ಏನ್ ಚೆಂದ ಕಾಣಿಸ್ತಾಳೆ ಖೋಡೇ ರಮ್ಮವ್ವ..
ನೀನೂ ನಾವೂ ಸೇರ್ದೋ ಅಂದ್ರೆ ಎಂಥ ಮಜವವ್ವ..
ಎಷ್ಟೇ ದೂರ್ದಾಗಿದ್ರೂ ನಿನ್ನ ಹುಡಿಕ್ಕಂಡು ಬರ್ತೀವಲ್ಲ..
ಅಷ್ಟೇ ಚೆನ್ನಾಗಿರೋ ನಿನ್ನ ಕಾಪಾಡ್ಕಂಡು ಹೋಗ್ತೀವಲ್ಲ..
ನೀನೇ ಅಂದ ನೀನೇ ಚೆಂದ ಖೋಡೇ ರಮ್ಮವ್ವ..
ನೀನೇ ಅಂದ ನೀನೇ ಚೆಂದ ಖೋಡೇ ರಮ್ಮವ್ವ..
ನಿನ್ನ ಸರಿಸಮ ಹೋಲುವ ಮಂದಿ ಇಲ್ಲವ್ವ..
ಬತ್ಲಾಗಿದ್ರೂ ಕುಣಿಸ್ತಿಯ.. ಕತ್ಲಲ್ಲಾದ್ರೂ ಕಾಣಿಸ್ತೀಯ..
ಕೊಚ್ಚೆ, ಮೋರಿಲ್ ಬೀಳ್ಸಿ ನನ್ನ ನೋಡ್ದೋರ್ಗೆಲ್ಲ ನಗಿಸ್ತೀಯ..
ಕೊಚ್ಚೆ, ಮೋರಿಲ್ ಬೀಳ್ಸಿ ನನ್ನ ನೋಡ್ದೋರ್ಗೆಲ್ಲ ನಗಿಸ್ತೀಯ..
ನೂಕ್ದೆ ಅಂತಾ ಕೋಪ ಇಲ್ಲ ಖೋಡೇ ರಮ್ಮವ್ವ..
ನೂಕ್ದೆ ಅಂತಾ ಕೋಪ ಇಲ್ಲ ಖೋಡೇ ರಮ್ಮವ್ವ..
ನಿನ್ನ ನಂಬಿ ಮುಂದೆ ನಡೆವೆ ದಾರಿ ತೋರವ್ವ..
ಏನ್ ಚೆಂದ ಕಾಣಿಸ್ತಾಳೆ ಖೋಡೇ ರಮ್ಮವ್ವ..
ನೀನೂ ನಾವೂ ಸೇರ್ದೋ ಅಂದ್ರೆ ಎಂಥ ಮಜವವ್ವ..
ನನ್ನೆಂಡ್ರು ಕಾಸಿನ್ ಸರ ಮುಡಿಪಾಗಿಡ್ತೀನಿ ನಿಂಗೋಸ್ಕರ..
ನನ್ನೆಂಡ್ರು ಕಾಸಿನ್ ಸರ ಮುಡಿಪಾಗಿಡ್ತೀನಿ ನಿಂಗೋಸ್ಕರ..
ಹೊಲ ಗದ್ದೆ ಮನೆ ಎಲ್ಲ ಮಾರೋದೇನೇ ನಿಂಗೋಸ್ಕರ..
ಹೊಲ ಗದ್ದೆ ಮನೆ ಎಲ್ಲ ಮಾರೋದೇನೇ ನಿಂಗೋಸ್ಕರ..
ಯಾರನ್ ಬಿಟ್ರೂ ಬುಡ್ತೀನ್ ಕಣೆ ಖೋಡೇ ರಮ್ಮವ್ವ..
ಸಾಯೋಗಂಡ ನಿನ್ ಬುಡಾಕಿಲ್ಲ ಸ್ವರ್ಗ ತೋರವ್ವ..
