ್ಕೆ ಪ್ರಚಾರ ಕೊಟ್ರಲ್ಲ, ಬಿಡಿ ಎಂದು ಟಿವಿ ಚಾನೆಲ್ಲಗಳಿಗೆ ಲೇವಡಿ ಮಾಡಿದ್ದಾರೆ.



