Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Politics

ಐಎಎಸ್ ರೋಹಿಣಿ ಸಿಂಧೂರಿ : ಒಂದಿಷ್ಟು ಸಾಧನೆ.. ಮಿಕ್ಕಿದ್ದು ಜಗಳ..

SpeciallU by SpeciallU
February 21, 2023
in Politics
Reading Time: 1 min read
0 0
0
ಐಎಎಸ್ ರೋಹಿಣಿ ಸಿಂಧೂರಿ : ಒಂದಿಷ್ಟು ಸಾಧನೆ.. ಮಿಕ್ಕಿದ್ದು ಜಗಳ..

ರೋಹಿಣಿ ಸಿಂಧೂರಿ. ಐಎಎಸ್ ಅಧಿಕಾರಿ…

ಈಕೆಯ ಹೆಸರನ್ನು ಇಡೀ ರಾಜ್ಯದ ಕನ್ನಡಿಗರು ಮೊತ್ತಮೊದಲಿಗೆ ಕೇಳಿದ್ದು ಐಎಎಸ್ ಆಫೀಸರ್ ಡಿ.ಕೆ.ರವಿ ಅತ್ಮಹತ್ಯೆ ಪ್ರಕರಣದಲ್ಲಿ. ಆದರೆ ಅದಕ್ಕೂ ಮೊದಲೇ ಕರ್ನಾಟಕದಲ್ಲಿ ಡ್ಯೂಟಿ ಮಾಡುತ್ತಿದ್ದರು ರೋಹಿಣಿ. ಮೂಲತಃ ಆಂಧ್ರಪ್ರದೇಶದವರು. 2009ನೇ ಕೇಡರ್ ಆಫೀಸರ್. ಕರ್ನಾಟಕದಲ್ಲಿ ವೃತ್ತಿ ಶುರುವಾಗಿದ್ದು ತುಮಕೂರು ಜಿಲ್ಲೆಯಿಂದ. ಅದಾದ ಮೇಲೆ ಹಾಸನ, ಮೈಸೂರು, ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕೆಲಸ ಮಾಡಿದ್ದಾರೆ.

Related posts

ಗ್ಯಾರಂಟಿಯಿಂದ ಹೊರೆ : ಡಿಕೆ ಶಿವಕುಮಾರ್‌ ಒಪ್ಪಿಕೊಂಡ ಸತ್ಯ

ಈಗ ಮೀಡಿಯಾಗಳ ಮೇಲೆ ಮೋದಿಯದ್ದೂ ಟೀಕೆ..!

ರೋಹಿಣಿ ಸಿಂಧೂರಿ : ಎ. ಮಂಜು, ಹೆಚ್.ಡಿ. ರೇವಣ್ಣ ಜೊತೆ ಹಾಸನದಲ್ಲೂ ಫೈಟ್
ರೋಹಿಣಿ ಸಿಂಧೂರಿ ಹಾಸನದಲ್ಲಿದ್ದಾಗ ಸಿದ್ದರಾಮಯ್ಯ ಸರ್ಕಾರವಿತ್ತು. ಆಗ ಹಾಸನದ ಉಸ್ತುವಾರಿ ಸಚಿವರಾಗಿದ್ದವರು ಎ.ಮಂಜು. ಈಗ ಬಿಜೆಪಿಯಲ್ಲಿದ್ದಾರೆ. ಕೆಲವೇ ದಿನಗಳಲ್ಲಿ ಜೆಡಿಎಸ್`ಗೆ ಹೋಗಲಿದ್ದಾರೆ. ಆಗ ಮಂಜು ಜೊತೆ ಜಟಾಪಟಿ ಶುರುವಾಗಿತ್ತು. ಅಷ್ಟೇ ಅಲ್ಲ, ಹೆಚ್.ಡಿ.ರೇವಣ್ಣ ಮತ್ತು ರೋಹಿಣಿ ನಡುವೆ ಬಹಿರಂಗ ವಾಕ್ಸಮರ ನಡೆದಿತ್ತು.

