ನಿನ್ನ ಖಾಸಗಿ ವಿಡಿಯೋ ನನ್ನ ಬಳಿ ಇವೆ. ಲೇ ಷಂಡ.. ನನಗೆ ನಿನ್ನ ಎಲ್ಲ ಆಟಗಳೂ ಗೊತ್ತು. ನಿನ್ನ ಪಂಜಾಬಿ ಹುಡುಗಿ, ಚೆನ್ನೈ ಹುಡುಗಿ, ದುಬೈ, ಶಾರ್ಟಲ್ ವಿಡಿಯೋ ಎಲ್ಲ ಹೊರಗಡೆ ಬಿಡ್ತೀನಿ. ಇದು ಬೆದರಿಕೆ ಅಲ್ಲ.. ಹೀಗೆಲ್ಲ ಬೈದಿರುವ ಒಂದು ಪತ್ರ ಸುದೀಪ್ ಅವರ ಮನೆಗೆ ಬಂದಿದೆ. ಅದು ಈಗ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಕಿಚ್ಚ ಸುದೀಪ್ ಕುಟುಂಬ ಸದಸ್ಯರು. ಸುದೀಪ್ ರಾಜಕೀಯಕ್ಕೆ ಬರಲಿದ್ದಾರೆ ಎಂಬ ಸುದ್ದಿ ಹೊರಬೀಳುವುದಕ್ಕೂ ಪತ್ರ ಬಂದಿರುವುದಕ್ಕೂ ಒಂದಕ್ಕೊಂದು ಸಮಯ ಕೂಡಿ ಬಂದಂತಿದೆ. ಕಾಕತಾಳೀಯವೇ ಇರಬಹುದು, ಆದರೆ ಹಾಗೆ ಕಾಣುತ್ತಿಲ್ಲ.
ಕಿಚ್ಚನ ಈ ಹೇಳಿಕೆ ಈಗ ಸ್ಯಾಂಡಲ್ ವುಡ್ನಲ್ಲಿ ಸಂಚಲನ ಮೂಡಿಸಿದೆ. ಸುದೀಪ್ ಅವರನ್ನು ಎದುರು ಹಾಕಿಕೊಂಡ ಸ್ಟಾರ್ ಯಾರು? ಕಿಚ್ಚನಿಗೆ ಬೆದರಿಕೆ ಹಾಕಿ ಪತ್ರ ಬರೆದಿದ್ದು ಯಾರು ಎಂದು ತಲೆಕೆಡಿಸಿಕೊಂಡಿದ್ದಾರೆ. ನಮ್ಮ ಮನೆ ಅಡ್ರೆಸ್ ಗೊತ್ತಿದೆ. ಪತ್ರ ಬರೆದು ಹಾಕಿದ್ದಾರೆ. ಇದು ರಾಜಕೀಯದಲ್ಲಿ ಇರುವವರ ಕೈವಾಡ ಅಲ್ಲವೇ ಅಲ್ಲ. ಸಿನಿಮಾರಂಗದಲ್ಲಿ ಇರುವವರೇ ಈ ರೀತಿಯ ಕೃತ್ಯ ಮಾಡಿದ್ದಾರೆ. ಅವರು ಯಾರು ಎನ್ನುವುದು ನನಗೆ ಗೊತ್ತಿದೆ. ಅದು ಯಾರು ಅಂತ ಗೊತ್ತು. ಇವತ್ತು ಮಾತನಾಡಲ್ಲ. ಇದಕ್ಕೆ ಹೇಗೆ ಉತ್ತರ ಕೊಡಬೇಕೋ ಹಾಗೆ ಕೊಡುತ್ತೇನೆ ಎಂದು ಹೇಳಿದ್ದಾರೆ ಸುದೀಪ್.


ಇದೂವರೆಗೆ ಪತ್ರ ಬರೆದಿರುವುದು ಯಾರು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಈ ಮೇಲ್, ಸೋಷಿಯಲ್ ಮೀಡಿಯಾ ಮೂಲಕ ಬೆದರಿಕೆ ಹಾಕಿದರೆ, ಡಿಜಿಟಲ್ ಟ್ರ್ಯಾಕ್ ಮಾಡುತ್ತಾರೆ ಎಂಬ ಕಾರಣಕ್ಕೇ ಖದೀಮ ಈ ರೀತಿಯ ಬೆದರಿಕೆ ಹಾಕಿದ್ದಾನೆ. ಪೊಲೀಸರು ಆರೋಪಿಯ ಹುಡುಕಾಟದಲ್ಲಿದ್ದಾರೆ.



