Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Politics

ಕೋಲಾರ ಸೀಕ್ರೆಟ್ ರಿಪೋರ್ಟ್ : ಸಿದ್ದರಾಮಯ್ಯ ರಿಸ್ಕ್ ತೆಗೆದುಕೊಂಡರಾ?

SpeciallU by SpeciallU
February 14, 2023
in Politics
Reading Time: 1 min read
0 0
0
ಕೋಲಾರ ಸೀಕ್ರೆಟ್ ರಿಪೋರ್ಟ್ : ಸಿದ್ದರಾಮಯ್ಯ ರಿಸ್ಕ್ ತೆಗೆದುಕೊಂಡರಾ?

ಸಿದ್ದರಾಮಯ್ಯ ಕೋಲಾರದಲ್ಲೇ ನಿಲ್ಲೋದಾಗಿ ಸ್ಪಷ್ಟವಾಗಿ ಹೇಳಿಬಿಟ್ಟಿದ್ದಾರೆ. ಒಂದಲ್ಲ.. ಎರಡಲ್ಲ.. ಹಲವು ಬಾರಿ ಹೇಳಿಕೆ ನೀಡಿ, ಕ್ಷೇತ್ರ ಸುತ್ತಾಡಿ.. ವಾಸ್ತುಪ್ರಕಾರದ ಮನೆಯನ್ನೂ ಹುಡುಕಿಕೊಂಡು ಕೋಲಾರವೇ ರಣರಂಗ ಎಂದು ಫಿಕ್ಸ್ ಆಗಿಬಿಟ್ಟಿದ್ದಾರೆ. ಆದರೆ, ಕ್ಷೇತ್ರ ಫೈನಲ್ ಮಾಡುವ ಮುನ್ನ ಕಾಣುತ್ತಿದ್ದ ಅಂಶಗಳೇ ಬೇರೆ.. ಇದೇ ನನ್ನ ಕ್ಷೇತ್ರ ಎಂದು ಘೋಷಿಸಿದ ಮೇಲೆ ಕಾಣುತ್ತಿರುವ ಅಂಶಗಳೇ ಬೇರೆ. ಕೊಲಾರ ಫೈನಲ್ ಮಾಡಿದ ಕೆಲವೇ ದಿನಗಳಲ್ಲಿ ಸಿದ್ದರಾಮಯ್ಯ ಕೋಲಾರಕ್ಕೆ 4 ಬಾರಿ ಭೇಟಿ ನೀಡಿದ್ದಾರೆ. ವಾರ್ ರೂಂ ಕೂಡಾ ಸ್ಥಾಪನೆ ಮಾಡಿದ್ದಾರೆ. ಆದರೆ ಸಿದ್ದರಾಮಯ್ಯಗೆ ಅವರದ್ದೇ ಆಪ್ತರ ಬಳಗ ಕೊಟ್ಟಿರುವ ರಿಪೋರ್ಟ್ ಆತಂಕಕಾರಿಯಾಗಿಯೇ ಇದೆ.

ಸೀಕ್ರೆಟ್ ವರದಿಯ ಪ್ರಕಾರ..

Related posts

ಗ್ಯಾರಂಟಿಯಿಂದ ಹೊರೆ : ಡಿಕೆ ಶಿವಕುಮಾರ್‌ ಒಪ್ಪಿಕೊಂಡ ಸತ್ಯ

ಈಗ ಮೀಡಿಯಾಗಳ ಮೇಲೆ ಮೋದಿಯದ್ದೂ ಟೀಕೆ..!