ಈ ಹಾಡನ್ನು ಕೇಳದ ಕುಡುಕರೇ ಇಲ್ಲ. ಅಷ್ಟು ವೈರಲ್ ಆಗಿದ್ದ ಹಾಡಿದು. ಈ ಹಾಡಿಗೂ, ಡಿಕೆ ಶಿವಕುಮಾರ್ ಅವರಿಗೂ ವಿಶೇಷ ನಂಟಿದೆ. ಅದು ವೀಕೆಂಡ್ ವಿತ್ ರಮೇಶ್`ನಲ್ಲಿ ಬಹಿರಂಗವೂ ಆಗಿದೆ.
‘ಏನ್ ಚಂದ ಕಾಣಿಸ್ತಾಳೆ ನಮ್ಮ ಖೋಡೆ ರಮ್ಮವ್ವ..’ ಹಾಡನ್ನು ಹಾಡಿದ್ದ ಅವರಿಬ್ಬರ ಹೆಸರು ಕಾಂತರಾಜು ಮತ್ತು ಪರಮೇಶ್. ಇವರಿಬ್ಬರು ಡಿಕೆ ಶಿವಕುಮಾರ್ ಅವರ ಸಹೋದರ ಸಂಬಂಧಿಗಳು. ವೀಕೆಂಡ್ ವೇದಿಕೆ ಮೇಲೆ ಶಿವಕುಮಾರ್ ಬಗ್ಗೆ ಮಾತನಾಡಿದ ಅವರಿಗೆ ರಮೇಶ್, ‘ಖೋಡೆ ರಮ್ಮವ್ವ..’ ಹಾಡನ್ನು ಹಾಡುವಂತೆ ಮನವಿ ಮಾಡಿದರು. ಕಾಂತರಾಜು ಮತ್ತು ಪರಮೇಶ್ ಮತ್ತೊಮ್ಮೆ ವೈರಲ್ ಹಾಡನ್ನು ಹಾಡಿ, ಅಲ್ಲಿದ್ದವರನ್ನು ರಂಜಿಸಿದರು. ಹಾಡು ಕೇಳಿ ಶಿವಕುಮಾರ್ ಕೂಡ ನಕ್ಕರು.
ಹಾಗಂತ ಹಾಡನ್ನು ಹಾಡಿಸಿದ್ದು ಡಿಕೆ ಶಿವಕುಮಾರ್ ಅವರಲ್ಲ. ಅವರು ಇವರ ಸೋದರ ಸಂಬಂದಿಗಳಷ್ಟೇ. ಡಿಕೆ ಮೊದಲ ಬರಿ ಯೆಜ್`ಡಿ ಬೈಕ್ ತೊಗಂಡಾಗ ಕಾಂತರಾಜು ಅವರ ಮನೆಯಲ್ಲೇ ಪೂಜೆ ಮಾಡಿದ್ದರಂತೆ. ಇನ್ನು ಡಿಕೆ ಶಿವಕುಮಾರ್ ಅವರಿಗೂ ಹರಿಖೋಡೆ ಅವರಿಗೂ ವಿಶೇಷ ನಂಟು ಇದೆ. ಹರಿಖೋಡೆ ಕೇಳಿದರೆಂದು ತಮ್ಮ 25 ಎಕರೆ ಜಮೀನನ್ನು ಖೋಡೆ ಅವರಿಗೆ ಬರೆದುಕೊಟ್ಟವರು ಡಿಕೆ ಶಿವಕುಮಾರ್. ನನ್ನ ರಾಜಕೀಯ ಜೀವನಕ್ಕೆ ಖೋಡೆ ಅವರ ಸಹಾಯ ಹೆಚ್ಚು ಇದೆ ಎಂದು ಹೇಳಿಕೊಂಡವರು ಡಿಕೆ ಶಿವಕುಮಾರ್.