ಯಾವುದೇ ವಿಚಾರಕ್ಕೆ ರೋಹಿಣಿ ಸಿಂಧೂರಿ ಮೇಲೆ ಎಚ್ಡಿ ರೇವಣ್ಣ ರೇಗಾಡಿದ್ದರು. ಡಿಸಿ ಬರ್ತಾರೆ ಅಂದ್ರೆ ಅಧಿಕಾರಿಗಳು ನಡುಗಬೇಕು ಹಂಗಿರಬೇಕು ನಮ್ಮ ಜಿಲ್ಲೆ. ರಾಜ್ಯದ ಚೀಫ್ ಸೆಕ್ರೇಟರಿ, ಫೈನಾನ್ಸ್ ಸೆಕ್ರೇಟ್ರಿ ಎಲ್ಲಾ ನಿಮ್ಮ ಡಿಸಿ ಡೈನಾಮಿಕ್ ಹಂಗೆ ಹಿಂಗೆ ಅಂತಾರೆ. ಇಲ್ನೋಡಿದ್ರೆ ಹಿಂಗೆ ಎಂದು ಮಾತಿನಲ್ಲೇ ಕುಟುಕಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ರೋಹಿಣಿ ಸಿಂಧೂರಿ, ಎಲ್ಲ ಕಳ್ಳರನ್ನ ಸಸ್ಪೆಂಡ್ ಮಾಡುತ್ತಾ ಕೂತ್ರೆ ಯಾರೂ ಇರಲ್ಲ ಅಂತ ತಿರುಗೇಟು ಕೊಟ್ಟಿದ್ದರು.
ವಿಶೇಷವೆಂದರೆ ಆಗ ಸಚಿವ ಎ.ಮಂಜು ಒತ್ತಾಯ ಮಾಡಿ ರೋಹಿಣಿ ಸಿಂಧೂರಿ ಅವರನ್ನು ಜಿಲ್ಲೆಯಿಂದ ಎತ್ತಂಗಡಿ ಮಾಡಿಸಿದ್ದರು. ಅದನ್ನು ಪ್ರಶ್ನಿಸಿ ರೋಹಿಣಿ ಸಿಂಧೂರಿ ಕೆಎಟಿ ಮೆಟ್ಟಿಲೇರಿದ್ದರು. ಆಗ ಇದೇ ಐಪಿಎಸ್ ರೂಪಾ ಹೇಳುವಂತೆ ರೋಹಿಣಿ ಅವರ ಪರ ನಿಂತಿದ್ದವರು ಅವರೇ. ಕೆಎಟಿಯಲ್ಲಿ ಹೇಗೆ ವಾದಿಸಬೇಕು ಎಂದು ಹೇಳಿಕೊಟ್ಟಿದ್ದೂ ಅವರೇ. ಈಗ ಅದೇ ರೂಪಾ ಮತ್ತು ರೋಹಿಣಿ ಮಧ್ಯೆ ಸಮರ ನಡೆಯುತ್ತಿದೆ. ವಿಚಿತ್ರವೆಂದರೆ ಆಗ ಹೆಚ್.ಡಿ.ರೇವಣ್ಣ, ರೋಹಿಣಿ ಸಿಂಧೂರಿ ಪರ ನಿಂತಿದ್ದರು. ಕೊನೆಗೆ ಕೆಎಟಿಯಲ್ಲಿ ರೋಹಿಣಿ ಗೆದ್ದು ಮತ್ತೆ ವಾಪಸ್ ಬಂದಾಗ ಅದೇ ರೇವಣ್ಣ, ಈ ರೋಹಿಣಿಯನ್ನು ಜಿಲ್ಲೆಯಿಂದ ಹೊರಕಳಿಸಿದರೆ ಸಾಕು ಎಂಬಷ್ಟು ರೋಸಿ ಹೋಗಿದ್ದರು.