ಕಾಂಗ್ರೆಸ್ಗೆ ಕೋಲಾರ ಕ್ಷೇತ್ರದಲ್ಲಿ ಸ್ಥಳೀಯ ನಾಯಕರ, ಅದರಲ್ಲೂ ಅತ್ಯಂತ ಕೆಳಗಿನ ಹಂತದಲ್ಲಿ ಕೆಲಸ ಮಾಡುವ ಬೂತ್ ಮಟ್ಟದ ನಾಯಕರಿಲ್ಲ. ವೋಟ್ ಕೃಡೀಕರಿಸುವ ಬೂತ್ ಮಟ್ಟದ ನಾಯಕರ ಕೊರತೆ ಇದೆ. ಅಹಿಂದ ಮತಗಳು ಚದುರಿ ಹೋಗಿವೆ. 2 ಲಕ್ಷ 31 ಸಾವಿರ ಮತಗಳಲ್ಲಿ 1ಲಕ್ಷ 70 ಸಾವಿರ ಅಹಿಂದ ಮತಗಳು ವಿಭಜನೆಯಾಗಿ ಜೆಡಿಎಸ್-ಬಿಜೆಪಿ ಪಾಲಾಗಿವೆ. ಅಹಿಂದ ಮತಗಳನ್ನೆ ನಂಬಿಕೊಂಡರೇ ಸಿದ್ದರಾಮಯ್ಯ ಗೆಲುವು ಕಷ್ಟ.
ಕ್ಷೇತ್ರದಲ್ಲಿ ನಡೆದ ಸಿದ್ದರಾಮಯ್ಯ ದಲಿತ ವಿರೋಧಿ ಎಂಬ ಪ್ರಚಾರ ನಿಧಾನವಾಗಿ ಕೆಲಸ ಮಾಡುತ್ತಿರುವಂತೆ ಕಾಣುತ್ತಿದೆ. ಈಗಾಗಲೇ ಒಕ್ಕಲಿಗ, ಲಿಂಗಾಯತ ಹಾಗೂ ಹಿಂದೂ ವಿರೋಧಿ ಎಂಬ ಹಣೆಪಟ್ಟಿ ಇರುವಾಗ, ದಲಿತ ವಿರೋಧಿ ಆರೋಪ ಕೆಲಸ ಮಾಡಿದರೆ ಕಷ್ಟ ಕಷ್ಟ. ಕೇವಲ ಕುರುಬರು ಹಾಗೂ ಮುಸ್ಲಿಮರ ಮತಗಳನ್ನೇ ನಂಬಿಕೊಂಡು ಎಲೆಕ್ಷನ್ ಮಾಡಲು ಬರುವುದಿಲ್ಲ.

ಹಾಲಿ ಶಾಸಕ ಜೆಡಿಎಸ್`ನ ಶ್ರೀನಿವಾಸ ಗೌಡ. ಅವರೀಗಾಗಲೇ ಜೆಡಿಎಸ್ ಬಿಟ್ಟು, ಕುಮಾರಸ್ವಾಮಿ, ದೇವೇಗೌಡರನ್ನು ಟೀಕಿಸುವ ಮೂಲಕ ಒಕ್ಕಲಿಗರನ್ನೂ ಎದುರು ಹಾಕಿಕೊಂಡಿದ್ದಾರೆ. ಅವರ ಜೊತೆ ಹೋದರೆ ಗೆಲುವು ಕಷ್ಟ. ಅಲ್ಲದೆ ವೈರಲ್ ಆಗಿರುವ ಆಡಿಯೋದಲ್ಲಿ 17 ಕೋಟಿಯ ಲೆಕ್ಕ, ಮಂತ್ರಿಪಟ್ಟದ ಮಾತುಗಳು ನೆಗೆಟಿವ್ ಆಗುವ ಸಾಧ್ಯತೆಗಳೂ ಇವೆ.

