ಸಾಮಾನ್ಯವಾಗಿ ರಾಜಕಾರಣಿಯಾದವರು ಒಳಗಿನ ನಡೆಗಳೇನೇ ಇರಲಿ, ಸಾರ್ವಜನಿಕವಾಗಿ ಎಚ್ಚರವಹಿಸುತ್ತಾರೆ. ಅದರಲ್ಲೂ ಜಾತಿ, ಧರ್ಮದ ವಿಚಾರದಲ್ಲಿ ದೇಹವೆಲ್ಲ ಕಣ್ಣಾಗಿರುತ್ತೆ. ಅದರಲ್ಲೂ ಈಗ ಹಿಂದೂಗಳು ಬಿಜೆಪಿ ಪರ ವಾಲುತ್ತಿರುವ ಸಂದರ್ಭದಲ್ಲಿ ಈ ಎಚ್ಚರಿಕೆ ಇನ್ನೂ ಹೆಚ್ಚು. ಆದರೆ ತಮಿಳುನಾಡಿನ ಪೆರಂಬದೂರು ಎಂಪಿ ಟಿ.ಆರ್.ಬಾಲು ಹಾಗಲ್ಲ.


ಸೇತು ಸಮುದ್ರ ಯೋಜನೆಗೆ ಬೆಂಬಲ ಸೂಚಿಸಿ ದ್ರಾವಿಡ ಸಭೆಗಳು ಶುಕ್ರವಾರ ಮಧುರೈನಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿರುವ ಬಾಲು, ನನ್ನ ಲೋಕಸಭಾ ಕ್ಷೇತ್ರದಲ್ಲಿ ರಸ್ತೆ ನಿರ್ಮಾಣ ಹಾದಿಯಲ್ಲಿದ್ದ 100 ವರ್ಷಗಳಿಗೂ ಹಳೆಯ ದೇವಸ್ಥಾನಗಳನ್ನು ನಾನೇ ಧ್ವಂಸ ಮಾಡಿದ್ದೇನೆ. ಇವು ಲಕ್ಷ್ಮಿ, ಸರಸ್ವತಿ ಮತ್ತು ಪಾವರ್ತಿ ದೇವರಿಗೆ ಸೇರಿದ ದೇವಸ್ಥಾನಗಳಾಗಿದ್ದವು. ಈ ದೇಗುಲಗಳ ಧ್ವಂಸದ ವೇಳೆ ನನ್ನ ಸಹಚರರು ಮತ ಕಳೆದುಕೊಳ್ಳುವ ಎಚ್ಚರಿಕೆ ನೀಡಿದ್ದರು. ಆದರೂ ನಾನು ತಲೆ ಕೆಡಿಸಿಕೊಳ್ಳದೇ ಇವುಗಳನ್ನು ತೆರವು ಮಾಡಿದೆ. ಏಕೆಂದರೆ ನನಗೆ ವೋಟುಗಳನ್ನು ಹೇಗೆ ಪಡೆದುಕೊಳ್ಳಬೇಕು ಎಂಬುದು ಗೊತ್ತು ಎಂದಿದ್ದಾರೆ.



