ಹಾಸನದಲ್ಲಿ ರಾಜಕೀಯ ದಿನೇ ದಿನೇ ರೋಚಕ ತಿರುವು ಪಡೆಯುತ್ತಿದೆ. ಕುಮಾರಸ್ವಾಮಿ ಸರ್ಕಾರ ಪತನವಾದಾಗ ಶುರುವಾದ ಜೆಡಿಎಸ್‍ನಿಂದ ಹೊರಹೋಗುವವರ ಲಿಸ್ಟು ಇನ್ನೂ ಬೆಳೆಯುತ್ತಲೇ ಇದೆ. ಮೊದಲಿಗೆ ಹೊರಗೆ ಕಾಲಿಟ್ಟವರು ಅರಸೀಕೆರೆ ಶಾಸಕ ಶಿವಲಿಂಗೇ ಗೌಡ ಮತ್ತು ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ. ಆದರೆ ಈ ಲಿಸ್ಟ್ ಇನ್ನೂ ಮುಗಿದಿಲ್ಲ. ಇದೀಗ ಆ ಲಿಸ್ಟಿಗೆ ಇನ್ನೂ ಕೆಲವರು ಸೇರಿಕೊಂಡಿದ್ದಾರೆ.
ಹಾಸನದಲ್ಲಿ ಅತೀ ಹೆಚ್ಚು ಕುತೂಹಲ ಮೂಡಿಸಿರುವ ಕ್ಷೇತ್ರ ಹಾಸನ. ಅಲ್ಲಿ ಭವಾನಿ ರೇವಣ್ಣ ಬಹಿರಂಗವಾಗಿ ಟಿಕೆಟ್ ಆಕಾಂಕ್ಷೆ ವ್ಯಕ್ತಪಡಿಸಿದ ಮೇಲೆ ಹಾಸನ ರಣರಂಗವೇ ಆಗಿ ಹೋಗಿದೆ. ಕುಮಾರಸ್ವಾಮಿಯವರಿಗೆ ಭವಾನಿ ರೇವಣ್ಣ ಅವರಿಗೆ ಟಿಕೆಟ್ ಕೊಡುವುದಕ್ಕೆ ಮನಸ್ಸಿಲ್ಲ. ಸ್ವರೂಪ್ ಅವರಿಗೆ ಮಾತು ಕೊಟ್ಟಾಗಿದೆ. ಇತ್ತ ಭವಾನಿ ರೇವಣ್ಣ ಅವರೂ ಬಹಿರಂಗವಾಗಿ ಹೇಳಿಬಿಟ್ಟಿದ್ದಾರೆ. ಹೀಗಾಗಿ ಎರಡೂ ಕಡೆ ಪ್ರತಿಷ್ಠೆಯ ಸಮರ ಈಗ ದೊಡ್ಡದಾಗುತ್ತಿದೆ. ದೇವೇಗೌಡರು ಎಂಟ್ರಿಯಾಗಿದ್ದರೂ ಸರಿ ಹೋದಂತೆ ಕಾಣುತ್ತಿಲ್ಲ. ಇದರ ಮಧ್ಯೆಯೇ ಡಿಕೆ ಶಿವಕುಮಾರ್ ಬಾಂಬ್ ಸಿಡಿಸಿದ್ದಾರೆ.


ಅತ್ತ ಕುಮಾರಸ್ವಾಮಿ ಕೂಡಾ ತನ್ನ ಬೆಂಬಲಿಗನಿಗೆ ಗಾಳ ಹಾಕಿದ್ದಕ್ಕೆ ಆಕ್ರೋಶಗೊಂಡಿದ್ದಾರೆ ಎನ್ನಲಾಗಿದೆ. ಬಹಿಂಗವಾಗಿ ಸ್ವರೂಪ್ ಬೆಂಬಲಕ್ಕೆ ನಿಂತರೂ ಸ್ವರೂಪ್ ಕಾಂಗ್ರೆಸ್ಸಿನವರ ಸಂಪರ್ಕಕ್ಕೆ ಹೋಗಿದ್ದು ಕುಮಾರಸ್ವಾಮಿ ಕುದ್ದು ಹೋಗುವಂತೆ ಮಾಡಿದೆ. ಅಷ್ಟೇ ಅಲ್ಲ.. ಎ. ಮಂಜು ಕೂಡಾ ಕಾಂಗ್ರೆಸ್ ಸಂಪರ್ಕದಲ್ಲಿ..


ಸ್ವರೂಪ್ ಪ್ರಕಾಶ್ ಕಾಂಗ್ರೆಸ್ಸಿಗೆ ಹೋದರೆ, ಭವಾನಿ ರೇವಣ್ಣ ಅವರ ರೋಡ್ ಕ್ಲಿಯರ್ ಆಗಲಿದೆ. ಈಗ ಸ್ವರೂಪ್ ಕಾಂಗ್ರೆಸ್ ಅಧ್ಯಕ್ಷರ ಜೊತೆ ಸಂಪರ್ಕದಲ್ಲಿದ್ದಾರೆ ಎನ್ನುವುದೇ ಅವರಿಗೆ ಮುಳುವಾಗಲಿದೆ. ಅಲ್ಲಿಗೆ ಹಾಸನದಲ್ಲಿ ಕುಮಾರಸ್ವಾಮಿ ಬೆಂಬಲಿಗ ಸ್ವರೂಪ್ ಪ್ರಕಾಶ್ ಕಾಂಗ್ರೆಸ್ಸಿನಿಂದ ಮತ್ತು ಜೆಡಿಎಸ್‍ನ ಭವಾನಿ ರೇವಣ್ಣ ಮುಖಾಮುಖಿ ಸ್ಪರ್ಧೆಗಿಳಿದರೂ ಆಶ್ಚರ್ಯ ಪಡಬೇಕಿಲ್ಲ. ಅಷ್ಟೇ ಏಕೆ, ಇತ್ತ ಕುಮಾರಸ್ವಾಮಿಯವರೇ ಬಹಿರಂಗವಾಗಿ ಘೋಷಿಸಿದ್ದ ಎ.ಮಂಜು ಕೂಡಾ ಕಾಂಗ್ರೆಸ್ಸಿಂದ ನಿಂತರೂ ನಿಲ್ಲಬಹುದು. ಎ.ಟಿ.ರಾಮಸ್ವಾಮಿಯವರ ನಡೆ ಏನು… ರಾಜಕೀಯ ಸಹಜವಾಗಿ ಅರ್ಥವಾಗುವುದಿಲ್ಲ.