ಕೋಲಾರದಲ್ಲಿ ನಿಜಕ್ಕೂ ಪ್ರಭಾವಿಯಾಗಿರುವುದು ಕೆ.ಎಚ್.ಮುನಿಯಪ್ಪ. ಅವರನ್ನು ಯಾವುದೇ ಕಾರಣಕ್ಕೂ ದೂರ ಇಡಬೇಡಿ ಎಂದಿದೆಯಂತೆ ವರದಿ. ಆದರೆ ಮುನಿಯಪ್ಪ ಕಳೆದ ಬಾರಿ ತಮ್ಮನ್ನು ಸೋಲಿಸಿದ್ದು ಸಿದ್ದರಾಮಯ್ಯ ಬೆಂಬಲಿಗರು ಎಂದು ಹೇಳಿಕೊಂಡಿದ್ದರು. ಈ ಬಾರಿ ತಮ್ಮ ಮಗಳಿಗಾಗಿ ಕೆಲಸ ಮಾಡುತ್ತಾರೆಯೇ ಹೊರತು, ಕಾಯಾವಾಚಾಮನಸಾ ಕೆಲಸ ಮಾಡುವ ಸಾಧ್ಯತೆ ಕಡಿಮೆ. ಈಗಾಗಲೇ ರಮೇಶ್ ಕುಮಾರ್ ಹಾಗೂ ಮುನಿಯಪ್ಪರನ್ನು ಒಂದುಗೂಡಿಸುವ ಸಿದ್ದರಾಮಯ್ಯ ಪ್ರಯತ್ನ, ಕಪ್ಪೆಗಳನ್ನು ತಕ್ಕಡಿಗೆ ಹಾಕಿದಂತಾಗುತ್ತಿದೆ. ಹೀಗಾಗಿ ಮೈಮರೆಯಬೇಡಿ.

ರಮೇಶ್ ಕುಮಾರ್ ತಮ್ಮ ಗೆಲುವಿಗಾಗಿ ಸಿದ್ದರಾಮಯ್ಯರನ್ನು ಬಳಸಿಕೊಂಡರೇ ಎಂಬ ಅನುಮಾನಗಳೂ ಇವೆ. ಶ್ರೀನಿವಾಸಪುರದಲ್ಲಿ ನಿಲ್ಲಬೇಕಿರುವ ರಮೇಶ್ ಕುಮಾರ್ ಅವರಿಗೆ ಗೆಲುವು ಸುಲಭವಲ್ಲ. ಸಿದ್ದರಾಮಯ್ಯ ಪಕ್ಕದ ಕ್ಷೇತ್ರದಲ್ಲಿ ನಿಂತರೆ ಅದರ ಪ್ರಭಾವದಿಂದ ತಾವೂ ಗೆಲ್ಲಬಹುದು ಎಂಬ ಲೆಕ್ಕ ಹಾಕಿದ್ದಾರೆ ಎಂಬ ವಾದವಿದೆ.

ವರ್ತೂರು ಪ್ರಕಾಶ್ ಜಿಲ್ಲೆಯಲ್ಲಿ ಪ್ರಭಾವಿ. ಕುರುಬ ಸಮುದಾಯಕ್ಕೆ ಸೇರಿದವರು. ಖಂಡಿತಾ ವರ್ತೂರು ಕುರುಬರ ಮತ ಒಡೆಯುತ್ತಾರೆ. ಜೆಡಿಎಸ್ ಕಾರಣದಿಂದ ಒಕ್ಕಲಿಗರ ಮತಗಳೂ ಒಡೆಯುತ್ತವೆ. ಕ್ಷೇತ್ರದಲ್ಲಿ ಮುಸ್ಲಿಮರು ಜೆಡಿಎಸ್ ಪರ ಒಲವು ತೋರುತ್ತಿದ್ದಾರೆ. ಹೀಗೆ ಪಕ್ಷದ ಖಾಯಂ ಮತದಾರರು ದೂರವಾಗುತ್ತಾ ಹೋದರೆ ಗೆಲುವು ಕಷ್ಟ ಎನ್ನುವುದು ಸೀಕ್ರೆಟ್ ವರದಿಯಲ್ಲಿರೋ ಪ್ರಮುಖ ಅಂಶಗಳು.

