ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ರೂಪಾ ಕಿತ್ತಾಟದ ಇನ್ನಷ್ಟು ಸ್ಫೋಟಕ ಮಾಹಿತಿ ಲಭ್ಯವಾಗಿದೆ. ರೋಹಿಣಿ ಸಿಂಧೂರಿ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ. ತಾವು ಮಾಡಿರೋ ಆಸ್ತಿಯನ್ನು ಮುಚ್ಚಿಡೋ ಪ್ರಯತ್ನ ಮಾಡ್ತಾ ಇದ್ದಾರೆ ಅಂತ ರೂಪಾ ಆರೋಪ ಮಾಡಿದ್ರು. ಅಲ್ಲದೇ ಜಾಲಹಳ್ಳಿ ಮನೆಯ ಬಗ್ಗೆ ಪ್ರಶ್ನೆ ಮಾಡಿರೋ ರೂಪಾ, ಅಕ್ರಮವಾಗಿ ಫರ್ನಿಚರ್ ಗಳನ್ನು ತರಿಸ್ತಾ ಇದ್ದಾರೆ. ಐಎಎಸ್ ಅಧಿಕಾರಿಯ ಲಾಭ ಪಡೆಯುತ್ತಾ ಇದ್ದಾರೆ ಅಂತ ಆರೋಪಿಸಿದ್ರು. ಇದಕ್ಕೆ ಉತ್ತರ ನೀಡಿರೋ ರೋಹಿಣಿ ನನ್ನ ಆಸ್ತಿಯನ್ನು ಘೋಷಣೆ ಮಾಡಿಕೊಂಡಿದ್ದೇನೆ ಅಂದಿದ್ದಾರೆ.
ಆ ಬಂಗಲೆಯ ಬೆಲೆ 30 ಕೋಟಿಗೂ ಹೆಚ್ಚು. ಕೇವಲ ಸೈಟಿನ ಮೌಲ್ಯವೇ 10 ಕೋಟಿ ಎಂಬ ಆರೋಪ ಕೇಳಿ ಬಂದಿತ್ತು. ಮನೆಯ ಮುಂಬಾಗಿಲಿಗೆ ಅಳವಡಿಸಿರುವ ಚಿಲಕವೇ 6 ಲಕ್ಷ ಮೌಲ್ಯದ್ದು ಎಂಬ ಆರೋಪವೂ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ, ರೋಹಿಣಿ ಆಸ್ತಿ ಬಗ್ಗೆ ಮಾಹಿತಿ ಹೊರಬೀಳುತ್ತಿದೆ.
ಅಧಿಕೃತ ದಾಖಲೆಗಳ ಪ್ರಕಾರ ರೋಹಿಣಿ ಸಿಂಧೂರಿ ಬಳಿ ಸ್ವಯಾರ್ಜಿತ ಎಂಬ ಯಾವ ಆಸ್ತಿಯೂ ಇಲ್ಲ. ಎಲ್ಲವೂ ಪಿತ್ರಾರ್ಜಿತ. ಅಷ್ಟೇ ಅಲ್ಲ, ಪತಿ ಸುಧೀರ್ ರೆಡ್ಡಿಯವರದ್ದೂ ಎಲ್ಲ ಪಿತ್ರಾರ್ಜಿತವೇ.
ದಾಖಲೆಗಳ ಪ್ರಕಾರ
ತೆಲಂಗಾಣದ ಕಲ್ಲೂರಿನಲ್ಲಿ ಒಂದು ಪೆಟ್ರೋಲ್ ಬಂಕ್ ಇದ್ದು, ಲೀಸಿಗೆ ವಹಿಸಲಾಗಿದೆ. 1122 ಚದರಡಿ ಜಾಗದಿಂದ ಬರುತ್ತಿರುವ ಬಾಡಿಗೆ ವರ್ಷಕ್ಕೆ 2 ಲಕ್ಷ. ಇದು ತಾಯಿಯ ಕಾಲದಿಂದಲೂ ಇದ್ದ ಆಸ್ತಿ. ಈ ಜಾಗದ ಮೌಲ್ಯ ಸುಮಾರು 1 ಕೋಟಿ.
ಖಮ್ಮಂ ಜಿಲ್ಲೆಯ ರುದ್ರಾಕ್ಷಪಲ್ಲಿ ಎಂಬಲ್ಲಿ 55 ಎಕರೆ ಕೃಷಿ ಭೂಮಿ ಇದೆ. ಇಷ್ಟೂ ಜಮೀನಿನಿಂದ ವಾರ್ಷಿಕ 7 ಲಕ್ಷ ಆದಾಯ ಬರುತ್ತಿದೆ. ಇದು ಪಿತ್ರಾರ್ಜಿತ ಆಸ್ತಿ. ಈಗಿನ ಮೌಲ್ಯ 2.5 ಕೋಟಿ.
