ಡಾ.ಜಿ.ಪರಮೇಶ್ವರ್. ಕೊರಟಗೆರೆ ಕ್ಷೇತ್ರದ ಶಾಸಕ. ಮಾಜಿ ಕೆಪಿಸಿಸಿ ಅಧ್ಯಕ್ಷ. ಸಿದ್ದರಾಮಯ್ಯ. ಈಗ ಬಾದಾಮಿ ಕ್ಷೇತ್ರದ ಶಾಸಕ. ವಿರೋಧಪಕ್ಷದ ನಾಯಕ. ಪರಮೇಶ್ವರ್ ಈ ಬಾರಿಯೂ ಕೊರಟಗೆರೆಯಿಂದಲೇ ಸ್ಪರ್ಧಿಸುತ್ತಿದ್ದರೆ, ಸಿದ್ದರಾಮಯ್ಯ ಬಾದಾಮಿಯಿಂದ ಮತ್ತೊಮ್ಮೆ ವರುಣಾಗೆ ಬಂದಿದ್ದಾರೆ. ಕೋಲಾರದಲ್ಲಿಯೂ ಸ್ಪರ್ಧೆ ಮಾಡುವ ಇಂಗಿತ, ಇಚ್ಚೆ, ಆಕಾಂಕ್ಷೆ ತೋರಿಸಿದ್ದಾರೆ. ಅಂತಹ ಅನಿವಾರ್ಯತೆ ನನಗೆ ಬಂದಿಲ್ಲ ಎನ್ನುವುದು ಪರಮೇಶ್ವರ್ ಮಾತು.
ಎರಡು ಕಡೆ ಸ್ಪರ್ಧೆ ಮಾಡ್ತಿನಿ ಅಂತ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಟಿಕೆಟ್ ಕೋಡೋದರಲ್ಲಿ ಸೆಂಟ್ರಲ್ ಎಲೆಕ್ಷನ್ ಕಮಿಟಿ ಸಭೆ ಫೈನಲ್. ಒಂದು ವೇಳೆ ಸಿದ್ದರಾಮಯ್ಯ ಅವರಿಗೆ ಪರ್ಮಿಷನ್ ಕೊಟ್ರೆ ಎರಡು ಕಡೆ ಸ್ಪರ್ಧೆ ಮಾಡ್ತಾರೆ. ಆ ರೀತಿ ಎರಡು ಕಡೆ ಸ್ಪರ್ಧೆ ಮಾಡೋ ಅನಿವಾರ್ಯ ಪರಿಸ್ಥಿತಿ ನಮಗೆ ಯಾರಿಗೂ ಬಂದಿಲ್ಲ ಎಂದಿದ್ದಾರೆ ಪರಮೇಶ್ವರ್.
ಪರಮೇಶ್ವರ್ ಮಾತಿನಲ್ಲಿ ವಿರೋಧಿಗಳು ಹುಡುಕುತ್ತಿರುವುದೇ ಬೇರೆ. ಆದರೆ ಈ ಮಾತಿನ ಮೂಲಕ ಪರಮೇಶ್ವರ್ ತಮ್ಮ ಅಸಮಾಧಾನವನ್ನು ಬೇರೆಯದೇ ರೀತಿಯಲ್ಲಿ ತೋಡಿಕೊಂಡಿದ್ದಾರೆ. ಅದು 2013ರ ಸೋಲಿನ ಕಥೆ. 2013ರಲ್ಲಿ ಕಾಂಗ್ರೆಸ್ ಗೆದ್ದಾಗ, ಅಧಿಕಾರ ಹಿಡಿದಾಗ, ಕೆಪಿಸಿಸಿ ಅಧ್ಯಕ್ಷರು ಸಿಎಂ ಆಗುವ ಸಂಪ್ರದಾಯ ಇದ್ದ ಕಾಂಗ್ರೆಸ್ಸಿನಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಪರಮೇಶ್ವರ್, ಸೋತು ಹೋಗಿದ್ದರು. ಇಡೀ ರಾಜ್ಯದ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದರೆ, ಕೆಪಿಸಿಸಿ ಅಧ್ಯಕ್ಷರಾಗಿದ್ದರೂ ಗೆಲುವಿನ ಸಂಭ್ರಮ ಮಾಡಲಾಗದ ಸ್ಥಿತಿಯಲ್ಲಿದ್ದವರು ಪರಮೇಶ್ವರ್. ತಮ್ಮವರೇ ಸೋಲಿಸಿದರೆಂದು ಹೇಳಿಕೊಳ್ಳೋ ಹಾಗಿಲ್ಲ. ಹೇಳಿಕೊಂಡರೆ ಅವಮಾನ. ವಿಚಿತ್ರ ಸ್ಥಿತಿಯಲ್ಲಿದ್ದ ಪರಮೇಶ್ವರ್, ತದನಂತರ ಸಚಿವ ಸಂಪುಟಕ್ಕೆ ಬಂದು ಮಂತ್ರಿಯಾಗೋಕೂ ಹರಸಾಹಸ ಮಾಡಿದ್ದಾಯ್ತು. ಹೀಗಿರುವಾಗಲೇ ಮತ್ತೊಮ್ಮೆ ಎಲೆಕ್ಷನ್ ಬಂದಿದೆ. ಕಾಂಗ್ರೆಸ್ಸಿಗೆ ಶುಭ ಸೂಚನೆಗಳಿವೆ. ಈ ಹೊತ್ತಿನಲ್ಲಿಯೇ ಪರಮೇಶ್ವರ್ ಈ ಮಾತು ಹೇಳಿದ್ದಾರೆ.