ಯಾವ ರಿಪೋರ್ಟ್ ಕೂಡಾ ಇಲ್ಲ :

ಇದು ಸಿದ್ದರಾಮಯ್ಯ ಕೊಡುತ್ತಿರುವ ಸ್ಪಷ್ಟನೆ. ಕ್ಷೇತ್ರಕ್ಕೆ ನಿಲ್ಲುತ್ತೇನೆ ಎಂದ ಮೇಲೆ ಕ್ಷೇತ್ರಕ್ಕೆ ಬರಲೇಬೇಕು. ಮತದಾರರನ್ನು ಮಾತನಾಡಿಸಬೇಕು. ಹೀಗಾಗಿ ಬರುತ್ತಿದ್ದೇನೆ. ವರ್ತೂರು ಪ್ರಕಾಶ್ ಒಬ್ಬ ಚಿಲ್ಲರೆ. ಅವನ ಬಗ್ಗೆ ನಾನೇನು ಮಾತನಾಡೋದು ಎಂದಿದ್ದಾರೆ ಸಿದ್ದರಾಮಯ್ಯ.

ಇಂಟೆಲಿಜೆನ್ಸ್ ರಿಪೋರ್ಟ್ ಪ್ರಕಾರ :

ಕೋಲಾರದಲ್ಲಿ ಸಿದ್ದರಾಮಯ್ಯ ಗೆಲುವು 50:50. ಸಿದ್ದರಾಮಯ್ಯ ಆಪ್ತರ ವರದಿ ಪ್ರಕಾರ 60:40. ಆದರೆ ಯಾವ ವರದಿಗಳಲ್ಲೂ ಕ್ಷೇತ್ರದಲ್ಲಿ ಹಾಲಿ ಗೆದ್ದಿದ್ದ ಜೆಡಿಎಸ್ ಬಗ್ಗೆ ಮಾತನಾಡುತ್ತಿಲ್ಲ. ಆದರೆ ಕ್ಷೇತ್ರದ ಮತದಾರರಂತೂ ಮಾತನಾಡುತ್ತಿದ್ದಾರೆ. ಎಲೆಕ್ಷನ್ ವರದಿಗಳ ಮೇಲೆ ನಡೆಯುವುದಿಲ್ಲ. ಅಖಾಡದಲ್ಲಿ ನಡೆಯುತ್ತದೆ.

ಬಾದಾಮಿಗೆ ಬನ್ನಿ ಪ್ಲೀಸ್ : ಈ ಮಧ್ಯೆ ಸಿದ್ದರಾಮಯ್ಯರನ್ನು ಮತ್ತೆ ಬಾದಾಮಿಗೆ ಕರೆದುಕೊಂಡು ಹೋಗೋಕೆ ದೊಡ್ಡ ಸೈನ್ಯವೇ ಬಾದಾಮಿಯಿಂದ ಹೊರಟಿದೆ. ಬಾದಾಮಿ ಕ್ಷೇತ್ರದ ವ್ಯಾಪ್ತಿಗೆ ಬರುವ ಕಟಗೇರಿ, ನಂದಿಕೇಶ್ವರ, ಮುಷ್ಟಿಗೇರಿ, ನೀಲಗುಂದ, ಜಾಲಿಹಾಳ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಿಂದ 200ಕ್ಕೂ ಹೆಚ್ಚು ವಾಹನ, ಬಾದಾಮಿ, ಗುಳೇದಗುಡ್ಡ ಹಾಗೂ ಕೆರೂರು ನಗರಗಳಿಂದ ನೂರಕ್ಕೂ ಹೆಚ್ಚು ವಾಹನಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಿದ್ದರಾಮಯ್ಯ ಮನೆಗೆ ಬರಲಿದ್ದಾರೆ. ಇದು ಅಭಿಮಾನಿಗಳ ಮತ್ತಿಗೆ.

Tags: #ಸಿದ್ದರಾಮಯ್ಯ #ಕೋಲಾರ #ವರದಿ #ಕಾಂಗ್ರೆಸ್ #ಕ್ಷೇತ್ರ #ಜೆಡಿಎಸ್ #Siddharamaiah #Kolar #Report #Congress #Kshetra #JDS
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.