ಪುನೀತ್ ರಾಜಕುಮಾರ್ ಅವರು ಮಾಡುತ್ತಿದ್ದ ದಾನ-ಧರ್ಮ ಕಾರ್ಯಗಳು ಹೊರಜಗತ್ತಿಗೆ ಗೊತ್ತಾಗಿದ್ದೇ ಅವರು ಮೃತಪಟ್ಟ ನಂತರ. ಡಾ.ರಾಜ್ ಮತ್ತು ಪಾರ್ವತಮ್ಮ ಒಟ್ಟಿಗೇ ಸೇರಿ ಕಟ್ಟಿದ ಶಕ್ತಿಧಾಮ, ಸಾವಿರಾರು ಮಹಿಳೆಯರಿಗೆ ಆಶ್ರಯ, ಶಕ್ತಿಯನ್ನು ನೀಡಿದೆ. ಆ ಹಾದಿಯಲ್ಲಿ ಶಿವರಾಜ್ ಕುಮಾರ್ ಕೂಡಾ ಇದ್ದಾರೆ. ಪತ್ನಿ ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಸೇರ್ಪಡೆ ಬೆನ್ನಲ್ಲೇ ಶಿವಣ್ಣ ಅವರಿಗೆ ನೀವು ಮಾಡ್ತಿರೋ ಸಮಾಜಸೇವೆ ಏನು ಎಂಬ ಪ್ರಶ್ನೆ ಎದುರಾಗಿದೆ. ಇಷ್ಟು ದಿನ ಹೊರಗೆ ಹೇಳಿಕೊಳ್ಳದೆ ಸುಮ್ಮನಿದ್ದ ಶಿವಣ್ಣ, ಈಗ ಅದನ್ನು ಹೇಳಿಕೊಳ್ಳುವಂತಾಗಿದೆ.
ಪಾರ್ವತಮ್ಮನವರ ನಿಧನದ ನಂತರ ಶಕ್ತಿಧಾಮವನ್ನು ನೋಡಿಕೊಳ್ತಿರೋದು ಗೀತಾ. ಶಕ್ತಿಧಾಮದಲ್ಲಿ ನಾವೊಬ್ಬರೇ ಅಲ್ಲ, ಟ್ರಸ್ಟಿಗಳಿದ್ದಾರೆ. ಶಕ್ತಿಧಾಮ ಶುರುವಾಗಿದ್ದು 1998ರಲ್ಲಿ. ಕೆಂಪಯ್ಯ, ಸುಮನಾ, ಜಯದೇವ್, ಕೋಮಲಮ್ಮ.. ಹೀಗೆ ಹಲವರು ಟ್ರಸ್ಟಿಗಳಿದ್ದಾರೆ. ದೊರೈ-ಭಗವಾನ್ ಕೂಡಾ ಟ್ರಸ್ಟಿಗಳಾಗಿದ್ದರು. ನಾನೇ ಹೋಗುತ್ತಿರಲಿಲ್ಲ. ಅಮ್ಮ ಹೋಗಿ ನೋಡಿಕೊಂಡು ಬಾ ಎನ್ನುತ್ತಿದ್ದರು. ಆಗ ನಾವಿನ್ನೂ ಯುವಕರು. ಶೂಟಿಂಗ್, ಕೆಲಸ ಕೆಲಸ ಅಂತಾ ಬ್ಯುಸಿ ಇರ್ತಾ ಇದ್ವು. ಅಮ್ಮ ಹೇಳಿದಾಗಲೆಲ್ಲ ಹೋಗಮ್ಮ.. ಕಷ್ಟದಲ್ಲಿರುವವರನ್ನು ಕಂಡರೆ ನೋಡೋಕಾಗಲ್ಲ. ಬೇಕಾದರೆ ದುಡ್ಡು ಕೊಡುತ್ತೇನೆ. ಜವಾಬ್ದಾರಿ ನಿಂದೇ ಎನ್ನುತ್ತಿದ್ದೆ.
ನಾವೆಲ್ಲ ಶಕ್ತಿಧಾಮದತ್ತ ಗಮನ ಕೊಟ್ಟಿದ್ದೆವು. ಆದರೆ ಪುನೀತ್ ಶಕ್ತಿಧಾಮವನ್ನು ಬಿಟ್ಟು ಬೇರೆ ಶಾಲೆಗಳಿಗೆ ಸಹಾಯ ಮಾಡ್ತಾ ಇದ್ರು. ಅಮ್ಮ ಹೋದ ಮೇಲೆ ಗೀತಾ ಪ್ರೆಸಿಡೆಂಟ್ ಆದ್ರು. 2016-17ರ ನಂತರ ಅದು ಚೇಂಜ್ ಆಯ್ತು. ಆಮೇಲೆ ಶಕ್ತಿಧಾಮವನ್ನ ಗೀತಾ ಅವರು ಬೇರೆಯದೇ ರೀತಿ ಡೆವಲಪ್ ಮಾಡಿದ್ರು. ಅಲ್ಲಿ ಸ್ವಂತಕ್ಕೊಂದು ಶಾಲೆ ಕಟ್ಟಬೇಕು ಅನ್ನೋದು ಕೆಂಪಯ್ಯನವರ ಕನಸು.. ಹೀಗೆಲ್ಲ ಹೇಳಿಕೊಂಡಿದ್ದಾರೆ ಶಿವಣ್ಣ.
ಶಿವಣ್ಣ ರಾಜಕೀಯಕ್ಕೆ ಬರ್ತಾರಾ ಎಂದರೆ ಇಲ್ಲ. ಅದು ಗೀತಾ ಜೊತೆಯಾಗಿ ಮಾಡುತ್ತಿರುವ ಪ್ರಚಾರವೇ ಹೊರತು, ನಾನು ರಾಜಕೀಯಕ್ಕೆ ಬರಲ್ಲ. ಬರಲ್ಲ. ಬರಲ್ಲ ಎಂದು ಮತ್ತೆ ಮತ್ತೆ ಸ್ಪಷ್ಟನೆ ಕೊಟ್ಟಿದ್ದಾರೆ ಶಿವಣ್ಣ. ಇದೇ ವೇಳೆ ಮಾರ್ನಿಂಗ್ ವಾಕ್ ಮಾಡುವಾಗ ಯಾರಾದ್ರೂ ಕಷ್ಟ ಅಂತಾ ಕೇಳ್ಕೊಂಡ್ ಬರ್ತಾರೆ. ನಾನು ನನ್ನ ಕೈಲಾದ ಸಹಾಯ ಮಾಡ್ತೇನಷ್ಟೆ. 5 ಸಾವ್ರ..10 ಸಾವ್ರ ಕೊಡ್ತೀನಿ. ಅಷ್ಟೆ ಎಂದೂ ಹೇಳಿದ್ದಾರೆ. ಅಂದಹಾಗೆ ಇದನ್ನು ಪದೇ ಪದೇ ಕೇಳಿದ ಮೇಲೆ ಶಿವಣ್ಣ ಹೇಳಿರುವ ಉತ್ತರ.



