ರಾಜ್ಯ ವಿಧಾನಸಭೆ ಚುನಾವಣೆಗೆ ಮೊದಲ ಟಿಕೆಟ್ ಘೋಷಣೆ ಮಾಡಿದ್ದು ಜೆಡಿಎಸ್. ನಂತರ ಕಾಂಗ್ರೆಸ್ ಕೂಡಾ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಬಿಜೆಪಿಯದ್ದು ಮಾತ್ರ ಇನ್ನೂ ಟಿಕೆಟ್ ಫೈನಲ್ ಆಗಿಲ್ಲ. ಇದರ ನಡುವೆ ಜೆಡಿಎಸ್ 2ನೇ ಪಟ್ಟಿ ಸಿದ್ಧಗೊಂಡಿದ್ದು, ಏಪ್ರಿಲ್ 1 ಅಂದ್ರೆ ಈ ದಿನವೇ ಟಿಕೆಟ್ ಪಟ್ಟಿ ಬಿಡುಗಡೆಯಾಗಲಿದೆ. ಇದನ್ನು ಸ್ವತಃ ಕುಮಾರಸ್ವಾಮಿ ಘೋಷಿಸಿದ್ದಾರೆ.
ಶುಕ್ರವಾರ ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿನ ಬಂಡೆ ಮಹಾಕಾಳಿ ಅಮ್ಮನವರಿಗೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಈಗಾಗಲೇ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಎರಡನೇ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಲಾಗುವುದು. ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ ಎಂದು ಹೇಳಿದ್ದಾರೆ.




ಭವಾನಿ ರೇವಣ್ಣಗೆ ಟಿಕೆಟ್ ಕೊಟ್ಟರೆ..
ಲಾಭಗಳ ಲೆಕ್ಕಾಚಾರ ನೋಡಿದರೆ ರೇವಣ್ಣ ಮತ್ತು ಅವರ ಇಡೀ ಕುಟುಂಬ ಭವಾನಿ ರೇವಣ್ಣ ಅವರನ್ನು ಗೆಲ್ಲಿಸಲು ಹೋರಾಡಲಿದ್ದಾರೆ. ಜಿಲ್ಲೆಯಲ್ಲಿ ಸಂಘಟನೆ ಇರುವುದರಿಂದ ನೋ ಪ್ರಾಬ್ಲಂ. ಹಾಸನ ಕ್ಷೇತ್ರದಿಂದಲೆ ಜಿ.ಪಂ.ಸದಸ್ಯೆಯಾಗಿದ್ದ ಭವಾನಿ ಅವರಿಗೆ ಕ್ಷೇತ್ರದಲ್ಲಿ ಹಿಡಿತವಿದೆ. ಹಾಸನ ಲೋಕಸಭೆಗೆ ಒಬ್ಬ ಮಗ ಪ್ರಜ್ವಲ್ ಸಂಸದ. ಇನ್ನೊಬ್ಬ ಮಗ ಸೂರಜ್ ವಿಧಾನಪರಿಷತ್ ಸದಸ್ಯ. ಪತಿ ರೇವಣ್ಣ ಪಕ್ಕದ ಕ್ಷೇತ್ರದಲ್ಲಿ ಶಾಸಕ. ಇವೆಲ್ಲವೂ ಲಾಭವಾಗಬಹುದು.


ಕುಟುಂಬ ರಾಜಕೀಯದ ಕಳಂಕ. ಯಾವುದು ಲಾಭವಾಗುತ್ತೆ ಎಂದು ಹೇಳಲಾಗುತ್ತಿದೆಯೋ.. ಅದೇ ನಷ್ಟವೂ ಆಗಬಹುದು. ಈಗಾಗಲೇ ರೇವಣ್ಣ ಕುಟುಂಬದ ಮೂವರನ್ನು ಗೆಲ್ಲಿಸಿದ್ದೇವೆ. ಇನ್ನೂ ಒಬ್ಬರನ್ನು ಗೆಲ್ಲಿಸಬೇಕಾ ಎಂದು ಮತದಾರ ಬೇಸತ್ತರೆ, ಕಷ್ಟ ಕಷ್ಟ. ಜೊತೆಗೆ ಸ್ವರೂಪ್ ಪ್ರಕಾಶ್ ಮಾಜಿ ಶಾಸಕರ ಮಗ. ಅವರಿಗೂ ಅವರದ್ದೇ ಆದ ಬೆಂಬಲಿಗರು, ಅಭಿಮಾನಿಗಳಿದ್ದಾರೆ.
ಭವಾನಿ ರೇವಣ್ಣಗೆ ಟಿಕೆಟ್ ಕೊಡಿದ್ದರೆ
ಲಾಭದ ಲೆಕ್ಕ ನೋಡಿದರೆ ಸ್ವರೂಪ್, ಮಾಜಿ ಶಾಸಕ ದಿ.ಪ್ರಕಾಶ್ ಅವರ ಪುತ್ರ. ಕ್ಷೇತ್ರದಲ್ಲಿ ಜನಪ್ರಿಯರಾಗಿದ್ದವರು. ಕುಮಾರಸ್ವಾಮಿ ಬೆಂಬಲ ಇರೋದ್ರಿಂದ ಕಷ್ಟವೇನಲ್ಲ. ಕುಟುಂಬ ರಾಜಕೀಯಕ್ಕೆ ಬೇಸತ್ತವರು ವೋಟು ಕೊಡಬಹುದು.


ರೇವಣ್ಣ ಮತ್ತವರ ಕುಟುಂಬ ಅಸಹಕಾರ ತೋರಿಸಿ, ಪ್ರಚಾರಕ್ಕೆ ಬರದಿದ್ದರೆ ಕಷ್ಟ. ಏಕೆಂದರೆ ರೇವಣ್ಣ ಈಗಾಗಲೇ ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಕುಮಾರಸ್ವಾಮಿ ರಾಜ್ಯದಲ್ಲಿ ಎಷ್ಟೇ ಜನಪ್ರಿಯ ಇರಬಹುದು, ಹಾಸನಕ್ಕೆ ಮಾತ್ರ ರೇವಣ್ಣನೇ ಫೈನಲ್ ಎನ್ನುವುದು ಅತಿಶಯೋಕ್ತಿ ಅಲ್ಲ. ವಾಸ್ತವ.