ಅದೇ ಖಮ್ಮಂ ಜಿಲ್ಲೆಯ ಒಂದು ಜಾಗವನ್ನು ಹೋಟೆಲ್ ಒಂದಕ್ಕೆ ಲೀಸ್ ನೀಡಲಾಗಿದೆ. ತಾಯಿಯಿಂದ ಬಂದಿರುವ ಈ ಆಸ್ತಿಯ ಈಗಿನ ಮೌಲ್ಯ 1.5 ಕೋಟಿ.
1. ಖಮ್ಮಂ ಜಿಲ್ಲೆಯ ಹೃದಯಭಾಗದಲ್ಲಿ ಒಂದು ಎಕರೆ ಜಾಗ ಇದೆ. ಇದರ ಮೌಲ್ಯ 1 ಕೋಟಿ ಇದ್ದು, ಇದೂ ಕೂಡಾ ಪಿತ್ರಾರ್ಜಿತವೇ.
2. ಹೈದರಾಬಾದ್ನಲ್ಲಿ 3 ನಿವೇಶನಗಳಿದ್ದು, ಇವುಗಳ ಒಟ್ಟಾರೆ ಮೌಲ್ಯ 1 ಕೋಟಿ ಎನ್ನಲಾಗಿದೆ. ಹೈದರಾಬಾದ್ ಹೊರವಲಯದಲ್ಲಿರುವ ಸೈಟುಗಳು.
3. ಮೇಧಕ್ ಜಿಲ್ಲೆಯ ತಲ್ಲಾಪುರದಲ್ಲಿ ಸುಮಾರು 40 ಲಕ್ಷ ಮೌಲ್ಯದ ಒಂದು ಪುಟ್ಟ ಸೈಟ್ ಇದೆ. ಇದೂ ಕೂಡಾ ಪಿತ್ರಾರ್ಜಿತ.
4. ರಂಗಾರೆಡ್ಡಿ ಜಿಲ್ಲೆಯ ಷಂಶಾಬಾದ್ನಲ್ಲಿ 600 ಚದರ ಗಜದ ಸೈಟ್ ಇದೆ. ಮೌಲ್ಯ ಸುಮಾರು 50 ಲಕ್ಷ.
ಇವಿಷ್ಟು ಬಿಟ್ಟರೆ ರೋಹಿಣಿ ಸಿಂಧೂರಿ ಘೋಷಿಸಿರುವ ಆಸ್ತಿಯಲ್ಲಿ ಬೆಂಗಳೂರಿನ ಯಲಹಂಕದಲ್ಲಿ 4123 ಚದರಡಿಯ ಒಂದು ನಿವೇಶನವಿದೆ. ಇದನ್ನು ರೋಹಿಣಿ ಸಿಂಧೂರಿ ಐಎಎಸ್ ಅಧಿಕಾರಿಗಳ ಸಹಕಾರ ಸಂಘದ ಮೂಲಕ ಪಡೆದಿದ್ದಾರೆ. ಇದರ ಮೌಲ್ಯ ಸುಮಾರು 60 ಲಕ್ಷ ರೂ. ಆದರೆ ಇದಿನ್ನೂ ರೋಹಿಣಿಯವರ ಹೆಸರಿಗೆ ರಿಜಿಸ್ಟರ್ ಅಗಿಲ್ಲ.
ಇದಿಷ್ಟು ರೋಹಿಣಿ ಸಿಂಧೂರಿಯವವ ಒಟ್ಟಾರೆ ಆಸ್ತಿ ಲೆಕ್ಕ. ತಂದೆ ಹಾಗೂ ತಾಯಿಯಿಂದ ಬಂದಿರುವ ಆಸ್ತಿಗಳನ್ನು ಮಕ್ಕಳು ಹಿಸ್ಸೆ ಅಥವಾ ಪಾಲು ಮಾಡಿಕೊಂಡಿಲ್ಲ. ಆದರೆ ಕುಟುಂಬದ ಹೆಸರಿನಲ್ಲಿರುವ ವಿವರಗಳನ್ನೆಲ್ಲ ರೋಹಿಣಿ ಸಿಂಧೂರಿ ಅಧಿಕೃತವಾಗಿಯೇ ದಾಖಲೆ ಸಲ್ಲಿಸಿದ್ದಾರೆ.



