ಹಾಸನ ಜಿಲ್ಲೆಯ ಹಾಸನ, ಅರಕಲಗೂಡು, ಅರಸೀಕೆರೆ ಹಾಗೂ ಹೊಳೆನರಸೀಪುರ ಕ್ಷೇತ್ರಗಳು ಜೆಡಿಎಸ್`ನಲ್ಲಿ ಗೊಂದಲದ ಗೂಡು. ಈಗ ಕುಮಾರಸ್ವಾಮಿಯವರ ಪಂಚರತ್ನ ಯಾತ್ರೆ ಹಾಸನ ಪ್ರವೇಶಿಸಿದೆ. ಇದೇ ವೇಳೆ ಅರಸೀಕೆರೆ ಇಡೀ ರಾಜ್ಯದಲ್ಲಿ ಸದ್ದು ಮಾಡಿದ್ದುದು ಹೌದು. ಹಾಸನದ ಹಾಲಿ ಶಾಸಕ ಶಿವಲಿಂಗೇಗೌಡ ಜೆಡಿಎಸ್`ನಿಂದ ಎಂಎಲ್`ಎ ಆಗಿದ್ದವರು. ಸರಿಸುಮಾರು ವóರ್ಷಗಳಿಂದ ಶಿವಲಿಂಗೇಗೌಡರ ಒಡನಾಟ ಜೆಡಿಎಸ್`ಗಿಂತ ಕಾಂಗ್ರೆಸ್ ಜೊತೆಯಲ್ಲಿಯೇ ಹೆಚ್ಚಿತ್ತು. ಇದೀಗ ಅದು ಅಧಿಕೃತವಾಗಿದೆ.
ಹಾಸನಕ್ಕೆ ಪಂಚರತ್ನ ಯಾತ್ರೆ ಪ್ರವೇಶ ಮಾಡಿದಾಗ ಅರಸೀಕೆರೆಗೆ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಎದ್ದಿತ್ತು. ಜೆಡಿಎಸ್ ಕಾರ್ಯಕರ್ತರಲ್ಲಿ ಈ ಬಾರಿ ಪ್ರಜ್ವಲ್ ರೇವಣ್ಣ ಅವರೇ ಕ್ಯಾಂಡಿಡೇಟ್ ಆಗಲಿ ಎಂಬ ಆಸೆಯೂ ಇತ್ತು. ಸಂಸದ ಪ್ರಜ್ವಲ್ ರೇವಣ್ಣ ಇತ್ತೀಚೆಗೆ ಅರಸೀಕೆರೆಯಲ್ಲಿ ಸಂಸದರ ಒಂದು ಕಚೇರಿ ಉದ್ಘಾಟನೆ ಮಾಡಿ, ಕಾರ್ಯಕರ್ತರ ಜೊತೆ ಸಭೆಯನ್ನೂ ನಡೆಸಿದ್ದರು. ಈ ವೇಳೆ ಶಿವಲಿಂಗೇ ಗೌಡರಿಗೆ ಇನ್ನೂ ಒಂದು ಅವಕಾಶ ನೀಡುತ್ತೇವೆ ಎಂದಿದ್ದರು. ಆದರೆ ಕುಮಾರಸ್ವಾಮಿ ಶಿವಲಿಂಗೇಗೌಡರಿಗೆ ಟಿಕೆಟ್ ಇಲ್ಲ ಎಂದು ಘೋಷಿದ್ದಾರೆ. ಅಷ್ಟೇ ಅಲ್ಲ, 2004ರಲ್ಲಿ ಗಂಡಸಿ ಕ್ಷೇತ್ರದಲ್ಲಿ 18 ಮತಗಳಿಂದ ಸೋತಿದ್ದ ಅವರನ್ನು ಕರೆತಂದು ಅರಸೀಕೆರೆಯಲ್ಲಿ ನಿಲ್ಲಿಸಿ, ಗೆಲ್ಲಿಸಿದ್ದು ದೇವೇಗೌಡರು. ಈಗ ದೇವೇಗೌಡ, ಕುಮಾರಸ್ವಾಮಿ ನೋಡಿ ಯಾರು ವೋಟ್ ಹಾಕ್ತಾರೆ ಎನ್ನುತ್ತಿದ್ದಾರೆ. ಪಕ್ಷಕ್ಕೆ ದ್ರೋಹ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಅಷ್ಟೇ ಅಲ್ಲ, ಕೋಡಿ ಮಠದ ಶ್ರೀಗಳು ಕುರುಬರನ್ನು ಅಭ್ಯರ್ಥಿಯನ್ನಾಗಿ ಹಾಕಿದರೆ ಜೆಡಿಎಸ್ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ ಎಂದಿದ್ದಾರೆ ಕುಮಾರಸ್ವಾಮಿ. ಅಂದಹಾಗೆ ಆಕಾಂಕ್ಷಿಗಳ ಲಿಸ್ಟಿನಲ್ಲಿರುವ ಕುರುಬ ಅಭ್ಯರ್ಥಿ ಜಿ.ಪಂ.ಮಾಜಿ ಸದಸ್ಯರಾಗಿರುವ ಬಾಣಾವರ ಅಶೋಕ್. ಹೆಸರನ್ನೇ ಹೇಳದೆ ಇವರೇ ಕ್ಯಾಂಡಿಡೇಟ್ ಎಂದು ಘೋಷಿಸುವುದು ಕುಮಾರಸ್ವಾಮಿ ಶೈಲಿ. ಅಲ್ಲಿಗೆ ಪ್ರಜ್ವಲ್ ರೇವಣ್ಣ ಅವರನ್ನು ಅರಸೀಕೆರೆಗೆ ಕರೆತರುವ ಪ್ಲಾನ್ ಕೂಡಾ ಬಿದ್ದು ಹೋಗಿದೆ.
ಅರಸೀಕೆರೆಗೆ ಶಿವಲಿಂಗೇಗೌಡರಿಗೆ ಟಿಕೆಟ್ : ಸಿದ್ದರಾಮಯ್ಯ
ಇಲ್ಲಿ ಶಿವಲಿಂಗೇಗೌಡರು ಕಾಂಗ್ರೆಸ್ ಬರುವುದು ಶತಃಸಿದ್ಧ. ಅವರಿಗೆ ಟಿಕೆಟ್ ಕೊಡುವುದೂ ಪಕ್ಕಾ ಎಂದಿರುವ ಸಿದ್ದರಾಮಯ್ಯ, ಈ ಬಾರಿಯ ಅಧಿವೇಶನ ಮುಗಿದ ಬಳಿಕ ಯಾವುದೇ ಕ್ಷಣದಲ್ಲಾದರೂ ಶಿವಲಿಂಗೇ ಗೌಡರು ಕಾಂಗ್ರೆಸ್ಸಿಗೆ ಬರಬಹುದು ಎಂದು ಹೇಳಿದ್ದಾರೆ. ರಾಜಕೀಯದಲ್ಲಿ ಯಾರೂ ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ ಎಂದಿದ್ದಾರೆ. ಅಲ್ಲಿಗೆ ಶಿವಲಿಂಗೇಗೌಡ ಈ ಬಾರಿ ಕಾಂಗ್ರೆಸ್`ನಿಂದ ಅಧಿಕೃತ ಅಭ್ಯರ್ಥಿಯಾಗುವುದು ಫೈನಲ್ ಆದಂತಾಗಿದೆ. ಅಂದಹಾಗೆ ಕಾಂಗ್ರೆಸ್ ಇನ್ನೂ ಅಭ್ಯರ್ಥಿಗಳ ಪಟ್ಟಿ ಅನೌನ್ಸ್ ಮಾಡಿಲ್ಲ.
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes.The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.