ಆ ದಿನಗಳು ಖ್ಯಾತಿಯ ನಟ ಚೇತನ್ ಬಾಯಿಬಿಟ್ಟರೆ ಒಂದು ವಿವಾದ. ಬಹುಶಃ ದಿನ ಬೆಳಗಾದರ ಎಲ್ಲರೂ ದೈನಂದಿನ ಚಟುವಟಿಕೆಗಳು, ಕಾಫಿ ಟೀ, ಯೋಗ, ವ್ಯಾಯಾಮ ಮಾಡುತ್ತಿದ್ದರೆ ಚೇತನ್ ವಿವಾದವನ್ನ ಈಟ್ ಕಾಂಟ್ರವರ್ಸಿ, ಡ್ರಿಂಕ್ ಕಾಂಟ್ರವರ್ಸಿ, ಸ್ಲೀಪ್ ಕಾಂಟ್ರವರ್ಸಿ ಅಂತಾ ಇರ್ತಾರಾ ಅನ್ನೋದು ಅನುಮಾನ. ಏಕೆಂದರೆ ಅವರು ಪ್ರತಿದಿನ ಏನಾದರೊಂದು ವಿವಾದಾತ್ಮಕ ಹೇಳಿಕೆ ಕೊಡುತ್ತಲೇ ಇರುತ್ತಾರೆ. ಅಂತಹ ಚೇತನ್ ಅವರಿಗೆ ಅವರಿಗೆ ಈಗ ಹೆಚ್ಚು ಸಮಯ ಇಲ್ಲ. ಅವರ ವೀಸಾ ರದ್ದಾಗಿದ್ದು, ಅಮೆರಿಕಕ್ಕೆ ವಾಪಸ್ ಆಗಬೇಕು. ಕಾರಣ ಅವರು ಭಾರತೀಯ ನಾಗರಿಕರಲ್ಲ.
ಭಾರತೀಯ ಪೌರತ್ವ ಹೊಂದಿಲ್ಲ. ಅಮೆರಿಕನ್ ಸಿಟಿಜನ್. ಬೇರೆ ದೇಶದ ನಾಗರಿಕರು ಭಾರತದಲ್ಲಿ ವಾಸಿಸಬಹುದು, ಆದರೆ ಕೆಲವು ನಿರ್ಬಂಧಗಳಿರುತ್ತವೆ. ಅದನ್ನು ಮೀರಿ ಹಿಂದುಗಳನ್ನು ಕೆರಳಿಸುವಂತಹ ಹೇಳಿಕೆ ನೀಡುತ್ತಿರುವ ಆರೋಪದ ಮೇಲೆ ನಟ ಚೇತನ್ ಅಹಿಂಸಾ ಅವರ ಸಾಗರೋತ್ತರ ವೀಸಾವನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ. ನಟ ಚೇತನ್ ವೀಸಾ ರದ್ದುಗೊಳಿಸಿ ಕೇಂದ್ರ ಗೃಹ ಇಲಾಖೆ ನೋಟಿಸ್ ಜಾರಿ ಮಾಡಿದೆ. ಸಾಗರೋತ್ತರ ಭಾರತೀಯ ನಾಗರೀಕ (ಓಸಿಐ) ವೀಸಾ ಹೊಂದಿದ್ದರು. ಅಲ್ಲದೆ ಜಡ್ಜ್ಗಳ ಕುರಿತ ಹೇಳಿಕೆಯೂ ಸೇರಿ ಅವರ ಓಸಿಐನ್ನು ರದ್ದು ಮಾಡಲಾಗಿದೆ.




ಆದರೆ ಕಿಶೋರ್ ಅವರ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ಕೆಲವರು ನೀನು ಪಾಕಿಸ್ತಾನಕ್ಕೆ ಹೋಗು. ನೀನು ಭಾರತೀಯನೇ ಅಲ್ಲ.. ಎಂಬ ಅತಿರೇಕದ ಟೀಕೆಗಳ ಜೊತೆಗೆ, ಕಾನೂನಿನ ಪಾಠ ಮಾಡಿದವರೂ ಇದ್ದಾರೆ. ಕಿಶೋರ್ ಸಿದ್ಧಾಂತ ಬೇರೆಯಲ್ಲ. ಚೇತನ್ ಅವರ ಸಿದ್ಧಾಂತ ಬೇರೆಯಲ್ಲ. ಆದರೆ ಚೇತನ್ ಇರುವುದೇ ವಿವಾದ ಮಾಡಿಕೊಳ್ಳೋಕೆ. ಅಂತಹವರ ಬೆಂಬಲಕ್ಕೆ ಯಾಕೆ ಹೋಗ್ತೀರಿ ಎನ್ನುವುದು ಅವರದ್ದೇ ಸಿದ್ಧಾಂತದವರ ಬುದ್ದಿವಾದ.