ಮೈಸೂರಿನಲ್ಲಿ ಆಯುಕ್ತೆ ಶಿಲ್ಪಾ ನಾಗ್ ವಿರುದ್ಧವೂ ಹೋರಾಟ

2020ರ ಸೆಪ್ಟೆಂಬರ್ ನಲ್ಲಿ ರೋಹಿಣಿ ಸಿಂಧೂರಿಯವರು ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡರು. ಜೂನ್ 2021ರ ವರೆಗೆ ಹುದ್ದೆಯಲ್ಲಿ ಮುಂದುವರೆದ ಅವರು, ಮೈಸೂರು ಮಹಾನಗರ ಪಾಲಿಕೆಯ ಅಂದಿನ ಆಯುಕ್ತೆ ಶಿಲ್ಪಾ ನಾಗ್ ಅವರೊಂದಿಗಿನ ವಿವಾದದ ಬಳಿಕ ಇಬ್ಬರನ್ನೂ ಮೈಸೂರಿನಿಂದ ವರ್ಗಾವಣೆ ಮಾಡಲಾಯಿತು. ರೋಹಿಣಿ ಸಿಂಧೂರಿ ಎಲ್ಲದರಲ್ಲೂ ಮೂಗು ತೂರಿಸುತ್ತಿದ್ದಾರೆ ಅಂತ ಆರೋಪಿಸಿ ಶಿಲ್ಪಾ ನಾಗ್ ರಾಜೀನಾಮೆಗೆ ಮುಂದಾದ್ರು. ಕೊನೆಗೆ ಮಧ್ಯಪ್ರವೇಶಿಸಿದ ಸರ್ಕಾರ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಅವರನ್ನು ವರ್ಗಾವಣೆ ಮಾಡಿದ್ದರು.

ಚಾಮರಾಜನಗರ ಆಕ್ಸಿಜನ್ ಸಿಲಿಂಡರ್ ವಾರ್

ಚಾಮರಾಜನಗರದಲ್ಲಿ ಸಂಭವಿಸಿದ್ದ ಆಮ್ಲಜನಕ ಕೊರತೆಯಿಂದ 24 ಮಂದಿ ಕೊರೋನಾ ಸೋಂಕಿತರು ಮೃತಪಟ್ಟದುರಂತಕ್ಕೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಸಕಾಲಕ್ಕೆ ಆಮ್ಲಜನಕ ನೀಡದೆ ತಡೆದಿದ್ದೇ ಕಾರಣ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಆರೋಪಿಸಿದ್ದರು. ಕೊರೊನಾ ನಿರ್ವಹಣೆಗಾಗಿ ಮಾಡಿರುವ ಹಣದ ವೆಚ್ಚವೂ ವಿವಾದಕ್ಕೆ ಗುರಿಯಾಗಿದ್ದು, ಸಂಸದ ಪ್ರತಾಪ್ ಸಿಂಹ ಅವರು ಜಿಲ್ಲಾಧಿಕಾರಿಗಳು ಹಣದ ಲೆಕ್ಕ ನೀಡಬೇಕು ಎಂದು ಬಹಿರಂಗವಾಗಿ ಒತ್ತಾಯಿಸಿದ್ದರು. ಆಗ ಸಂಸದರ ವಿರುದ್ಧ ಸಿಡಿದು ನಿಂತಿದ್ದರು ರೋಹಿಣಿ ಸಿಂಧೂರಿ. ಈಗ ರೂಪಾ ಮತ್ತು ರೋಹಿಣಿ ಸಂಘರ್ಷದಲ್ಲಿ ಪ್ರತಾಪ್ ಸಿಂಹ ರೂಪಾ ಪರವೇ ನಿಂತಿದ್ದಾರೆ. ರೂಪಾ ಅವರು ಎತ್ತಿರುವ ಪ್ರಶ್ನೆಗಳು ನ್ಯಾಯೋಚಿತವಾಗಿವೆ ಎಂದಿದ್ದಾರೆ. ಆ ಹೇಳಿಕೆಯ ಹಿಂದೆ ಆಕ್ಸಿಜನ್ ಸಿಲಿಂಡರ್ ಅವಾಂತರದ ನೆನಪೂ ಇದೆ.

ಸಾ.ರಾ.ಮಹೇಶ್ ಮತ್ತು ರೋಹಿಣಿ ಸಂಧಾನದ ಮಾತಿನ ಹಿಂದೆ..

ಮೈಸೂರಿನ ಕೆಆರ್ ನಗರ ಶಾಸಕ ಸಾರಾ ಮಹೇಶ್ ಜೊತೆ ರೋಹಿಣಿ ಸಿಂಧೂರಿ ಸಂಘರ್ಷ ಮಾಡಿಕೊಂಡಿದ್ದರು. ಮೈಸೂರಿನ ಹಿಂದಿನ ಜಿಲ್ಲಾಧಿಕಾರಿ ಐಶಾರಾಮಿ ಜೀವನ ನಡೆಸಿದ್ದಾರೆ. ಸರ್ಕಾರಿ ಹಣ ದುರುಪಯೋಗ, ಕೋವಿಡ್ ಸಂದರ್ಭದ ಕಾರ್ಯವೈಖರಿ ಪ್ರಾಮಾಣಿಕವಾಗಿ ಕೆಲಸ ಮಾಡದೆ ಬೇಜವಾಬ್ದಾರಿ ವರ್ತನೆ ಮಾಡಿದ್ದು, ಇದರಿಂದ ಸಾವಿರಾರು ಜನರಿಗೆ ಸಮಸ್ಯೆಯಾಗಿದೆ. ಇದನ್ನು ಮುಚ್ಚಿ ಹಾಕಲು ಟೆಸ್ಟಿಂಗ್ ಸಂಖ್ಯೆ ಸಾವಿನ ಸಂಖ್ಯೆ ಕಡಿಮೆ ತೋರಿಸಿದ್ದರು ಅಂತ ಸಾರಾ ಮಹೇಶ್ ಆರೋಪಿಸಿದ್ರು. ಸಾರಾ ಮಹೇಶ್ ಭೂ ಅಕ್ರಮ ಮಾಡಿದ್ದಾರೆ ಎಂಬ ರೋಹಿಣಿ ಸಿಂಧೂರಿ ಆಡಿಯೋ ವೈರಲ್ ಆಗಿತ್ತು. ರೋಹಿಣಿ ಸಿಂಧೂರಿ ವಿರುದ್ಧ ಸಾರಾ ಮಹೇಶ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಕೊನೆಗೆ ರೋಹಿಣಿಯವರೇ, ಸಾ.ರಾ.ಮಹೇಶ್ ಅವರ ಜೊತೆ ಸಂಧಾನಕ್ಕೆ ಮುಂದಾಗಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ರೂಪಾ ಅವರು ಕೇಳಿದ್ದೂ ಇದೇ ಪ್ರಶ್ನೆಗಳನ್ನ. ಸಂಧಾನ ಏಕೆ ಎನ್ನುವುದೇ ಅವರ ಪ್ರಶ್ನೆ. ಪತ್ರಿಕೆಗಳಲ್ಲಿ ವರದಿ ಬಂದಾಗ ಮೌನವಾಗಿದ್ದ ಸಾ.ರಾ.ಮಹೇಶ್, ರೂಪಾ ಪ್ರಶ್ನೆ ಎತ್ತಿದ ಬಳಿಕ ನಾನು ಸಂಧಾನದ ಮಾತುಕತೆ ನಡೆಸಿಲ್ಲ ಎಂದು ಹೇಳಿಕೆ ಕೊಟ್ಟಿದ್ದರು. ಫೋಟೋ ತೋರಿಸಿದಾಗ ನಾನು ಶಾಸಕ, ಅವರು ಅಧಿಕಾರಿ. ಸರ್ಕಾರಿ ಕೆಲಸಗಳ ಬಗ್ಗೆ ಮಾತನಾಡುತ್ತಿದ್ದ ವೇಳೆ ತೆಗೆದಿರುವ ಫೋಟೋ ಅದು ಎಂದಿದ್ದರು. ಗೊಂದಲ ಬಗೆಹರಿದಿಲ್ಲ. ಅನುಮಾನಕ್ಕೆ ಉತ್ತರವೂ ಸಿಕ್ಕಿಲ್ಲ.

