ಡಿಕೆ ಶಿವಕುಮಾರ್ ಅವರಿಗೆ ಸಿಎಂ ಆಗುವುದು ಅವರ ಹಣೆಬರಹದಲ್ಲೇ ಬರೆದಿಲ್ಲ ಎಂದು ಹಲವು ಜ್ಯೋತಿಷಿಗಳು ಹೇಳಿದ್ದಾಗಿದೆ. ಅದಕ್ಕೆ ತಕ್ಕಂತೆ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದ್ದರೂ, ಸ್ವತಃ ಕೆಪಿಸಿಸಿ ಅಧ್ಯಕ್ಷರಾಗಿ 135 ಶಾಸಕರನ್ನು ಗೆಲ್ಲಿಸಿದ್ದರೂ, ಹಠಕ್ಕೆ ಬಿದ್ದು ಹೋರಾಡಿದರೂ, ಡಿಕೆಶಿಗೆ ಸಿಕ್ಕಿರುವುದು ಉಪ ಮುಖ್ಯಮಂತ್ರಿ ಹುದ್ದೆ ಮಾತ್ರ.
ಹಾಗಾದರೆ ಅವರು ಸಿಎಂ ಆಗುವುದು ಸಾಧ್ಯವೇ ಇಲ್ಲವಾ? ಈ ಪ್ರಶ್ನೆಗೆ ಸ್ವತಃ ಡಿಕೆ ಶಿವಕುಮಾರ್ ಅವರು ಹೆಚ್ಚು ನಂಬುವ ಜ್ಯೋತಿಷಿ ದ್ವಾರಕಾನಾಥ್ ಬೇರೆಯದೇ ಉತ್ತರ ಕೊಟ್ಟಿದ್ದಾರೆ.
ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕಾರ ತಪ್ಪಿ ಹೋಗುವ ಮಾತೇ ಇಲ್ಲ. ಮುಂದೆ ಅವರು ಈ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ. ಮುಂದಿನ 2.5 ವರ್ಷದ ನಂತರ ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕಾರದ ಯೋಗವಿಲ್ಲ ಎಂದು ಕೆಲವರು ವಾದ ಮಾಡುತ್ತಾರೆ. ಅದನ್ನು ನಾನು ಒಪ್ಪುವುದಿಲ್ಲ. ರಾಜ್ಯದ ಚುಕ್ಕಾಣಿ ಹಿಡಿದು ಆಡಳಿತ ನಡೆಸುತ್ತಾರೆ ಎಂದಿದ್ದರೆ ದ್ವಾರಕನಾಥ್.
ಅಂದಹಾಗೆ ರಾಜ್ಯದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತದೆ ಎಂದು ಹೇಳಿದ್ದ ಕೆಲವೇ ಕೆಲವು ಜ್ಯೋತಿಷಿಗಳಲ್ಲಿ ದ್ವಾರಕಾನಾಥ್ ಒಬ್ಬರು. ವಿಜಯ ಕರ್ನಾಟಕ ಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿ ಚುನಾವಣೆಗೂ ಮೊದಲೇ ಕಾಂಗ್ರೆಸ್ ಬಹುಮತದೊಂದಿಗೆ ಸರ್ಕಾರ ರಚಿಸುತ್ತದೆ ಎಂದು ದ್ವಾರಕನಾಥ್ ಹೇಳಿದ್ದರು.