ಎರಡು ಕಡೆ ಸ್ಪರ್ಧೆ ಮಾಡ್ಬೇಕು ಎಂಬ ಸನ್ನಿವೇಶ ನನಗಾಗಲಿ ಡಿಕೆ ಶಿವಕುಮಾರ್ಗೆ ಆಗಲಿ ಬಂದಿಲ್ಲ. ಹಾಗಾಗಿ ನಾವು ಎರಡು ಕಡೆ ಟಿಕೆಟ್ ಕೊಡಿ ಅಂತ ಕೇಳಿಕೊಂಡಿಲ್ಲ. ಅವರು ಮುಖ್ಯಮಂತ್ರಿ ಆಗಿ ಕೆಲಸ ಮಾಡಿದೋರು. ರಾಜ್ಯ ನಾಯಕ. ಅವರಿಗೆ ಯಾವುದೇ ರೀತಿ ತೊಂದರೆ ಆಗ್ಬಾರದು. ಜನರು ಕೂಡಾ ನೀವು ಬಂದು ಸ್ಪರ್ಧೆ ಮಾಡಿ ಅಂತ ಕೇಳ್ಕೊಂತ್ತಿದ್ದಾರೆ. ಸಿದ್ದರಾಮಯ್ಯ ಕೂಡಾ ಕೋಲಾರದ ಜನರ ಜೊತೆ ಕಮಿಟ್ಮೆಂಟ್ ಮಾಡಿಕೊಂಡು ಬಂದಿದ್ರು. ಹಾಗಾಗಿ ಎರಡು ಸ್ಪರ್ಧೆ ಮಾಡುವ ಸನ್ನಿವೇಶ ಎದುರಾಗಿದೆ. ಇಲ್ಲದಿದ್ದರೆ ಅವರಿಗೂ ಕೂಡಾ ಎರಡು ಕಡೆ ಸ್ಪರ್ಧೆ ಮಾಡೋ ಅಗತ್ಯತೆ ಇರಲಿಲ್ಲ. ಅವರು ವರುಣಾದಲ್ಲಿ ನಿಂತ್ರು ಗೆಲ್ತಾರೆ. ಎಲ್ಲೆ ನಿಂತ್ರು ಗೆಲ್ತಾರೆ ಎಂದರು. ಅವರಿಗೆ ಸೋಲು ಭೀತಿ ಕಂಡ್ರೆ. ನಾವೆಲ್ಲಾ ಹೆದರಿಕೊಳ್ಳಬೇಕಾಗುತ್ತೆ. ಸೋಲುವ ಭೀತಿಯಿಂದ ಅಲ್ಲಾ ಜನರ ಅಪೇಕ್ಷೆ ಮೇರೆಗೆ ನಿಲ್ತಿದ್ದಾರೆ. ಕೋಲಾರದಲ್ಲಿ ಸ್ಪರ್ಧೆ ಮಾಡಿದ್ರೆ ಸುತ್ತುಮುತ್ತಲಿನ ಕ್ಷೇತ್ರಗಳಿಗೂ ಅನುಕೂಲ ಆಗುತ್ತೆ. ಹೀಗೆ ಸಿದ್ದರಾಮಯ್ಯ ಅವರ ಎರಡು ಕಡೆ ಸ್ಪರ್ಧೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಪರಮೇಶ್ವರ್ ಏನೇ ಸಮರ್ಥನೆ ಕೊಟ್ಟರೂ, ವಿರೋಧಿಗಳು ಮಾತ್ರ ನನಗಾಗಲೀ.. ಡಿಕೆ ಶಿವಕುಮಾರ್ ಅವರಿಗಾಗಲೀ ಎರಡು ಕಡೆ ಸ್ಪರ್ಧೆ ಮಾಡುವ ಸ್ಥಿತಿ ಬಂದಿಲ್ಲ ಎಂಬ ಮಾತಿನಲ್ಲಿ ಏನೇನೋ ಅರ್ಥ ಹುಡುಕುತ್ತಿದ್ದಾರೆ. ಅವರು ಹುಡುಕುವ ಅರ್ಥದಲ್ಲಿ ಸತ್ಯವೂ ಇದೆ ಎಂದರೆ ಸುಳ್ಳಲ್ಲ.
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes.The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.