ಮೈಸೂರು ಜಿಲ್ಲಾಧಿಕಾರಿಗಳ ಸರ್ಕಾರಿ ನಿವಾಸ ಪಾರಂಪರಿಕ ಕಟ್ಟಡವಾಗಿದೆ. ಯಾವುದೇ ಹೊಸ ಕಟ್ಟಡ ಕಾಮಗಾರಿಯನ್ನು ಅಲ್ಲಿ ಮಾಡುವಂತಿಲ್ಲ. ಆದರೆ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಈಜುಕೊಳ, ಜಿಮ್ ನಿರ್ಮಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಜಿಲ್ಲಾಧಿಕಾರಿ ವಸತಿ ಕಚೇರಿ ಆವರಣದಲ್ಲಿ ಈಜುಕೊಳ ನಿರ್ಮಿಸಬೇಕೆಂಬುದು 5 ವರ್ಷಗಳ ಹಿಂದಿನ ಯೋಜನೆಯಾಗಿದೆ. ಹೊಸ ತಂತ್ರಜ್ಞಾನ ಬಳಸಿ ನಿರ್ಮಾಣ ಕಾರ್ಯ ನಡೆಸಲು ನಿರ್ಮಿತಿ ಕೇಂದ್ರ ನಿರ್ಧರಿಸಿತ್ತು. ಅದರ ಪ್ರಾಯೋಗಿಕ ಯೋಜನೆಯಾಗಿ ಈಜುಕೊಳ ನಿರ್ಮಾಣವಾಗಿದೆ” ಎಂದು ರೋಹಿಣಿ ಸಿಂಧೂರಿ ಸ್ಪಷ್ಟನೆ ನೀಡಿದ್ದರು.

ಸಾಧನೆಯ ಇತಿಹಾಸವೂ ಜೊತೆಯಲ್ಲಿದೆ..

ತುಮಕೂರಿನಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿದ್ದಾಗ (ತುಮಕೂರಿನಲ್ಲೇ ಮೊದಲ ಪೋಸ್ಟಿಂಗ್) ತೆರಿಗೆ ಸಂಗ್ರಹದ ಗಣಕೀಕರಣ, ನಿಗಮ ಭೂಮಿ ಸ್ವಾಧೀನ, ಜನನಿಬಿಡ ರಸ್ತೆಗಳಲ್ಲೂ ಯಶಸ್ವಿ ರಸ್ತೆ ಕಾಮಗಾರಿ ಇತ್ಯಾದಿ ಜನಪರ ಕಾರ್ಯಗಳಿಗೆ ಇಂದಿಗೂ ತುಮಕೂರಿನ ಜನತೆ ರೋಹಿಣಿಯವರನ್ನು ಸ್ಮರಿಸುತ್ತಾರೆ. 2014 ರ ಒಂದೇ ವರ್ಷದಲ್ಲಿ ರೋಹಿಣಿಯವರ ನೇತೃತ್ವದಲ್ಲಿ ಮಂಡ್ಯ ಜಿಲ್ಲೆಯಲ್ಲಿ ದಾಖಲೆಯ ಒಂದು ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿತ್ತು. ಅತ್ಯಂತ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಿರುವ ದೇಶದ ಟಾಪ್ ಮೂರು ಜಿಲ್ಲೆಗಳಲ್ಲಿ ಮಂಡ್ಯ ಕೂಡ ಒಂದಾಗಿತ್ತು.

ಆದರೆ ಈ ಎರಡು ವಿಷಯ ಹೊರತುಪಡಿಸಿದರೆ ರೋಹಿಣಿ ಸಿಂಧೂರಿ ಎಂಬ ಅಧಿಕಾರಿಯೂ ವಿವಾದಗಳಿಂದಲೇ ಹೆಚ್ಚು ಸುದ್ದಿಯಾದವರು.

Tags: #ರೋಹಿಣಿಸಿಂಧೂರಿ #ವಿವಾದ #ಅಧಿಕಾರಿ #ಐಎಎಸ್ #RohiniSindhuri #Controversy #Officer #IAS
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.